Home » गृहलक्ष्मी लाभार्थींना मोबाईल-सिमची सक्ती करू नये

गृहलक्ष्मी लाभार्थींना मोबाईल-सिमची सक्ती करू नये

IMG-20260922-WA0014

गृहलक्ष्मी लाभार्थींना मोबाईल-सिमची सक्ती करू नये

जुनी पद्धत कायम ठेवण्याची शेतकरी संघटनेची मागणी; सहा महिन्यांपासून पेन्शन रखडल्याचा आरोप

कक्केरी : गृहलक्ष्मी योजनेच्या लाभार्थी महिलांना स्वतःच्या नावावर मोबाईल व सिमकार्ड असणे आवश्यक करण्याचा निर्णय मागे घेऊन पूर्वीची पद्धत कायम ठेवावी, अशी मागणी अखिल कर्नाटक शेतकरी संघ, बेंगळुरूचे राज्य उपाध्यक्ष किशोर मिठारी यांनी केली आहे. याबाबत मुख्यमंत्री डी. के. शिवकुमार यांना पोस्टाद्वारे निवेदन पाठविण्यात आले आहे.

कर्नाटक सरकारच्या अन्नभाग्य, गृहज्योती, शक्ती, युवानिधी आणि गृहलक्ष्मी आदी योजनांचा लाभ गरीब व गरजू कुटुंबांना मिळत आहे. गृहलक्ष्मी योजनेअंतर्गत कुटुंबाच्या महिला प्रमुखांना दरमहा ₹२,०००ची आर्थिक मदत दिली जाते.

मात्र, गृहलक्ष्मी योजनेच्या लाभार्थींनी मोबाईल व सिमकार्ड स्वतःच्या नावावर असणे आवश्यक असल्याचे सांगितले जात असल्याने ग्रामीण भागातील अनेक महिला अडचणीत येत असल्याचे निवेदनात नमूद करण्यात आले आहे. विशेषतः आर्थिकदृष्ट्या दुर्बल कुटुंबे, वृद्ध महिला आणि ज्येष्ठ नागरिकांना नवीन मोबाईल-सिम घेणे तसेच अंगठ्याचा ठसा व छायाचित्र देण्याच्या प्रक्रियेत अडचणी येत असल्याचे संघटनेचे म्हणणे आहे.

“गरीब महिलांवर अतिरिक्त आर्थिक व प्रशासकीय भार पडू नये”, यासाठी ही सक्तीची अट मागे घेऊन पूर्वीप्रमाणे लाभ देण्याची मागणी किशोर मिठारी यांनी केली आहे.

तसेच विधवा पेन्शन, वृद्धापकाळ पेन्शन, दिव्यांग पेन्शन यांसह विविध सामाजिक सुरक्षा योजनांचे मानधन काही लाभार्थींना मागील सहा महिन्यांपासून मिळाले नसल्याचा दावा निवेदनात करण्यात आला आहे. या समस्येकडे राज्य सरकारने तातडीने लक्ष देऊन प्रलंबित पेन्शन सुरू करावी, अशी मागणी करण्यात आली आहे.

या मागण्यांकडे दुर्लक्ष झाल्यास ताळगुप्पा–बेळगाव राज्य महामार्गावरील लिंगनमठ क्रॉस येथे रास्ता रोको आंदोलन करण्यात येईल, असा इशाराही निवेदनातून देण्यात आला आहे.

निवेदनाच्या प्रती प्रादेशिक आयुक्त, बेळगाव; जिल्हाधिकारी, बेळगाव; सहाय्यक आयुक्त, बेळगाव; आयजीपी, बेळगाव; जिल्हा पोलीस अधीक्षक, बेळगाव; खानापूर तहसीलदार तसेच नंदगड पोलीस ठाण्याचे पीआय यांना पाठविण्यात आल्या आहेत.

किशोर मिठारी, कक्केरी यांनी शेतकरी, शेतमजूर, कामगार, गरीब कुटुंबे तसेच विविध संघटनांच्या पदाधिकाऱ्यांच्या वतीने सरकारने मागण्यांवर सकारात्मक निर्णय घ्यावा, असे आवाहन केले आहे.


