IMG-20260825-WA0025

पदवीपूर्व शिक्षणातील रिक्त पदे तातडीने भरा; व्याख्यात्यांच्या मागण्यांसाठी संघटित लढा उभारा

विधान परिषद सदस्य एस. व्ही. संकनूर यांचे आवाहन

बेळगाव : पदवीपूर्व महाविद्यालयातील व्याख्याते व कर्मचाऱ्यांच्या प्रलंबित मागण्यांकडे सरकारचे लक्ष वेधण्यासाठी संघटित होऊन प्रभावी लढा उभारणे गरजेचे आहे. एकजुटीने संघर्ष केल्यासच न्याय्य मागण्या सरकारकडून मान्य करून घेता येतील, असे विधान परिषद सदस्य एस. व्ही. संकनूर यांनी सांगितले.

शिवबसवनगर येथील शिवकुमार सांबरगी मठ सभागृहात कर्नाटक राज्य पदवीपूर्व महाविद्यालय कर्मचारी संघाच्या बेळगाव जिल्हा घटकाचा उद्घाटन समारंभ, शैक्षणिक संमेलन आणि कर्मचारी समस्यांवरील चर्चासत्र आयोजित करण्यात आले होते. यावेळी ते बोलत होते.

पदवीपूर्व शिक्षण क्षेत्रातील व्याख्याते व कर्मचारी अनेक वर्षांपासून विविध समस्यांना सामोरे जात आहेत. या समस्यांच्या निराकरणासाठी प्रत्येक जिल्ह्यातील कर्मचारी संघटनांनी सक्रियपणे काम करून सरकारचे लक्ष वेधले पाहिजे. आवश्यकतेनुसार सरकारला आपल्या मागण्यांची जाणीव करून देण्यासाठी संघटित संघर्ष उभारला पाहिजे, असे संकनूर यांनी स्पष्ट केले.

शिक्षण क्षेत्राला सरकारकडून अपेक्षित प्राधान्य मिळत नसल्याची खंत व्यक्त करताना ते म्हणाले की, अर्थसंकल्पात शिक्षणासाठी आवश्यक निधीची तरतूद केली जात नाही. शालेय शिक्षण विभागातील मोठ्या प्रमाणातील रिक्त पदे भरण्याची गरज असतानाही मर्यादित पदे भरण्याचा निर्णय घेण्यात आला आहे. त्याचप्रमाणे पदवीपूर्व शिक्षण विभागातील रिक्त पदांच्या भरतीबाबतही तातडीने कार्यवाही होणे आवश्यक आहे.

अनुदानित शिक्षण संस्थांमध्ये अनेक वर्षांपासून भरती प्रक्रिया झालेली नसल्याने शिक्षणाच्या गुणवत्तेवर त्याचा परिणाम होत आहे. त्यामुळे शिक्षण विभागातील सर्व रिक्त पदे तातडीने भरण्यात यावीत. तसेच व्याख्याते व कर्मचाऱ्यांची दीर्घकाळापासूनची मागणी असलेली जुनी पेन्शन योजना लागू करण्यासाठी सरकारने ठोस निर्णय घ्यावा, अशी मागणी त्यांनी केली.

यावेळी तोंटदार्य संस्थान मठाचे डॉ. तोंटद सिद्धराम स्वामीजी यांनीही शिक्षण क्षेत्रातील रिक्त पदांबाबत चिंता व्यक्त केली. हजारो पदे रिक्त राहणे ही गंभीर बाब असून शिक्षक व व्याख्यात्यांच्या हितासाठी तज्ज्ञांनी तयार केलेल्या अहवालांची सरकारने प्रभावी अंमलबजावणी करावी. विशेषतः सीमावर्ती जिल्ह्यांमध्ये शिक्षकांची कमतरता निर्माण होणार नाही, यासाठी सरकारने योग्य नियोजन करावे, असे त्यांनी सांगितले.

देशाच्या सर्वांगीण विकासासाठी शिक्षण, आरोग्य आणि कृषी या क्षेत्रांना सरकारने प्राधान्य देणे आवश्यक आहे. समाजाचे भविष्य घडविण्यात शिक्षक व व्याख्यात्यांची भूमिका अत्यंत महत्त्वाची असून त्यांच्या न्याय्य मागण्यांसाठी संघटित संघर्ष गरजेचा आहे, असेही डॉ. सिद्धराम स्वामीजी यांनी नमूद केले.

