खानापूर : तालुक्यातील नागरगाळी-तावरगट्टी रेल्वे स्थानकांदरम्यानच्या जंगल परिसरात रेल्वे रुळावर मोठे झाड कोसळल्याने अळणावर-लोंढा मार्गावरील अनेक रेल्वे गाड्यांच्या वाहतुकीवर परिणाम झाल्याची घटना मंगळवारी सायंकाळी घडली.
मंगळवारी सायंकाळी सुमारे ५.३० वाजण्याच्या सुमारास नागरगाळी परिसरात विजांच्या कडकडाटासह जोरदार पावसाला सुरुवात झाली. यावेळी आलेल्या वादळी वाऱ्यामुळे रेल्वे रुळालगतच्या जंगलातील सुमारे तीस फूट उंचीचे झाड थेट रेल्वे रुळांवर कोसळले.
घटनेच्या वेळी त्याच मार्गावरून जाणारी कोल्हापूर-तिरुपती हरिप्रिया एक्सप्रेस ही रेल्वे काही फुटांच्या अंतरावर येऊन थांबली. घटनेची माहिती मिळताच नागरगाळी व तावरगट्टी स्थानकांवरील कर्मचारी तातडीने घटनास्थळी दाखल झाले व परिस्थितीची पाहणी केली.
त्यानंतर वरिष्ठ अधिकाऱ्यांना माहिती देण्यात आली. स्थानिकांच्या मदतीने झाडाचा काही भाग रुळांवरून हटविण्यात आला असून अळणावर-लोंढा मार्गावरील रेल्वे वाहतूक अंशतः सुरू करण्यात आली आहे. दरम्यान, उर्वरित झाड हटविण्याचे काम युद्धपातळीवर सुरू असून या घटनेमुळे या मार्गावरील अनेक रेल्वे गाड्या उशिराने धावत असल्याची माहिती सूत्रांनी दिली.
ಖಾನಾಪುರ: ತಾಲ್ಲೂಕಿನ ನಾಗರಗಾಳಿ–ತಾವರಗಟ್ಟಿ ರೈಲು ನಿಲ್ದಾಣಗಳ ನಡುವಿನ ಅರಣ್ಯ ಪ್ರದೇಶದಲ್ಲಿ ರೈಲು ಹಳಿಯ ಮೇಲೆ ದೊಡ್ಡ ಮರ ಬಿದ್ದ ಪರಿಣಾಮ ಅಳ್ನಾವರ–ಲೋಂಡಾ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಮಂಗಳವಾರ ಸಂಜೆ ಸುಮಾರು 5.30ರ ವೇಳೆಗೆ ನಾಗರಗಾಳಿ ಭಾಗದಲ್ಲಿ ಮಿಂಚು-ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದ್ದು, ಬಿರುಗಾಳಿಯ ಹೊಡೆತಕ್ಕೆ ಹಳಿ ಪಕ್ಕದ ಅರಣ್ಯ ಪ್ರದೇಶದಲ್ಲಿದ್ದ ಸುಮಾರು 30 ಅಡಿ ಎತ್ತರದ ಮರ ಹಳಿಗಳ ಮೇಲೆ ಬಿದ್ದಿದೆ.
ಈ ವೇಳೆ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೊಲ್ಲಾಪುರ–ತಿರುಪತಿ ಹರಿಪ್ರಿಯಾ ಎಕ್ಸ್ಪ್ರೆಸ್ ರೈಲು ಘಟನಾ ಸ್ಥಳದಿಂದ ಕೆಲವೇ ಅಡಿ ದೂರದಲ್ಲಿ ನಿಂತು ಅಪಾಯ ತಪ್ಪಿಸಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನಾಗರಗಾಳಿ ಮತ್ತು ತಾವರಗಟ್ಟಿ ರೈಲು ನಿಲ್ದಾಣದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸ್ಥಳೀಯರ ಸಹಕಾರದೊಂದಿಗೆ ಮರದ ಮೇಲ್ಭಾಗವನ್ನು ತೆರವುಗೊಳಿಸಿ ಒಂದು ಹಳಿಯಲ್ಲಿ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇನ್ನೂ ಲೋಂಡಾ–ಅಳ್ನಾವರ ಮಾರ್ಗದಲ್ಲಿ ಮರ ಸಂಪೂರ್ಣ ತೆರವುಗೊಳಿಸುವ ಕಾರ್ಯಾಚರಣೆ ಮುಂದುವರೆದಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ವಿಳಂಬ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.