गृहलक्ष्मीचे पैसे कर्जफेडीसाठी वळते केल्यास बँकांवर कारवाई!’ಗೃಹಲಕ್ಷ್ಮಿ’ ಯೋಜನೆಯ ಹಣವನ್ನು ಸಾಲ ಮರುಪಾವತಿಗೆ ಬಳಸಿಕೊಂಡರೆ ಬ್ಯಾಂಕುಗಳ ವಿರುದ್ಧ ಕ್ರಮ!
गृहलक्ष्मीचे पैसे कर्जफेडीसाठी वळते केल्यास बँकांवर कारवाई!
रेशन वितरणातील अनियमिततेवर समिती आक्रमक; जिवंत महिलेला मृत दाखवून रेशन कार्डातून नाव वगळल्याचा धक्कादायक प्रकार
खानापूर : तालुक्यातील पाच गॅरंटी योजनांच्या अंमलबजावणीचा आढावा घेण्यासाठी शुक्रवारी (ता. २०) खानापूर तालुका पंचायतीच्या सभागृहात बैठक पार पडली. गॅरंटी योजना समितीचे अध्यक्ष सूर्यकांत कुलकर्णी यांच्या अध्यक्षतेखाली झालेल्या बैठकीत विविध विभागांच्या अधिकाऱ्यांना योजनांच्या अंमलबजावणीतील त्रुटींवरून धारेवर धरण्यात आले. विशेषतः गृहलक्ष्मी योजनेचे पैसे कर्जफेडीसाठी वळते करणाऱ्या बँकांवर कायदेशीर कारवाई करण्याचा इशारा देण्यात आला.
गृहलक्ष्मी योजनेचे अधिकारी संदीप देशमुख यांनी तालुक्यात ६७ हजार ४३२ लाभार्थी असून दरमहा प्रत्येकी दोन हजार रुपयांप्रमाणे १३ कोटी ४४ लाख ३२ हजार रुपये वितरित होत असल्याची माहिती दिली. काही बँका लाभार्थी महिलांच्या खात्यात जमा होणाऱ्या रकमेतून कर्जाचे हप्ते वसूल करत असल्याबद्दल अध्यक्ष कुलकर्णी यांनी नाराजी व्यक्त केली. अशा प्रकारे पैसे वळते करू नयेत, यासाठी सीडीपीओ कार्यालयाने सर्व बँकांना पत्र द्यावे, असे निर्देश दिले. प्रथम, गुंजी आणि जांबोटी येथील प्रगती बँकांना नोटीस देण्याची सूचनाही करण्यात आली.
बैठकीत रेशन वितरणातील गंभीर अनियमितता उघडकीस आली. गर्लगुंजी येथील विजया पुंडलिक पाटील या महिला जिवंत असतानाही रेशन कार्डमध्ये त्यांचा मृत्यू झाल्याची नोंद करून नाव वगळण्यात आले होते. त्यांनी स्वतः बैठकीत उपस्थित राहून तक्रार मांडली. समितीने त्यांचे नाव पुन्हा समाविष्ट करून रेशन कार्ड देण्याचे आदेश दिले. खानापूर शहरातील काही रेशन दुकानदार लाभार्थ्यांकडून १० ते २० रुपये घेत असल्याच्या तक्रारीही समोर आल्या. थेट लाभार्थ्यांशी संपर्क साधल्यानंतर वसुली होत असल्याचे स्पष्ट झाले.
अन्न व नागरी पुरवठा विभागाने मागील १७ बैठकांमध्ये मागितलेली माहिती सादर न केल्याबद्दल निरीक्षक संतोष यमकनमर्डी यांना जाब विचारण्यात आला. पुढील बैठकीत संपूर्ण माहिती सादर करण्याचे निर्देश देण्यात आले.
गृहज्योती योजनेंतर्गत ऑक्टोबर महिन्यात २ कोटी १७ लाख १३ हजार रुपयांची वीजबिल सवलत मिळाल्याची माहिती देण्यात आली. तसेच ट्रान्सफॉर्मरमधून ठिणगी पडून ऊस जळालेल्या शेतकऱ्यांना आर्थिक मदत मिळवून देण्याचे आश्वासन देण्यात आले.
