“देव आले, देव आले… सारे पीक खाऊन गेले!” शिरोली-तिओली परिसरात हत्तींचा धुमाकूळ! ದೇವರು ಬಂದರು, ದೇವರು ಬಂದರು… ಬೆಳೆದ ಬೆಳೆಯನ್ನೆಲ್ಲ ತಿಂದು ಹೋದರು!” ಶಿರೋಳಿ-ತಿಯೋಳಿ ಭಾಗದಲ್ಲಿ ಕಾಡಾನೆಗಳ ಹಾವಳಿ!
“देव आले, देव आले… सारे पीक खाऊन गेले!” शिरोली-तिओली परिसरात हत्तींचा धुमाकूळ!
आठ ते दहा हत्तींचा कळप महिनाभरापासून ठाण मांडून; भात, ऊस, सुपारी आणि केळीच्या बागांची मोठी नासधूस
शिरोली (प्रतिनिधी) : खानापूर तालुक्यातील शिरोली-तिओली परिसरात गेल्या महिनाभरापासून आठ ते दहा रानटी हत्तींच्या कळपाने अक्षरशः धुमाकूळ घातला आहे. जंगल परिसरातून बाहेर पडून हत्तींचा कळप शेतातील भात आणि ऊस पिकांवर ताव मारत असून, शेतकऱ्यांचे मोठ्या प्रमाणात आर्थिक नुकसान होत आहे. ‘देव आले, देव आले… सारे पीक खाऊन गेले!’ अशी हतबल प्रतिक्रिया आता शेतकऱ्यांकडून व्यक्त होत आहे.
या हत्तींच्या कळपाने शेतकरी संतोष बिरजे यांच्या शेतात मोठ्या प्रमाणात नासधूस केली आहे. त्यांच्या शेततळ्यातील शंभरहून अधिक सुपारीची झाडे तसेच केळीची झाडे जमीनदोस्त केली आहेत. एवढेच नव्हे, तर दोन एकरांतील ऊस पिकाचे आणि संपूर्ण पाईपलाईनचे मोठे नुकसान केले आहे. सामाजिक कार्यकर्ते रवी काडगी यांच्या ऊस पिकाचेही हत्तींच्या कळपाने मोठ्या प्रमाणात नुकसान केले आहे.
रात्रभर हत्तींचा बंदोबस्त करण्यासाठी वन खात्याची धडपड!
हत्तींचा कळप शेतामध्ये घुसून पिकांची नासधूस करत असल्याने वन खात्याचे अधिकारी आणि स्थानिक शेतकरी रात्रभर हत्तींना हुसकावून लावण्यासाठी प्रयत्न करत आहेत. मात्र, हत्तींचा कळप पुन्हा शेतांकडे वळत असल्याने वन विभागासमोर मोठे आव्हान निर्माण झाले आहे. हत्ती चवताळल्यास जीवितहानी होण्याची भीतीही व्यक्त केली जात आहे.
जंगलात खाद्य-पाण्याचा अभाव; शेतांकडे हत्तींचा मोर्चा!
जंगल परिसरात खाद्य आणि पाण्याची उपलब्धता कमी झाल्यामुळे हत्तींचा कळप उघड्या माळरानावरील भात आणि ऊस पिकांकडे वळत असल्याचा अंदाज व्यक्त केला जात आहे. महिनाभरापासून या परिसरात हत्तींचा वावर असल्याने शेतकरी भयभीत झाले आहेत.
हत्तींचा कळप खानापूरच्या दिशेने जाण्याची भीती!
सध्या शिरोली-तिओळी परिसरात ठाण मांडून असलेला हत्तींचा कळप खानापूर तालुक्याच्या इतर भागांकडे प्रस्थान करण्याची शक्यता असल्याने शेतकऱ्यांची चिंता वाढली आहे. मागील वर्षी जळगाव परिसरात एका हत्तीने मोठ्या प्रमाणात धुमाकूळ घातला होता. अखेर त्या हत्तीला बंदिस्त करण्याची कारवाई करावी लागली होती.
हत्तींच्या कळपाला बंदिस्त करण्यासाठी वन खाते पुढाकार घेणार का?
