Home » खानापूर : कृषी भवनासाठी १० पतसंस्थांना प्रत्येकी २० लाखांचा निधी! आमदार विठ्ठल हलगेकर

खानापूर : कृषी भवनासाठी १० पतसंस्थांना प्रत्येकी २० लाखांचा निधी! आमदार विठ्ठल हलगेकर

ಕೃಷಿ ಭವನ ನಿರ್ಮಾಣಕ್ಕೆ 10 ಪತ್ತಿನ ಸಹಕಾರ ಸಂಘಗಳಿಗೆ ತಲಾ ₹20 ಲಕ್ಷ!

DCC निवडणुकीतील आश्वासनाची पूर्तता; लवकरच कामांना सुरुवात — आमदार विठ्ठल हलगेकर

खानापूर : तालुक्यातील प्राथमिक कृषी पतसंस्था सहकारी संघांच्या प्रगतीसाठी तसेच शेतकऱ्यांच्या सोयीसाठी कृषी भवन उभारण्याच्या दिशेने महत्त्वाचे पाऊल उचलण्यात आले आहे. पहिल्या टप्प्यात तालुक्यातील १० प्राथमिक कृषी पतसंस्थांच्या कृषी भवनांसाठी प्रत्येकी २० लाख रुपये, असा एकूण २ कोटी रुपयांचा निधी मंजूर करण्यात आला असून, या कामांचा शुभारंभ लवकरच करण्यात येणार आहे, अशी माहिती आमदार विठ्ठल हलगेकर यांनी ‘खानापूर लाईव्ह’शी बोलताना दिली.

गेल्या डिसेंबरमध्ये झालेल्या जिल्हा मध्यवर्ती सहकारी बँकेच्या (DCC) निवडणुकीदरम्यान प्राथमिक कृषी पतसंस्था सहकारी संघांच्या प्रगतीसाठी तसेच कृषी भवनांच्या निर्मितीसाठी २० ते २५ लाख रुपयांचा निधी मंजूर करण्याचे आश्वासन देण्यात आले होते. निवडणुकीच्या काळात तालुक्यातील राजकीय वातावरण चांगलेच तापले होते.

दरम्यान, निवडणुकीत ऐनवेळी विधानपरिषद सदस्य चन्नराज हट्टीहोळी यांनी माघार घेतल्यानंतर जिल्हा मध्यवर्ती सहकारी बँकेच्या संचालकपदी अरविंद पाटील यांची बहुमताने निवड झाली.

DCC निवडणुकीच्या राजकीय घडामोडींच्या पार्श्वभूमीवर दिलेल्या आश्वासनांची पूर्तता करण्यासाठी विधानपरिषद सदस्य चन्नराज हट्टीहोळी तसेच आमदार विठ्ठल हलगेकर यांनी तालुक्यातील विविध पतसंस्थांच्या कृषी भवनांसाठी निधी मंजूर करण्याबाबत पत्रव्यवहार केला होता.

त्यानुसार आता पहिल्या टप्प्यात १० प्राथमिक कृषी पतसंस्थांच्या कृषी भवनांसाठी प्रत्येकी २० लाख रुपयांचा निधी मंजूर करण्यात आला आहे. या निधीतून कृषी भवनांची उभारणी करण्यात येणार असून, संबंधित कामांचा शुभारंभ लवकरच केला जाणार असल्याचे आमदार हलगेकर यांनी सांगितले.

कृषी भवनांमुळे ग्रामीण भागातील शेतकरी, सभासद आणि कृषी सहकारी संस्थांना विविध बैठका, मार्गदर्शन व कृषीविषयक उपक्रमांसाठी आवश्यक सुविधा उपलब्ध होण्यास मदत होणार आहे. पहिल्या टप्प्यानंतर उर्वरित पात्र पतसंस्थांनाही निधी उपलब्ध करून देण्याच्या दृष्टीने प्रयत्न सुरू असल्याचे सांगण्यात आले.

ಕೃಷಿ ಭವನ ನಿರ್ಮಾಣಕ್ಕೆ 10 ಪತ್ತಿನ ಸಹಕಾರ ಸಂಘಗಳಿಗೆ ತಲಾ ₹20 ಲಕ್ಷ!

