IMG-20240416-WA0075

ಉರಿ ಬಿಸಿಲಲ್ಲೂ ಉತ್ಸಾಹ ಕಳೆದುಕೊಳ್ಳದ ಕಾಂಗ್ರೆಸ್ ಕಾರ್ಯಕರ್ತರು

ಭರ್ಜರಿ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಿದ ಡಾ.ಅಂಜಲಿ ನಿಂಬಾಳ್ಕರ್

  • कारवार : उत्तर कन्नड लोकसभा मतदारसंघातील काँग्रेसच्या उमेदवार अंजली निंबाळकर यांच्यासह काँग्रेस पक्षाचे वरिष्ठ व कार्यकर्त्यांनी मोठ्या मिरवणुकीत पोहोचून निवडणूक निर्णय अधिकाऱ्यांकडे उमेदवारी अर्ज सादर केला. भटकळ ते मुंडगौड, हलियाळ, जोयडा या जिल्ह्यातील सर्व तालुक्यांमधून तसेच कित्तूर-खानापूर तालुक्यातून हजारो मतदार मिरवणुकीत सहभागी झाले होते. काँग्रेस पक्षाचा शाल व झेंडा हातात घेऊन त्यांनी काँग्रेस समर्थक आणि अंजली समर्थक घोषणा दिल्या. मिरवणुकीपूर्वी डॉ. अंजली आणि पक्षनेत्यांनी उमेदवारी अर्ज ठेवून येथील सिद्धिविनायक मंदिरात पूजा केली. नंतर मालादेवी मैदानापासून ही मिरवणूक सुरू होऊन हेंजा नायक सर्कल, सविता सर्कल, सुभाष सर्कल मार्गे ग्रीन स्ट्रीट रोडवर निघून आंबेडकर सर्कलवर आली.
  • उमेदवारी अर्ज दाखल झाल्यानंतर पत्रकारांशी बोलताना डॉ.अंजली निंबाळकर म्हणाल्या की, कित्तूर-खानापूरच्या जनतेने याआधी भाजपच्या खासदाराचा फोटोही पाहिला नाही. पाच वर्षे आमदार असताना मी त्यांच्यापेक्षा जास्त काम केले आहे. आता आपला आवाज म्हणून संसदेत बोलू द्या, अशी विनंती त्यांनी केली. त्यांनी कार्यकर्त्यांना घरोघरी जाऊन पक्षाची विचारधारा आणि योजनांची माहिती देण्याचे आवाहन केले.
  • विधान परिषद सदस्य बी.के.हरिप्रसाद म्हणाले आगामी 25 वर्षात विकास करणार हे स्वप्न भाजपचे आहे. त्यांचा जाहीरनामाही तसाच आहे. पण तोपर्यंत लोकांनी काय करायचे? सत्ता असताना विकासाशिवाय 2047 मध्ये भारताचे स्वप्न पाहणे मूर्खपणाचे असल्याचे ते म्हणाले. काँग्रेस पक्षाने कार्यालयात बसून जाहीरनामा तयार केलेला नाही. लोकांमध्ये मिसळून, त्यांच्या अडचणी समजून घेऊन त्यांच्या विकासासाठी जाहीरनामा तयार केला. त्याच्या अंमलबजावणीसाठी काँग्रेस पक्षाला पाठिंबा द्यावा, असे ते म्हणाले.
  • आमदार आर.व्ही.देशपांडे म्हणाले की, भाजप सत्तेत आल्यापासून तरुण बेरोजगार आहेत. मात्र यावेळी काँग्रेस पक्षाने हमीभाव दिल्याने रोजगारासोबतच कामगार, महिला, शेतकरी यांना फायदा होईल, असे ते म्हणाले. जिल्हा प्रभारी मंत्री मंकला वैद्य म्हणाल्या की, जिल्ह्यात 30 वर्षांपासून भाजपचे खासदार असूनही प्रश्न सुटलेले नाहीत. खासदारापासून पंतप्रधानांपर्यंत भाजपने खोटे बोलण्याशिवाय काहीही केले नाही. त्यामुळे यावेळी जिल्ह्यात काँग्रेसच्या उमेदवाराला तीन लाखांहून अधिक मतांच्या फरकाने विजयी करावे, असे ते म्हणाले.
  • आमदार भीमण्णा नायक म्हणाले की, आम्ही आश्वासनाप्रमाणे पाच हमीभाव दिले आहेत. मात्र पंतप्रधान नरेंद्र मोदी यांनी दहा वर्षे खोटे बोलून जनतेची दिशाभूल केली आहे. धर्म आणि जातीमध्ये द्वेष निर्माण करून निवडणुका घेतल्या जात असल्याचे ते म्हणाले. केपीसीसीचे कार्याध्यक्ष मंजुनाथ भंडारी यांनीही भाजपवर हल्लाबोल केला. रखरखत्या उन्हातही काँग्रेस कार्यकर्त्यांनी आपला उत्साह न गमावता पदयात्रा सुरूच ठेवली. काही कार्यकर्ते रस्त्यावरील झाडांच्या सावलीत कडक उन्हाचा आसरा घेताना दिसले. आमदार सतीश सैल, आमदार बाबासाहेब पाटील, काँग्रेस नेत्या निवेदिता अल्वा, जिल्हा काँग्रेस अध्यक्षा सई गावकर, मच्छीमार नेते राजू तांडेला आदी उपस्थित होते.
  • रॅली भगवा….
  • काँग्रेसच्या उमेदवार डॉ.अंजली यांच्या उमेदवारी अर्ज भरण्याच्या मिरवणुकीत भगवे झेंडे फडकले होते आणि रॅलीत भगवा फडकत होता. उमेदवार डॉ.अंजली यांच्यासह काँग्रेसचे ज्येष्ठ नेते व कार्यकर्तेही भगवे फेटे व भगवी शाल परिधान करून सर्वांचे लक्ष वेधून घेत होते.

