खानापुर: शहरातील प्रादेशिक वन विभागाच्या आवारात गुरुवारी वन विभागातर्फे शहीद दिन साजरा करण्यात आला. वरिष्ठ दिवाणी न्यायाधीश न्यायमूर्ती चंद्रशेखर तलवार, कनिष्ठ न्यायाधीश न्यायमूर्ती वीरेश हिरेमठ, निवृत्त वन अधिकारी मल्लेशप्पा बेनकट्टी, एसीएफ सुनीता निंबरगी, आरएफओ श्रीकांत पाटील, वाय. पी तेजा, सय्यद नदाफ आणि विभागातील इतर अधिकारी आणि कर्मचाऱ्यांनी कार्यक्रमात भाग घेतला आणि शहीद स्मारकाला आदरांजली वाहिली.
प्रास्ताविकात बोलताना एसीएफ सुनीता निंबार्गी यांनी स्पष्ट केले की, “वन विभागात सेवा करताना वन्य प्राण्यांच्या हल्ल्यात किंवा बंदुकीच्या गोळीबारात मृत्युमुखी पडलेल्यांच्या सन्मानार्थ ११ सप्टेंबर रोजी शहीद दिन साजरा केला जातो. १७३० मध्ये या दिवशी जोधपूरच्या महाराजांनी त्यांच्या राजवाड्याच्या बांधकामासाठी हजारो झाडे तोडण्यास विरोध करणाऱ्या बिश्नोई समाजातील ३६३ लोकांना ठार मारले होते. महाराजांनी त्यांच्या राजवाड्याच्या बांधकामासाठी हजारो झाडे तोडण्यास विरोध करणाऱ्या बिश्नोई समाजातील ३६३ लोकांना ठार मारल्याच्या स्मरणार्थ वन विभागाने हा दिवस वन शहीद दिन म्हणून घोषित केला आहे. आज, वन संवर्धनासाठी मृत्युमुखी पडलेल्यांना श्रद्धांजली अर्पण करून, वन संवर्धनासाठी त्यांनी दिलेल्या बलिदानाचे स्मरण केले जाते.”
स्थानिक न्यायालयाचे दिवाणी न्यायाधीश वीरेश हिरेमठ म्हणाले, “पोलिस विभागाच्या तुलनेत वन विभागाकडे सुविधांचा अभाव आहे. मी सरकारला वन विभागालाही आवश्यक सुविधा पुरवण्याची विनंती करतो.”
कार्यक्रमाचा एक भाग म्हणून, मान्यवरांनी आणि विभागीय अधिकारी आणि कर्मचाऱ्यांनी वन विभागात सेवा बजावताना मृत्युमुखी पडलेल्या वनरक्षक एसआय बसरीकट्टी आणि शिमाओ रुजारियो यांच्या प्रतिमेला पुष्पांजली अर्पण केली. विभागीय वन अधिकारी श्रीकांत पाटील यांनी शहीद दिन साजरा करण्यामागील विभागाचे ध्येय स्पष्ट केले. नंतर, शहीदांच्या आत्म्यास शांती मिळावी म्हणून मूक पाळणा पाळण्यात आला. यावेळी विभागीय वन अधिकारी, उप-विभागीय वन अधिकारी, वनरक्षक, निरीक्षक, कर्मचारी आणि शहीदांचे नातेवाईक उपस्थित होते.
