1 ರಿಂದ ಜಾಗೃತಿ ಶ್ರೀ ಬಿಷ್ಟಮ್ಮ ದೇವಿ ಯಾತ್ರೆ ಮಹೋತ್ಸವ! ಪ್ರಾಣಿ ಬಲಿ ನಿಷೇಧ!
खानापूर लाईव्ह न्युज/ प्रतिनिधी!
खानापूर तालुक्यातील सुप्रसिद्ध जागृत देवस्थान श्री दृष्टम्मा देवीची यात्रा प्रति वर्षाप्रमाणे यावर्षीही उद्या एक ऑक्टोंबर ते २ ऑक्टोंबर या दरम्यान होत आहे. प्रति वर्षाप्रमाणे यावर्षीही कक्केरी येथील श्री बिष्टदेवी जत्रा महोत्सवात पशुबळी देण्यास मनाई आहे. ते. जागतिक प्राणी कल्याण मंडळ आणि पशुबलिदान निर्मूलन महासंघ, बसवधर्म ज्ञानपीठाचे अध्यक्ष दयानंद स्वामीजी यांनी भाविकांना आवाहन केले आहे.
जागतिक प्राणी कल्याण मंडळ आणि प्राणी बलिदान निर्मूलन जागरूकता महासंघाचे अध्यक्ष श्री दयानंद स्वामीजी यांनी कर्नाटक सरकार, बेळगाव जिल्हा प्रशासन तथा न्यायालयीन आदेशांनुसार कडक/व्यापक खबरदारीचे उपाय करण्याचे आवाहन केले आहे.
१ आणि २ ऑक्टोबर २०२५ रोजी बेळगाव जिल्ह्यातील खानापुर तालुक्यातील कक्केरी श्री बिष्टादेवी मेळ्यात मंदिरासमोर, आजूबाजूच्या परिसरात आणि रस्त्याच्या दोन्ही बाजूला, बाहेर आणि सार्वजनिक धार्मिक मेळाव्यादरम्यान कोणताही प्राणी बलिदान दिला जाणार नाही आणि मंदिरावर प्राणी फेकणे, प्राण्यांचे अवयव अर्पण करणे/प्रदर्शन करणे इत्यादी बेकायदेशीर कृत्ये केली जाणार नाहीत याची खात्री करावी.
या संदर्भात माननीय डीजीपी, एडीजीपी एल अँड ओ, बेळगाव जिल्हा डीसी आणि एसपी यांना आधीच लेखी विनंती सादर करण्यात आली आहे आणि माननीय जिल्हाधिकाऱ्यांनी या संदर्भात आदेशही जारी केले आहेत.
प्राणीदया संघटनेचे स्वामीजी म्हणतात…
प्राण्यांचे बलिदान हे क्रूर, अंधश्रद्धाळू, पर्यावरण प्रदूषित करणारे आणि कायदा आणि धर्माच्या विरुद्ध आहे, म्हणून, स्वामीजींनी भाविकांना पशुबलिदान सोडून अहिंसक सात्त्विक पूजा करावी. मंदिरे कत्तलखाने बनू नयेत तर दैवी स्थळे बनू नयेत, जत्रेतील धार्मिक स्थळे कसायांचे अड्डे बनू नयेत, ते जीव घेणारे मृत्यूचे खड्डे बनू नयेत, ते प्राण्यांच्या क्रूरतेपासून आणि दारू आणि ड्रग्जपासून मुक्त असले पाहिजेत, ते अहिंसा, करुणा, प्रेम, जीवनाबद्दल दया, मानवता, अध्यात्म इत्यादी चांगल्या मूल्यांचे शिक्षण देणारे दैवी स्थळे बनली पाहिजेत, ते भक्ती, ज्ञान आणि सत्कर्मांचे संगम बनले पाहिजेत, या संदर्भात, भक्त, समाज, मंदिर व्यवस्थापन मंडळ, सरकार आणि वृत्तमाध्यमांनी काम केले पाहिजे. असे प्राणी दया संघटनेचे स्वामीजी दयानंद स्वामी यांनी आवाहन केले आहे.
