Home » खानापूर तालुका दुष्काळग्रस्त जाहीर करा! ಖಾನಾಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಒತ್ತಾಯ

खानापूर तालुका दुष्काळग्रस्त जाहीर करा! ಖಾನಾಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಒತ್ತಾಯ

IMG-20260709-WA0023

आमदार विठ्ठल हलगेकर यांची मुख्यमंत्री डी.के. शिवकुमार यांच्याकडे मागणी; दुष्काळाच्या निकषांचा फेरविचार करण्याची विनंती

बंगलोर : खानापूर तालुक्यात पावसाअभावी निर्माण झालेली दुष्काळसदृश परिस्थिती लक्षात घेऊन खानापूर तालुक्याचा दुष्काळग्रस्त तालुक्यांच्या यादीत समावेश करावा, अशी मागणी आमदार विठ्ठल हलगेकर यांनी केली. यासंदर्भात त्यांनी सोमवारी मुख्यमंत्री डी.के. शिवकुमार यांची भेट घेऊन सविस्तर निवेदन सादर केले.

खानापूर तालुका भौगोलिकदृष्ट्या मलनाड आणि अर्ध-मलनाड अशा विविध भागांनी बनलेला आहे. यंदा तालुक्यात अपेक्षित प्रमाणात पाऊस झालेला नसून गेल्या महिनाभरापासून पावसाने दडी मारल्याने भातासह विविध पिकांवर मोठा परिणाम झाला आहे. अनेक भागांतील पिके सुकू लागल्याने शेतकरी आर्थिक संकटात सापडले आहेत.

दुष्काळाच्या सर्वेक्षणात खानापूर तालुक्याची वास्तविक परिस्थिती प्रतिबिंबित होत नसल्याचा मुद्दा आमदार हलगेकर यांनी मुख्यमंत्र्यांच्या निदर्शनास आणून दिला. तालुक्याचा मोठा भाग वनक्षेत्रात येतो, तर उर्वरित भागात मोठ्या प्रमाणावर शेती केली जाते. वनक्षेत्रात झालेला पाऊस आणि अर्ध-मलनाड भागातील पर्जन्यमान यामध्ये मोठी तफावत असू शकते. त्यामुळे केवळ वनक्षेत्रातील पावसाच्या नोंदीच्या आधारे दुष्काळाची स्थिती ठरविल्यास शेतीवर अवलंबून असलेल्या शेतकऱ्यांवर अन्याय होऊ शकतो, असे त्यांनी स्पष्ट केले.

यंदाच्या प्रतिकूल हवामानामुळे तालुक्यातील सुमारे ७५ टक्के पिकांचे नुकसान झाल्याचा दावा आमदार हलगेकर यांनी केला. पिकांचे नुकसान, पावसातील खंड आणि शेतकऱ्यांची आर्थिक परिस्थिती यांचा सर्वंकष विचार करून खानापूर तालुक्याचा दुष्काळग्रस्त तालुक्यांच्या यादीत समावेश करावा, अशी मागणी त्यांनी केली.

संकटात सापडलेल्या शेतकऱ्यांना शासनाच्या मदतीचा लाभ मिळणे आवश्यक असून, दुष्काळाच्या निकषांचे पुनर्मूल्यांकन करून खानापूर तालुक्याच्या परिस्थितीचा फेरविचार करावा, अशी विनंतीही त्यांनी मुख्यमंत्र्यांकडे केली.

मुख्यमंत्री डी.के. शिवकुमार यांनी निवेदन स्वीकारून खानापूर तालुक्यातील परिस्थितीची पुढील काळात दखल घेऊन दुष्काळग्रस्त म्हणून समावेश करण्याबाबत विचार करण्याचे आश्वासन दिल्याचे आमदार हलगेकर यांनी सांगितले.

ಖಾನಾಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಒತ್ತಾಯ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ

ಬೆಳಗಾವಿ : ಖಾನಾಪುರ ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಪರಿಗಣಿಸಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಶಾಸಕ ವಿಠ್ಠಲ ಹಲಗೇಕರ ಅವರು ಸೋಮವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಖಾನಾಪುರ ತಾಲೂಕು ಮಲೆನಾಡು ಹಾಗೂ ಅರೆ ಮಲೆನಾಡು ಪ್ರದೇಶಗಳನ್ನು ಒಳಗೊಂಡಿದೆ. ಈ ವರ್ಷ ವಾಡಿಕೆಯ ಪ್ರಮಾಣದಲ್ಲಿ ಮಳೆಯಾಗಿಲ್ಲ. ಕಳೆದ ಒಂದು ತಿಂಗಳಿನಿಂದ ಮಳೆ ಕೊರತೆಯಾಗಿರುವುದರಿಂದ ಭತ್ತ ಸೇರಿದಂತೆ ವಿವಿಧ ಬೆಳೆಗಳು ಒಣಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಕೃಷಿ ಇಲಾಖೆಯ ಬರ ಸಮೀಕ್ಷೆಯಲ್ಲಿ ಖಾನಾಪುರ ತಾಲೂಕನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸದಿರುವುದು ರೈತರಿಗೆ ಅನ್ಯಾಯವಾಗಲಿದೆ ಎಂದು ಶಾಸಕ ಹಲಗೇಕರ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಖಾನಾಪುರ ತಾಲೂಕಿನ ಸುಮಾರು ಅರ್ಧ ಭಾಗ ಅರಣ್ಯ ಪ್ರದೇಶವನ್ನು ಹೊಂದಿದ್ದು, ಉಳಿದ ಭಾಗ ಅರೆ ಮಲೆನಾಡು ಪ್ರದೇಶವಾಗಿದೆ. ಅರೆ ಮಲೆನಾಡು ಪ್ರದೇಶದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಮಾಡುತ್ತಿದ್ದಾರೆ. ಆದರೆ ಬರ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ದಾಖಲಾದ ಮಳೆಯ ಪ್ರಮಾಣವನ್ನೇ ಪರಿಗಣಿಸಲಾಗುತ್ತಿದೆ. ಇದರಿಂದ ಅರೆ ಮಲೆನಾಡು ಪ್ರದೇಶದಲ್ಲಿನ ಕೃಷಿ ಪರಿಸ್ಥಿತಿ ಹಾಗೂ ರೈತರ ವಾಸ್ತವಿಕ ಸಂಕಷ್ಟ ಸಮರ್ಪಕವಾಗಿ ಪ್ರತಿಬಿಂಬಿಸುತ್ತಿಲ್ಲ ಎಂದು ಅವರು ಹೇಳಿದರು.

ಪ್ರಸ್ತುತ ವರ್ಷದಲ್ಲಿ ತಾಲೂಕಿನ ಸುಮಾರು ಶೇ.75ರಷ್ಟು ಬೆಳೆ ಹಾನಿಯಾಗಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅನ್ನದಾತರ ನೆರವಿಗೆ ಧಾವಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದ್ದರಿಂದ ಖಾನಾಪುರ ತಾಲೂಕಿನ ವಾಸ್ತವಿಕ ಪರಿಸ್ಥಿತಿಯನ್ನು ಪರಿಗಣಿಸಿ ಬರ ಸಮೀಕ್ಷೆಯನ್ನು ಮರುಪರಿಶೀಲಿಸಬೇಕು ಎಂದು ಶಾಸಕ ಹಲಗೇಕರ ಮನವಿ ಮಾಡಿದರು.

ಈಗಾಗಲೇ ಬರಪೀಡಿತ ಎಂದು ಘೋಷಿಸಿರುವ ತಾಲೂಕುಗಳ ಪಟ್ಟಿಗೆ ಖಾನಾಪುರ ತಾಲೂಕನ್ನೂ ಸೇರಿಸಿ, ಖಾನಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ರೈತರ ಹಿತ ಕಾಪಾಡಬೇಕು ಎಂದು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖಾನಾಪುರ ತಾಲೂಕಿನ ಪರಿಸ್ಥಿತಿಯನ್ನು ಮುಂದಿನ ದಿನಗಳಲ್ಲಿ ಪರಿಶೀಲಿಸಿ, ಬರಪೀಡಿತ ತಾಲೂಕು ಎಂದು ಪರಿಗಣಿಸುವ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಶಾಸಕ ವಿಠ್ಠಲ ಹಲಗೇಕರ ತಿಳಿಸಿದ್ದಾರೆ.

Do Share

You may have missed

error: Content is protected !!
Call Us