नंदगड: पहिल्याच प्रजासेवा कार्यक्रमात तक्रारींचा पाऊस!ನಂದಗಡ: ಮೊದಲ ಸಾರ್ವಜನಿಕ ಸೇವಾ ಕಾರ್ಯಕ್ರಮದಲ್ಲೇ ದೂರುಗಳ ಮಹಾಪೂರ.
पहिल्याच प्रजासेवा कार्यक्रमात तक्रारींचा पाऊस
नंदगड येथे आयोजन : समस्यांवर तातडीने कार्यवाहीच्या आमदार विठ्ठल हलगेकर यांच्या अधिकाऱ्यांना सूचना
खानापूर : वृत्तसेवा
नागरिकांच्या तक्रारींचे तातडीने निराकरण करून शासकीय सेवा प्रभावीपणे जनतेपर्यंत पोहोचविण्याच्या उद्देशाने नंदगड येथे आयोजित करण्यात आलेल्या पहिल्याच प्रजासेवा कार्यक्रमात विविध समस्यांचा पाढा नागरिकांनी मांडला. मार्केटिंग सोसायटीच्या सभागृहात आमदार विठ्ठल हलगेकर यांच्या अध्यक्षतेखाली ही बैठक झाली.
पेन्शन, रेशनकार्ड, जमीन उतारे, रस्ते, वीजपुरवठा, बससेवा आणि ग्रामपंचायतीतील प्रशासकीय कामकाजासंदर्भात नागरिकांनी तक्रारी मांडल्या. बैठकीत प्राप्त झालेल्या प्रत्येक तक्रारीवर संबंधित अधिकाऱ्यांनी वेळेत कार्यवाही करून नागरिकांना दिलासा द्यावा, अशा सूचना आमदार हलगेकर यांनी दिल्या.
सामाजिक कार्यकर्ते यशवंत बिर्जे यांनी खानापूर शहरातील गायरान जमिनीवरील अतिक्रमणाचा प्रश्न उपस्थित केला. सरकारी मालमत्ता सुरक्षित राहिली पाहिजे, अशी मागणी करत गायरान जमिनी खाजगी व्यक्ती व संस्थांच्या नावावर करण्यात येत असल्याच्या प्रकारांची सखोल चौकशी करावी, अशी मागणी त्यांनी केली. मलप्रभा नदीच्या पाण्याचा प्रश्नही त्यांनी उपस्थित करून खानापूरच्या हक्काचे पाणी खानापूरकरांसाठी राखून ठेवण्यासाठी सर्व राजकीय नेत्यांनी एकत्र यावे, असे आवाहन केले.
तहसीलदार कार्यालयात जुने उतारे व कागदपत्रांसाठी शेतकऱ्यांना अनेक महिने प्रतीक्षा करावी लागत असल्याची तक्रार करण्यात आली. डिजिटलायझेशनचे काम तातडीने पूर्ण करून संगणकीकृत उतारे वेळेत उपलब्ध करून द्यावेत, अशी मागणी झाली. अनेक ग्रामपंचायतींमध्ये पीडीओ नियमित उपलब्ध नसल्याने नागरिकांची गैरसोय होत असल्याचेही सांगण्यात आले.
माजी ग्रामपंचायत सदस्य विजय कामत यांनी नंदगडला जलदगती बससेवांना थांबा देऊन जुन्या बसस्थानकापर्यंत बस सोडण्याची मागणी केली. जंगल भागातील रस्ते व वीजकामांना वनविभागाने अडथळा आणू नये, अशी मागणी इरफान तालिकोटी यांनी केली. ज्येष्ठ नागरिकांनी पेन्शनची वयोमर्यादा ६५ वरून ६० वर्षे करण्याची मागणी केली.
बैठकीस तहसीलदार दुंडाप्पा कोमार, रमेश मेत्री, सूर्यकांत कुलकर्णी, संजय गस्ते, डॉ. महेश किवडसन्नवर, डॉ. मनोहर दादमी, डी. बी. चव्हाण आदी उपस्थित होते.
पत्रकारांच्या अनुपस्थितीवरून सवाल
बैठकीला पत्रकार उपस्थित नसल्याचे निदर्शनास येताच आमदार हलगेकर यांनी अधिकाऱ्यांना याबाबत सवाल केला. खानापूर येथील प्रजासेवा कार्यक्रम यापूर्वी दोन वेळा पुढे ढकलण्यात आल्याने नंदगडच्या कार्यक्रमाबाबतही संभ्रम निर्माण झाला होता. तसेच कार्यक्रमाची माहिती पत्रकारांना देण्यात आली नसल्याने त्यांना उपस्थित राहता आले नाही.