अहिंसा प्राणि दया अध्यात्म संदेश यात्रा:
पशुबळी प्रतिबंधासंदर्भातील ही अहिंसा प्राणि दया अध्यात्म संदेश यात्रा जागतिक प्राणी कल्याण मंडळ, पशु-प्राणि बाली निर्मूलन जागृती महासंघ, बसव धर्म ज्ञान पीठ यांनी २९ सप्टेंबर ते २ ऑक्टोबर दरम्यान कक्केरी मेळा परिसर, खानापूर, बेळगाव शहर आणि जिल्ह्यातील गावांमध्ये पशुबळी प्रतिबंधाबाबत जागरूकता निर्माण करण्यासाठी आयोजित केली आहे.
ಖಾನಾಪುರ ತಾಲೂಕಿನ ಕಕ್ಕೇರಿಯ ಶ್ರೀ ಬಿಷ್ಟಾದೇವಿ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿ ಬಲಿ ನೀಡುವುದು ನಿಷೇಧಿಸಲಾಗಿದೆ. ಎಂದು. ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು ಪ್ರಾಣಿ ಬಲಿ ನಿರ್ಮೂಲನ ಮಹಾಸಂಘ, ಬಸವಧರ್ಮ ಜ್ಞಾನಪೀಠ ಅಧ್ಯಕ್ಷ ದಯಾನಂದ ಸ್ವಾಮೀಜಿ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ದಿನಾಂಕ 1 ಮತ್ತು 2 ಅಕ್ಟೋಬರ್ 2025 ರ ಆಯುಧ ಪೂಜೆ ಮತ್ತು ವಿಜಯದಶಮಿಯಂದು ನಡೆಯಲಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಶ್ರೀ ಬಿಷ್ಟಾದೇವಿ ಜಾತ್ರೆಯಲ್ಲಿ ದೇವಾಲಯದ ಮುಂಭಾಗ, ಸುತ್ತಮುತ್ತಲಿನ ಪರಿಸರ, ಹಾಗು ರಸ್ತೆಯ ಇಕ್ಕೆಲಗಳಲ್ಲಿ, ಹೊರವಲಯ ಹಾಗೂ ಸಾರ್ವಜನಿಕ ಧಾರ್ಮಿಕ ಸಮಾವೇಶದಲ್ಲಿ ಯಾವುದೇ ಪ್ರಾಣಿಗಳ ಬಲಿ ನಡೆಯದಂತೆ ಹಾಗೂ ದೇವಾಲಯದ ಮೇಲೆ ಪ್ರಾಣಿಗಳ ತೂರಾಟ, ಪ್ರಾಣಿಗಳ ಅಂಗಾಗ ನೈವೇದ್ಯ ಸಲ್ಲಿಕೆ/ಪ್ರದರ್ಶನ ಇತ್ಯಾದಿ ಕಾನೂನು ಬಾಹಿರ ಕೃತ್ಯಗಳು ಜರುಗದಂತೆ 1959ರ ಕರ್ನಾಟಕ ಪ್ರಾಣಿಬಲಿಗಳ ಪ್ರತಿಬಂಧಕ ಅಧಿನಿಯಮ ಹಾಗೂ 1963 ಮತ್ತು 1975 ರ ನಿಯಮಗಳ ಪ್ರಕಾರ ಮತ್ತು ರಾಜ್ಯ ಹೈಕೋರ್ಟ್ ಆದೇಶದಂತೆ ಕಟ್ಟುನಿಟ್ಟಿನ/ ವ್ಯಾಪಕ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು ಪ್ರಾಣಿಬಲಿ ನಿರ್ಮೂಲನ ಜಾಗೃತಿ ಮಹಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ಸ್ವಾಮೀಜಿಯವರು ಕರ್ನಾಟಕ ಸರ್ಕಾರ, ಬೆಳಗಾವಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ಈ ಕುರಿತು ಈಗಾಗಲೇ ಮಾನ್ಯ DGP, ADGP L&O, ಬೆಳಗಾವಿ ಜಿಲ್ಲಾ DC ಮತ್ತು SP ಯವರಿಗೆ ಲಿಖಿತ ಮನವಿ ಸಲ್ಲಿಸಲಾಗಿದ್ದು ಮಾನ್ಯ ಜಿಲ್ಲಾಧಿಕಾರಿಗಳು ಈ ಕುರಿತು ಆದೇಶವನ್ನೂ ಹೊರಡಿಸಿದ್ದಾರೆ.
