हलशीच्या ऐतिहासिक रथोत्सवाला शतकानुशतकांची परंपरा! उद्या रथोस्तव!
ಹಲಶಿಯ ಐತಿಹಾಸಿಕ ರಥೋತ್ಸವಕ್ಕೆ ಶತಮಾನಗಳ ಪರಂಪರೆ!

हलशीच्या ऐतिहासिक रथोत्सवाला शतकानुशतकांची परंपरा!
धार्मिक श्रद्धा, ऐतिहासिक वारसा आणि सांस्कृतिक परंपरेचा अनोखा संगम
हलशी : खानापूर तालुक्यातील ऐतिहासिक वारसा लाभलेल्या हलशी नगरीत शतकानुशतके चालत आलेल्या रथोत्सवाची परंपरा आजही मोठ्या श्रद्धेने जपली जात आहे. कदंब राजवटीच्या ऐतिहासिक आठवणींशी नाते सांगणाऱ्या या नगरीतील रथोत्सव हा केवळ धार्मिक सोहळा नसून स्थानिक संस्कृती, परंपरा आणि सामूहिक श्रद्धेचे प्रतीक बनला आहे. सोमवार, दि. २६ ऑक्टोबर रोजी हा रथोत्सव साजरा होणार असून भाविकांमध्ये उत्साहाचे वातावरण आहे.
हलशी परिसराला प्राचीन इतिहासाची समृद्ध पार्श्वभूमी लाभली आहे. येथील मंदिरे, धार्मिक स्थळे आणि पारंपरिक उत्सव आजही या ऐतिहासिक वारशाची साक्ष देतात. नृसिंह-वराह यात्रोत्सवाच्या परंपरेशी जोडलेल्या या सोहळ्याला स्थानिक नागरिकांच्या जीवनात विशेष महत्त्व आहे.
कोजागरी पौर्णिमेपासून नृसिंह-वराह यात्रोत्सवाला सुरुवात होते. अनेक ठिकाणी कोजागरी पौर्णिमेच्या दिवशी रथोत्सव साजरा केला जातो. मात्र, पौर्णिमेची तिथी सूर्योदयाला असणे आवश्यक असल्याने हलशी येथे परंपरेनुसार अश्विन शुद्ध पौर्णिमेला रथोत्सव साजरा केला जातो. यंदा सोमवार, २६ ऑक्टोबर रोजी हा धार्मिक सोहळा पार पडणार आहे.
रथोत्सवाच्या निमित्ताने धार्मिक विधी, पूजा-अर्चा आणि पारंपरिक कार्यक्रमांना महत्त्व असते. रथ ओढण्याच्या सोहळ्यात भाविक श्रद्धेने सहभागी होतात. या उत्सवामुळे गावातील सामाजिक एकोपा दृढ होण्यास मदत होते. जुन्या परंपरांचे जतन करताना नव्या पिढीला आपल्या गावाचा इतिहास आणि सांस्कृतिक वारसा समजावा, हा या उत्सवामागील महत्त्वाचा उद्देश आहे.
परंपरेचा अभिमान, इतिहासाचा वारसा!
हलशीचा रथोत्सव म्हणजे अनेक पिढ्यांनी जपलेल्या श्रद्धेचा आणि संस्कृतीचा वारसा आहे. आधुनिकतेच्या काळातही ही परंपरा टिकून राहणे ही हलशीवासीयांसाठी अभिमानाची बाब आहे. धार्मिक श्रद्धा आणि ऐतिहासिक वारसा यांचा सुंदर संगम असलेला हा रथोत्सव खानापूर तालुक्याच्या सांस्कृतिक वैभवात मोलाची भर घालणारा ठरत आहे.
ಹಲಶಿಯ ಐತಿಹಾಸಿಕ ರಥೋತ್ಸವಕ್ಕೆ ಶತಮಾನಗಳ ಪರಂಪರೆ!
