ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಶ್ರೀರಾಮ ಜಾದೂಗಾರ ಅಸಮಾಧಾನ

खानापूर : परेश मेस्ता प्रकरणी हिंदू कार्यकर्त्यांवर गुन्हा दाखल झाल्यानंतर भाजपचा एकही नेता मदतीला आला नाही. निवडणुकीच्या काळात हिंदुत्वाच्या नावावर गोरगरिबांच्या कुटुंबातील मुलांना विहिरीत ढकलण्याचे काम भाजपचे उमेदवार विश्वेश्वर हेगडे कागेरी यांनी करू नये, असे हिंदू कार्यकर्ते श्रीराम जादुगर यांनी सांगितले.
कारवार येथे पत्रकार परिषदेत बोलताना ते म्हणाले, परेश मेस्ता प्रकरणी सुमारे 95 तरुणांवर गुन्हा दाखल करण्यात आला होता. आम्ही अजूनही कोर्ट कचेरी करत फिरत आहोत. पण भाजपचा एकही नेता आमच्या मदतीला आला नाही. निवडणूक आली की परेश मेस्ता यांचे प्रकरण डोळ्यासमोर येते. या प्रकरणात कागेरींनी आम्हाला काय मदत केली ते सांगावे. राजकीय वापरासाठी ते आमचा वापर करत असून आम्हाला खूप वाईट वाटत असल्याचे ते म्हणाले.
परेश प्रकरणात तत्कालीन आयजीपी असलेले हेमंत निंबाळकर यांनी पुरावे नष्ट केल्याचा कागेरींचा दावा आहे. तसे असेल तर तपास नीट व्हावा, यासाठी कागेरींनी किती पत्रे लिहिली ? या खटल्याबद्दल त्यांनी किती जणांशी चर्चा केली ? निवडणूक आली की भाजपचे उमेदवार विश्वेश्वर हेगडे कागेरी परेश मेस्ता प्रकरणाचे कार्ड वापरत आहेत. कृपया मागासलेल्या तरुणांचा राजकारणासाठी वापर करू नका, असे आवाहन जादूगर यांनी केले.
मागच्या भाजप सरकारात सभापती राहिलेल्या कागेरींनी आमच्यासाठी काय केले? सात वर्षांपासून आम्ही न्यायालयाच्या चकरा मारत आहोत. हिंदू कार्यकर्ते म्हणून आम्ही आता निश्चिंत आहोत. निवडणुकीसाठी आम्हाला पुन्हा राजकारणात ओढू नका. परेश मेस्ता यांची हत्या झाली तेव्हा आम्ही दंगलीत सहभागी होतो, असा गुन्हा दाखल करण्यात आला होता. नंतर ते प्रकरण सीबीआयकडे सोपवण्यात आले, तेव्हा केंद्रात भाजपचे सरकार असतानाही न्याय मिळाला नाही. आता ते आमचा निवडणुकीसाठी वापर करत आहेत.
दंगल उसळल्यानंतर बडे नेते गाडीत बसून गायब झाले. लाठीचार्ज झाल्यानंतर मार खाणाऱ्यांत मागासवर्गीय तरुण होते. मात्र या प्रकरणाचा राजकीय लाभ घेणारे लाभार्थी दुसरेच आहेत. आम्ही आता जागे झालो आहोत. आमचा राजकीय वापर झाल्यास आम्ही विरोध करू, असे ते म्हणाले.
आणखी एक हिंदुत्ववादी कार्यकर्ते नित्यानंद पालेकर म्हणाले, समाजाच्या भल्याचा विकासाचा विचार ठेवून राजकारण करा. द्वेष निर्माण करणारे आणि एकमेकांशी भांडण करणारे राजकारण करू नका. जातीय दंगली भडकवण्याऐवजी विकासासाठी काम करा, असे कान टोचले.
पत्रकार परिषदेत हिंदू संघटनांचे विक्रम, राम, नित्यानंद पालेकर, नागराज, प्रदीप आदी कार्यकर्ते उपस्थित होते.

परेश मेस्ता प्रकरणी तक्रार दाखल झाल्यापासून आम्हाला खूप त्रास सहन करावा लागला आहे. कामासाठी परदेशात जाण्यासाठी पासपोर्ट काढणेही शक्य नाही. आमच्या कुटुंबियांचे अश्रू पुसायला कोणी नाही. या सगळ्याला जबाबदार कोण? असा आरोप श्रीराम जादूगार यांनी केला आहे.