ಪ್ರಾಣಿಬಲಿಯು ಅನಾಗರೀಕವು ಅಂಧಶ್ರದ್ಧೆಯೂ, ಪರಿಸರ ಮಾಲಿನ್ಯಕಾರಕ ಆಗಿದ್ದು ಇದು ಕಾನೂನು ಮತ್ತು ಧರ್ಮ ವಿರೋಧಿ ಆಗಿದೆ, ಆದರಿಂದ ಭಕ್ತಾದಿಗಳು ಪ್ರಾಣಿಬಲಿ ತ್ಯಜಿಸಿ ಅಹಿಂಸಾತ್ಮಕವಾಗಿ ಸಾತ್ವಿಕ ಪೂಜೆ ಸಲ್ಲಿಸಬೇಕು ಎಂದು ಸ್ವಾಮೀಜಿ ಭಕ್ತರಲ್ಲಿ ವಿನಂತಿಸಿದ್ದಾರೆ. ದೇವಾಲಯಗಳು ವಧಾಲಯಗಳಾಗದೆ ದಿವ್ಯಾಲಯವಾಗಬೇಕು, ಜಾತ್ರಾ ಪರಿಸರಗಳ ಧಾರ್ಮಿಕ ಸ್ಥಾನಗಳು ಕಟುಕರ ಕೇರಿಗಳಾಗಬಾರದು, ಜೀವ ತೆಗೆಯುವ ಮೃತ್ಯು ಕೂಪವಾಗಬಾರದು, ಪ್ರಾಣಿಹಿಂಸೆ ಮತ್ತು ಮದ್ಯ, ಮಾದಕ ಪದಾರ್ಥಗಳಿಂದ ಮುಕ್ತವಾಗಿರಬೇಕು, ಅಹಿಂಸೆ ಕರುಣೆ, ಪ್ರೇಮ, ಜೀವದಯೆ, ಮಾನವೀಯತೆ, ಆಧ್ಯಾತ್ಮಿಕತೆ ಮುಂತಾದ ದಿವ್ಯ ಮೌಲ್ಯಗಳನ್ನು ಸಾರುವ ಸುಸಂಸ್ಕಾರ ನೀಡುವ ದಿವ್ಯ ಧಾಮಗಳಾಗಬೇಕು, ಸಧ್ಬಕ್ತಿ, ಸುಜ್ಞಾನ ಮತ್ತು ಸದಾಚಾರಗಳ ತ್ರಿವೇಣಿ ಸಂಗಮವಾಗಬೇಕು, ಈ ಹಿನ್ನೆಲೆಯಲ್ಲಿ ಭಕ್ತಾದಿಗಳು, ಸಮಾಜ, ದೇವಾಲಯದ ಆಡಳಿತ ಮಂಡಳಿ ಹಾಗೂ ಸರ್ಕಾರ ಮತ್ತು ಸುದ್ದಿ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಅಹಿಂಸಾ ಪ್ರಾಣಿ ದಯಾ ಆಧ್ಯಾತ್ಮ ಸಂದೇಶ ಯಾತ್ರೆ :
ಈ ಪ್ರಾಣಿಬಲಿ ತಡೆ ಕುರಿತು ಅಹಿಂಸಾ ಪ್ರಾಣಿ ದಯಾ ಅಧ್ಯಾತ್ಮ ಸಂದೇಶಯಾತ್ರೆಯನ್ನು ಕಕ್ಕೇರಿಯ ಜಾತ್ರಾ ಪರಿಸರದ ಸುತ್ತಮುತ್ತಲಿನ ಊರುಗಳು, ಖಾನಾಪುರ, ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಪ್ರಾಣಿಬಲಿ ತಡೆ ಕುರಿತು ಜಾಗೃತಿ ಮೂಡಿಸಲು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ, ಪಶು-ಪ್ರಾಣಿ ಬಲಿ ನಿರ್ಮೂಲನಾ ಜಾಗೃತಿ ಮಹಾಸಂಘ, ಬಸವ ಧರ್ಮ ಜ್ಞಾನ ಪೀಠವು ಸೆಪ್ಟಂಬರ್ 29 ರಿಂದ ಅಕ್ಟೋಬರ್ 2 ರ ತನಕ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಕುರಿತು ಜಿಲ್ಲಾಡಳಿತವು ಹೈ ಕೋರ್ಟ್ ಆದೇಶದಂತೆ ಪ್ರಾಣಿಬಲಿ ತಡೆ ಬಗ್ಗೆ ಕಕ್ಕೇರಿ ಮತ್ತು ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.