Jamboti : गावाकडच्या दिवाळीच्या भेटीची आस अधुरीच! वाटेतच काळाचा घाला!!ದೀಪಾವಳಿಗೆ ಮನೆಗೆ ಹೋಗಬೇಕೆಂಬ ಹಂಬಲ ಈಡೇರಲಿಲ್ಲ! ದಾರಿ ಮಧ್ಯೆಯೇ ವಿಧಿಯಾಟ ಕ್ರೂರವಾಗಿ ಅಪ್ಪಳಿಸಿತು!!
.
गावाकडच्या दिवाळीच्या भेटीची आस अधुरीच! वाटेतच काळाचा घाला!!
जांबोटी-कालमनी मार्गावरील भटवाडा क्रॉसजवळ टुरिस्ट बस आणि दुचाकीची भीषण धडक; ढोकेगाळीच्या महेश मादार यांचा जागीच मृत्यू
खानापूर / प्रतिनिधी : दिवाळीच्या सणानिमित्त गावाकडे येऊन कुटुंबीयांकडून आरती ओवाळून घेण्याची आस मनात बाळगून गोव्याहून खानापूरच्या दिशेने दुचाकीवरून येणाऱ्या एका युवकावर काळाने घाला घातला. गोवा टुरिस्ट बस आणि दुचाकी यांच्यात झालेल्या भीषण धडकेत दुचाकीस्वार युवकाचा जागीच मृत्यू झाल्याची हृदयद्रावक घटना रविवारी सकाळी जांबोटी-कालमनी मार्गावरील भटवाडा क्रॉसजवळ घडली.
या अपघातात मृत्यू झालेल्या युवकाचे नाव महेश परशराम मादार (रा. ढोकेगाळी, ता. खानापूर) असे असल्याचे समजते. दिवाळीच्या निमित्ताने गावाकडे येत असताना त्यांच्यावर काळाने झडप घातल्याने त्यांच्या कुटुंबीयांवर दुःखाचा डोंगर कोसळला आहे.
अपघात घडला त्यावेळी त्याच मार्गावरून जात असलेले काँग्रेसचे नेते दीपक कवठणकर यांनी तातडीने घटनास्थळी धाव घेत महेश मादार यांचे प्राण वाचविण्यासाठी प्रयत्न केले. त्यांनी त्वरित आरोग्य रुग्णवाहिकेला पाचारण केले. मात्र, सर्व प्रयत्नांपूर्वीच महेश यांचा मृत्यू झाला होता. जांबोटी आऊटपोस्ट पोलिसांनी घटनास्थळी भेट देऊन पंचनामा केला.
जांबोटी मार्ग बनतोय अपघातांचा सापळा!
जांबोटी परिसरातील वळणदार रस्त्यांवर सुसाट वेगाने धावणाऱ्या वाहनांमुळे अपघातांचे प्रमाण वाढत असल्याची चिंता व्यक्त होत आहे. विशेषतः अरुंद व धोकादायक वळणांवर वाहनांचा वेग नियंत्रित होत नसल्याने वारंवार अपघात घडत आहेत. या मार्गावर वेगमर्यादा, आवश्यक सूचना फलक आणि अपघातप्रवण ठिकाणी सुरक्षिततेच्या उपाययोजना करण्याची गरज निर्माण झाली आहे.
दिवाळीच्या आनंदात आपल्या गावाकडे परतणाऱ्या महेश मादार यांचा प्रवास मृत्यूने संपवल्याने ढोकेगाळी गावासह संपूर्ण खानापूर तालुक्यात शोककळा पसरली आहे. सणासुदीच्या काळात घडलेल्या या दुर्दैवी घटनेमुळे सर्वत्र हळहळ व्यक्त होत आहे.
ದೀಪಾವಳಿ ಹಬ್ಬಕ್ಕೆ ಊರಿಗೆ ಬರುತ್ತಿದ್ದ ಯುವಕನ ಬಾಳಲ್ಲಿ ವಿಧಿಯ ಕ್ರೂರ ಆಟ! ಮಾರ್ಗಮಧ್ಯೆಯೇ ದಾರುಣ ಸಾವು!
ಜಾಂಬೋಟಿ–ಕಾಲಮನಿ ರಸ್ತೆಯ ಭಟವಾಡಾ ಕ್ರಾಸ್ ಬಳಿ ಪ್ರವಾಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ; ಧೋಕೆಗಾಳಿ ಗ್ರಾಮದ ಮಹೇಶ್ ಮಾದಾರ ಸ್ಥಳದಲ್ಲೇ ಸಾವು!
