IMG-20230508-WA0170


खानापुर : राष्ट्रीय स्तरावरील खेळाडू व बेळगाव तालुक्यातील उचगाव येथील पीडीओ वासुदेव रामचंद्र ऐक्रूत (५६) यांचे सोमवारी हृदयविकाराच्या झटक्याने निधन झाले. संध्याकाळी ड्युटीवरून परतल्यानंतर काही काळ जिममध्ये वर्कआऊट करून घरी जात असताना त्याला हृदयविकाराचा झटका आला. तातडीने  कुटुंबीयांनी रुग्णालयात नेत असताना वाटेतच त्याचा मृत्यू झाल्याचे सूत्रांनी सांगितले.
भारतीय हवाई दलातील विविध पदांवर दीर्घ सेवा
बजावून निवृत्त झाले होते. 2010 मध्ये ग्रामविकास विभागाचे पीडीओ म्हणून सेवानिवृत्त झाले होते. त्यानंतर ते पिडिओ म्हणून नियुक्त झाले होते. ऐकृत यानी खानापूर तालुक्यातील गोल्याळी, निलावडे, कणकुंबी, हलकर्णी, बेळगाव तालुक्यातील पिरणवाडी, कंग्राळी, बाळेकुंद्री व इतर गावांमध्ये सेवाबजावल्यानंतर त्यांना नुकतीच उचगाव ग्रामपंचायतीमध्ये नियुक्ती देण्यात आली होती.  त्यांच्या पश्चात वडील, आई, पत्नी आणि मुलगा असा परिवार आहे.


ವಾಸುದೇವ ಐಕ್ರುತ
ಖಾನಾಪುರ: ರಾಷ್ಟ್ರಮಟ್ಟದ ಕ್ರೀಡಾಪಟು ಹಾಗೂ ಬೆಳಗಾವಿ ತಾಲ್ಲೂಕು ಉಚಗಾಂವ ಗ್ರಾಪಂ
ಪಿಡಿಒ ವಾಸುದೇವ ರಾಮಚಂದ್ರ ಐಕ್ರುತ (56) ಸೋಮವಾರ ಹೃದಯಾಘಾತದಿಂದ ನಿಧನರಾದರು. ಸಂಜೆ
ಕರ್ತವ್ಯದಿಂದ ಮರಳಿದ ಅವರು ಕೆಲಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿ ಮನೆಗೆ ಮರಳಿದ
ಕೂಡಲೇ ಕುಸಿದುಬಿದ್ದರು. ಅವರನ್ನು ಉಪಚರಿಸಿದ ಕುಟುಂಬದ ಸದಸ್ಯರು ಆಸ್ಪತ್ರೆಗೆ
ಸಾಗಿಸುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.
ಭಾರತೀಯ ವಾಯುಸೇನೆಯ ವಿವಿಧ ಹುದ್ದೆಗಳಲ್ಲಿ ದೀರ್ಘಕಾಲದ ಸೇವೆ ಸಲ್ಲಿಸಿ
ನಿವೃತ್ತರಾಗಿದ್ದ ಮೃತರು 2010ರಲ್ಲಿ ಗ್ರಾಮೀಣಾಭಿವೃಧ್ಧಿ ಇಲಾಖೆಯ ಪಿಡಿಒ ಹುದ್ದೆಗೆ
ಆಯ್ಕೆಯಾಗಿದ್ದರು. ಖಾನಾಪುರ ತಾಲೂಕಿನ ಗೋಲ್ಯಾಳಿ, ನೀಲಾವಡೆ, ಕಣಕುಂಬಿ, ಹಲಕರ್ಣಿ,
ಬೆಳಗಾವಿ ತಾಲೂಕಿನ ಪೀರನವಾಡಿ, ಕಂಗ್ರಾಳಿ, ಬಾಳೇಕುಂದ್ರಿ ಮತ್ತಿತರ ಗ್ರಾಪಂಗಳಲ್ಲಿ
ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ಉಚಗಾಂವ ಗ್ರಾಪಂಗೆ ವರ್ಗಗೊಂಡಿದ್ದರು. ಮೂಲತಃ
ಧಾರವಾಡದವರಾದ ಮೃತರು ಸೈಕ್ಲಿಂಗ್, ಓಟ, ಭಾರ ಎತ್ತುವ ಸ್ಪರ್ಧೆ ಸೇರಿದಂತೆ ವಿವಿಧ
ಕ್ರೀಡೆಗಳಲ್ಲಿ ಪರಿಣಿತಿ ಹೊಂದಿದ್ದರು. ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ
ಬೆಳಗಾವಿ ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ
ಕ್ರೀಡಾಕೂಟಗಳಲ್ಲಿ ಜಯಗಳಿಸಿದ್ದರು. ಮೃತರಿಗೆ ತಂದೆ, ತಾಯಿ, ಪತ್ನಿ ಮತ್ತು ಪುತ್ರ
ಇದ್ದಾರೆ.

Do Share

Leave a Reply

Your email address will not be published. Required fields are marked *

error: Content is protected !!
Call Us