ಕಾರವಾರ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಅವರು ಕಾಂಗ್ರೆಸ್ ಪಕ್ಷದ ಹಿರಿಯರು, ಕಾರ್ಯಕರ್ತರ ಜೊತೆ ಬೃಹತ್ ಮೆರವಣಿಗೆಯ ಮೂಲಕ ಆಗಮಿಸಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಭಟ್ಕಳದಿಂದ ಮುಂಡಗೋಡ, ಹಳಿಯಾಳ, ಜೊಯಿಡಾದಿಂದ ಜಿಲ್ಲೆಯ ಎಲ್ಲಾ ತಾಲೂಕುಗಳು ಹಾಗೂ ಕಿತ್ತೂರು- ಖಾನಾಪುರ ತಾಲೂಕಿನಿಂದಲೂ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿಯಾಗಿದರು. ಕಾಂಗ್ರೆಸ್ ಪಕ್ಷದ ಶಾಲು, ಬಾವುಟ ಹಿಡಿದು ಕಾಂಗ್ರೆಸ್ ಪರ, ಡಾ.ಅಂಜಲಿ ಅವರ ಪರ ಘೋಷಣೆಗಳನ್ನು ಕೂಗಿದರು. ಮೆರವಣಿಗೆಗೂ ಮುನ್ನ ಡಾ.ಅಂಜಲಿ ಹಾಗೂ ಪಕ್ಷದ ಮುಖಂಡರು ಇಲ್ಲಿನ ಸಿದ್ದಿವಿನಾಯಕ ದೇವಸ್ಥಾನದಲ್ಲಿ ನಾಮಪತ್ರ ಇಟ್ಟು ಪೂಜೆ ಸಲ್ಲಿಸಿದರು. ಬಳಿಕ ಮಾಲಾದೇವಿ ಮೈದಾನದಿಂದ ಪ್ರಾರಂಭವಾದ ಮೆರವಣೆಗೆಯು ಹೆಂಜಾ ನಾಯ್ಕ ವೃತ್ತ, ಸವಿತಾ ವೃತ್ತ, ಸುಭಾಷ ವೃತ್ತದ ಮೂಲಕ ಗ್ರೀನ್ ಸ್ಟ್ರೀಟ್ ರಸ್ತೆಯಯಲ್ಲಿ ಸಾಗಿ ಅಂಬೇಡ್ಕರ್ ವೃತ್ತ ತಲುಪಿತು.

ಮೆರವಣಿಗೆಯ ವೇಳೆಯೇ ಮಾತನಾಡಿದ ಡಾ.ಅಂಜಲಿ ನಿಂಬಾಳ್ಕರ, ಕಿತ್ತೂರು- ಖಾನಾಪುರದ ಜನರು ಹಿಂದೆ ಇದ್ದ ಬಿಜೆಪಿ ಸಂಸದರ ಫೋಟೋ ಕೂಡ ನೋಡಿಲ್ಲ. ಐದು ವರ್ಷ ಶಾಸಕಿಯಾಗಿದ್ದ ನಾನು ಅವರಿಗಿಂತ ಹೆಚ್ಚಿನ ಕೆಲ ಮಾಡಿದ್ದೇನೆ. ಇದೀಗ ನಿಮ್ಮ ಧ್ವನಿಯಾಗಿ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು. ಪಕ್ಷದ ಕಾರ್ಯರ್ತರು ಮನೆ ಮನೆಗಳಿಗೆ ತೆರಳಿ ಪಕ್ಷದ ಸಿದ್ಧಾಂತವನ್ನು ಹಾಗೂ ಯೋಜನೆಗಳ ಬಗ್ಗೆ ತಿಳಿಸಬೇಕು ಎಂದು ಕರೆಕೊಟ್ಟರು.

ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಮಾತನಾಡಿ, ಬಿಜೆಪಿಯವರು ಮುಂದಿನ 25 ವರ್ಷವನ್ನು ಗುರಿಯಾಗಿಸಿಕೊಂಡು ಅಭಿವೃದ್ಧಿ ಮಾಡುತ್ತೇವೆ ಎನ್ನುತ್ತಾರೆ. ಹಾಗೆಯೇ ಅವರ ಪ್ರಣಾಳಿಕೆಯೂ ಇದೆ. ಆದರೆ ಅಲ್ಲಿವರೆಗೆ ಜನರು ಏನು ಮಾಡಬೇಕು? ಅಧಿಕಾರ ಇದ್ದಾಗ ಅಭಿವೃದ್ಧಿ ಮಾಡದೇ 2047ರ ಭಾರತದ ಕನಸು ಕಾಣುವುದು ದಡ್ಡತನ ಎಂದರು. ಕಾಂಗ್ರೆಸ್ ಪಕ್ಷವು ಕಚೇರಿಯಲ್ಲಿ ಕುಳಿತು ಪ್ರಣಾಳಿಕೆ ತಯಾರಿಸಿಲ್ಲ. ಜನರೊಂದಿಗೆ ಬೆರೆತು, ಅವರ ಕಷ್ಟಗಳನ್ನು ಅರಿತು, ಅವರ ಅಭಿವೃದ್ಧಿಗಾಗಿ ಪ್ರಣಾಳಿಕೆ ಯನ್ನು ತಯಾರಿಸಿದೆ. ಅದರ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು.

ಶಾಸಕ ಆರ್.ವಿ ದೇಶಪಾಂಡೆ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಯುವಕರಿಗೆ ಉದ್ಯೋಗವಿಲ್ಲದಂತಾಗಿದೆ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷವು ಉದ್ಯೋಗದ ಜತೆಗೆ ಕಾರ್ಮಿಕರು, ಮಹಿಳೆಯರು ಹಾಗೂ ರೈತರಿಗೆ ಉಪಯೋಗವಾಗುವ ಗ್ಯಾರಂಟಿಗಳನ್ನು ನೀಡಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಜಿಲ್ಲೆಯಲ್ಲಿ 30 ವರ್ಷ ಬಿಜೆಪಿ ಸಂಸದರಿದ್ದರೂ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಬಿಜೆಪಿಯಲ್ಲಿ ಸಂಸದರಿಂದ ಪ್ರಧಾನಿಯವರೆಗೂ ಸುಳ್ಳು ಹೇಳಿದ್ದು ಬಿಟ್ಟು ಬೇರೇನೂ ಮಾಡಿಲ್ಲ. ಹೀಗಾಗಿ ಈ ಬಾರಿ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ನೀಡಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷದಿಂದ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಿದ್ದಾರೆ. ಧರ್ಮ, ಜಾತಿ ನಡುವೆ ದ್ವೇಷ ತಂದಿಟ್ಟು ಚುನಾವಣೆ ಮಾಡುತ್ತಿದ್ದಾರೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಸಹ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು‌. ಕಾಂಗ್ರೆಸ್ ಕಾರ್ಯಕರ್ತರು ಉರಿ ಬಿಸಿಲಲ್ಲಿ ಸಹ ಉತ್ಸಾಹ ಕಳೆದುಕೊಳ್ಳದೆ ಮೆರವಣಿಗೆಯಲ್ಲಿದ್ದರು. ಕಾರ್ಯಕರ್ತರು ಕೆಲವರು ಬಿಸಿಲ ಝಳಕ್ಕೆ ರಸ್ತೆ ಬದಿಯಲ್ಲಿದ್ದ ಮರಗಳ ನೆರಳಿನಲ್ಲಿ ಆಶ್ರಯ ಪಡೆದ ದೃಶ್ಯಗಳು ಕಂಡುಬಂದವು. ಶಾಸಕ ಸತೀಶ ಸೈಲ್, ಶಾಸಕ ಬಾಬಾ ಸಾಹೇಬ ಪಾಟೀಲ, ಕಾಂಗ್ರೆಸ್ ಮುಖಂಡ ನಿವೇದಿತ ಆಳ್ವಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ, ಮೀನುಗಾರ ಮುಖಂಡ ರಾಜು ತಾಂಡೇಲ ಮುಂತಾದವರಿದ್ದರು.


ಬಾಕ್ಸ್…
ರ್ಯಾಲಿ ಕೇಸರಿಮಯ….
ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆ ತುಂಬೆಲ್ಲ ಕೇಸರಿ ಪತಾಕೆಗಳು ಗೋಚರಿಸಿ ರ್ಯಾಲಿ ಸಂಪೂರ್ಣ ಕೇಸರಿಮಯವಾಗಿತ್ತು. ಅಭ್ಯರ್ಥಿ ಡಾ.ಅಂಜಲಿ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರುಗಳು, ಕಾರ್ಯಕರ್ತರು ಕೂಡ ಕೇಸರಿ ಪೇಟ ತೊಟ್ಟು, ಕೇಸರಿ ಶಾಲು ಧರಿಸಿ ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು.

Do Share

Leave a Reply

Your email address will not be published. Required fields are marked *

error: Content is protected !!
Call Us