Home » हिरेमुनवळी ग्रामपंचायतीत शॉर्टसर्किट; कागदपत्रांसह संगणक जळून खाक!

हिरेमुनवळी ग्रामपंचायतीत शॉर्टसर्किट; कागदपत्रांसह संगणक जळून खाक!

kanah1

ಹಿರೇಮುನವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶಾರ್ಟ್ ಸರ್ಕ್ಯೂಟ್!

हिरेमुनवळी ग्रामपंचायतीत शॉर्टसर्किट; कागदपत्रांसह संगणक जळून खाक!

पाच लाखांहून अधिक रुपयांचे नुकसान; नव्या PDOचा पदभार स्वीकारण्यापूर्वीच घडली घटना

खानापूर : तालुक्यातील हिरेमुनवळी ग्रामपंचायत कार्यालयात मंगळवारी मध्यरात्रीच्या सुमारास शॉर्टसर्किट होऊन आग लागल्याची घटना बुधवारी सकाळी उघडकीस आली. या आगीत ग्रामपंचायत कार्यालयाच्या पाठीमागील बाजूचे छप्पर जळून खाक झाले असून संगणक, महत्त्वाची कागदपत्रे, रॅक्स, इंटरनेट यंत्रणा आणि अन्य साहित्याचे मोठ्या प्रमाणात नुकसान झाले आहे. या दुर्घटनेत ग्रामपंचायतीचे पाच लाखांहून अधिक रुपयांचे नुकसान झाल्याची माहिती ग्रामपंचायत विकास अधिकारी वीरेश सज्जन यांनी दिली.

मिळालेल्या माहितीनुसार, मंगळवारी नियमित कामकाज आटोपल्यानंतर ग्रामपंचायत कर्मचारी कार्यालय बंद करून घरी गेले होते. त्यानंतर रात्री अंदाजे अडीच ते तीन वाजण्याच्या सुमारास शॉर्टसर्किट होऊन ग्रामपंचायत कार्यालयाच्या पाठीमागील बाजूस आग लागली. रात्री कार्यालय बंद असल्याने आग तातडीने लक्षात आली नाही.

बुधवारी सकाळी ग्रामपंचायत कर्मचारी कार्यालयात पोहोचले असता कार्यालयातील साहित्य जळून खाक झाल्याचे त्यांच्या निदर्शनास आले. घटनेची माहिती तातडीने ग्रामपंचायत विकास अधिकारी (PDO) वीरेश सज्जन तसेच तालुका पंचायत कार्यकारी अधिकारी रमेश मैत्री यांना देण्यात आली.

जुन्या इमारतीमुळे शॉर्टसर्किट झाल्याचा अंदाज

मिळालेल्या माहितीनुसार, गावातील पथदिव्यांचे विद्युत कनेक्शनही ग्रामपंचायत कार्यालयातूनच ठेवण्यात आले होते. ग्रामपंचायतची इमारत जुनी असल्याने विद्युत यंत्रणेत बिघाड होऊन शॉर्टसर्किट झाल्याने आग लागली असावी, असा प्राथमिक अंदाज व्यक्त केला जात आहे. मात्र आगीचे नेमके कारण तपासानंतर स्पष्ट होणार आहे.

PDO पदभार स्वीकारणार होते, त्यापूर्वीच आग

हिरेमुनवळी ग्रामपंचायतीचे नव्याने ग्रामपंचायत विकास अधिकारी म्हणून नियुक्त झालेले वीरेश सज्जन हे बुधवारीच ग्रामपंचायतीचा पदभार स्वीकारणार होते. मात्र पदभार स्वीकारण्यापूर्वीच ग्रामपंचायत कार्यालयात आग लागल्याची घटना त्यांच्या निदर्शनास आली.

गेल्या काही दिवसांपासून हिरेमुनवळी ग्रामपंचायतीचा अतिरिक्त पदभार हालसी ग्रामपंचायतीचे PDO संतोष चौगुले यांच्याकडे होता. सुमारे चार दिवसांपूर्वी त्यांच्याकडील चार्ज हिरेमुनवळी ग्रामपंचायतीचे विकास अधिकारी वीरेश सज्जन यांच्याकडे देण्यात आला होता. मात्र सज्जन यांनी अद्याप प्रत्यक्ष कार्यालयाचा पदभार स्वीकारलेला नव्हता.