भाजपचे आमदार दिनकर शेट्टी यांनीही हात झटकल्याचा आरोप

आमदार दिनकर शेट्टी यांनी या प्रकरणात आम्हाला कसलीही साथ दिली नाही. आम्ही होन्नावर मतदारसंघातील नागरिक आहोत. आमचे आमदार दिनकर शेट्टी यांनीही परेश मेस्ता प्रकरणाचा फायदा घेतला. दिनकर शेट्टी आमदार असताना भाजपची सत्ता आल्यानंतरही 2020 मध्ये आमच्याविरोधात कलम 107 अंतर्गत तक्रार दाखल करण्यात आली होती. आम्ही आमदार शेट्टी यांच्याकडे जाऊन विचारणा केली तेव्हा या प्रकरणाचा आपल्याशी काही संबंध नाही असे म्हणून त्यांनी प्रतिसाद दिला नाही असा आरोप जादूगार यांनी केला.

ಕಾರವಾರ: ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಬಳಸಿಕೊಳ್ಳುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನ ಬಳಸಿಕೊಳ್ಳಬೇಡಿ ಎಂದು ಹಿಂದೂ ಕಾರ್ಯಕರ್ತ ಶ್ರೀರಾಮ್ ಜಾದೂಗಾರ್ ಹೇಳಿದರು.

ಇಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರೇಶ್ ಮೇಸ್ತಾ ಪ್ರಕರಣದಲ್ಲಿ ಸುಮಾರು 95 ಯುವಕರ ಮೇಲೆ‌ ಕೇಸ್ ಹಾಕಲಾಗಿತ್ತು. ಇನ್ನೂ ಕೋರ್ಟ್ ಕಚೇರಿ ಎಂದು ತಿರುಗಾಡುತ್ತಿದ್ದೇವೆ. ಆದರೆ ಯಾವ ಬಿಜೆಪಿ ಮುಖಂಡರೂ ನಮ್ಮ ಸಹಾಯಕ್ಕೆ ಬಂದಿಲ್ಲ. ಚುನಾವಣೆ ಬಂದಾಗ ಪರೇಶ್ ಮೇಸ್ತಾ ಪ್ರಕರಣ ಇವರಿಗೆ ನೆನಪಿಗೆ ಬರುತ್ತದೆ. ಕಾಗೇರಿಯವರು ಆ ಸಂದರ್ಭದಲ್ಲಿ ನಮಗೆ ಏನು ಸಹಾಯ ಮಾಡಿದ್ದಾರೆ ಎಂದು ತಿಳಿಸಲಿ,. ರಾಜಕೀಯ ಬಳಕೆಗೆ ನಮ್ಮನ್ನ ಬಳಕೆ ಮಾಡಿಕೊಳ್ಳಲು ಹೊರಟಿರುವುದು ನಮಗ ಅತೀವ ಬೇಸರ ತರಿಸಿದೆ ಎಂದರು.

ಪರೇಶ್ ಪ್ರಕರಣದ ಸಂದರ್ಭ ಐಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಕಾಗೇರಿಯವರು ಹೇಳುತ್ತಾರೆ. ಹಾಗಿದ್ದರೆ ಕಾಗೇರಿಯವರು ಅಂದು ತನಿಖೆ ಸರಿಯಾಗಿ ಮಾಡುವಂತೆ ಎಷ್ಟು ಪತ್ರ ಬರೆದಿದ್ದಾರೆ? ಯಾರೊಂದಿಗೆ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ? ಪರೇಶ್ ಮೇಸ್ತಾ ಪ್ರಕರಣದಲ್ಲಿ ಕೇಸು ಹಾಕಿಸಿಕೊಂಡ ನಂತರ ನಮ್ಮ ಸಹಾಯಕ್ಕೆ ಯಾವ ಬಿಜೆಪಿಗರು ಬರದೇ ಪರದಾಡಿದ್ದೇವೆ. ಚುನಾವಣೆಯ ಸಂದರ್ಭದಲ್ಲಿ ಕಂಡವರ ಮನೆಯ ಮಕ್ಕಳನ್ನ ಬಾವಿಗೆ ತಳ್ಳುವ ಕೆಲಸ ಕಾಗೇರಿಯವರು ಮಾಡಬಾರದು ಎಂದರು.