ಸರ್ಕಾರ ಮನೆಯ ಮಹಿಳಾ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ತಾವು ತಂದಿರುವ ನೂತನ ಕಾಯ್ದೆ ಮೊಬೈಲ್, ಹಾಗೂ ಸಿಮ್ ಹೊಂದಿರಬೇಕೆಂದು ಮಾಡಿರುವುದನ್ನು ಕೈ ಬಿಟ್ಟು ಹಳೆ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಜನಪ್ರಿಯ ಮುಖ್ಯಮಂತ್ರಿಗಳು ಶ್ರೀ ಡಿ ಕೆ ಶಿವಕುಮಾರ್ ರವರಿಗೆ ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ ಹಾಗೂ ರೈತ ಮುಖಂಡರು ಒತ್ತಾಯಿಸಿ ಮನವಿ ಪತ್ರವನ್ನು ಪೋಸ್ಟ್ ಮುಖಾಂತರ ಕಳಿಸಲಾಯಿತು. ಕರ್ನಾಟಕ ಸರ್ಕಾರ ತಂದಿರುವ ಅನ್ನಭಾಗ್ಯ, 200 ಯೂನಿಟ್ ವಿದ್ಯುತ್ ಉಚಿತ, ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್ಸಿನ ಪಾಸ್, ವಿದ್ಯಾರ್ಥಿ ವೇತನ,ಮನೆ ಯಜಮಾನಿತಿಗೆ 2000 ಸಾವಿರ ರೂಪಾಯಿಗಳು ಗೃಹ ಲಕ್ಷ್ಮಿ ಹಲವಾರು ಯೋಜನೆಗಳ ಭಾಗ್ಯಗಳು ಬಡ ಕುಟುಂಬಕ್ಕೆ ಉತ್ತಮ ಯೋಜನೆಯಾಗಿದ್ದು. ಈಗಾಗಲೇ ಮೂರು ವರ್ಷದಿಂದ ಯಾವುದೇ ತೊಂದರೆ ಇಲ್ಲದೆ ಉಚಿತ ಎಲ್ಲ ಫಲಾನುಭವಿಗಳು ಪಡೆದುಕೊಳ್ಳುತ್ತಿದ್ದರು
ತಾವು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗನಿಂದ ಉತ್ತಮ ಯೋಜನೆಗಳು ಹಾಗೂ ರೈತರ ಹಲವಾರು ಸಮಸ್ಯೆಗಳಿಗೆ, ಬಡ ಕುಟುಂಬದ ಬಗ್ಗೆ ಹೆಚ್ಚಿನ ಗಮನ ಹರಿಸಿ ಉತ್ತಮ ಆಡಳಿತ ನಡೆಸುವ ಬಯಕೆ ತಮ್ಮದಾಗಿದೆ ಆದರೆ ತಾವು ಎಲ್ಲ ನೀಡುತ್ತಿರುವ ಉಚಿತ ಭಾಗ್ಯಗಳಿಗೆ ಕೆವೈಸಿ ಮಾಡಿಸಿ ಎಂದು ಜಾರಿಗೆ ತಂದಿದ್ದು ಒಳ್ಳೆಯದು. ಆದರೆ ಮನೆ ಯಜಮಾನಿತಿಗೆ ನೀಡುತ್ತಿರುವ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಫಲಾನುಭವಿಗಳು ಸರ್ಕಾರದ ಆದೇಶದ ಪ್ರಕಾರ ಮೊಬೈಲ್ ಹಾಗೂ ಸಿಮ್ ಕಾರ್ಡ್ ತಮ್ಮ ಹೆಸರಿನಲ್ಲಿ ಇರಬೇಕು ಇಲ್ಲವಾದಲ್ಲಿ ಹೊಸದಾಗಿ ಖರೀದಿ ಮಾಡಿ ಎಂದು ಹೇಳುತ್ತಿರುವುದು ರಿಂದ. ಕೆಲವರು ಭಯಪಟ್ಟು ಖರೀದಿಗೆ ಮುಗಿಬಿದಿದ್ದಾರೆ ಇನ್ನೂ ಕೆಲವರು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಮೊಬೈಲ್, ಸಿಮ್ ಕಾರ್ಡ್ ಪಡೆಯಲು ಸಾಧ್ಯವಾಗುವುದಿಲ್ಲ. ಇನ್ನೂ ವಯಸ್ಸಾದ ಅಜ್ಜಿ, ವಯಸ್ಕರ ಮಹಿಳೆಯರು, ಸಿಮ್ ಕಾರ್ಡ್ ಪಡೆಯಲು ಹೆಬ್ಬಟ್ಟು , ಫೋಟೋ ತೆಗೆದುಕೊಳ್ಳಲು ಬಹಳ ತೊಂದರೆ ಅನುಭವಿಸುವಂತಾಗಿದೆ. ದಯಮಾಡಿ ಈ ನೂತನ ಕಾಯ್ದೆಯನ್ನು ಜಾರಿಗೆ ತಂದಿದ್ದನ್ನು ಕೈ ಬಿಟ್ಟು ಹಳೆ ಪದ್ಧತಿಯನ್ನು ಜಾರಿಗೆ ತರಬೇಕು. ಮತ್ತು ಈಗಾಗಲೇ ನೀಡುತ್ತಿರುವ ವಿದವಾಹ ಪೆನ್ಷನ್, 65 ವರ್ಷದವರೆಗೆ ವಯಸ್ಕರ ಪೆನ್ಷನ್, ಅಂಗವಿಕಲರ ಪೆನ್ಷನ್, ಸೇರಿದಂತೆ ಹಲವಾರು ಯೋಜನೆಯ ಫಲಾನುಭವಿಗಳಿಗೆ ಆರು ತಿಂಗಳಗಳಿಂದ ಮಾಸಾಸನ ಪೆನ್ಷನ್ ವೇತನ ಬಂದಿರುವುದಿಲ್ಲ . ಇದು ಕೇವಲ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಸಮಸ್ಯೆ ಅಲ್ಲಾ ರಾಜ್ಯದ ಎಲ್ಲ ಬಡವರ, ಕೂಲಿ, ಕಾರ್ಮಿಕರ, ಸಮಸ್ಯೆಯಾಗಿದೆ. ಜನಪ್ರಿಯ ಮುಖ್ಯಮಂತ್ರಿಗಳು ಶ್ರೀ ಡಿ ಕೆ ಶಿವಕುಮಾರರವರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಎಂದು ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ ಕಕ್ಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಾನಾ ಸಂಘಟನೆಯ ಪದಾಧಿಕಾರಿಗಳು, ಕೂಲಿ ಕಾರ್ಮಿಕರು, ಬಡವರು, ವಿನಂತಿಸಿಕೊಳ್ಳುತ್ತಿದ್ದೇವೆ.ದಯಮಾಡಿ ನಮ್ಮ ಮನವಿಗೆ ಸ್ಪಂದಿಸುವಿರಂದು ನಾವುಗಳು ನಂಬಿದ್ದೇವೆ. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ತಾಳಗುಪ್ಪ ಬೆಳಗಾವಿ ರಾಜ್ಯ ಹೆದ್ದಾರಿ ಲಿಂಗನಮಠ ಕ್ರಾಸ್ ಬಳಿ ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸುತಿದ್ದೇವೆ.

