Home » गणेबैल टोलविरोधातील लढ्याला न्यायालयीन बळ! केंद्राला दोन महिन्यांत निर्णयाचे निर्देश!

गणेबैल टोलविरोधातील लढ्याला न्यायालयीन बळ! केंद्राला दोन महिन्यांत निर्णयाचे निर्देश!

file_0000000017d48211a0574f62245dfc96

ಅಪೂರ್ಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ; ಗಣೇಬೈಲ್ ಟೋಲ್ ವಸೂಲಿಗೆ ಹೈಕೋರ್ಟ್‌ನಿಂದ ಗಮನ!

गणेबैल टोलविरोधातील लढ्याला न्यायालयीन बळ! खानापूरच्या चार सामाजिक कार्यकर्त्यांची उच्च न्यायालयात धाव; केंद्राला दोन महिन्यांत निर्णयाचे निर्देश!

बेळगाव-पणजी राष्ट्रीय महामार्गाचे काम अपूर्ण असल्याचा याचिकाकर्त्यांचा दावा; टोल वसुली मागे घेण्याच्या मागणीवर आता केंद्र सरकारची कसोटी

खानापूर : बेळगाव-पणजी राष्ट्रीय महामार्गावरील गणेबैल टोल प्लाझाच्या टोल वसुलीचा प्रश्न पुन्हा एकदा ऐरणीवर आला आहे. महामार्गाचे काम पूर्ण होण्यापूर्वीच टोल वसुली सुरू करण्यात आल्याचा आक्षेप घेत खानापूर तालुक्यातील चार सामाजिक कार्यकर्त्यांनी सुरू केलेल्या न्यायालयीन लढ्याला महत्त्वपूर्ण वळण मिळाले आहे. याचिकाकर्त्यांनी टोल वसुली मागे घेण्यासंदर्भात सादर केलेल्या निवेदनावर दोन महिन्यांच्या आत योग्य तो निर्णय घ्यावा, असे निर्देश कर्नाटक उच्च न्यायालयाने केंद्र सरकारला दिले आहेत.

शिवसेनेचे राज्य उपाध्यक्ष तथा सामाजिक कार्यकर्ते के. पी. पाटील यांच्या पुढाकारातून या प्रश्नाला न्यायालयीन व्यासपीठावर आणण्यात आले. गणेबैल टोल प्लाझावर वाहनांच्या टोल वसुलीवरून सुमारे सहा महिन्यांपूर्वी वाद निर्माण झाल्यानंतर पाटील यांनी टोल वसुलीविरोधात आवाज उठविला होता. टोल वसुली बंद करण्याच्या मागणीसाठी त्यांनी आंदोलनही छेडले होते. त्यानंतर दिनकर मरगळे, विवेक गिरी, कृष्णा कुंभार यांच्यासह चार सामाजिक कार्यकर्त्यांनी हा प्रश्न न्यायालयीन मार्गाने पुढे नेण्याचा निर्णय घेतला.

टोल वसुलीविरोधात न्यायालयीन लढा

बेळगाव-पणजी राष्ट्रीय महामार्गाचे काम अनेक ठिकाणी अपूर्ण असताना गणेबैल टोल प्लाझावर टोल वसुली सुरू असल्याचा आक्षेप याचिकाकर्त्यांनी घेतला आहे. महामार्गाचे काम पूर्ण नसताना वाहनधारकांकडून टोल आकारणी करणे अन्यायकारक असल्याची भूमिका त्यांनी मांडली आहे. या संदर्भात 28 ऑक्टोबर 2024 रोजी संबंधित अधिकाऱ्यांकडे निवेदन सादर करण्यात आले होते. मात्र त्यावर निर्णय होत नसल्याने भारतीय संविधानातील कलम 226 आणि 227 अंतर्गत कर्नाटक उच्च न्यायालयात रिट याचिका क्रमांक 5178/2025 (GM-RES-PIL) दाखल करण्यात आली.

या याचिकेत वड्डेबैल येथील कृष्णाजी पाटील, खानापूर येथील पत्रकार दिनकर परशराम मरगाळे, सिंगींकोप-इदलहोंड येथील कृष्णा मल्लाप्पा कुंभार आणि खानापूर येथील विवेक रामचंद्र गिरी हे चार जण याचिकाकर्ते आहेत.