ಕಳೆದ ಬಾರಿ ಸ್ಪೀಕರ್ ಆಗಿದ್ದಾಗ ನಮ್ಮ ಪರ ಕಾಗೇರಿಯವರು ಏನು ಮಾಡಿದ್ದಾರೆ? ಏಳು ವರ್ಷದಿಂದ ನಾವು ಕೋರ್ಟ್ ಗೆ ಓಡಾಡುತ್ತಿದ್ದೇವೆ. ಹಿಂದೂ ಕಾರ್ಯಕರ್ತರಾದ ನಾವು ಸದ್ಯ ನೆಮ್ಮದಿಯಾಗಿ ಇದ್ದೇವೆ. ಚುನಾವಣೆಗಾಗಿ ಮತ್ತೆ ನಮ್ಮನ್ನ ಎಳೆದು ತಂದು ಕಂಡವರ ಮನೆಯ ಬಾವಿಗೆ ದಬ್ಬಬೇಡಿ. ಪರೇಶ್ ಮೇಸ್ತಾ ಹತ್ಯೆಯಾದಾಗ ನಾವು ಗಲಭೆಯಲ್ಲಿ ಪಾಲ್ಗೊಂಡಿದ್ದೆವು ಎಂದು ಕೇಸು ಹಾಕಿದ್ದರು. ನಂತರ ಸಿಬಿಐಗೆ ವಹಿಸಿದಾಗ ಬಿಜೆಪಿ ನೇತೃತ್ವದ ಕೇಂದ್ರ ‌ಸರ್ಕಾರ ಇದ್ದರೂ ನ್ಯಾಯ ಕೊಡಿಸಲಾಗಿಲ್ಲ. ಈಗ ಚುನಾವಣೆಗಾಗಿ, ತಮ್ಮ ತೆವಲಿಗಾಗಿ ನಮ್ಮನ್ನ ಬಳಸಿಕೊಳ್ಳಲು ಹೊರಟಿದ್ದಾರೆ ಎಂದರು.

ದೊಡ್ಡ ನಾಯಕರು ಗಲಾಟೆ ಆದಾಗ ಕಾರಿನಲ್ಲಿ ಕುಳಿತು ನಾಪತ್ತೆಯಾದರು. ಲಾಠಿ ಚಾರ್ಜ್ ಎಂದಾಗ ಹೊಡೆತ ತಿಂದವರು ಹಿಂದುಳಿದ ವರ್ಗದ ನಾವುಗಳು. ಬಿಜೆಪಿ ಅಧಿಕಾರಕ್ಕೆ ಬಂದ ನಂತರವೂ 2020ರಲ್ಲಿ ಕಲಂ 107 ಅಡಿ ನಮ್ಮ‌ ಮೇಲೆ ದೂರು ದಾಖಲಿಸಲಾಗಿದೆ. ಶಾಸಕ ದಿನಕರ ಶೆಟ್ಟಿ ಈವರೆಗೆ ನಮಗೆ ಸ್ಪಂದಿಸಿಲ್ಲ ಎಂದರು.

ಇನ್ನೋರ್ವ ನಿತ್ಯಾನಂದ ಪಾಲೇಕರ್ ಮಾತನಾಡಿ, ಸಮಾಜಕ್ಕೆ ಒಳ್ಳೆಯದಾಗುವ ಅಭಿವೃದ್ಧಿ ವಿಚಾರ ಇಟ್ಟುಕೊಂಡು ರಾಜಕೀಯ ಮಾಡಿ. ದ್ವೇಷ ಮೂಡಿಸುವಂತಹ, ಪರಸ್ಪರ ಜಗಳ ಮಾಡುವಂತಹ ರಾಜಕೀಯ ಮಾಡಬೇಡಿ. ಕೋಮು ಗಲಭೆ ಕಿಚ್ಚು ಹಚ್ಚಿಸುವ ಬದಲು ಅಭಿವೃದ್ಧಿ ಕೆಲಸ ಮಾಡಿ ಎಂದು ಕಿವಿಮಾತು ಹೇಳಿರು.

ಪತ್ರಿಕಾಗೋಷ್ಟಿಯಲ್ಲಿ ವಿಕ್ರಂ, ರಾಮ್, ನಿತ್ಯಾನಂದ ಪಾಲೇಕರ್, ನಾಗರಾಜ, ಪ್ರದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


ಕೋಟ್…
ಪರೇಶ್ ಮೇಸ್ತಾ ಪ್ರಕರಣದಲ್ಲಿ ದೂರು ದಾಖಲಾಗಿ ನಾವು ಸಾಕಷ್ಟು ನೋವು ಅನುಭವಿಸಿದ್ದೇವೆ‌. ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಲು ಪಾಸ್‌ಪೋರ್ಟ್ ಮಾಡಿಸಲೂ ಆಗುತ್ತಿಲ್ಲ. ನಮ್ಮ ಕುಟುಂಬಗಳ ಕಣ್ಣೀರು ಕೇಳುವವರು ಇಲ್ಲದಾಗಿದೆ. ಇದಕ್ಕೆಲ್ಲ ಹೊಣೆ ಯಾರು?

  • ಶ್ರೀರಾಮ್ ಜಾದೂಗಾರ, ಹೊನ್ನಾವರ
Do Share

Leave a Reply

Your email address will not be published. Required fields are marked *

error: Content is protected !!
Call Us