पदभार स्वीकारण्यासाठी ते ग्रामपंचायतीत जाणार असतानाच कार्यालयात आग लागल्याची माहिती समोर आली. पदभार स्वीकारण्यापूर्वीच हा प्रकार आपल्या निदर्शनास आल्याचे वीरेश सज्जन यांनी सांगितले.

ग्रंथालय सुरक्षित; मात्र ग्रामपंचायत कार्यालयाचे मोठे नुकसान

ग्रामपंचायत कार्यालयाच्या अगदी बाजूलाच गावाचे ग्रंथालय आहे. शॉर्टसर्किटमुळे ग्रामपंचायत कार्यालयातील संगणक, कागदपत्रे आणि अन्य साहित्य जळून खाक झाले असले तरी बाजूला असलेले ग्रामपंचायत ग्रंथालय मात्र सुरक्षित राहिल्याचे समजते.

दरम्यान, महत्त्वाची शासकीय कागदपत्रे आणि संगणकीय साहित्य जळाल्याने ग्रामपंचायतीच्या नोंदींचे मोठे नुकसान झाले आहे. घटनेची नोंद नंदगड पोलीस ठाण्यात करण्यात आली असून आगीचे नेमके कारण आणि नुकसानीचा अधिकृत तपशील याबाबत पुढील तपास सुरू आहे.

स्थलांतर होणार होते; त्यापूर्वीच ग्रामपंचायत कार्यालयाला आग

हिरेमुनवळी ग्रामपंचायतीचे कार्यालय जुन्या इमारतीत सुरू असल्याने गेल्या काही दिवसांपासून ग्रामपंचायत कार्यालय दुसऱ्या ठिकाणी स्थलांतरित करण्याचे प्रयत्न सुरू होते. यासाठी नवीन जागेची पाहणीही करण्यात आली होती. नव्या ठिकाणी ग्रामपंचायत कार्यालय सुरू करण्याच्या दृष्टीने आवश्यक प्रक्रिया सुरू करण्यात आली होती.

मिळालेल्या माहितीनुसार, बुधवारी काही महत्त्वाची कागदपत्रे नव्या ठिकाणी स्थलांतरित करण्याचा विचार होता. तसेच नवनियुक्त ग्रामपंचायत विकास अधिकारी वीरेश सज्जन हेही बुधवारी ग्रामपंचायतीचा पदभार स्वीकारून पुढील स्थलांतराची प्रक्रिया सुरू करणार होते. मात्र, त्यापूर्वीच मंगळवारी मध्यरात्री जुन्या ग्रामपंचायत कार्यालयात शॉर्टसर्किट होऊन आग लागल्याचे समोर आले.

जुनी इमारत असल्याने विद्युत यंत्रणेत बिघाड होऊन शॉर्टसर्किट झाल्याचा प्राथमिक अंदाज व्यक्त केला जात आहे. या आगीत संगणक, महत्त्वाची कागदपत्रे, रॅक्स, इंटरनेट यंत्रणा आणि अन्य साहित्य जळून खाक झाले असून पाच लाखांहून अधिक रुपयांचे नुकसान झाल्याची माहिती देण्यात आली आहे.

विशेष म्हणजे, ग्रामपंचायत कार्यालयाचे स्थलांतर करण्याची प्रक्रिया सुरू असतानाच ही दुर्घटना घडल्याने ग्रामपंचायत प्रशासनासमोर आता जळालेल्या कागदपत्रे व नोंदींचे व्यवस्थापन आणि पुढील कार्यालयीन कामकाजाचे मोठे आव्हान निर्माण झाले आहे.

ಹಿರೇಮುನವಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶಾರ್ಟ್ ಸರ್ಕ್ಯೂಟ್!

ದಾಖಲೆಗಳೊಂದಿಗೆ ಕಂಪ್ಯೂಟರ್‌ಗಳು ಹಾಗೂ ಇತರೆ ಸಾಮಗ್ರಿಗಳು ಸುಟ್ಟು ಭಸ್ಮ; ಐದು ಲಕ್ಷಕ್ಕೂ ಅಧಿಕ ರೂ. ನಷ್ಟ