ಮೊದಲ ಪ್ರಜಾಸೇವಾ ಕಾರ್ಯಕ್ರಮದಲ್ಲೇ ದೂರುಗಳ ಸುರಿಮಳೆ
ನಂದಗಡದಲ್ಲಿ ಆಯೋಜನೆ : ಸಮಸ್ಯೆಗಳಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಶಾಸಕ ವಿಠ್ಠಲ ಹಲಗೇಕರ ಅಧಿಕಾರಿಗಳಿಗೆ ಸೂಚನೆ
ಖಾನಾಪುರ : ಮುಂದುವರಿದ ಸೇವೆ
ನಾಗರಿಕರ ಸಮಸ್ಯೆ ಹಾಗೂ ದೂರುಗಳನ್ನು ತ್ವರಿತವಾಗಿ ಪರಿಹರಿಸಿ ಸರ್ಕಾರಿ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ನಂದಗಡದಲ್ಲಿ ಆಯೋಜಿಸಿದ್ದ ಮೊದಲ ಪ್ರಜಾಸೇವಾ ಕಾರ್ಯಕ್ರಮದಲ್ಲೇ ವಿವಿಧ ಸಮಸ್ಯೆಗಳ ಕುರಿತು ದೂರುಗಳ ಸುರಿಮಳೆಯಾಯಿತು. ನಂದಗಡದ ಮಾರ್ಕೆಟಿಂಗ್ ಸೊಸೈಟಿ ಸಭಾಂಗಣದಲ್ಲಿ ಶಾಸಕ ವಿಠ್ಠಲ ಹಲಗೇಕರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಪಿಂಚಣಿ, ಪಡಿತರ ಚೀಟಿ, ಜಮೀನು ದಾಖಲೆ, ರಸ್ತೆ, ವಿದ್ಯುತ್, ಬಸ್ ಸೇವೆ ಸೇರಿದಂತೆ ವಿವಿಧ ಮೂಲಭೂತ ಸಮಸ್ಯೆಗಳನ್ನು ನಾಗರಿಕರು ಸಭೆಯಲ್ಲಿ ಪ್ರಸ್ತಾಪಿಸಿದರು. ಸಭೆಯಲ್ಲಿ ಸ್ವೀಕರಿಸಲಾದ ಪ್ರತಿಯೊಂದು ದೂರಿನ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸಮಯಮಿತಿಯಲ್ಲಿ ಕ್ರಮ ಕೈಗೊಂಡು ಜನರಿಗೆ ಪರಿಹಾರ ಒದಗಿಸಬೇಕು ಎಂದು ಶಾಸಕ ವಿಠ್ಠಲ ಹಲಗೇಕರ ಸೂಚಿಸಿದರು.
ಸಾಮಾಜಿಕ ಕಾರ್ಯಕರ್ತ ಯಶವಂತ ಬಿರ್ಜೆ ಅವರು ಖಾನಾಪುರ ನಗರದ ಗೋಮಾಳ ಜಮೀನು ಒತ್ತುವರಿ ಸಮಸ್ಯೆಯನ್ನು ಪ್ರಸ್ತಾಪಿಸಿದರು. ಸರ್ಕಾರಿ ಕೆರೆ ಹಾಗೂ ಇತರ ಸರ್ಕಾರಿ ಆಸ್ತಿಗಳು ಸುರಕ್ಷಿತವಾಗಿಲ್ಲದಿರುವ ಬಗ್ಗೆ ಪ್ರಶ್ನಿಸಿದ ಅವರು, ಗೋಮಾಳ ಜಮೀನುಗಳನ್ನು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಹೆಸರಿಗೆ ಮಾಡಲಾಗುತ್ತಿದೆ ಎಂಬ ಆರೋಪದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಮಲಪ್ರಭಾ ನದಿಯ ನೀರಿನ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಖಾನಾಪುರದ ಪಾಲಿನ ನೀರು ಖಾನಾಪುರಕ್ಕೇ ಉಳಿಯುವಂತೆ ಎಲ್ಲ ರಾಜಕೀಯ ನಾಯಕರು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಾಗಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.