शक्ती योजनेत ऑक्टोबर महिन्यात १ कोटी ८९ लाख ४० हजार ४०८ रुपयांची मोफत प्रवास तिकिटे वितरित झाल्याचे सांगण्यात आले. बससेवा आणि रेशनच्या घरपोच वितरणाबाबतही सूचना करण्यात आल्या. युवा निधी योजनेचे अधिकारी अनुपस्थित असल्याने आढावा घेता आला नाही.
बैठकीला प्रकाश मादार, बाबू हत्तरवाड, रुद्राप्पा पाटील, शांताराम गुरव, गोविंद पाटील, प्रियांका गावकर, जगदीश पाटील, युसुफ हारगी, इसाखान पठाण, राजा कुडाळे, विवेक तडकोड आणि तालुका पंचायत कार्यकारी अधिकारी रमेश मेत्री आदी उपस्थित होते.
ಗೃಹಲಕ್ಷ್ಮಿ ಹಣವನ್ನು ಸಾಲ ಮರುಪಾವತಿಗೆ ಕಡಿತಗೊಳಿಸಿದರೆ ಬ್ಯಾಂಕ್ಗಳ ವಿರುದ್ಧ ಕ್ರಮದ ಎಚ್ಚರಿಕೆ!
ಪಡಿತರ ವಿತರಣೆಯಲ್ಲಿ ಅಕ್ರಮ; ಜೀವಂತ ಮಹಿಳೆಯನ್ನು ಮೃತಪಟ್ಟಿದ್ದಾರೆಂದು ದಾಖಲಿಸಿ ರೇಷನ್ ಕಾರ್ಡ್ನಿಂದ ಹೆಸರು ತೆಗೆದಿರುವ ಪ್ರಕರಣ ಬಯಲು
ಖಾನಾಪುರ : ತಾಲ್ಲೂಕಿನ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆಗಾಗಿ ಶುಕ್ರವಾರ (ನ. 20) ಖಾನಾಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಹತ್ವದ ಸಭೆ ನಡೆಯಿತು. ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಯಿತು. ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸಾಲದ ಕಂತುಗಳಿಗೆ ಕಡಿತಗೊಳಿಸುವ ಬ್ಯಾಂಕ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಯಿತು.
ಗೃಹಲಕ್ಷ್ಮಿ ಯೋಜನೆಯ ಅಧಿಕಾರಿ ಸಂದೀಪ್ ದೇಶಮುಖ್ ಮಾಹಿತಿ ನೀಡಿ, ಖಾನಾಪುರ ತಾಲ್ಲೂಕಿನಲ್ಲಿ 67,432 ಫಲಾನುಭವಿಗಳಿದ್ದು, ಪ್ರತಿ ತಿಂಗಳು ತಲಾ 2 ಸಾವಿರ ರೂಪಾಯಿಗಳಂತೆ ಒಟ್ಟು 13 ಕೋಟಿ 44 ಲಕ್ಷ 32 ಸಾವಿರ ರೂಪಾಯಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಕೆಲವು ಬ್ಯಾಂಕ್ಗಳು ಮಹಿಳೆಯರ ಖಾತೆಗೆ ಜಮೆಯಾಗುವ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಸಾಲದ ಕಂತುಗಳನ್ನು ಕಡಿತಗೊಳಿಸುತ್ತಿರುವ ಬಗ್ಗೆ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ರೀತಿ ಹಣ ಕಡಿತಗೊಳಿಸದಂತೆ ಎಲ್ಲಾ ಬ್ಯಾಂಕ್ಗಳಿಗೆ ಸಿಡಿಪಿಒ ಕಚೇರಿಯಿಂದ ಪತ್ರ ಕಳುಹಿಸಬೇಕು ಎಂದು ಸೂಚಿಸಿದರು. ನಿಯಮಬಾಹಿರವಾಗಿ ಹಣ ಕಡಿತಗೊಳಿಸಿದರೆ ಸಂಬಂಧಿಸಿದ ಬ್ಯಾಂಕ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಪ್ರಥಮ, ಗುಂಜಿ ಮತ್ತು ಜಾಂಬೋಟಿ ಪ್ರಗತಿ ಬ್ಯಾಂಕ್ಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ಪಡಿತರ ವಿತರಣೆಯಲ್ಲಿನ ಗಂಭೀರ ಲೋಪಗಳೂ ಬೆಳಕಿಗೆ ಬಂದವು. ಗರ್ಲಗುಂಜಿ ಗ್ರಾಮದ ವಿಜಯಾ ಪುಂಡಲೀಕ ಪಾಟೀಲ ಎಂಬ ಮಹಿಳೆ ಜೀವಂತವಾಗಿದ್ದರೂ ರೇಷನ್ ಕಾರ್ಡ್ನಲ್ಲಿ ಮೃತಪಟ್ಟಿದ್ದಾರೆ ಎಂದು ದಾಖಲಿಸಿ ಅವರ ಹೆಸರನ್ನು ತೆಗೆದುಹಾಕಿರುವುದು ಬಹಿರಂಗವಾಯಿತು. ಮಹಿಳೆಯೇ ಸಭೆಗೆ ಹಾಜರಾಗಿ ತಮ್ಮ ಅಳಲು ತೋಡಿಕೊಂಡರು. ತಕ್ಷಣವೇ ಅವರ ಹೆಸರನ್ನು ಮರು ಸೇರ್ಪಡೆಗೊಳಿಸಿ ರೇಷನ್ ಕಾರ್ಡ್ ನೀಡುವಂತೆ ಸಮಿತಿ ಆದೇಶಿಸಿತು.
ಖಾನಾಪುರ ಪಟ್ಟಣದ ಕೆಲವು ಪಡಿತರ ಅಂಗಡಿಗಳಲ್ಲಿ ಫಲಾನುಭವಿಗಳಿಂದ 10ರಿಂದ 20 ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳೂ ಕೇಳಿಬಂದವು. ಸ್ಪೀಕರ್ ಮೂಲಕ ಫಲಾನುಭವಿಗಳನ್ನು ಸಂಪರ್ಕಿಸಿ ವಿಚಾರಿಸಿದಾಗ ಹಣ ಪಡೆಯುತ್ತಿರುವುದಾಗಿ ತಿಳಿಸಿದರು.
ಅನ್ನ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿರೀಕ್ಷಕ ಸಂತೋಷ ಯಮಕನಮರ್ಡಿ ಅವರಿಗೆ ಕಳೆದ 17 ಸಭೆಗಳಲ್ಲಿ ಕೇಳಲಾದ ಮಾಹಿತಿಯನ್ನು ಇನ್ನೂ ಸಲ್ಲಿಸದಿರುವುದಕ್ಕೆ ತರಾಟೆಗೆ ತೆಗೆದುಕೊಳ್ಳಲಾಯಿತು. ಮುಂದಿನ ಸಭೆಯಲ್ಲಿ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸಲಾಯಿತು.
ಇನ್ನು ಗೃಹಜ್ಯೋತಿ ಯೋಜನೆಯಡಿ ಅಕ್ಟೋಬರ್ ತಿಂಗಳಲ್ಲಿ 2 ಕೋಟಿ 17 ಲಕ್ಷ 13 ಸಾವಿರ ರೂಪಾಯಿ ವಿದ್ಯುತ್ ಬಿಲ್ ರಿಯಾಯಿತಿ ದೊರೆತಿದೆ. ಶಕ್ತಿ ಯೋಜನೆಯಡಿ 1 ಕೋಟಿ 89 ಲಕ್ಷ 40 ಸಾವಿರದ 408 ರೂಪಾಯಿ ಮೌಲ್ಯದ ಉಚಿತ ಪ್ರಯಾಣದ ಟಿಕೆಟ್ಗಳನ್ನು ವಿತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರಕಾಶ ಮಾದಾರ, ಬಾಬು ಹತ್ತರಿವಾಡ, ರುದ್ರಪ್ಪ ಪಾಟೀಲ, ಶಾಂತಾರಾಮ್ ಗುರವ, ಗೋವಿಂದ ಪಾಟೀಲ, ಪ್ರಿಯಾಂಕಾ ಗಾವಕರ, ಜಗದೀಶ ಪಾಟೀಲ, ಯೂಸುಫ್ ಹಾರಗಿ, ಇಸಾಖಾನ್ ಪಠಾಣ್, ರಾಜಾ ಕುಡಾಳೆ, ವಿವೇಕ ತಡಕೋಡ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೇತ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.