ಖಾನಾಪುರ : ಖಾನಾಪುರ ತಾಲೂಕಿನ ಹಿರೇಮುನವಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಮಧ್ಯರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಭಾರೀ ಹಾನಿಯಾಗಿರುವ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಗ್ರಾಮ ಪಂಚಾಯಿತಿ ಕಚೇರಿಯ ಹಿಂಭಾಗದಲ್ಲಿದ್ದ ಛಾವಣಿ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಕಚೇರಿಯಲ್ಲಿದ್ದ ಕಂಪ್ಯೂಟರ್‌ಗಳು, ಪ್ರಮುಖ ದಾಖಲೆಗಳು, ರ್ಯಾಕ್‌ಗಳು, ಇಂಟರ್ನೆಟ್ ವ್ಯವಸ್ಥೆ ಸೇರಿದಂತೆ ಹಲವು ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಘಟನೆಯಿಂದ ಗ್ರಾಮ ಪಂಚಾಯಿತಿಗೆ ಐದು ಲಕ್ಷಕ್ಕೂ ಅಧಿಕ ರೂ. ನಷ್ಟವಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ವೀರೇಶ ಸಜ್ಜನ ತಿಳಿಸಿದ್ದಾರೆ.

ಮಂಗಳವಾರ ಎಂದಿನಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಕಚೇರಿ ಕೆಲಸ ಮುಗಿಸಿ ಕಚೇರಿಯನ್ನು ಬಂದ್ ಮಾಡಿಕೊಂಡು ತೆರಳಿದ್ದರು. ಬಳಿಕ ರಾತ್ರಿ ಸುಮಾರು 2.30ರಿಂದ 3 ಗಂಟೆಯ ಅವಧಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಗ್ರಾಮ ಪಂಚಾಯಿತಿ ಕಚೇರಿಯ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕಚೇರಿ ರಾತ್ರಿ ವೇಳೆ ಬಂದ್ ಆಗಿದ್ದರಿಂದ ಘಟನೆ ತಕ್ಷಣವೇ ಗಮನಕ್ಕೆ ಬಂದಿರಲಿಲ್ಲ.

ಬುಧವಾರ ಬೆಳಗ್ಗೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಕಚೇರಿಗೆ ತೆರಳಿದಾಗ ಕಚೇರಿಯಲ್ಲಿದ್ದ ದಾಖಲೆಗಳು ಹಾಗೂ ಇತರೆ ಸಾಮಗ್ರಿಗಳು ಸುಟ್ಟು ಹೋಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರೇಶ ಸಜ್ಜನ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೈತ್ರಿ ಅವರಿಗೆ ಘಟನೆಯ ಮಾಹಿತಿ ನೀಡಲಾಯಿತು.

ಹಳೆಯ ಕಟ್ಟಡದಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಶಂಕೆ

ಮೂಲಗಳ ಪ್ರಕಾರ, ಗ್ರಾಮದಲ್ಲಿನ ಬೀದಿ ದೀಪಗಳ ವಿದ್ಯುತ್ ಸಂಪರ್ಕವನ್ನು ಸಹ ಗ್ರಾಮ ಪಂಚಾಯಿತಿ ಕಚೇರಿಯಿಂದಲೇ ನೀಡಲಾಗಿತ್ತು. ಗ್ರಾಮ ಪಂಚಾಯಿತಿ ಕಟ್ಟಡ ಹಳೆಯದಾಗಿರುವುದರಿಂದ ವಿದ್ಯುತ್ ವ್ಯವಸ್ಥೆಯಲ್ಲಿ ದೋಷ ಉಂಟಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ. ಆದರೆ ಬೆಂಕಿಗೆ ನಿಖರ ಕಾರಣ ತನಿಖೆಯ ನಂತರವೇ ತಿಳಿದುಬರಬೇಕಿದೆ.

ಅಧಿಕಾರ ಸ್ವೀಕರಿಸುವ ಮುನ್ನವೇ ನೂತನ PDO ಎದುರು ಬಂದ ಅಗ್ನಿ ಅವಘಡ

ಹಿರೇಮುನವಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ನೇಮಕಗೊಂಡಿರುವ ವೀರೇಶ ಸಜ್ಜನ ಅವರು ಬುಧವಾರವೇ ಪಂಚಾಯಿತಿಯ ಅಧಿಕಾರ ಸ್ವೀಕರಿಸಲು ತೆರಳಬೇಕಾಗಿತ್ತು. ಆದರೆ ಅಧಿಕಾರ ಸ್ವೀಕರಿಸುವ ಮುನ್ನವೇ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವುದು ಅವರ ಗಮನಕ್ಕೆ ಬಂದಿದೆ.

