गोधोळी :गणेश चतुर्थीच्या पूर्वसंध्येला दुर्दैवी घटना; बाळगुंद येथील मजुराच्या घरावर शोककळा! दुचाकीची झाडाला धडक; ಗೋದೋಲಿ : ಗಣೇಶ ಚತುರ್ಥಿಯ ಮುನ್ನಾದಿನದಂದು ದುರಂತ ಘಟನೆ; ಬಾಳಗುಂದ ಕಾರ್ಮಿಕ ಬಲಿ
खानापूर : तालुक्यातील बाळगुंद येथे रोजगार हमी योजनेच्या कामासाठी गेलेल्या एका मजुराचा दुचाकी अपघातात जागीच मृत्यू झाल्याची दुर्दैवी घटना शनिवारी घडली. संजय गणपती सुतार (रा. बाळगुंद) असे मृत्यू झालेल्या इसमाचे नाव आहे. गणेश चतुर्थीच्या पूर्वसंध्येला घडलेल्या या घटनेने परिसरात हळहळ व्यक्त होत आहे.
मिळालेल्या माहितीनुसार, गोधोळी ग्रामपंचायत अंतर्गत बाळगुंद येथे व्हीबी रामजी योजनेच्या कामाला नेहमीप्रमाणे सुरुवात झाली होती. संजय सुतार हे सकाळी रोजगाराच्या कामासाठी उपस्थित झाले होते. त्यांनी कामाच्या ठिकाणी आवश्यक फोटोही दिला होता. मात्र, त्यानंतर त्यांना अचानक डोकेदुखीचा त्रास जाणवू लागला.
कामाच्या ठिकाणी प्राथमिक उपचार करून त्यांना डॉक्टरांकडे जाण्याचा सल्ला देण्यात आला. त्यानंतर संजय सुतार हे आपल्या दुचाकीवरून डॉक्टरांकडे गेले. उपचार घेऊन परत येत असताना गोदगेरी क्रॉसजवळ त्यांच्या दुचाकीची रस्त्यालगतच्या झाडाला जोरदार धडक झाली. या अपघातात त्यांचा जागीच मृत्यू झाला.
दरम्यान, नंदगड येथे सुरू असलेल्या प्रजासेवा आंदोलनाच्या कार्यक्रमात उपस्थित असलेल्या अधिकारी वर्गाला या घटनेची माहिती मिळताच तालुका पंचायतचे कार्यकारी अधिकारी रमेश मैत्री, सहाय्यक अधिकारी तसेच ग्रामपंचायत विकास अधिकारी हनुमंत पाटील यांनी घटनास्थळी भेट देऊन परिस्थितीची पाहणी केली.
या घटनेची नोंद नंदगड पोलीस ठाण्यात करण्यात आली असून, पोलिसांकडून पुढील तपास सुरू आहे. तसेच व्हीबी रामजी योजनेचे वरिष्ठ प्रोजेक्ट डायरेक्टर गंगाधर यांनीही घटनास्थळी भेट देऊन पाहणी केली.
रोजगार हमी योजनेच्या कामासाठी आलेल्या मजुराचा दुर्दैवी अपघाती मृत्यू झाल्याने ग्रामस्थ व कामगार वर्गातून शोक व्यक्त करण्यात येत आहे. मृताच्या कुटुंबीयांना शासनाच्या नियमानुसार व्हीबी रामजी योजनेतून योग्य ती नुकसानभरपाई मिळावी, अशी मागणी ग्रामस्थ व कामगार वर्गातून करण्यात येत आहे.
ಗೋದಗೇರಿ : ದ್ವಿಚಕ್ರ ವಾಹನ ಮರಕ್ಕೆ ಡಿಕ್ಕಿ; ನರೇಗಾ ಕಾರ್ಮಿಕ ಸಾವು!
