ಖಾನಾಪುರ :
ಇಟಗಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿಯನ್ನು ತಕ್ಷಣ ಕೈಗೊಳ್ಳುವಂತೆ ಆಗ್ರಹಿಸಿ ಇಂದು ಗ್ರಾಮಸ್ಥರು ಇಟಗಿ ಬಂದ್ಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲಾ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಪ್ರತಿಭಟನೆಯಲ್ಲಿ ಇಟಗಿ ಗ್ರಾಮದ ಜನತೆ, ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು, ಕರ್ನಾಟಕ ರಕ್ಷಣಾ ವೇದಿಕೆ, ನೇಗಿಲಯೋಗಿ ಸುರಕ್ಷಾ ರೈತ ಸಂಘ, ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿ ರಸ್ತೆ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಭಟನಾಕಾರರು ಇಟಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಬಳಿಕ ಗ್ರಾಮ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದರು. ಧರಣಿಗೆ ಸ್ಪಂದಿಸಿದ ಲೋಕೋಪಯೋಗಿ ಇಲಾಖೆಯ ಬೆಳಗಾವಿ ಜಿಲ್ಲಾ ಕಾರ್ಯನಿರ್ವಾಹಕ ಅಭಿಯಂತರರು ಪ್ರವೀಣ್ ಹುಲಿಜಿ , ಖಾನಾಪುರ ತಾಲೂಕು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸಂಜಯ್ ಗಸ್ತಿ ಹಾಗೂ ಖಾನಾಪುರ ತಹಶೀಲ್ದಾರರ ದುಂಡಪ್ಪ ಕೊಮಾರ್ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ನಿರ್ಮಾಣ ಹಾಗೂ ದುರಸ್ತಿ ಕಾಮಗಾರಿಯನ್ನು ಶೀಘ್ರ ಆರಂಭಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ವಿಠ್ಠಲ ಹಿಂಡಲಕರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರೋಗ್ಯಪ್ಪ ಪಾದನಕಟ್ಟಿ, ತಾಲೂಕು ಉಪಾಧ್ಯಕ್ಷ ಭರತೇಶ ಜೋಳದ, ಮಡಿವಾಳಿ ಭೂಪಣ್ಣಿ, ಬಿಷ್ಟಪ್ಪ ಬನೋಶಿ, ರವಿ ಮಾದಿಗರ, ದಿಗಂಬರ ನಾಯಿಕ, ನೇಗಿಲಯೋಗಿ ಸುರಕ್ಷಾ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಸನಗೌಡ ಪಾಟೀಲ, ಜಿಲ್ಲಾ ಅಧ್ಯಕ್ಷ ರುದ್ರಗೌಡ ಪಾಟೀಲ, ಇಟಗಿ ಗ್ರಾಮದ ಯುವ ಮುಖಂಡರಾದ ಕೇದಾರಿ ಸೋನಪ್ಪನವರ, ವಿಠ್ಠಲ ಕಿಳೋಜಿ, ರಾಯಪ್ಪ ಬಳಗಪ್ಪನವರ, ಎಂ.ಜಿ. ಹಿರೇಮಠ, ಕಲ್ಮೇಶ ಮುತನಾಳ, ಭೀಮಸಿ ಅಗಸರ ಸೇರಿದಂತೆ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರತಿಭಟನೆಯ ಬಳಿಕ ಅಧಿಕಾರಿಗಳ ಭರವಸೆಯಿಂದ ಗ್ರಾಮಸ್ಥರು ಶೀಘ್ರದಲ್ಲೇ ರಸ್ತೆ ಕಾಮಗಾರಿ ಆರಂಭವಾಗುವ ನಿರೀಕ್ಷೆ ವ್ಯಕ್ತಪಡಿಸಿದರು.ವಿಕ ಸುದ್ದಿಲೋಕ, ಇಟಗಿ,
ರಸ್ತೆ ಸುಧಾರಣೆಗೆ ಆಗ್ರಹಿಸಿ ಸಂಪೂರ್ಣ ಗ್ರಾಮದ ಅಂಗಡಿ ಮುಂಗಟುಗಳು, ಬ್ಯಾಂಕ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳನ್ನು ಬಂದ್ ಮಾಡಿ ಪತಿಭಟಿಸಲಾಯಿತು.
ಇಟಗಿ ಗ್ರಾಮ ಸಂಪರ್ಕಿಸುವ ಬೋಗೂರು, ಇಟಗಿಕಾಸ್, ಬೋಗೂರು, ಚಿಕ್ಕಮುನವಳ್ಳಿ, ಹಿರೇಮುನವಳ್ಳಿ, ಕರವಿನಕೊಪ, ತೋಲಗಿ, ಗಂದಿಗವಾಡ, ಹಂದೂರ, ಹುಲಿಕೊತ್ತಲ, ಗುಂಡ್ಯಾನಟ್ಟಿ ಈ ಎಲ್ಲ ಗಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲಿಸಿದರು.