ಕಳೆದ ಕೆಲವು ದಿನಗಳಿಂದ ಹಿರೇಮುನವಳ್ಳಿ ಗ್ರಾಮ ಪಂಚಾಯಿತಿಯ PDO ಆಗಿ ಹಾಲಸಿ ಗ್ರಾಮ ಪಂಚಾಯಿತಿಯ PDO ಸಂತೋಷ ಚೌಗುಲೆ ಕಾರ್ಯನಿರ್ವಹಿಸುತ್ತಿದ್ದರು. ಸುಮಾರು ನಾಲ್ಕು ದಿನಗಳ ಹಿಂದೆ ಅವರ ಬಳಿಯಿದ್ದ ಹಿರೇಮುನವಳ್ಳಿ ಗ್ರಾಮ ಪಂಚಾಯಿತಿಯ ಅಧಿಕಾರವನ್ನು ವೀರೇಶ ಸಜ್ಜನ ಅವರಿಗೆ ಹಸ್ತಾಂತರಿಸಲಾಗಿತ್ತು. ಆದರೆ ಸಜ್ಜನ ಅವರು ಇನ್ನೂ ಪಂಚಾಯಿತಿಯ ಕಚೇರಿಗೆ ತೆರಳಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿರಲಿಲ್ಲ.

ಅಧಿಕಾರ ಸ್ವೀಕರಿಸಲು ಗ್ರಾಮ ಪಂಚಾಯಿತಿಗೆ ತೆರಳುವ ಮುನ್ನವೇ ಈ ಅಗ್ನಿ ಅವಘಡ ಸಂಭವಿಸಿರುವುದು ಗಮನಕ್ಕೆ ಬಂದಿದೆ ಎಂದು ವೀರೇಶ ಸಜ್ಜನ ತಿಳಿಸಿದ್ದಾರೆ.

ಗ್ರಂಥಾಲಯಕ್ಕೆ ಯಾವುದೇ ಹಾನಿಯಾಗಿಲ್ಲ

ಗ್ರಾಮ ಪಂಚಾಯಿತಿ ಕಚೇರಿಯ ಪಕ್ಕದಲ್ಲಿಯೇ ಗ್ರಾಮದ ಗ್ರಂಥಾಲಯವಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿದ್ದ ಕಂಪ್ಯೂಟರ್‌ಗಳು, ದಾಖಲೆಗಳು ಹಾಗೂ ಇತರೆ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಆದರೆ ಪಕ್ಕದಲ್ಲಿದ್ದ ಗ್ರಾಮ ಪಂಚಾಯಿತಿ ಗ್ರಂಥಾಲಯ ಮಾತ್ರ ಸುರಕ್ಷಿತವಾಗಿರುವುದು ಸಮಾಧಾನದ ಸಂಗತಿಯಾಗಿದೆ.

ಪ್ರಮುಖ ಸರ್ಕಾರಿ ದಾಖಲೆಗಳು ಹಾಗೂ ಕಂಪ್ಯೂಟರ್‌ಗಳು ಸುಟ್ಟು ಹೋಗಿರುವುದರಿಂದ ಪಂಚಾಯಿತಿಯ ದಾಖಲೆಗಳಿಗೆ ಭಾರೀ ಹಾನಿಯಾಗಿದೆ. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬೆಂಕಿ ಅವಘಡದ ನಿಖರ ಕಾರಣ ಹಾಗೂ ನಷ್ಟದ ಪ್ರಮಾಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಹಿರೇಮುನವಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್!

ದಾಖಲೆಗಳು, ಕಂಪ್ಯೂಟರ್‌ಗಳು ಸೇರಿದಂತೆ ಇತರೆ ಸಾಮಗ್ರಿಗಳು ಸುಟ್ಟು ಭಸ್ಮ; ಐದು ಲಕ್ಷಕ್ಕೂ ಅಧಿಕ ರೂ. ನಷ್ಟ

