Oplus_16777216
खानापूर लाईव्ह न्युज /प्रतिनिधी : जलजीवन योजनेअंतर्गत गुरुवारी बरगाव आणि भंडारगाळी ही तालुक्यातील पहिली गावे म्हणून घोषित करण्यात आली. जिल्हा पंचायत, ग्रामीण पेयजल आणि स्वच्छता विभाग, तालुका पंचायत आणि ग्रामपंचायत बारगाव यांच्या सहकार्याने गुरुवारी येथील बरगाव गावात आयोजित कार्यक्रमाचे उद्घाटन आमदार विठ्ठल हलगेकर यांनी केले आणि त्यांना २४ तास पाणीपुरवठा होणारी गावे म्हणून घोषित केले.
बोलताना ते म्हणाले की, प्रत्येकाने पाण्याचा काटकसरीने वापर करावा. याशिवाय, गावकऱ्यांना २४ तास पाणी उपलब्ध व्हावे या उद्देशाने जलजीवन योजना राबविण्यात आली आहे. त्यानुसार, आज तालुक्यातील बरगाव आणि भंडरगाळी ही गावे २४ तास पाणीपुरवठा होणारी गावे म्हणून घोषित करण्यात आली आहेत. ग्रामस्थांनी या प्रकल्पाचा लाभ घ्यावा असे ते म्हणाले.
प्रकल्पाअंतर्गत तालुक्यातील जवळजवळ सर्व गावांमध्ये काम सुरू आहे आणि संबंधित अधिकाऱ्यांना काम जलदगतीने पूर्ण करण्याच्या आणि जनतेला कोणतीही अडचण न येता काम पूर्ण करण्याच्या सूचना देण्यात आल्या आहेत.
पाण्याचे महत्त्व समजून घ्या:
ग्रामीण पेयजल आणि स्वच्छता विभागाचे सहाय्यक कार्यकारी अभियंता आणि तालुका पंचायत कार्यकारी अधिकारी रमेश मेत्री म्हणाले की, पाणी हे अत्यंत मौल्यवान आहे आणि प्रत्येकाने पाण्याचे महत्त्व समजून घेतले पाहिजे. पाण्याचा अपव्यय रोखण्याची गरज त्यांनी ओळखली पाहिजे. त्यांनी वेळोवेळी त्याची देखभाल करावी असा सल्ला दिला.
आमदार विठ्ठल हलगेकर यांनी बरगाव आणि भंडरगाळी गावांमध्ये कार्यरत असलेल्या पाण्याच्या पाईपचे उद्घाटन केले. ग्रामपंचायत विकास अधिकारी चन्नबसयस्वामी कलमठ यांनी जलसंवर्धनाची प्रतिज्ञा घेतली.जेजेएम जिल्हा कार्यक्रम व्यवस्थापक नीलम्मा कामते, सेक्शन ऑफिसर किरण मथाडा, डीटीएसयू टीम निगोशिएटर सुनील, ग्रामपंचायत अध्यक्षा चांगुना हनुमंत पाटील, उपाध्यक्ष गोविंद पाटील, सदस्य महांतेश पाटील, सर्व सदस्य, कर्मचारी, विविध विभागांचे अधिकारी, कर्मचारी आणि ग्रामस्थ कार्यक्रमात सहभागी झाले होते.

ಬರಗಾವ-ಭಂಡರಗಾಳಿಯನ್ನು ಖಾನಾಪೂರ ತಾಲೂಕಿನ ಮೊದಲ 24*7 ನೀರು ಸರಬರಾಜು ಗ್ರಾಮಗಳಾಗಿ ಘೋಷಣೆ
ನೀರನ್ನು ಹಿತಮಿತವಾಗಿ ಬಳಸಿ: ಶಾಸಕ ಹಲಗೇಕರ
ಖಾನಾಪುರ: ಬರಗಾವ ಹಾಗೂ ಭಂಡರಗಾಳಿ ಗ್ರಾಮಗಳನ್ನು ಜಲಜೀವನ್ ಯೋಜನೆಯಡಿ 24*7 ನೀರು ಪೂರೈಕೆ ಮಾಡುವ ತಾಲೂಕಿನ ಮೊದಲ ಗ್ರಾಮಗಳಾಗಿ ಗುರುವಾರ ಘೋಷಣೆ ಮಾಡಲಾಯಿತು.