ತಹಶೀಲ್ದಾರ್ ಕಚೇರಿಯಲ್ಲಿ ಹಳೆಯ ದಾಖಲೆ ಹಾಗೂ ಜಮೀನು ಉತಾರ ಪಡೆಯಲು ರೈತರು ಹಲವು ತಿಂಗಳು ಕಾಯಬೇಕಾಗಿದೆ ಎಂಬ ದೂರು ಕೇಳಿಬಂತು. ಡಿಜಿಟಲೀಕರಣದ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಜನರಿಗೆ ಸಮಯಕ್ಕೆ ಸರಿಯಾಗಿ ದಾಖಲೆಗಳನ್ನು ಒದಗಿಸಬೇಕು ಎಂದು ಆಗ್ರಹಿಸಲಾಯಿತು. ಹಲವು ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳು ನಿಯಮಿತವಾಗಿ ಲಭ್ಯವಿರುವುದಿಲ್ಲ ಎಂಬ ದೂರು ಕೂಡ ಕೇಳಿಬಂತು.
ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವಿಜಯ ಕಾಮತ್ ಅವರು ನಂದಗಡವು ಖಾನಾಪುರದ ನಂತರದ ಪ್ರಮುಖ ವ್ಯಾಪಾರ ಹಾಗೂ ಶೈಕ್ಷಣಿಕ ಕೇಂದ್ರವಾಗಿದ್ದು, ಇಲ್ಲಿ ವೇಗದ ಬಸ್‌ಗಳಿಗೆ ನಿಲುಗಡೆ ಕಲ್ಪಿಸಬೇಕು ಹಾಗೂ ಹಳೆಯ ಬಸ್ ನಿಲ್ದಾಣದವರೆಗೆ ಬಸ್‌ಗಳನ್ನು ಓಡಿಸಬೇಕು ಎಂದು ಒತ್ತಾಯಿಸಿದರು. ಅರಣ್ಯ ಪ್ರದೇಶದ ರಸ್ತೆ ಹಾಗೂ ವಿದ್ಯುತ್ ಕಾಮಗಾರಿಗಳಿಗೆ ಅರಣ್ಯ ಇಲಾಖೆ ಅಡ್ಡಿಪಡಿಸಬಾರದು ಎಂದು ಇರ್ಫಾನ್ ತಾಲಿಕೋಟಿ ಮನವಿ ಮಾಡಿದರು. ವೃದ್ಧರು ಪಿಂಚಣಿಗೆ ಇರುವ ವಯೋಮಿತಿಯನ್ನು 65ರಿಂದ 60 ವರ್ಷಕ್ಕೆ ಇಳಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ತಹಶೀಲ್ದಾರ್ ದುಂಡಪ್ಪ ಕೋಮಾರ, ತಾಲ್ಲೂಕು ಪಂಚಾಯಿತಿ ಇಒ ರಮೇಶ ಮೆತ್ರಿ, ಪಂಚಹಮಿ ಸಮಿತಿ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ, ಸಂಜಯ ಗಸ್ತೆ, ಡಾ. ಮಹೇಶ ಕಿವಡಸನ್ನವರ, ಡಾ. ಮನೋಹರ ದಾದಮಿ, ಡಿ.ಬಿ. ಚವ್ಹಾಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪತ್ರಕರ್ತರ ಗೈರುಹಾಜರಿಗೆ ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕ
ಪ್ರಜಾಸೇವಾ ಸಭೆಗೆ ಪತ್ರಕರ್ತರು ಗೈರಾಗಿರುವುದನ್ನು ಗಮನಿಸಿದ ಶಾಸಕ ವಿಠ್ಠಲ ಹಲಗೇಕರ ಅವರು, ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಪತ್ರಕರ್ತರು ಸಭೆಗೆ ಏಕೆ ಬಂದಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಕುರಿತು ಅಧಿಕಾರಿಗಳಿಂದ ಸಮರ್ಪಕ ಉತ್ತರ ದೊರೆಯಲಿಲ್ಲ.
ಈ ಹಿಂದೆ ಖಾನಾಪುರದ ಪ್ರಜಾಸೇವಾ ಕಾರ್ಯಕ್ರಮ ಎರಡು ಬಾರಿ ಮುಂದೂಡಲ್ಪಟ್ಟಿದ್ದರಿಂದ ನಂದಗಡದ ಕಾರ್ಯಕ್ರಮದ ಬಗ್ಗೆಯೂ ಗೊಂದಲ ಉಂಟಾಗಿತ್ತು. ಅಲ್ಲದೆ ಕಾರ್ಯಕ್ರಮದ ಕುರಿತು ತಹಶೀಲ್ದಾರ್ ಕಚೇರಿ ಹಾಗೂ ಶಾಸಕರ ಕಚೇರಿಯಿಂದ ಪತ್ರಕರ್ತರಿಗೆ ಸೂಕ್ತ ಮಾಹಿತಿ ನೀಡದಿರುವುದರಿಂದ ಅವರು ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ.