ಖಾನಾಪುರ : ತಾಲೂಕಿನ ಹಿರೇಮುನವಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಮಧ್ಯರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಭಾರೀ ಹಾನಿಯಾಗಿರುವ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಕಚೇರಿಯ ಹಿಂಭಾಗದ ಛಾವಣಿ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಕಚೇರಿಯಲ್ಲಿದ್ದ ಕಂಪ್ಯೂಟರ್‌ಗಳು, ಪ್ರಮುಖ ದಾಖಲೆಗಳು, ರ್ಯಾಕ್‌ಗಳು, ಇಂಟರ್‌ನೆಟ್ ವ್ಯವಸ್ಥೆ ಸೇರಿದಂತೆ ಹಲವು ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಿಂದ ಗ್ರಾಮ ಪಂಚಾಯಿತಿಗೆ ಐದು ಲಕ್ಷಕ್ಕೂ ಅಧಿಕ ರೂ. ನಷ್ಟವಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರೇಶ ಸಜ್ಜನ ತಿಳಿಸಿದ್ದಾರೆ.

ಮಂಗಳವಾರ ಎಂದಿನಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಕಚೇರಿ ಕೆಲಸ ಮುಗಿಸಿ ಕಚೇರಿಯನ್ನು ಬಂದ್ ಮಾಡಿಕೊಂಡು ತೆರಳಿದ್ದರು. ಬಳಿಕ ರಾತ್ರಿ ಸುಮಾರು 2.30ರಿಂದ 3 ಗಂಟೆಯ ವೇಳೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಚೇರಿಯ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕಚೇರಿ ಬಂದ್ ಆಗಿದ್ದ ಕಾರಣ ಘಟನೆ ತಕ್ಷಣ ಗಮನಕ್ಕೆ ಬಂದಿರಲಿಲ್ಲ.

ಬುಧವಾರ ಬೆಳಗ್ಗೆ ಸಿಬ್ಬಂದಿ ಕಚೇರಿಗೆ ತೆರಳಿದಾಗ ಕಚೇರಿಯಲ್ಲಿದ್ದ ದಾಖಲೆಗಳು ಹಾಗೂ ಇತರೆ ಸಾಮಗ್ರಿಗಳು ಸುಟ್ಟು ಭಸ್ಮವಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರೇಶ ಸಜ್ಜನ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೈತ್ರಿ ಅವರಿಗೆ ಮಾಹಿತಿ ನೀಡಲಾಯಿತು.

ಹಳೆಯ ಕಟ್ಟಡದಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ಶಂಕೆ

ಹಿರೇಮುನವಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಹಳೆಯ ಕಟ್ಟಡದಲ್ಲಿದ್ದು, ಕಟ್ಟಡದ ವಿದ್ಯುತ್ ವ್ಯವಸ್ಥೆಯೂ ಹಳೆಯದಾಗಿದೆ ಎನ್ನಲಾಗಿದೆ. ಅಲ್ಲದೆ ಗ್ರಾಮದ ಬೀದಿ ದೀಪಗಳ ವಿದ್ಯುತ್ ಸಂಪರ್ಕವನ್ನು ಗ್ರಾಮ ಪಂಚಾಯಿತಿ ಕಚೇರಿಯಿಂದಲೇ ನಿರ್ವಹಿಸಲಾಗುತ್ತಿತ್ತು. ಹೀಗಾಗಿ ವಿದ್ಯುತ್ ವ್ಯವಸ್ಥೆಯಲ್ಲಿ ದೋಷ ಉಂಟಾಗಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ. ಆದರೆ ಬೆಂಕಿಗೆ ನಿಖರ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.

ಬೇರೆ ಕಟ್ಟಡಕ್ಕೆ ಪಂಚಾಯಿತಿ ಕಚೇರಿ ಸ್ಥಳಾಂತರಿಸಲು ಸಿದ್ಧತೆ

ಹಿರೇಮುನವಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಹಳೆಯ ಕಟ್ಟಡದಲ್ಲಿದ್ದ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಪಂಚಾಯಿತಿ ಕಚೇರಿಯನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಹೊಸ ಸ್ಥಳದ ಪರಿಶೀಲನೆಯನ್ನೂ ನಡೆಸಲಾಗಿತ್ತು.

ಬುಧವಾರ ಕೆಲವು ಪ್ರಮುಖ ದಾಖಲೆಗಳನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸಿ, ಅಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಕಾರ್ಯಾರಂಭ ಮಾಡುವ ಉದ್ದೇಶವಿತ್ತು. ಇದೇ ವೇಳೆ ನೂತನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರೇಶ ಸಜ್ಜನ ಅವರು ಬುಧವಾರ ಅಧಿಕಾರ ಸ್ವೀಕರಿಸಿ ಮುಂದಿನ ಪ್ರಕ್ರಿಯೆ ಕೈಗೊಳ್ಳಬೇಕಾಗಿತ್ತು. ಆದರೆ ಅಧಿಕಾರ ಸ್ವೀಕರಿಸುವ ಮುನ್ನವೇ ಹಳೆಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ.