18 नोव्हेंबर रोजी उच्च न्यायालयात सुनावणी

कर्नाटक उच्च न्यायालयाच्या बंगळुरू खंडपीठात 18 नोव्हेंबर 2026 रोजी न्यायमूर्ती अनु शिवरामन आणि न्यायमूर्ती के. एस. भरतकुमार यांच्या खंडपीठासमोर या प्रकरणाची सुनावणी झाली.

याचिकाकर्त्यांच्या वकिलांनी महामार्गाचे बांधकाम अद्याप पूर्ण झालेले नसल्याने टोल वसुली मागे घेण्याच्या मागणीवर विचार करण्याची विनंती केली. याचिकाकर्त्यांनी यापूर्वीच संबंधित सर्व प्रतिवादींकडे निवेदने सादर केल्याची नोंद न्यायालयाने घेतली.

केंद्र सरकारला दोन महिन्यांची मुदत

या प्रकरणात प्रतिवादी क्रमांक एक असलेल्या केंद्र सरकारने याचिकाकर्त्यांच्या निवेदनावर योग्य निर्णय घ्यावा, असे न्यायालयाने स्पष्ट केले. न्यायालयाच्या आदेशाची प्रत प्राप्त झाल्यापासून दोन महिन्यांच्या आत निवेदनाचा विचार करून योग्य तो आदेश पारित करण्याचे निर्देश देण्यात आले. त्यानंतर न्यायालयाने ही रिट याचिका निकाली काढली.

के. पी. पाटील यांच्या आंदोलनापासून न्यायालयीन लढ्यापर्यंत!

गणेबैल टोल प्लाझावरील टोल वसुलीचा मुद्दा खानापूर तालुक्यातील वाहनधारक आणि नियमित प्रवाशांसाठी महत्त्वाचा ठरला आहे. टोल वसुली सुरू झाल्यापासून स्थानिक नागरिकांकडून विविध आक्षेप आणि मागण्या मांडल्या जात आहेत. महामार्गाचे काम अपूर्ण असताना टोल आकारणी का, हा प्रश्न उपस्थित करत के. पी. पाटील यांनी आंदोलनाच्या माध्यमातून या विषयाला वाचा फोडली. त्यानंतर चार सामाजिक कार्यकर्त्यांनी न्यायालयीन लढा सुरू ठेवला.

आता उच्च न्यायालयाच्या निर्देशानंतर केंद्र सरकार या निवेदनावर काय निर्णय घेते, टोल वसुली मागे घेण्याच्या मागणीला सकारात्मक प्रतिसाद मिळतो का आणि महामार्गाच्या अपूर्ण कामाबाबत कोणती कार्यवाही होते, याकडे खानापूर तालुक्यातील नागरिकांचे लक्ष लागले आहे.

न्यायालयाने टोल वसुली बंद करण्याचा थेट आदेश दिलेला नसून, टोल वसुली मागे घेण्याच्या निवेदनावर दोन महिन्यांत निर्णय घेण्याचे निर्देश दिले आहेत. त्यामुळे या न्यायालयीन आदेशानंतर केंद्र सरकारची भूमिका निर्णायक ठरणार आहे.

ಅಪೂರ್ಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ; ಗಣೇಬೈಲ್ ಟೋಲ್ ವಸೂಲಿಗೆ ಹೈಕೋರ್ಟ್‌ನಿಂದ ಗಮನ!

ಟೋಲ್ ವಸೂಲಿ ಹಿಂಪಡೆಯುವ ಮನವಿಗೆ ಎರಡು ತಿಂಗಳೊಳಗೆ ತೀರ್ಮಾನ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ

ಖಾನಾಪುರ : ಬೆಳಗಾವಿ–ಪಣಜಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಗಣೇಬೈಲ್ ಟೋಲ್ ಪ್ಲಾಜಾದಲ್ಲಿ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂಬ ಆಕ್ಷೇಪಕ್ಕೆ ಸಂಬಂಧಿಸಿದಂತೆ ಖಾನಾಪುರ ತಾಲ್ಲೂಕಿನ ನಾಲ್ವರು ಸಾಮಾಜಿಕ ಕಾರ್ಯಕರ್ತರು ನಡೆಸುತ್ತಿರುವ ನ್ಯಾಯಾಂಗ ಹೋರಾಟಕ್ಕೆ ಮಹತ್ವದ ತಿರುವು ದೊರೆತಿದೆ. ಟೋಲ್ ವಸೂಲಿಯನ್ನು ಹಿಂಪಡೆಯುವಂತೆ ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಿ ಎರಡು ತಿಂಗಳೊಳಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಶಿವಸೇನೆಯ ರಾಜ್ಯ ಉಪಾಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಕೆ.ಪಿ. ಪಾಟೀಲ ಅವರ ನೇತೃತ್ವದಲ್ಲಿ ಈ ಹೋರಾಟ ಆರಂಭವಾಗಿತ್ತು. ಸುಮಾರು ಆರು ತಿಂಗಳ ಹಿಂದೆ ಗಣೇಬೈಲ್ ಟೋಲ್ ಪ್ಲಾಜಾದಲ್ಲಿ ವಾಹನಗಳ ಟೋಲ್ ವಸೂಲಿ ವಿಚಾರವಾಗಿ ವಾಗ್ವಾದ ಉಂಟಾಗಿತ್ತು. ಇದಾದ ಬಳಿಕ ಕೆ.ಪಿ. ಪಾಟೀಲ ಅವರು ಟೋಲ್ ವಸೂಲಿಯನ್ನು ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ನಂತರ ಸಾಮಾಜಿಕ ಕಾರ್ಯಕರ್ತರಾದ ದಿನಕರ ಮರಗಾಳೆ, ವಿವೇಕ ಗಿರಿ, ಕೃಷ್ಣಾ ಕುಂಭಾರ ಸೇರಿದಂತೆ ನಾಲ್ವರು ಈ ವಿಷಯವನ್ನು ನ್ಯಾಯಾಲಯದ ಮೆಟ್ಟಿಲೇರಿಸಿ ಹೋರಾಟ ಮುಂದುವರಿಸಿದ್ದಾರೆ.

ಟೋಲ್ ವಸೂಲಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಿದ ಹೋರಾಟ

ಬೆಳಗಾವಿ–ಪಣಜಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಹಲವು ಕಡೆಗಳಲ್ಲಿ ಅಪೂರ್ಣವಾಗಿರುವಾಗಲೇ ಗಣೇಬೈಲ್ ಟೋಲ್ ಪ್ಲಾಜಾದಲ್ಲಿ ವಾಹನಗಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬುದು ಅರ್ಜಿದಾರರ ಪ್ರಮುಖ ಆಕ್ಷೇಪವಾಗಿದೆ. ಕಾಮಗಾರಿ ಪೂರ್ಣಗೊಳ್ಳುವ ಮುನ್ನ ಟೋಲ್ ವಸೂಲಿ ಮಾಡುವುದು ಸಾರ್ವಜನಿಕರಿಗೆ ಅನ್ಯಾಯವಾಗುತ್ತದೆ ಎಂಬ ವಾದವನ್ನು ಅವರು ಮಂಡಿಸಿದ್ದಾರೆ.

ಈ ಕುರಿತು 28 ಅಕ್ಟೋಬರ್ 2024ರಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಮನವಿಗೆ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಭಾರತೀಯ ಸಂವಿಧಾನದ ಕಲಂ 226 ಮತ್ತು 227ರ ಅಡಿಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ 5178/2025 (GM-RES-PIL) ಸಲ್ಲಿಸಲಾಗಿತ್ತು.

ಈ ಅರ್ಜಿಯಲ್ಲಿ ವಡ್ಡೆಬೈಲ್‌ನ ಕೃಷ್ಣಾಜಿ ಪಾಟೀಲ, ಖಾನಾಪುರದ ದಿನಕರ ಪರಶರಾಮ ಮರಗಾಳೆ, ಸಿಂಗಿಂಕೊಪ್ಪ–ಇದಲಹೊಂಡದ ಕೃಷ್ಣ ಮಲ್ಲಪ್ಪ ಕುಂಭಾರ ಹಾಗೂ ಖಾನಾಪುರದ ವಿವೇಕ ರಾಮಚಂದ್ರ ಗಿರಿ ಅವರು ಅರ್ಜಿದಾರರಾಗಿದ್ದಾರೆ.