विधान परिषद सदस्य हनुमंत निराणी यांनी शिक्षण क्षेत्राला सरकारने अधिक महत्त्व देण्याची गरज व्यक्त केली. दर्जेदार शिक्षणासाठी आवश्यक पायाभूत सुविधा, शिक्षक व कर्मचारी उपलब्ध करून देण्याबरोबरच त्यांच्या प्रलंबित समस्यांचे निराकरण सरकारने प्राधान्याने करावे, असे त्यांनी सांगितले.

कार्यक्रमात कर्नाटक राज्य पदवीपूर्व महाविद्यालय कर्मचारी संघाच्या बेळगाव जिल्हा घटकाच्या नूतन पदाधिकाऱ्यांची घोषणा मान्यवरांच्या हस्ते करण्यात आली. शैक्षणिक संमेलनात रिक्त पदांची भरती, नियुक्त्या, पेन्शन, व्याख्याते व कर्मचाऱ्यांचे हित तसेच पदवीपूर्व शिक्षणाचा दर्जा उंचावण्यासंदर्भातील विविध विषयांवर सविस्तर चर्चा करण्यात आली.

कार्यक्रमाच्या अध्यक्षस्थानी कर्मचारी संघाचे अध्यक्ष भास्कर हेगडे होते. पदवीपूर्व महाविद्यालय संचालक एम. एम. कांबळे, जिल्हाध्यक्ष टी. एस. गिरीयप्पनवर, मानद अध्यक्ष एम. के. भजंत्री, प्रभू शिवनायक, उपाध्यक्ष वाय. एम. पाटील, नागराज मरयण्णवर, नटराज पाटील, संगमेश केळगेरी यांच्यासह संघाचे पदाधिकारी, विविध पदवीपूर्व महाविद्यालयांचे प्राचार्य, व्याख्याते व कर्मचारी मोठ्या संख्येने उपस्थित होते.

ಪದವಿಪೂರ್ವ ಶಿಕ್ಷಣದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ; ಉಪನ್ಯಾಸಕರ ಸಮಸ್ಯೆಗಳಿಗೆ ಸಂಘಟಿತ ಹೋರಾಟ ಅಗತ್ಯ

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಕರೆ

ಬೆಳಗಾವಿ : ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಸಿಬ್ಬಂದಿಯ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕಾದರೆ ಎಲ್ಲರೂ ಒಗ್ಗಟ್ಟಾಗಿ ಸಂಘಟಿತ ಹೋರಾಟ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ನಗರದ ಶಿವಬಸವನಗರದ ಶಿವಕುಮಾರ ಸಾಂಬರಗಿ ಮಠದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ನೌಕರರ ಸಂಘದ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ, ಶೈಕ್ಷಣಿಕ ಸಮಾವೇಶ ಹಾಗೂ ಸಿಬ್ಬಂದಿ ಸಮಸ್ಯೆಗಳ ಕುರಿತ ಚರ್ಚಾಸತ್ರ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪದವಿಪೂರ್ವ ಶಿಕ್ಷಣ ಕ್ಷೇತ್ರದ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸಂಘಟನೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಪದವಿಪೂರ್ವ ಶಿಕ್ಷಣ ಕ್ಷೇತ್ರದಲ್ಲಿ ಉಪನ್ಯಾಸಕರು ಹಾಗೂ ಸಿಬ್ಬಂದಿ ಹಲವು ವರ್ಷಗಳಿಂದ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಖಾಲಿ ಹುದ್ದೆಗಳ ಭರ್ತಿ, ನೇಮಕಾತಿ, ವೇತನ, ಪಿಂಚಣಿ ಸೇರಿದಂತೆ ಹಲವು ಬೇಡಿಕೆಗಳು ಇನ್ನೂ ಬಾಕಿ ಉಳಿದಿವೆ. ಪ್ರತಿಯೊಂದು ಜಿಲ್ಲೆಯ ಪದವಿಪೂರ್ವ ಕಾಲೇಜು ನೌಕರರ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ಸರ್ಕಾರದ ಗಮನ ಸೆಳೆಯಬೇಕು ಎಂದು ಸಂಕನೂರ ಹೇಳಿದರು.

ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರದಿಂದ ನಿರೀಕ್ಷಿತ ಆದ್ಯತೆ ದೊರೆಯುತ್ತಿಲ್ಲ. ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯ ಪ್ರಮಾಣದ ಅನುದಾನ ಮೀಸಲಿಡಬೇಕು. ಶಾಲಾ ಶಿಕ್ಷಣ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಸೀಮಿತ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲು ಸರ್ಕಾರ ಮುಂದಾಗಿದೆ. ಆದರೆ ಪದವಿಪೂರ್ವ ಶಿಕ್ಷಣ ಇಲಾಖೆಯ ಖಾಲಿ ಹುದ್ದೆಗಳ ಭರ್ತಿಗೆ ಇನ್ನೂ ಸೂಕ್ತ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದು ಅವರು ಹೇಳಿದರು.