शिरोली-तिओळी परिसरातील शेतकऱ्यांचे भात, ऊस, सुपारी आणि केळी पिकांचे मोठे नुकसान होत असताना वन खात्याने केवळ हत्ती हुसकावण्यापुरते प्रयत्न न करता कायमस्वरूपी उपाययोजना कराव्यात, अशी मागणी होत आहे. गरज भासल्यास जळगावप्रमाणे या हत्तींच्या कळपाला सुरक्षितरीत्या बंदिस्त करण्यासाठी वन विभागाने पावले उचलावीत, अशी अपेक्षा शेतकरी व्यक्त करत आहेत.
स्थानिक लोकप्रतिनिधी या गंभीर प्रश्नाची दखल घेऊन वन खात्याकडे ठोस पाठपुरावा करणार का? खानापूर तालुक्यातील शेतकऱ्यांच्या पिकांची होणारी नासधूस थांबवण्यासाठी प्रशासन कोणती पावले उचलणार? हत्तींच्या दहशतीत जगणाऱ्या शेतकऱ्यांना नुकसानभरपाई आणि सुरक्षिततेचा दिलासा कधी मिळणार? असे संतप्त सवाल आता शेतकरी उपस्थित करत आहेत.
“ದೇವರು ಬಂದರು, ದೇವರು ಬಂದರು… ಬೆಳೆದ ಬೆಳೆಯನ್ನೆಲ್ಲ ತಿಂದು ಹೋದರು!” ಶಿರೋಳಿ-ತಿಯೋಳಿ ಭಾಗದಲ್ಲಿ ಕಾಡಾನೆಗಳ ಹಾವಳಿ!
ಎಂಟರಿಂದ ಹತ್ತು ಕಾಡಾನೆಗಳ ಹಿಂಡಿನಿಂದ ರೈತರ ಬೆಳೆಗಳಿಗೆ ಭಾರಿ ಹಾನಿ; ತಿಂಗಳಿನಿಂದ ಈ ಭಾಗದಲ್ಲೇ ಬೀಡು!
ಶಿರೋಳಿ (ಪ್ರತಿನಿಧಿ) : ಖಾನಾಪುರ ತಾಲೂಕಿನ ಶಿರೋಳಿ-ತಿಯೋಳಿ ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಎಂಟರಿಂದ ಹತ್ತು ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ರೈತರ ಕೃಷಿ ಜಮೀನುಗಳಿಗೆ ನುಗ್ಗಿ ಭತ್ತ, ಕಬ್ಬು, ಅಡಿಕೆ ಹಾಗೂ ಬಾಳೆ ಬೆಳೆಗಳನ್ನು ನಾಶಪಡಿಸುತ್ತಿವೆ. ಇದರಿಂದ ರೈತರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ರೈತ ಸಂತೋಷ್ ಬಿರ್ಜೆ ಅವರ ಕೃಷಿ ಜಮೀನಿನಲ್ಲಿ ಕಾಡಾನೆಗಳು ಭಾರಿ ಪ್ರಮಾಣದ ಹಾನಿ ಉಂಟುಮಾಡಿವೆ. ಅವರ ತೋಟದಲ್ಲಿದ್ದ ನೂರಕ್ಕೂ ಹೆಚ್ಚು ಅಡಿಕೆ ಮರಗಳು ಹಾಗೂ ಬಾಳೆ ಗಿಡಗಳನ್ನು ಧ್ವಂಸಗೊಳಿಸಿವೆ. ಅಲ್ಲದೆ, ಎರಡು ಎಕರೆ ಪ್ರದೇಶದಲ್ಲಿನ ಕಬ್ಬಿನ ಬೆಳೆ ಹಾಗೂ ಸಂಪೂರ್ಣ ನೀರಾವರಿ ಪೈಪ್ಲೈನ್ನ್ನು ಹಾಳುಮಾಡಿವೆ. ಸಾಮಾಜಿಕ ಕಾರ್ಯಕರ್ತ ರವಿ ಕಾಡಗಿ ಅವರ ಕಬ್ಬಿನ ಬೆಳೆಯೂ ಕಾಡಾನೆಗಳ ದಾಳಿಯಿಂದ ಹಾನಿಗೊಳಗಾಗಿದೆ.
ರಾತ್ರಿಯಿಡೀ ಕಾಡಾನೆಗಳನ್ನು ಓಡಿಸಲು ಹರಸಾಹಸ!
