IMG-20250114-WA0068

चन्नम्मन कित्तूर: महिला आणि बाल कल्याण मंत्री लक्ष्मी हेब्बाळकर यांच्या गाडीला राष्ट्रीय महामार्गाने बेळगावला येत असताना चन्नम्मना कित्तूर तालुक्यातील अंबडगट्टी क्रॉसजवळ अपघात झाला.

मंत्री लक्ष्मी हेब्बालकर आणि आमदार चन्नराज हट्टीहोळी एका भीषण रस्ते अपघातात थोडक्यात बचावले. सीएलपी बैठक संपवून काल रात्री उशिरा बेंगळुरूहून रस्त्याने बेळगावला परतणाऱ्या लक्ष्मी हेब्बल्लार यांची गाडी आज सकाळी ५ वाजता कित्तूर तालुक्यातील अंबडागट्टी गावाजवळ अपघातग्रस्त झाली. रस्ता ओलांडणाऱ्या एका कुत्र्याला टाळण्याचा प्रयत्न करताना चालकाचे गाडीवरील नियंत्रण सुटले आणि तो झाडावर आदळला. लक्ष्मी हेबाळकर यांच्या पाठीला आणि चेहऱ्याला किरकोळ दुखापत झाली, तर आमदार चेन्नराज हट्टी होळी यांच्या डोक्यालाही दुखापत झाली. मंत्री लक्ष्मी हेब्बल्लार यांच्यावर बेळगावातील एका खाजगी रुग्णालयात उपचार सुरू असल्याची माहिती मिळाली आहे.

ಚನ್ನಮ್ಮನ ಕಿತ್ತೂರು : ಬೆಂಗಳೂರಿನಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಳಗಾವಿಗೆ ಬರುತ್ತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್‌ ಕಾರು ಚನ್ನಮ್ಮನ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಹತ್ತಿರ ಅಪಘಾತವಾಗಿದೆ.

ಭೀಕರ ರಸ್ತೆ ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್, ಎಂಎಲ್‌ಸಿ ಚೆನ್ನರಾಜ ಹಟ್ಟಿಹೊಳಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸಿಎಲ್‌ಪಿ ಸಭೆ ಮುಗಿಸಿ ನಿನ್ನೆ ತಡರಾತ್ರಿ ಬೆಂಗಳೂರಿನಿಂದ ರಸ್ತೆ ಮೂಲಕ ಬೆಳಗಾವಿಗೆ ಬರುತ್ತಿದ್ದ ಲಕ್ಷ್ಮೀ ಹೆಬ್ಬಾಳ್ಳರ್‌ ಕಾರು ಇಂದು ಬೆಳಗಿನ ಜಾವ 5 ಗಂಟೆಗೆ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಬಳಿ ಅಪಘಾತವಾಗಿದೆ. ರಸ್ತೆಯಲ್ಲಿ ಅಡ್ಡಬಂದ ನಾಯಿ ತಪ್ಪಿಸಲು ಹೋಗಿದ ಚಾಲಕನ ನಿಯಂತ್ರಣ ತಪ್ಪಿ ಕಾರ್ ಮರಕ್ಕೆ ಡಿಕ್ಕಿ ಹೊಡೆದಿದೆ. ಲಕ್ಷ್ಮೀ ಹೆಬ್ಬಾಳ್ಳರ್ ಬೆನ್ನು, ಮುಖಕ್ಕೆ ಸಣ್ಣಪುಟ್ಟ ಗಾಯವಾಗಿದ್ದು, ಎಂಎಲ್‌ಸಿ ಚೆನ್ನರಾಜ ಹಟ್ಟಿಹೊಳಿ ತಲೆಗೆ ಕೂಡಾ ಗಾಯವಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಅವರಿಗೆ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

Do Share

Leave a Reply

Your email address will not be published. Required fields are marked *

error: Content is protected !!
Call Us