IMG_20240420_195219
  • खानापूर लाईव्ह न्यूज/प्रतिनिधि:
  • हुबळी येथील नेहा हिरेमठ या महाविद्यालयीन विद्यार्थिनीची निर्घृण हत्या ही नागरी समाजाला लाज वाटावी असे कृत्य आहे. मृत युवतीच्या कुटुंबीयांना या मृत्यूचे दुःख सहन करण्याची शक्ती देव देवो अशी प्रार्थना डॉ.अंजली निंबालर यांनी केली.
  • असे वाईट कृत्य करणाऱ्यांना समाजात राहण्याचा अधिकार नाही, अशा अपराधीन कठोर शिक्षा झाली पाहिजे. तरच वाईट कृत्य करणाऱ्यांना भीती राहील नेहाच्या आई-वडिलांना, कुटुंबीयांच्या वेदना जाणवू नयेत. नेहा आमच्या घरची मुलगी आहे. खून झालेल्या नेहाला न्याय मिळाला पाहिजे. फयाज सारखे गुन्हेगार सर्व जाती धर्मात आहेत.
  • अशा घटनाानंतर धर्म आणि जातीचा लेप लावून समाजात संघर्षाचे वातावरण निर्माण करणे योग्य नाही. धर्माच्या आधारे असे खून करून परस्पर द्वेष आणि सूडाची भावना निर्माण करणे हाही गुन्हा ठरतो. अशा हत्यांचा राजकीय कारणांसाठी वापर करणे हे निंदनीय आहे. अशा लोकांसाठी घटनेच्या वेदनांपेक्षा त्यांच्या राजकीय अजेंडाचा स्वार्थ अधिक आहे. समाजानेही अशा लोकांपासून सावध राहावे.
  • हुबळी पोलिसांनी हत्येनंतर तासाभरात आरोपी फयाज याला अटक करून न्यायालयात हजर केले. त्याबद्दल मी हुबळी पोलिसांचे अभिनंदन करतो. जेव्हा असे प्रकरण घडतात तेव्हा फास्ट ट्रॅक कोर्टात फास्ट ट्रॅक खटले चालवले जावे आणि गुन्हेगारांना कठोर शिक्षा व्हावी.
  • Karwar:ಕಾರವಾರ: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು (Student Neha Hiremath) ಬರ್ಬರವಾಗಿ ಹತ್ಯೆ ಮಾಡಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವ ಕೃತ್ಯವಾಗಿದೆ. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಮೃತ ಯುವತಿಯ ಕುಟುಂಬಕ್ಕೆ ಈ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಡಾ.ಅಂಜಲಿ ನಿಂಬಾಳ್ಳರ್ ಪ್ರಾರ್ಥಿಸಿದ್ದಾರೆ.
  • ಇಂತಹ ದುಷ್ಕೃತ್ಯವನ್ನು ಎಸಗುವವರಿಗೆ ಸಮಾಜದಲ್ಲಿ ಜೀವಿಸುವ ಯಾವುದೇ ಅರ್ಹತೆಯಿಲ್ಲ.ಇಂತಹ ಅಪರಾಧಗಳಿಗೆ ಅತ್ಯಂತ ಕಠೋರ ಶಿಕ್ಷೆಯನ್ನೇ ನೀಡಬೇಕು.ಆಗ ಮಾತ್ರ ತಪ್ಪು ಮಾಡುವ ರಾಕ್ಷಸರಿಗೆ ಭಯ ಹುಟ್ಟುತ್ತದೆ. ನೇಹಾಳ ಮನೆಯವರಿಗೆ ಆಗಿರುವ ನೋವು ಮತ್ಯಾವ ತಂದೆ ತಾಯಿಗೂ ಬರಬಾರದು. ನೇಹಾ ನಮ್ಮ ಮನೆ ಮಗಳು. ಕೊಲೆಯಾಗಿರುವ ನೇಹಾಳಿಗೆ ನ್ಯಾಯ ಸಿಗಲೇಬೇಕು. ಹಾಗೆ ಕೊಲೆಗಾರನಿಗೆ ಕಾನೂನಿನ ಪ್ರಕಾರವೇ ಆದಷ್ಟು ಶೀಘ್ರ ಗಲ್ಲು ಶಿಕ್ಷೆ ವಿಧಿಸಬೇಕು.ಕೊಲೆಗಡುಕ ಫಯಾಜ್ ನಂಥ ಕ್ರಿಮಿಗಳು ಎಲ್ಲ ಜಾತಿ ಧರ್ಮದಲ್ಲೂ ಇದ್ದಾರೆ.
  • ಹೀಗಾಗಿ ಇದಕ್ಕೆ ಧರ್ಮ, ಜಾತಿಯ ಲೇಪನ ಹಚ್ಚಿ ಸಮಾಜದಲ್ಲಿ ಸಂಘರ್ಷದ ವಾತಾವರಣ ನಿರ್ಮಿಸುವುದು ಸರಿಯಲ್ಲ. ಇಂಥ ಕೊಲೆಗಳನ್ನು ಧರ್ಮದ ನೆಲೆಯಲ್ಲಿ ಇಟ್ಟು ಪರಸ್ಪರ ದ್ವೇಷ, ಪ್ರತೀಕಾರದ ಭಾವ ಮೂಡಿಸುವುದು ಕೂಡ ಅಪರಾಧವೇ ಆಗುತ್ತದೆ. ಇಂಥ ಕೊಲೆಗಳನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳುವುದು ಕೂಡ ಹೇಯತನ. ಇಂಥವರಿಗೆ ಆದ ಘಟನೆಯ ನೋವಿಗಿಂತ ಹೆಚ್ಚಾಗಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸ್ವಾರ್ಥವೇ ಹೆಚ್ಚಾಗಿರುತ್ತದೆ. ಇಂಥವರ ಬಗ್ಗೆ ಕೂಡ ಸಮಾಜ ಎಚ್ಚರ ವಹಿಸಬೇಕು.
  • ಹುಬ್ಬಳ್ಳಿ ಪೊಲೀಸರು (Hubli police)ಕೊಲೆ ನಡೆದ ಒಂದೇ ಗಂಟೆಯೊಳಗೆ ಆರೋಪಿ ಫಯಾಜ್ ನನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಇದಕ್ಕಾಗಿ ಹುಬ್ಬಳ್ಳಿ ಪೊಲೀಸರನ್ನು ನಾನು ಅಭಿನಂದಿಸುತ್ತೇನೆ. ಇಂಥ ಪ್ರಕರಣಗಳು ನಡೆದಾಗ ಫಾಸ್ಟ್ ಟ್ರಾಕ್ ಕೋರ್ಟ್ ಗಳಲ್ಲಿ ಆದಷ್ಟು ಶೀಘ್ರ ವಿಚಾರಣೆ ನಡೆಯುವಂತೆ ಮಾಡಿ,ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತಾಗಬೇಕು
Do Share

Leave a Reply

Your email address will not be published. Required fields are marked *

error: Content is protected !!
Call Us