IMG-20230404-WA0103


ಖಾನಾಪುರ: ಪಶ್ಚಿಮ ಘಟ್ಟ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಮತ್ತು ಕಾಡು ಬೆಕ್ಕು ಜಾತಿಯ ಮರಗಳಲ್ಲಿ ವಾಸವಿರುವ ಅಪರೂಪದ ವನ್ಯಜೀವಿ ಕೆಂದಳಿಲನ್ನು ಬೇಟೆಯಾಡಿದ ಬೇಟೆಗಾರನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ತಾಲೂಕಿನ ಲೋಂಡಾ ವಲಯದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಲೋಂಡಾ ಅರಣ್ಯ ವ್ಯಾಪ್ತಿಯ ತಿವೋಲಿ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಕೆಂದಳಿಲು ಬೇಟೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಆರ್.ಎಫ್.ಒ ನಾಗರಾಜ ಭೀಮಗೋಳ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ವಿಶೇಷ ಕಾಯರ್ಾಚರಣೆ ನಡೆಸುವ ಮೂಲಕ ಬೇಟೆಗಾರನನ್ನು ವನ್ಯಜೀವಿಯ ಕಳೇಬರದ ಸಮೇತ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಬೇಟೆಗಾರನನ್ನು ತಿವೋಲಿ ಗ್ರಾಮದ ನಿವಾಸಿ ಲಾದ್ರು ಲೂಯಿಸ್ ಧಮೆಲ್ ಎಂದು ಗುರುತಿಸಿದ್ದು, ಈತನ ಜೊತೆಗೆ ಬೇಟೆಗೆ ಬಂದಿದ್ದ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತನಿಂದ ಒಂದು ನಾಡ ಬಂದೂಕು, ಹಲವು ಜೀವಂತ ಗುಂಡುಗಳು, ಸಿಡಿಮದ್ದು ಪೌಡರ್ ಮತ್ತು ಕೆಂದಳಿಲ ಕಳೇಬರವನ್ನು ವಶಪಡಿಸಿಕೊಂಡು ಬಂಧಿತನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಿಸಿಎಫ್ ಮಂಜುನಾಥ ಚವಾಣ, ಡಿಸಿಎಫ್ ಹರ್ಷಭಾನು, ಎಸಿಎಫ್ ಸಂತೋಷ ಮಾರ್ಗದರ್ಶನದಲ್ಲಿ ನಡೆದ ಕಾಯರ್ಾಚರಣೆಯಲ್ಲಿ ಲೋಂಡಾ ಅರಣ್ಯ ವಲಯದ ರಾಜು ಪವಾರ, ಅಶೋಕ ವಾಘ, ಮಂಜುನಾಥ ಕಟ್ಟಿ, ಗುಂಡಪ್ಪ ಹೊಸಮನಿ, ಮಲ್ಲೇಶಪ್ಪ ನಂದೆಪ್ಪಗೋಳ, ಸಂತೋಷ ಜೋಗಿ ಹಾಗೂ ಇತರರು ಪಾಲ್ಗೊಂಡಿದ್ದರು.

ಅರಣ್ಯದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸುತ್ತಿದ್ದ ಟ್ರಾಕ್ಟರ್ ವಶ
ಖಾನಾಪುರ: ತಾಲೂಕಿನ ಲೋಂಡಾ ವಲಯದ ಗುಂಜಿ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗುಸುತ್ತಿದ್ದ ಟ್ರಾಕ್ಟರ್ ಮಾಲುಸಮೇತ ವಶಪಡಿಸಿಕೊಳ್ಳುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸೋಮವಾರ ಲೋಂಡಾ ವಲಯದ ತಿವೋಲಿ-ಗುಂಜಿ ನಡುವಿನ ಅರಣ್ಯ ಪ್ರದೇಶದಲ್ಲಿ ಹರಿಯುವ ಹಳ್ಳದ ದಂಡೆಯಲ್ಲಿ ಸಂಗ್ರಹವಾಗಿದ್ದ ಮರಳನ್ನು ಟ್ರಾಕ್ಟರ್ನಲ್ಲಿ ತುಂಬಿಸಿಕೊಂಡು ಗುಂಜಿ ಗ್ರಾಮದತ್ತ ತರುತ್ತಿದ್ದ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ರಾಜು ಪವಾರ ಹಾಗೂ ಇತರರು ಟ್ರಾಕ್ಟರ್ ತಪಾಸಣೆ ಮಾಡಿದ್ದರಿಂದ ಈ ಅಕ್ರಮ ಬೆಳಕಿಗೆ ಬಂದಿದೆ. ಈ ಕುರಿತು ಗುಂಜಿ ಉಪ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಟ್ರಾಕ್ಟರ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

Do Share

Leave a Reply

Your email address will not be published. Required fields are marked *

error: Content is protected !!
Call Us