ಮೊದಲಿಗೆ ಹಾಲಿನ ಡೈರಿ ಹತ್ತಿರ ಎಲ್ಲರೂ ಸೇರಿ ಬಡೀಗೇರ ಬೀದಿ, ಶ್ರೀಕರೇಶ್ವರ ದೇವಸ್ಥಾನ, ಅರ್ವಾಟ ಬೀಡಿ, ಅಗಸಿ, ದೊಡ್ಡಣಿ ಮೂಲಕ ನೂರಾರು ಪ್ರತಿಭಟನೆಕಾರರು ಯಾಲಿ ನಡೆಸಿ, ಜನಪ್ರತಿನಿಧಿಗಳು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ದಿಕ್ಕಾರ ಕೂಗಿ, ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿ, ಮತ್ತೆ ಹಾಲಿನ ಡೈರಿ ಹತ್ತಿರ ಜಮಾವಣೆಗೊಂಡರು.
ಜಿಟಿ ಜಿಟಿ ಮಳೆಯಲ್ಲಿ ಪ್ರತಿಭಟನೆಕಾರರು ರಸ್ತೆಯಲ್ಲಿ ಟೈರಿಗೆ ಬೆಂಕಿ ಹಚ್ಚಿದರು, ರಸ್ತೆಯ ತಗ್ಗು-ಗುಂಡಿಗಳಲ್ಲಿ ಸಸಿಗಳನ್ನು ನೆಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಸ್ಥಳಕ್ಕೆ ತಹಶೀಲ್ದಾರ ದುಂಡಪ್ಪ ಕೋಮಾರ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂಜಯ ಗಸ್ತಿ ಪ್ರತಿಭಟನೆಕಾರರ ಮನವೊಲಿಸಲು ಪ್ರಯತ್ನಿಸಿದರು ನಮ್ಮ ಬೇಡಿಕೆ ಈಡೇರುವರೆಗೂ ಅನಿರ್ದಿಷ್ಟ ಪ್ರತಿಭಟನೆ ಮುಂದುವರೆಸಲಾಗುವುದೆಂದು ಪಟ್ಟು ಹಿಡಿದರು.
खानापुरा: इटगी गावात तातडीने रस्ता बांधणी आणि दुरुस्तीच्या मागणीसाठी गावकऱ्यांनी आज इटगी बंदची हाक दिली होती. या संदर्भात, गावकऱ्यांनी स्वेच्छेने गावातील सर्व दुकाने आणि स्टॉल्स बंद ठेवून आंदोलनात सहभाग घेतला.
या आंदोलनात इटगी गावातील लोक, आसपासच्या गावांतील नागरिक, कर्नाटक रक्षण वेदिके, नेगिलायोगी सुरक्षा रायथा संघ आणि विविध दलित समर्थक संघटनांचे कार्यकर्ते सहभागी झाले होते आणि त्यांनी सरकारकडे रस्त्याच्या समस्येवर लवकरात लवकर तोडगा काढण्याची मागणी केली.
आंदोलकांनी इटगी गावातील मुख्य रस्त्यांवरून मोर्चा काढला आणि नंतर ग्रामपंचायत कार्यालयासमोर ठिय्या आंदोलन केले. या आंदोलनाला उत्तर देताना सार्वजनिक बांधकाम विभागाचे बेळगाव जिल्हा कार्यकारी अभियंता प्रवीण हुळीजी, खानापुरा तालुक्यचे सहायक कार्यकारी अभियंता संजय गस्ती, खानापुरा तहसीलदार दुंडाप्पा कोमर यांनी घटनास्थळी भेट देऊन रस्ता बांधकाम व दुरुस्तीचे काम लवकरच सुरू करण्याचे आश्वासन दिले.
यावेळी कर्नाटक रक्षण वेदिके तालुकाध्यक्ष विठ्ठल हिंडळकर, जिल्हा संघटन सचिव आरोग्यप्पा पडनकट्टी, तालुकाध्यक्ष भरतेश जोला, मदिवली भूपन्नी, बिष्टप्पा बनोशी, रवी मडिगरा, दिगंबरा नाईका, नेगीलयोगी सुरक्षा रैठा संघटनेचे जिल्हाध्यक्ष रौदराव पाटील, जिल्हाध्यक्ष रौदराव पाटील आदी मान्यवर उपस्थित होते. इटागी गावचे युवा नेते केदारी सोनप्पा, विठ्ठल किलोजी, रायप्पा बालगप्पा, एम.जी. हिरेमठ, कळमेश मुथनाल, भीमासी आगासर यांच्यासह गावकरी आणि विविध संघटनांचे नेते व कार्यकर्ते उपस्थित होते.
आंदोलनानंतर, प्रशासनाने दिलेल्या आश्वासनानुसार रस्त्याचे काम लवकरच सुरू होईल, अशी आशा गावकऱ्यांनी व्यक्त केली. विका न्यूज, इटागी,
रस्त्याच्या सुधारणेची मागणी करत, संपूर्ण गावातील दुकाने आणि बँकांसह विविध संघटना आणि संस्था बंद ठेवून आंदोलन केले.
इटागी गावाला जोडणाऱ्या बोगुरु, बोगुरु, चिक्कमुनवल्ली, हिरेमुनावल्ली, करविनकोप, तोलगी, गंडीगवाड, हंदुर, हुलिकोट्टल, गुंड्यानट्टी या गावांतील सर्व गावकऱ्यांनी या आंदोलनात भाग घेतला आणि त्याला पाठिंबा दिला.