ಗಣೇಶ ಚತುರ್ಥಿಯ ಮುನ್ನಾದಿನ ದುರಂತ; ಬಾಳಗುಂದ ಗ್ರಾಮದ ಕಾರ್ಮಿಕನ ಮನೆಗೆ ಶೋಕ
ಖಾನಾಪುರ : ತಾಲೂಕಿನ ಬಾಳಗುಂದ ಗ್ರಾಮದಲ್ಲಿ ನರೇಗಾ ಉದ್ಯೋಗ ಖಾತರಿ ಯೋಜನೆಯಡಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕನೊಬ್ಬನಿಗೆ ಹಠಾತ್ ಅನಾರೋಗ್ಯ ಕಾಣಿಸಿಕೊಂಡು ವೈದ್ಯರ ಬಳಿ ತೆರಳಿ ಮರಳಿ ಬರುತ್ತಿದ್ದ ವೇಳೆ ದ್ವಿಚಕ್ರ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ದುರಂತ ಘಟನೆ ಶನಿವಾರ ನಡೆದಿದೆ.
ಮೃತರನ್ನು ಸಂಜಯ ಗಣಪತಿ ಸುತಾರ (ಬಾಳಗುಂದ) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಗೋಧೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳಗುಂದದಲ್ಲಿ ಎಂದಿನಂತೆ ನರೇಗಾ ಕಾಮಗಾರಿ ನಡೆಯುತ್ತಿತ್ತು. ಸಂಜಯ ಸುತಾರ ಅವರು ಬೆಳಿಗ್ಗೆ ಉದ್ಯೋಗದ ಕೆಲಸಕ್ಕೆ ಹಾಜರಾಗಿ ಅಗತ್ಯ ಫೋಟೋ ನೀಡಿದ್ದರು. ಬಳಿಕ ಅವರಿಗೆ ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲಸದ ಸ್ಥಳದಲ್ಲಿದ್ದ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿ ವೈದ್ಯರನ್ನು ಭೇಟಿಯಾಗುವಂತೆ ಸಲಹೆ ನೀಡಿದ್ದರು.
ಹೆಚ್ಚಿನ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಜಯ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದು ಮರಳಿ ಬರುತ್ತಿದ್ದರು. ಈ ವೇಳೆ ಗೋದಗೇರಿ ಕ್ರಾಸ್ ಸಮೀಪ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮರಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯ ಸುದ್ದಿ ನಂದಗಡದಲ್ಲಿ ನಡೆಯುತ್ತಿದ್ದ ಜನಸೇವಾ ಆಂದೋಲನ ಕಾರ್ಯಕ್ರಮದಲ್ಲಿದ್ದ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೈತ್ರಿ, ಸಹಾಯಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತ ಪಾಟೀಲ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಘಟನೆಗೆ ಸಂಬಂಧಿಸಿದಂತೆ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ನರೇಗಾ ಯೋಜನೆಯ ಹಿರಿಯ ಪ್ರಾಜೆಕ್ಟ್ ಡೈರೆಕ್ಟರ್ ಅವರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನರೇಗಾ ಕಾಮಗಾರಿಗೆ ಹಾಜರಾಗಿದ್ದ ಕಾರ್ಮಿಕನೊಬ್ಬ ಅಪಘಾತದಲ್ಲಿ ಮೃತಪಟ್ಟಿರುವುದಕ್ಕೆ ಗ್ರಾಮಸ್ಥರು ಹಾಗೂ ಕಾರ್ಮಿಕ ವರ್ಗದಿಂದ ತೀವ್ರ ಸಂತಾಪ ವ್ಯಕ್ತವಾಗಿದೆ. ಮೃತರ ಕುಟುಂಬಕ್ಕೆ ಸರ್ಕಾರದ ನಿಯಮಾನುಸಾರ ನರೇಗಾ ಯೋಜನೆಯಡಿ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಹಾಗೂ ಕಾರ್ಮಿಕರು ಆಗ್ರಹಿಸಿದ್ದಾರೆ.