DCC ಚುನಾವಣೆಯ ಭರವಸೆ ಈಡೇರಿಕೆ; ಶೀಘ್ರದಲ್ಲೇ ಕಾಮಗಾರಿಗಳಿಗೆ ಚಾಲನೆ — ಶಾಸಕ ವಿಠ್ಠಲ ಹಲಗೇಕರ

ಖಾನಾಪುರ : ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರಗತಿ ಹಾಗೂ ರೈತರ ಅನುಕೂಲಕ್ಕಾಗಿ ಕೃಷಿ ಭವನಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಮೊದಲ ಹಂತದಲ್ಲಿ ತಾಲೂಕಿನ 10 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕೃಷಿ ಭವನ ನಿರ್ಮಾಣಕ್ಕೆ ತಲಾ ₹20 ಲಕ್ಷದಂತೆ ಒಟ್ಟು ₹2 ಕೋಟಿ ಅನುದಾನ ಮಂಜೂರಾಗಿದೆ. ಶೀಘ್ರದಲ್ಲೇ ಈ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ವಿಠ್ಠಲ ಹಲಗೇಕರ ಅವರು ‘ಖಾನಾಪುರ ಲೈವ್’ಗೆ ಮಾಹಿತಿ ನೀಡಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ನಡೆದ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ (DCC) ಚುನಾವಣೆಯ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಭಿವೃದ್ಧಿ ಹಾಗೂ ಕೃಷಿ ಭವನಗಳ ನಿರ್ಮಾಣಕ್ಕಾಗಿ ₹20ರಿಂದ ₹25 ಲಕ್ಷ ಅನುದಾನ ನೀಡುವ ಭರವಸೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೃಷಿ ಭವನ ನಿರ್ಮಾಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.

DCC ಚುನಾವಣೆಯ ಸಂದರ್ಭದಲ್ಲಿ ತಾಲೂಕಿನ ರಾಜಕೀಯ ವಾತಾವರಣವೂ ಸಾಕಷ್ಟು ರಂಗೇರಿತ್ತು. ಚುನಾವಣೆಯ ಕೊನೆಯ ಹಂತದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಹಿಂದೆ ಸರಿದ ಹಿನ್ನೆಲೆಯಲ್ಲಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾಗಿ ಅರವಿಂದ ಪಾಟೀಲ ಅವರು ಬಹುಮತದಿಂದ ಆಯ್ಕೆಯಾಗಿದ್ದರು.

ಈ ರಾಜಕೀಯ ಬೆಳವಣಿಗೆಗಳ ನಡುವೆಯೂ ತಾಲೂಕಿನ ಪತ್ತಿನ ಸಹಕಾರ ಸಂಘಗಳ ಕೃಷಿ ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವ ಕುರಿತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಶಾಸಕ ವಿಠ್ಠಲ ಹಲಗೇಕರ ಅವರು ಸಂಬಂಧಪಟ್ಟವರಿಗೆ ಪತ್ರಗಳನ್ನು ನೀಡಿದ್ದರು.

ಅದರಂತೆ ಇದೀಗ ಮೊದಲ ಹಂತದಲ್ಲಿ 10 ಕೃಷಿ ಪತ್ತಿನ ಸಹಕಾರ ಸಂಘಗಳ ಕೃಷಿ ಭವನಗಳಿಗೆ ತಲಾ ₹20 ಲಕ್ಷ ಅನುದಾನ ಮಂಜೂರಾಗಿದೆ. ಸಂಬಂಧಪಟ್ಟ ಕಾಮಗಾರಿಗಳಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಶಾಸಕ ವಿಠ್ಠಲ ಹಲಗೇಕರ ತಿಳಿಸಿದ್ದಾರೆ.

ಕೃಷಿ ಭವನಗಳ ನಿರ್ಮಾಣದಿಂದ ಗ್ರಾಮೀಣ ಭಾಗದ ರೈತರು ಹಾಗೂ ಸಹಕಾರ ಸಂಘಗಳ ಸದಸ್ಯರಿಗೆ ಸಭೆ, ಕೃಷಿ ಮಾರ್ಗದರ್ಶನ ಮತ್ತು ವಿವಿಧ ಕೃಷಿ ಚಟುವಟಿಕೆಗಳನ್ನು ನಡೆಸಲು ಅಗತ್ಯ ಸೌಲಭ್ಯ ದೊರೆಯಲಿದೆ. ಮುಂದಿನ ಹಂತದಲ್ಲಿ ಇತರ ಅರ್ಹ ಪತ್ತಿನ ಸಹಕಾರ ಸಂಘಗಳಿಗೂ ಅನುದಾನ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

Do Share

You may have missed

error: Content is protected !!
Call Us