IMG-20260824-WA0037


करुणाड रक्षणा वेदिकेकडून खानापूर तहसीलदारांना निवेदन


खानापूर : खानापूर तालुक्यातील हलकर्णी ग्रामपंचायत हद्दीत स्वतःचे घर नसून भाड्याच्या घरात राहणाऱ्या गरीब कुटुंबांना शासनाच्या माध्यमातून घरे बांधून द्यावीत, अशी मागणी करत करुणाड रक्षणा वेदिकेच्या वतीने खानापूर तहसीलदारांना निवेदन देण्यात आले.
दिनांक २४ ऑगस्ट २०२६ रोजी सादर करण्यात आलेल्या निवेदनात, हलकर्णी ग्रामपंचायत हद्दीतील सर्व्हे क्रमांक २४ मध्ये गरीब कुटुंबांना स्वतःचे घर बांधण्यासाठी जागा उपलब्ध करून द्यावी, अशी मागणी करण्यात आली आहे.
ग्रामपंचायत हद्दीतील अनेक गरीब कुटुंबांकडे स्वतःचे घर नसल्याने ते भाड्याच्या घरात वास्तव्यास आहेत. आर्थिक परिस्थिती हलाखीची असल्यामुळे त्यांना स्वतःचे घर बांधणे शक्य होत नाही. त्यामुळे अशा गरीब व पात्र कुटुंबांना शासनाच्या घरकुल योजनेअंतर्गत घरे उपलब्ध करून द्यावीत, असे निवेदनात नमूद करण्यात आले आहे.
तसेच गेल्या ३० ते ४० वर्षांपासून भाड्याच्या घरात राहणाऱ्या कुटुंबांना प्राधान्य देऊन त्यांना योग्य जागा व आवश्यक सुविधा उपलब्ध करून द्याव्यात, अशी मागणी करण्यात आली आहे.
शासनाने गरीबांसाठी राबविलेल्या विविध घरकुल योजनांचा लाभ पात्र व गरजू कुटुंबांपर्यंत पोहोचवून त्यांना हक्काचे घर व कायमस्वरूपी निवारा उपलब्ध करून द्यावा, अशी विनंती निवेदनाद्वारे करण्यात आली.
यावेळी श्रीमती लक्ष्मी श्री. गाडीदवर, महिला घटक जिल्हाध्यक्षा, बेळगाव यांच्यासह करुणाड रक्षणा वेदिकेचे पदाधिकारी व कार्यकर्ते उपस्थित होते.

ಕರುನಾಡ ರಕ್ಷಣಾ ವೇದಿಕೆ ಇವರ ಖಾನಾಪುರ ತಹಶೀಲ್ದಾರರಿಗೆ ಮನವಿ ಸಲ್ಲಿಕೆ

ಖಾನಾಪುರ : ಖಾನಾಪುರ ತಾಲೂಕಿನ ಹಲಕರ್ಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿ ಖಾನಾಪುರ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ.

ದಿನಾಂಕ 24-08-2026ರಂದು ಸಲ್ಲಿಸಿರುವ ಮನವಿಯಲ್ಲಿ, ಹಲಕರ್ಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ. 24ರಲ್ಲಿ ಬಡ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ಜಾಗ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಲಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಬಡ ಕುಟುಂಬಗಳು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದು, ಆರ್ಥಿಕ ಸಂಕಷ್ಟದಿಂದಾಗಿ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಡ ಕುಟುಂಬಗಳಿಗೆ ಸರ್ಕಾರದ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡುವ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ತುರ್ತು ಕ್ರಮ ಕೈಗೊಂಡು ಅರ್ಹ ಬಡ ಕುಟುಂಬಗಳಿಗೆ ಸರ್ಕಾರದ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು. ಅಲ್ಲದೆ, 30ರಿಂದ 40 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಆದ್ಯತೆ ನೀಡಿ, ಸೂಕ್ತ ಸ್ಥಳ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಸರ್ಕಾರ ಬಡವರಿಗಾಗಿ ಜಾರಿಗೆ ತಂದಿರುವ ವಸತಿ ಯೋಜನೆಗಳ ಪ್ರಯೋಜನವನ್ನು ಅರ್ಹ ಕುಟುಂಬಗಳಿಗೆ ತಲುಪಿಸುವ ಮೂಲಕ, ಅವರಿಗೆ ಸ್ವಂತ ಸೂರು ಕಲ್ಪಿಸಿಕೊಡಬೇಕೆಂದು ಮನವಿ ಮಾಡಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಶ್ರೀಮತಿ ಲಕ್ಷ್ಮೀ ಶ್ರೀ. ಗಾಡಿದವರ್, ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷರು, ಬೆಳಗಾವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Do Share
error: Content is protected !!
Call Us