ಖಾನಾಪುರ / ಪ್ರತಿನಿಧಿ : ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಕುಟುಂಬದವರನ್ನು ಭೇಟಿಯಾಗಿ ಆರತಿ ಮಾಡಿಸಿಕೊಳ್ಳುವ ಆಸೆಯಿಂದ ಗೋವಾದಿಂದ ಸ್ವಗ್ರಾಮಕ್ಕೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಯುವಕನ ಬಾಳಲ್ಲಿ ವಿಧಿ ಕ್ರೂರ ಆಟವಾಡಿದೆ. ಗೋವಾ ಪ್ರವಾಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ಭಾನುವಾರ ಬೆಳಿಗ್ಗೆ ಖಾನಾಪುರ ತಾಲೂಕಿನ ಜಾಂಬೋಟಿ–ಕಾಲಮನಿ ರಸ್ತೆಯ ಭಟವಾಡಾ ಕ್ರಾಸ್ ಸಮೀಪ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಖಾನಾಪುರ ತಾಲೂಕಿನ ಧೋಕೆಗಾಳಿ ಗ್ರಾಮದ ನಿವಾಸಿ ಮಹೇಶ್ ಪರಶರಾಮ ಮಾದಾರ ಎಂದು ಗುರುತಿಸಲಾಗಿದೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗೋವಾದಿಂದ ತನ್ನ ಸ್ವಗ್ರಾಮಕ್ಕೆ ತೆರಳುತ್ತಿದ್ದ ಮಹೇಶ್ ಅವರ ದ್ವಿಚಕ್ರ ವಾಹನಕ್ಕೆ ಗೋವಾ ಪ್ರವಾಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಗಾಯಾಳುವಿನ ಜೀವ ಉಳಿಸಲು ದೀಪಕ್ ಕವಠಣಕರ ಪ್ರಯತ್ನ
ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಕಾಂಗ್ರೆಸ್ ಮುಖಂಡ ದೀಪಕ್ ಕವಠಣಕರ ಅವರು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಯುವಕನ ಜೀವ ಉಳಿಸಲು ಪ್ರಯತ್ನಿಸಿದರು. ಕೂಡಲೇ ಆಂಬ್ಯುಲೆನ್ಸ್ಗೆ ಕರೆ ಮಾಡಿ ವೈದ್ಯಕೀಯ ನೆರವು ಒದಗಿಸಲು ಮುಂದಾದರು. ಆದರೆ ಅಷ್ಟರಲ್ಲಾಗಲೇ ಮಹೇಶ್ ಅವರು ಕೊನೆಯುಸಿರೆಳೆದಿದ್ದರು.
ಘಟನೆಯ ಮಾಹಿತಿ ತಿಳಿದು ಜಾಂಬೋಟಿ ಪೊಲೀಸ್ ಹೊರಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪಂಚನಾಮೆ ಕೈಗೊಂಡಿದ್ದಾರೆ.
ಅಪಘಾತಗಳ ತಾಣವಾಗುತ್ತಿರುವ ಜಾಂಬೋಟಿ ರಸ್ತೆ!
ಜಾಂಬೋಟಿ–ಕಾಲಮನಿ ಮಾರ್ಗದಲ್ಲಿ ಅಪಾಯಕಾರಿ ತಿರುವುಗಳು ಹೆಚ್ಚಾಗಿದ್ದು, ಅತಿವೇಗದಲ್ಲಿ ಸಂಚರಿಸುವ ವಾಹನಗಳಿಂದ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ ಎಂಬ ಆತಂಕ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.
ವಿಶೇಷವಾಗಿ ತಿರುವುಗಳಿರುವ ಪ್ರದೇಶಗಳಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳು, ವೇಗ ನಿಯಂತ್ರಣ ವ್ಯವಸ್ಥೆ ಹಾಗೂ ರಸ್ತೆ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹಬ್ಬದ ಸಂಭ್ರಮದ ಬದಲು ಗ್ರಾಮದಲ್ಲಿ ಶೋಕದ ಛಾಯೆ!
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಕುಟುಂಬದವರೊಂದಿಗೆ ಸಂತೋಷ ಹಂಚಿಕೊಳ್ಳಲು ಊರಿಗೆ ಬರುತ್ತಿದ್ದ ಮಹೇಶ್ ಮಾದಾರ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಹಬ್ಬದ ಸಂತೋಷದಲ್ಲಿರಬೇಕಾದ ಧೋಕೆಗಾಳಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದ್ದು, ಈ ದುರ್ಘಟನೆಯಿಂದ ಖಾನಾಪುರ ತಾಲೂಕಿನಾದ್ಯಂತ ತೀವ್ರ ಸಂತಾಪ ವ್ಯಕ್ತವಾಗಿದೆ.