ಅಧಿಕಾರ ಸ್ವೀಕರಿಸುವ ಮುನ್ನವೇ ಅವಘಡ

ಕಳೆದ ಕೆಲವು ದಿನಗಳಿಂದ ಹಿರೇಮುನವಳ್ಳಿ ಗ್ರಾಮ ಪಂಚಾಯಿತಿಯ PDO ಆಗಿ ಹಾಲಸಿ ಗ್ರಾಮ ಪಂಚಾಯಿತಿಯ ಸಂತೋಷ ಚೌಗುಲೆ ಕಾರ್ಯನಿರ್ವಹಿಸುತ್ತಿದ್ದರು. ಸುಮಾರು ನಾಲ್ಕು ದಿನಗಳ ಹಿಂದೆ ಹಿರೇಮುನವಳ್ಳಿ ಪಂಚಾಯಿತಿಯ ಅಧಿಕಾರವನ್ನು ನೂತನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೀರೇಶ ಸಜ್ಜನ ಅವರಿಗೆ ಹಸ್ತಾಂತರಿಸಲಾಗಿತ್ತು. ಆದರೆ ಸಜ್ಜನ ಅವರು ಇನ್ನೂ ಅಧಿಕೃತವಾಗಿ ಪಂಚಾಯಿತಿಯ ಅಧಿಕಾರ ಸ್ವೀಕರಿಸಿರಲಿಲ್ಲ.

ಬುಧವಾರ ಪಂಚಾಯಿತಿಗೆ ತೆರಳಿ ಅಧಿಕಾರ ಸ್ವೀಕರಿಸಿ ಮುಂದಿನ ಪ್ರಕ್ರಿಯೆ ಆರಂಭಿಸುವ ಉದ್ದೇಶ ಹೊಂದಿದ್ದರು. ಆದರೆ ಅದಕ್ಕೂ ಮುನ್ನವೇ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವುದು ಬೆಳಕಿಗೆ ಬಂದಿದೆ ಎಂದು ವೀರೇಶ ಸಜ್ಜನ ತಿಳಿಸಿದ್ದಾರೆ.

ಪಂಚಾಯಿತಿ ಪಕ್ಕದ ಗ್ರಂಥಾಲಯ ಸುರಕ್ಷಿತ

ಗ್ರಾಮ ಪಂಚಾಯಿತಿ ಕಚೇರಿಯ ಪಕ್ಕದಲ್ಲಿಯೇ ಗ್ರಾಮ ಪಂಚಾಯಿತಿ ಗ್ರಂಥಾಲಯವಿದ್ದು, ಬೆಂಕಿಯಿಂದ ಗ್ರಂಥಾಲಯಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಪಂಚಾಯಿತಿ ಕಚೇರಿಯಲ್ಲಿದ್ದ ಕಂಪ್ಯೂಟರ್‌ಗಳು, ದಾಖಲೆಗಳು ಮತ್ತು ಇತರೆ ಸಾಮಗ್ರಿಗಳು ಸುಟ್ಟು ಹೋಗಿದ್ದರೂ ಪಕ್ಕದಲ್ಲಿದ್ದ ಗ್ರಂಥಾಲಯ ಸುರಕ್ಷಿತವಾಗಿರುವುದು ಸಮಾಧಾನದ ಸಂಗತಿಯಾಗಿದೆ.

ಪ್ರಮುಖ ದಾಖಲೆಗಳು ಹಾಗೂ ಕಂಪ್ಯೂಟರ್‌ಗಳು ಬೆಂಕಿಗೆ ಆಹುತಿಯಾಗಿರುವುದರಿಂದ ಪಂಚಾಯಿತಿಯ ದಾಖಲೆಗಳಿಗೆ ಭಾರೀ ಹಾನಿಯಾಗಿದೆ. ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬೆಂಕಿ ಅವಘಡದ ನಿಖರ ಕಾರಣ ಹಾಗೂ ನಷ್ಟದ ಪ್ರಮಾಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Do Share
error: Content is protected !!
Call Us