ನವೆಂಬರ್ 18ರಂದು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ

2026ರ ನವೆಂಬರ್ 18ರಂದು ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ಕೆ.ಎಸ್. ಭರತ್ ಕುಮಾರ್ ಅವರ ವಿಭಾಗೀಯ ಪೀಠದ ಮುಂದೆ ವಿಚಾರಣೆ ನಡೆಯಿತು.

ಅರ್ಜಿದಾರರ ಪರ ವಕೀಲರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲದ ಹಿನ್ನೆಲೆಯಲ್ಲಿ ಟೋಲ್ ವಸೂಲಿ ಹಿಂಪಡೆಯುವಂತೆ ಸಲ್ಲಿಸಿರುವ ಮನವಿಯನ್ನು ಪರಿಗಣಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಅರ್ಜಿದಾರರು ಈಗಾಗಲೇ ಸಂಬಂಧಪಟ್ಟ ಎಲ್ಲ ಪ್ರತಿವಾದಿಗಳಿಗೆ ಮನವಿ ಸಲ್ಲಿಸಿರುವುದನ್ನು ನ್ಯಾಯಾಲಯ ಗಮನಿಸಿತು.

ಕೇಂದ್ರ ಸರ್ಕಾರಕ್ಕೆ ಎರಡು ತಿಂಗಳ ಗಡುವು

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ ನ್ಯಾಯಾಲಯದ ಆದೇಶದ ಪ್ರತಿ ಸ್ವೀಕರಿಸಿದ ದಿನಾಂಕದಿಂದ ಎರಡು ತಿಂಗಳೊಳಗೆ ಸೂಕ್ತ ನಿರ್ಧಾರ ಕೈಗೊಂಡು ಆದೇಶ ಹೊರಡಿಸುವಂತೆ ಮೊದಲನೇ ಪ್ರತಿವಾದಿಯಾದ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಇದರೊಂದಿಗೆ ರಿಟ್ ಅರ್ಜಿಯನ್ನು ಇತ್ಯರ್ಥಪಡಿಸಲಾಯಿತು.

ಈಗ ಕೇಂದ್ರ ಸರ್ಕಾರದ ನಿರ್ಧಾರದತ್ತ ಸಾರ್ವಜನಿಕರ ಗಮನ!

ಗಣೇಬೈಲ್ ಟೋಲ್ ಪ್ಲಾಜಾದ ಟೋಲ್ ವಸೂಲಿ ವಿಷಯವು ಖಾನಾಪುರ ತಾಲ್ಲೂಕಿನ ವಾಹನ ಸವಾರರು ಮತ್ತು ಸ್ಥಳೀಯ ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಕೆ.ಪಿ. ಪಾಟೀಲ ಅವರ ಪ್ರತಿಭಟನೆಯಿಂದ ಆರಂಭವಾದ ಈ ಹೋರಾಟ ಇದೀಗ ಉಚ್ಚ ನ್ಯಾಯಾಲಯದ ನಿರ್ದೇಶನದ ಹಂತಕ್ಕೆ ತಲುಪಿದೆ.

ನ್ಯಾಯಾಲಯವು ಟೋಲ್ ವಸೂಲಿ ತಕ್ಷಣ ಸ್ಥಗಿತಗೊಳಿಸುವಂತೆ ನೇರ ಆದೇಶ ನೀಡಿಲ್ಲ. ಬದಲಾಗಿ ಟೋಲ್ ವಸೂಲಿ ಹಿಂಪಡೆಯುವಂತೆ ಸಲ್ಲಿಸಿರುವ ಮನವಿಯ ಕುರಿತು ಎರಡು ತಿಂಗಳೊಳಗೆ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಹೀಗಾಗಿ ಗಣೇಬೈಲ್ ಟೋಲ್ ಪ್ಲಾಜಾ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರತ್ತ ಖಾನಾಪುರ ತಾಲ್ಲೂಕಿನ ಜನರ ಗಮನ ನೆಟ್ಟಿದೆ.

Do Share

You may have missed

error: Content is protected !!
Call Us