ಖಾನಾಪುರ: ಪಟ್ಟಣದ ಪ್ರಾದೇಶಿಕ ಅರಣ್ಯ ಇಲಾಖೆಯ ಆವರಣದಲ್ಲಿ ಗುರುವಾರ ಅರಣ್ಯ ಇಲಾಖೆಯ ವತಿಯಿಂದ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯ ದಿವಾಣಿ ನ್ಯಾಯಾಧೀಶ ನ್ಯಾ.ಚಂದ್ರಶೇಖರ ತಳವಾರ, ಕಿರಿಯ ಶ್ರೇಣಿ ನ್ಯಾಯಾಧೀಶ ನ್ಯಾ.ವೀರೇಶ ಹಿರೇಮಠ, ನಿವೃತ್ತ ಅರಣ್ಯಾಧಿಕಾರಿ ಮಲ್ಲೇಶಪ್ಪ ಬೆನಕಟ್ಟಿ, ಎಸಿಎಫ್ ಸುನೀತಾ ನಿಂಬರಗಿ, ಆರ್.ಎಫ್.ಒ.ಗಳಾದ ಶ್ರೀಕಾಂತ ಪಾಟೀಲ, ವೈ.ಪಿ ತೇಜ, ಸಯ್ಯದ ನದಾಫ ಸೇರಿದಂತೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಸಿಎಫ್ ಸುನಿತಾ ನಿಂಬರಗಿ, ‘ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ವನ್ಯಮೃಗಗಳ ದಾಳಿಗೆ ಅಥವಾ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾದವರ ಗೌರವಾರ್ಥ ಸೆ.11ರಂದು ಹುತಾತ್ಮ ದಿನವನ್ನು ಆಚರಿಸಲಾಗುತ್ತದೆ. 1730ರ ಈ ದಿನದಂದು ಜೋಧಪುರದ ಮಹಾರಾಜರು ತಮ್ಮ ಅರಮನೆ ನಿರ್ಮಾಣಕ್ಕಾಗಿ ಸಾವಿರಾರು ಮರಗಳನ್ನು ಕಡೆಯಲು ಮುಂದಾಗಿದ್ದನ್ನು ವಿರೋಧಿಸಿದ ಬಿಷ್ಣೋಯಿ ಸಮಾಜದ 363 ಜನರನ್ನು ಮಹಾರಾಜರ ಕಡೆಯವರು ಹತ್ಯೆಗೈದ ಸ್ಮರಣಾರ್ಥ ಅರಣ್ಯ ಇಲಾಖೆ ಈ ದಿನವನ್ನು ಅರಣ್ಯ ಹುತಾತ್ಮರ ದಿನವನ್ನಾಗಿ ಘೋಷಿಸಿದೆ. ಇಂದು ಅರಣ್ಯ ಸಂರಕ್ಷಣೆಗಾಗಿ ಹುತಾತ್ಮರಾದವರಿಗೆ ಗೌರವ ಸಲ್ಲಿಸುವ ಮೂಲಕ ಅರಣ್ಯ ಸಂರಕ್ಷಣೆಗಾಗಿ ಅವರು ಮಾಡಿರುವ ತ್ಯಾಗ-ಬಲಿದಾನವನ್ನು ನೆನೆಯಲಾಗುತ್ತದೆ’ ಎಂದು ವಿವರಿಸಿದರು.
ಸ್ಥಳೀಯ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ವಿರೇಶ ಹಿರೇಮಠ ಮಾತನಾಡಿ, ಪೊಲೀಸ್ ಇಲಾಖೆಗೆ ಹೋಲಿಸಿದರೆ ಅರಣ್ಯ ಇಲಾಖೆಗೆ ಸೌಲಭ್ಯಗಳ ಕೊರತೆ ಇದೆ. ಅರಣ್ಯ ಇಲಾಖೆಯವರಿಗೂ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ” ಎಂದರು.
ಕಾರ್ಯಕ್ರಮದ ಅಂಗವಾಗಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವಾಗ ಮೃತಪಟ್ಟ ಅರಣ್ಯ ರಕ್ಷಕರಾದ ಎಸ್ ಐ ಬಸರಿಕಟ್ಟಿ ಮತ್ತು ಶೀಮಾವ್ ರುಜಾರಿಯೋ ಅವರ ಭಾವಚಿತ್ರಕ್ಕೆ ಗಣ್ಯರು ಮತ್ತು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಪುಷ್ಪನಮನ ಸಲ್ಲಿಸಿದರು. ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ಹುತಾತ್ಮ ದಿನಾಚರಣೆಯ ಹಿಂದಿರುವ ಇಲಾಖೆಯ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು. ಬಳಿಕ ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಇಲಾಖೆಯ ಕಣಕುಂಬಿ, ಭೀಮಗಡ, ಲೋಂಡಾ ಮತ್ತು ಖಾನಾಪುರ ವಲಯಗಳ ವಲಯ ಅರಣ್ಯಾಧಿಕಾರಿಗಳು, ಉಪ ವಲಯ ಅರಣ್ಯ ಅಧಿಕಾರಿಗಳು, ಅರಣ್ಯ ರಕ್ಷಕರು, ವೀಕ್ಷಕರು, ಸಿಬ್ಬಂದಿ ಹಾಗೂ ಹುತಾತ್ಮರ ಸಂಬಂಧಿಗಳು ಉಪಸ್ಥಿತರಿದ್ದರು.