खानापुर : तालुक्यातील नंदागड येथील संगोळी रायण्णा समाधी स्थळावर मंगळवारी अनेक मान्यवरांच्या उपस्थितीत जन्मदिन साजरा करण्यात आला. भारतीय स्वातंत्र्यसव दिनाच्या निमित्ताने दरवर्षी वीर संगोळी रायान्ना यांचा जन्मदिनही साजरा केला जातो या अनुषंगाने नंदगड या ठिकाणी आमदार विठ्ठल हलगेकर यांनी भेट दिली व संगोळी रायान्ना यांना पुष्पांजली अर्पण केली. नंदगड येथील ग्रामपंचायत समितीसह विविध संघटना संगोळी रायण्णा समिती यांच्या वतीने स्मृतिदिन साजरा करण्यात आला.
रायण्णा यांच्या वाढदिवसानिमित्त संगोळी रायनाच्या मूर्तीवर दुग्धाभिषेकही करण्यात आला.
कार्यक्रम पूर्ण केले.आमदार विठ्ठल हलगेकर, माजी आमदार अरविंद पाटील, डॉ.विश्वनाथ पाटील, डॉ.
तालुका पंचायत ई. ओ वीराणागौडा एगनगौडा, तहसीलदार प्रकाश गायकवाड, सगोळी रायण्णा स्मारक विकास समितीचे अध्यक्ष शंकर सोनोली, नंदगड
ग्रामपंचायत अध्यक्ष यल्लाप्पा गुरव, उपाध्यक्षा संगीता मद्दिमानी, पी.डी.ओ सागरकुमार बिरादर यांच्यासह विविध क्षेत्रातील मान्यवर आणि रायण्णा
चाहत्यांनी त्यांच्या समाधीला भेट देऊन नमन केले.
बैलहोंगल, संगोळी, कित्तूरसह विविध भागातून अनेक संगोळी रायण्णा संघटनाच्या कार्यकर्त्यांनी मोठी उपस्थिती दर्शवली होती.
ಕಾರ್ಯಕ್ರಮ: ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿ
ಖಾನಾಪುರ: ತಾಲ್ಲೂಕಿನ ನಂದಗಡ ಗ್ರಾಮದ ಸಂಗೊಳ್ಳಿ ರಾಯಣ್ಣನ ಸಮಾಧಿಸ್ಥಳದಲ್ಲಿ
ಮಂಗಳವಾರ ರಾಯಣ್ಣನ ಜನ್ಮ ದಿನದ ಅಂಗವಾಗಿ ಗ್ರಾಮದ ಸಂಗೊಳ್ಳಿ ರಾಯಣ್ಣ ಸ್ಮಾರಕ
ಅಭಿವೃದ್ಧಿ ಸಮಿತಿ, ನಂದಗಡ ಗ್ರಾಮ ಪಂಚಾಯ್ತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಸ್ಥೆಗಳ
ಸಹಯೋಗದಲ್ಲಿ ರಾಯಣ್ಣನ ಸ್ಮರಣೋತ್ಸವವನ್ನು ಆಚರಿಸಲಾಯಿತು.
ರಾಯಣ್ಣನ ಜನುಮದಿನದಂದು ಆತನ ಸಮಾಧಿಯ ದರ್ಶನಕ್ಕಾಗಿ ವಿವಿಧೆಡೆಗಳಿಂದ ರಾಯಣ್ಣನ
ಅಸಂಖ್ಯಾತ ಭಕ್ತರು ನಂದಗಡಕ್ಕೆ ಆಗಮಿಸಿದ್ದರು. ಆತನ ಸಮಾಧಿಗೆ ಹಾಲಿನ ಅಭಿಷೇಕ,
ಪುಷ್ಪನಮನ, ವಿವಿಧ ಕಲಾತಂಡಗಳಿಂದ ಗಾಯನ, ಡೊಳ್ಳು ಕುಣಿತ, ಅಲಂಕೃತ ವಾಹನಗಳಲ್ಲಿ
ರಾಯಣ್ಣನ ವಿಗ್ರಹದ ಮೆರವಣಿಗೆ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿ ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು ನೆರವೇರಿಸಿದರು.
ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಅರವಿಂದ ಪಾಟೀಲ, ಡಾ.ವಿಶ್ವನಾಥ ಪಾಟೀಲ,
ತಾಲ್ಲೂಕು ಪಂಚಾಯ್ತಿ ಇಒ ವೀರನಗೌಡ ಏಗನಗೌಡರ, ತಹಸೀಲ್ದಾರ್ ಪ್ರಕಾಶ ಗಾಯಕವಾಡ,
ಸಂಗೊಳ್ಳಿ ರಾಯಣ್ಣ ಸ್ಮಾರಕ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಂಕರ ಸೋನೊಳಿ, ನಂದಗಡ
ಗ್ರಾಮ ಪಂಚಾಯ್ತಿ ಅಧ್ಯಕ್ಷ ಯಲ್ಲಪ್ಪ ಗುರವ, ಉಪಾಧ್ಯಕ್ಷೆ ಸಂಗೀತಾ ಮಡ್ಡೀಮನಿ, ಪಿಡಿಒ
ಸಾಗರಕುಮಾರ ಬಿರಾದಾರ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ರಾಯಣ್ಣನ
ಅಭಿಮಾನಿಗಳು ಆತನ ಸಮಾಧಿಗೆ ಭೇಟಿ ನೀಡಿ ನಮಿಸಿದರು.
ಬೈಲಹೊಂಗಲ, ಸಂಗೊಳ್ಳಿ, ಕಿತ್ತೂರು ಸೇರಿದಂತೆ ವಿವಿಧ ಭಾಗಗಳಿಂದ ನಂದಗಡಕ್ಕೆ
ಆಗಮಿಸಿದ್ದ ರಾಯಣ್ಣನ ಭಕ್ತರನ್ನು ನಂದಗಡದಲ್ಲಿ ಸ್ವಾಗತಿಸಿ ಅವರಿಗೆ ರಾಯಣ್ಣನ
ಸಮಾಧಿಸ್ಥಳದಿಂದ ವೀರಜ್ಯೋತಿಯನ್ನು ನೀಡಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ವಿವಿಧ
ಇಲಾಖೆಯ ಅಧಿಕಾರಿಗಳು, ನಂದಗಡ ಗ್ರಾ.ಪಂ ಸದಸ್ಯರು, ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ
ಪದಾಧಿಕಾರಿಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ನಂದಗಡ ಮತ್ತು ರಾಯಾಪುರ
ಗ್ರಾಮಸ್ಥರು ಇದ್ದರು.