ಇಲ್ಲಿನ ಬರಗಾವ ಗ್ರಾಮದಲ್ಲಿ ಜಿಲ್ಲಾ ಪಂಚಾಯತ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ತಾಲೂಕ ಪಂಚಾಯತ ಹಾಗೂ ಗ್ರಾಮ ಪಂಚಾಯತ ಬರಗಾವ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಶಾಸಕ ವಿಠ್ಠಲ ಹಲಗೇಕರ್ ಚಾಲನೆ ನೀಡಿ, ದಿನದ 24 ಗಂಟೆಯೂ ನೀರು ಸರಬರಾಜು ಮಾಡುವ ಗ್ರಾಮಗಳೆಂದು ಘೋಷಣೆ ಮಾಡಿದರು.
ನಂತರ ಮಾತನಾಡಿದ ಅವರು ಪ್ರತಿಯೊಬ್ಬರು ನೀರನ್ನು ಹಿತಮಿತವಾಗಿ ಬಳಕೆ ಮಾಡಬೇಕು. ಜೊತೆಗೆ ದಿನದ 24 ಗಂಟೆಯೂ ಗ್ರಾಮಸ್ಥರಿಗೆ ನೀರು ಲಭ್ಯವಾಗಬೇಕು ಎಂಬ ಉದ್ದೇಶದಿಂದ ಜಲಜೀವನ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅದರಂತೆ ಇಂದು ತಾಲೂಕಿನ ಬರಗಾವ ಹಾಗೂ ಭಂಡರಗಾಳಿ ಗ್ರಾಮಗಳನ್ನು ದಿನದ 24 ಗಂಟೆಯೂ ನೀರು ಪೂರೈಸುವ ಗ್ರಾಮಗಳೆಂದು ಘೋಷಿಸಲಾಗಿದೆ. ಗ್ರಾಮಸ್ಥರು ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ತಾಲೂಕಿನ ಬಹುತೇಕ ಎಲ್ಲ ಗ್ರಾಮಗಳಲ್ಲೂ ಕೂಡ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನೀರಿನ ಮಹತ್ವ ಅರಿಯಿರಿ:
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಮೇತ್ರಿ ಮಾತನಾಡಿ, ನೀರು ಅತ್ಯಂತ ಅಮೂಲ್ಯವಾಗಿದ್ದು, ಪ್ರತಿಯೊಬ್ಬರು ನೀರಿನ ಮಹತ್ವ ತಿಳಿದುಕೊಳ್ಳಬೇಕು. ನೀರು ಪೋಲಾಗದಂತೆ ಜಾಗೃತಿ ವಹಿಸಬೇಕು. ಕಾಲಕಾಲಕ್ಕೆ ಅದರ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.
ಬರಗಾವ ಹಾಗೂ ಭಂಡರಗಾಳಿ ಗ್ರಾಮಗಳಲ್ಲಿ ಕಾರ್ಯಾಚರಣೆಯಲ್ಲಿರುವ ನಳಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಸಕ ವಿಠ್ಠಲ ಹಲಗೇಕರ್ ರವರು ಚಾಲನೆ ನೀಡಿ, ಘೋಷಣೆ ಮಾಡಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಚನ್ನಬಸಯ್ಯಾಸ್ವಾಮಿ ಕಲ್ಮಠ ನೀರಿನ ಸಂರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಜೆಜೆಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ನೀಲಮ್ಮ ಕಮಾಟೆ, ಸೆಕ್ಷನ್ ಆಫೀಸರ್ ಕಿರಣ ಮಠದ, DTSU ತಂಡದ ಸಮಾಲೋಚಕ ಸುನೀಲ, ಗ್ರಾಪಂ ಅಧ್ಯಕ್ಷೆ ಚಾಂಗುನಾ ಹನುಮಂತ ಪಾಟೀಲ, ಉಪಾಧ್ಯಕ್ಷ ಗೋವಿಂದ ಪಾಟೀಲ, ಎಲ್ಲ ಸದಸ್ಯರು, ಸಿಬ್ಬಂದಿ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