ನಾಳೆ ರಥೋತ್ಸವ; ಐತಿಹಾಸಿಕ ಪರಂಪರೆ, ಧಾರ್ಮಿಕ ಶ್ರದ್ಧೆ ಮತ್ತು ಸಂಸ್ಕೃತಿಯ ಅಪೂರ್ವ ಸಂಗಮ
ಹಲಶಿ : ಖಾನಾಪುರ ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಹಲಶಿ ಗ್ರಾಮದಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿರುವ ರಥೋತ್ಸವದ ಪರಂಪರೆಯನ್ನು ಇಂದಿಗೂ ಭಕ್ತಿಭಾವದಿಂದ ಮುಂದುವರಿಸಿಕೊಂಡು ಬರಲಾಗುತ್ತಿದೆ. ಕದಂಬರ ಆಳ್ವಿಕೆಯ ಇತಿಹಾಸದೊಂದಿಗೆ ನಂಟು ಹೊಂದಿರುವ ಈ ಗ್ರಾಮದಲ್ಲಿ ನಡೆಯುವ ರಥೋತ್ಸವವು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಸ್ಥಳೀಯ ಸಂಸ್ಕೃತಿ, ಪರಂಪರೆ ಹಾಗೂ ಸಾಮೂಹಿಕ ಶ್ರದ್ಧೆಯ ಪ್ರತೀಕವಾಗಿದೆ. ಸೋಮವಾರ, ಅಕ್ಟೋಬರ್ 26ರಂದು ರಥೋತ್ಸವ ನಡೆಯಲಿದ್ದು, ಗ್ರಾಮದಲ್ಲಿ ಧಾರ್ಮಿಕ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
ಹಲಶಿ ಪ್ರದೇಶವು ಪ್ರಾಚೀನ ಇತಿಹಾಸದ ಶ್ರೀಮಂತ ಹಿನ್ನೆಲೆಯನ್ನು ಹೊಂದಿದೆ. ಇಲ್ಲಿನ ಪುರಾತನ ದೇವಾಲಯಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಸಾಂಪ್ರದಾಯಿಕ ಉತ್ಸವಗಳು ಈ ಐತಿಹಾಸಿಕ ಪರಂಪರೆಗೆ ಸಾಕ್ಷಿಯಾಗಿವೆ. ನರಸಿಂಹ-ವರಾಹ ಜಾತ್ರೋತ್ಸವದ ಪರಂಪರೆಯೊಂದಿಗೆ ಬೆಸೆದುಕೊಂಡಿರುವ ರಥೋತ್ಸವಕ್ಕೆ ಸ್ಥಳೀಯ ಭಕ್ತರ ಜೀವನದಲ್ಲಿ ವಿಶೇಷ ಮಹತ್ವವಿದೆ.
ಕೊಜಾಗರಿ ಹುಣ್ಣಿಮೆಯಿಂದ ನರಸಿಂಹ-ವರಾಹ ಜಾತ್ರೋತ್ಸವಕ್ಕೆ ಚಾಲನೆ ದೊರೆಯುತ್ತದೆ. ಅನೇಕ ಕಡೆಗಳಲ್ಲಿ ಕೊಜಾಗರಿ ಹುಣ್ಣಿಮೆಯ ದಿನವೇ ರಥೋತ್ಸವವನ್ನು ಆಚರಿಸಲಾಗುತ್ತದೆ. ಆದರೆ, ಹುಣ್ಣಿಮೆಯ ತಿಥಿಯು ಸೂರ್ಯೋದಯದ ಸಮಯದಲ್ಲಿ ಇರಬೇಕೆಂಬ ಸಂಪ್ರದಾಯದ ಹಿನ್ನೆಲೆಯಲ್ಲಿ ಹಲಶಿಯಲ್ಲಿ ಅಶ್ವಿನ ಶುದ್ಧ ಹುಣ್ಣಿಮೆಯಂದು ರಥೋತ್ಸವವನ್ನು ಆಚರಿಸಲಾಗುತ್ತದೆ. ಅದರಂತೆ ಈ ವರ್ಷ ಸೋಮವಾರ, ಅಕ್ಟೋಬರ್ 26ರಂದು ರಥೋತ್ಸವ ಜರುಗಲಿದೆ.
ರಥೋತ್ಸವದ ಸಂದರ್ಭದಲ್ಲಿ ಧಾರ್ಮಿಕ ವಿಧಿವಿಧಾನಗಳು, ಪೂಜೆ-ಪುನಸ್ಕಾರಗಳು ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ವಿಶೇಷ ಪ್ರಾಮುಖ್ಯತೆ ಇರುತ್ತದೆ. ರಥ ಎಳೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಈ ಉತ್ಸವವು ಗ್ರಾಮಸ್ಥರಲ್ಲಿ ಪರಸ್ಪರ ಬಾಂಧವ್ಯ ಮತ್ತು ಸಾಮಾಜಿಕ ಏಕತೆಯನ್ನು ಬಲಪಡಿಸುತ್ತದೆ.
ಪರಂಪರೆಯ ಹೆಮ್ಮೆ, ಇತಿಹಾಸದ ವೈಭವ!
ಆಧುನಿಕತೆಯ ನಡುವೆಯೂ ಹಲಶಿಯ ಜನರು ತಮ್ಮ ಪೂರ್ವಜರಿಂದ ಬಂದ ಧಾರ್ಮಿಕ ಸಂಪ್ರದಾಯವನ್ನು ಉಳಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ಪೀಳಿಗೆಗೆ ಗ್ರಾಮದ ಇತಿಹಾಸ, ಧಾರ್ಮಿಕ ನಂಬಿಕೆಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವಲ್ಲಿ ಈ ರಥೋತ್ಸವ ಮಹತ್ವದ ಪಾತ್ರ ವಹಿಸುತ್ತದೆ. ಧಾರ್ಮಿಕ ಶ್ರದ್ಧೆ ಮತ್ತು ಐತಿಹಾಸಿಕ ಪರಂಪರೆಯ ಸಂಗಮವಾಗಿರುವ ಹಲಶಿಯ ರಥೋತ್ಸವ ಖಾನಾಪುರ ತಾಲೂಕಿನ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುತ್ತದೆ.