ಕಾಡಾನೆಗಳ ಹಾವಳಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ರೈತರು ರಾತ್ರಿಯಿಡೀ ಕಾಡಾನೆಗಳನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಕಾಡಾನೆಗಳ ಹಿಂಡು ಮತ್ತೆ ಮತ್ತೆ ಕೃಷಿ ಜಮೀನುಗಳಿಗೆ ನುಗ್ಗುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ಕಾಡಾನೆಗಳು ಕೆರಳಿದರೆ ಜೀವಹಾನಿಯಾಗುವ ಆತಂಕವೂ ಎದುರಾಗಿದೆ.
ಕಾಡಿನಲ್ಲಿ ಆಹಾರ, ನೀರಿನ ಕೊರತೆ; ಕೃಷಿ ಜಮೀನುಗಳತ್ತ ಆನೆಗಳ ಲಗ್ಗೆ!
ಕಾಡಿನಲ್ಲಿ ಆಹಾರ ಮತ್ತು ನೀರಿನ ಕೊರತೆಯಿಂದಾಗಿ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಬಂದು ಬಯಲು ಪ್ರದೇಶಗಳಲ್ಲಿರುವ ಭತ್ತ ಮತ್ತು ಕಬ್ಬಿನ ಗದ್ದೆಗಳಿಗೆ ಬರುತ್ತಿವೆ ಎನ್ನಲಾಗಿದೆ. ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ಬೀಡುಬಿಟ್ಟಿರುವ ಆನೆಗಳ ಹಿಂಡಿನಿಂದಾಗಿ ರೈತರು ರಾತ್ರಿ ಹಗಲೆನ್ನದೆ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಖಾನಾಪುರದ ಇತರ ಭಾಗಗಳಿಗೂ ಆನೆಗಳ ಹಿಂಡು ಪ್ರವೇಶಿಸುವ ಭೀತಿ!
ಶಿರೋಳಿ-ತಿಯೋಳಿ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಖಾನಾಪುರದ ಇತರ ಪ್ರದೇಶಗಳತ್ತ ಸಾಗುವ ಸಾಧ್ಯತೆ ಇರುವುದರಿಂದ ರೈತರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ವರ್ಷ ಜಳಗಾವ್ ಪ್ರದೇಶದಲ್ಲಿ ಒಂದು ಕಾಡಾನೆ ಭಾರಿ ಹಾವಳಿ ಸೃಷ್ಟಿಸಿತ್ತು. ಕೊನೆಗೆ ಆ ಆನೆಯನ್ನು ಸೆರೆಹಿಡಿದು ಬಂಧಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಾಡಾನೆಗಳ ಹಿಂಡನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಮುಂದಾಗುವುದೇ?
ಜಳಗಾವ್ ಮಾದರಿಯಲ್ಲಿ ಶಿರೋಳಿ-ತಿಯೋಳಿ ಭಾಗದಲ್ಲಿ ಹಾವಳಿ ನಡೆಸುತ್ತಿರುವ ಕಾಡಾನೆಗಳ ಹಿಂಡನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂಬುದು ರೈತರ ಒತ್ತಾಯವಾಗಿದೆ. ಕೇವಲ ಆನೆಗಳನ್ನು ಓಡಿಸುವ ಪ್ರಯತ್ನದಿಂದ ಶಾಶ್ವತ ಪರಿಹಾರ ಸಿಗುವುದಿಲ್ಲ. ರೈತರ ಬೆಳೆಗಳಿಗೆ ಆಗುತ್ತಿರುವ ನಷ್ಟವನ್ನು ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.
ಸ್ಥಳೀಯ ಜನಪ್ರತಿನಿಧಿಗಳು ಈ ಗಂಭೀರ ಸಮಸ್ಯೆಯನ್ನು ಗಮನಿಸಿ ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರುವರೆ? ಖಾನಾಪುರ ತಾಲೂಕಿನ ರೈತರ ಬೆಳೆಗಳನ್ನು ರಕ್ಷಿಸಲು ಸರ್ಕಾರ ಮತ್ತು ಅರಣ್ಯ ಇಲಾಖೆ ಮುಂದಾಗುವುವೇ? ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ದೊರೆಯುವುದೇ? ಎಂಬ ಪ್ರಶ್ನೆಗಳು ರೈತರನ್ನು ಕಾಡುತ್ತಿವೆ.