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆಯದಿರುವುದರಿಂದ ಶಿಕ್ಷಣದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿದೆ. ಆದ್ದರಿಂದ ಶಿಕ್ಷಣ ಇಲಾಖೆಯ ಎಲ್ಲಾ ಖಾಲಿ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕು. ಉಪನ್ಯಾಸಕರು ಹಾಗೂ ಸಿಬ್ಬಂದಿಯ ಬಹುಕಾಲದ ಬೇಡಿಕೆಯಾಗಿರುವ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಸಂಕನೂರ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಾಗನೂರು ರುದ್ರಾಕ್ಷಿ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇರುವುದು ಅತ್ಯಂತ ವಿಷಾದಕರ ಸಂಗತಿ. ಶಿಕ್ಷಕರು ಹಾಗೂ ಉಪನ್ಯಾಸಕರ ಹಿತಕ್ಕಾಗಿ ತಜ್ಞರು ನೀಡಿರುವ ವರದಿಗಳನ್ನು ಸರ್ಕಾರ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ವಿಶೇಷವಾಗಿ ಗಡಿ ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ದೇಶದ ಸಮಗ್ರ ಅಭಿವೃದ್ಧಿಗೆ ಶಿಕ್ಷಣ, ಆರೋಗ್ಯ ಹಾಗೂ ಕೃಷಿ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು. ಸಮಾಜದ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರ ಪಾತ್ರ ಮಹತ್ವದ್ದಾಗಿದೆ. ಅವರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸಂಘಟಿತ ಹೋರಾಟ ಅಗತ್ಯ ಎಂದು ಡಾ. ಸಿದ್ಧರಾಮ ಸ್ವಾಮೀಜಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಗುಣಮಟ್ಟದ ಶಿಕ್ಷಣಕ್ಕಾಗಿ ಅಗತ್ಯ ಮೂಲಸೌಕರ್ಯ, ಶಿಕ್ಷಕರು ಹಾಗೂ ಸಿಬ್ಬಂದಿಯ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ನೌಕರರ ಸಂಘದ ಬೆಳಗಾವಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಗಣ್ಯರ ಸಮ್ಮುಖದಲ್ಲಿ ಪ್ರಕಟಿಸಲಾಯಿತು.

ಶೈಕ್ಷಣಿಕ ಸಮಾವೇಶದಲ್ಲಿ ಪದವಿಪೂರ್ವ ಶಿಕ್ಷಣ ಕ್ಷೇತ್ರದ ವಿವಿಧ ಸಮಸ್ಯೆಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿಯ ಹಿತಾಸಕ್ತಿ, ಖಾಲಿ ಹುದ್ದೆಗಳ ಭರ್ತಿ, ನೇಮಕಾತಿ, ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು. ಪದವಿಪೂರ್ವ ಶಿಕ್ಷಣದ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ವಿಚಾರ ವಿನಿಮಯ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಭಾಸ್ಕರ ಹೆಗಡೆ ವಹಿಸಿದ್ದರು. ಪದವಿಪೂರ್ವ ಕಾಲೇಜು ನಿರ್ದೇಶಕ ಎಂ.ಎಂ. ಕಾಂಬಳೆ, ಜಿಲ್ಲಾಧ್ಯಕ್ಷ ಟಿ.ಎಸ್. ಗಿರಿಯಪ್ಪನವರ್, ಗೌರವಾಧ್ಯಕ್ಷ ಎಂ.ಕೆ. ಭಜಂತ್ರಿ, ಪ್ರಭು ಶಿವನಾಯಕ, ಉಪಾಧ್ಯಕ್ಷ ವೈ.ಎಂ. ಪಾಟೀಲ, ನಾಗರಾಜ ಮರಿಯಣ್ಣವರ್, ನಟರಾಜ ಪಾಟೀಲ, ಸಂಗಮೇಶ ಕೆಳಗೇರಿ ಸೇರಿದಂತೆ ಸಂಘದ ಪದಾಧಿಕಾರಿಗಳು, ವಿವಿಧ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Do Share
error: Content is protected !!
Call Us