ಪ್ರತಿಗಳು ರವಾನಿಸಲಾಗಿದೆ.

  1. ಪ್ರಾದೇಶಿಕ ಆಯುಕ್ತರು ಬೆಳಗಾವಿ ಇವರಿಗೆ.
  2. ಜಿಲ್ಲಾಧಿಕಾರಿಗಳು ಬೆಳಗಾವಿ ಇವರಿಗೆ.
  3. ಎ. ಸಿ. ಸಾಹೇಬರು ಬೆಳಗಾವಿ.
  4. ಐಜಿಪಿ ಸಾಹೇಬರು ಬೆಳಗಾವಿ ಇವರಿಗೆ.
  5. ಎಸ್ ಪಿ ಸಾಹೇಬರು ಬೆಳಗಾವಿ ಇವರಿಗೆ.

6 .ತಾಲೂಕಾ ದಂಡಾಧಿಕಾರಿಗಳು ಖಾನಾಪುರ ಇವರಿಗೆ.
7. ಪಿ ಐ. ಸಾಹೇಬರು ನಂದಗಡ ಠಾಣೆ ನಂದಗಡ ಇವರಿಗೆ. ಮನವಿ ಪತ್ರಗಳನ್ನು ಪೋಸ್ಟ್ ಮುಖಾಂತರ ಕಳಿಸಲಾಗುವುದು. ಎಂದು ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ ಕಕ್ಕೇರಿ ತಿಳಿಸಿದ್ದಾರೆ.
22kkr1. ಫೋಟೋ ಶೀರ್ಷಿಕೆ.
ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ರಾಜ್ಯ ಉಪಾಧ್ಯಕ್ಷರು ಕಿಶೋರ ಮಿಠಾರಿ ಕಕ್ಕೇರಿ, ಭಾವಚಿತ್ರ.

Do Share

You may have missed

error: Content is protected !!
Call Us