
khanapur:
ಅವರೊಳ್ಳಿ- ಬೀಳಸಿ ರುದ್ರಸ್ವಾಮಿ ಮಠದಲ್ಲಿ ಲಿಂಗೈಕ್ಯ ಶಾಂಡಿಲ್ಯ ಸ್ವಾಮೀಜಿ 8ನೇ ಪುಣ್ಯಾರಾಧನೆ ಮಾ.10ರಂದು ಜರುಗಲಿದೆ ಎಂದು ಖಾನಾಪುರ ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ ಹೇಳಿದರು. ಸಮೀಪದ ಅವರೊಳ್ಳಿ ರುದ್ರಸ್ವಾಮಿ ಮಠದಲ್ಲಿ ಮಂಗಳವಾರ ಪ್ರಚಾರ ಸಾಮಗ್ರಿ ಬಿಡುಗಡೆ ಹಾಗೂ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಶ್ರೀಮಠದ ಪೂಜ್ಯರು ಪ್ರತಿವರ್ಷ ಪುಣ್ಯಾರಾಧನೆ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಯೋಜನೆ ಮಾಡಿ ಜನರಲ್ಲಿ ಜಾಗೃತಿ ಉಂಟು ಮಾಡುತ್ತಿದ್ದಾರೆ. ಸತ್ಸಂಗದಲ್ಲಿದ್ದು ಸಾರ್ಥಕ ಜೀವನ ನಡೆಸಬೇಕು ಎಂದರು.
ಮಠದ ಪೀಠಾಧ್ಯಕ್ಷ ಚನ್ನಬಸವ ದೇವರು ಮಾತನಾಡಿ, 10ರಂದು ಸಂಜೆ 6 ಗಂಟೆಗೆ ಮಹಾರುದ್ರಯಾಗ ಹಾಗೂ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು ನಂತರ ಧರ್ಮ ಸಭೆ ಹಾಗೂ ವಚನ ನೃತ್ಯ ಮತ್ತು ಜಾನಪದ ಹಾಗೂ ಭಾವಗೀತೆಗಳ ಕಾರ್ಯಕ್ರಮ ನಡೆಯಲಿದ್ದು, ಭಕ್ತರು ಆಗಮಿಸಿ ಗುರುವಿನ ಕೃಪೆಗೆ ಪಾತ್ರರಾಗಬೇಕು ಎಂದರು. ಮಹಾಂತೇಶ ರಾಹುತ, ವಿಜಯ ಸಾಣಿಕೊಪ್ಪ, ದಶರಥ ಬನೋಡಿ, ಅಶೋಕ ಕೊಡೊಳ್ಳಿ, ಜ್ಯೋತಿಬಾ ಬರ್ಮಪ್ಪನವರ್ ವಿಠಲ ಹಿಂಡಲಕರೆ, ಮಂಜು ಅಂಕಲಗಿ, ಅಮಿತ ಕುಂದೇಕರ, ಬಿಷ್ಟಪ್ಪ ಬನೋಶಿ ಸೇರಿದಂತೆ ಮಠದ ಭಕ್ತರು ಉಪಸ್ಥಿತರಿದ್ದರು.
खानापूर तालुक्यातील सुप्रसिद्ध बिळकी आवरोळी मठावर उद्या रविवार दिनांक दहा रोजी आठवा लैंगिक श्री शाडेल्य महाराज यांचा पुण्यराधना कार्यक्रम आयोजित करण्यात आला आहे. या निमित्ताने महा यज्ञाचे आयोजन करण्यात आले आहे तरी भक्तांनी याचा लाभ घ्यावा असे आवाहन आवरोळी मठाधीश पूज्य श्री चन्न बसव देव स्वामी यांनी केले आहे.