Screenshot_20231013_201406

खानापुर लाईव्ह न्युज /प्रतिनिधी :

  • एका मोठ्या कारवाईत कुख्यात वाघिणीचा शिकारी चिका अलियास उर्फ ​​कृष्कापट्टी पवार याला बेळगाव वनविभागाच्या वन अधिकाऱ्यांनी अटक केली आहे. या वर्षी जुलै महिन्यात बेळगाव विभागातील खानापूर तालुक्यातील जळगा, खानापूर प्रादेशिक वनपरिक्षेत्रात चंदनाच्या झाडांची चोरी झाली होती, या प्रकरणाची गंभीर दखल घेत खानापूर उपविभागाच्या वनाधिकाऱ्यांनी आरोपीचा शोध घेण्यासाठी सापळा रचला होता. काही दिवसांपूर्वी बेळगावी शहरातील कणबर्गी जवळील कलखांब येथे आरोपी लपून बसल्याची खात्रीलायक माहितीच्या आधारे खानापुर झोन अधिकारी व कर्मचाऱ्यांच्या पथकाने एका मंडपावर छापा टाकला असता मंडपातून चंदनाचे तुकडे व धारदार शस्त्रे जप्त करून एकाला अटक केली. ताब्यात घेतलेला हा मूळचा मध्य प्रदेशातील दामू जिल्ह्यातील सगुणी येथील असल्याचा संशय आल्याने खानापूर उपविभागाचे सहायक वनसंरक्षक डॉ.संतोष चव्हाण यांच्या नेतृत्वाखालील पथकाने त्याची चौकशी केली. आरोपी हा कुख्यात वाघ शिकारी असल्याची माहिती वन खात्याला मिळाली आहे, त्याच्यावर महाराष्ट्र राज्यातील अमरावती जिल्ह्यातील मेळघाट जंगलात वाघ आणि अस्वलांच्या शिकारीचे गुन्हे दाखल आहेत. महाराष्ट्रात अमरावती जिल्ह्यात यापूर्वी वाघ अस्वले यांची शिकार करणाऱ्या मयत कुख्यात संसा चांद साखळीतील हा सदस्य असल्याचे समजते.
  • सदर कारवाई बेळगाव जिल्हा मुख्य वनसंरक्षक मंजुनाथ चव्हाण यांच्या मार्गदर्शनाखाली बेळगाव विभागाचे उप वनसंरक्षक शंकर कल्लोळी, खानापूर उपविभागाचे सहाय्यक वनसंरक्षक संतोष चव्हाण, नागराज बाळेहोसूर, परिमंडळ वनविभागाचे मुख्य वनसंरक्षक डॉ. खानापूर प्रादेशिक वनपरिक्षेत्राचे अधिकारी व वनविभागाचे वरिष्ठ अधिकारी , रांष्ट्रीय व्याघ्र संवर्धन प्राधिकरणाचे महानिरीक्षक वन विभाग आणि महाराष्ट्र राज्याच्या वन्यजीव गुन्हे नियंत्रण ब्युरोशी संवाद साधून लवकरच अहवाल सादर करतील.
  • ಖಾನಾಪುರ:ಮಹತ್ವದ ಕಾರ್ಯಾಚರಣೆಯಲ್ಲಿ ಕುಖ್ಯಾತ ಹುಲಿ ಬೇಟೆಗಾರ ಚಿಕಾ ಅಲಿಯಾಸ್‌ ಕೃಷ್ಕಾ ಪಟ್ಟೆ ಪವಾರ್‌ ಎಂಬುವವನನ್ನು ಬೆಳಗಾವಿ ಅರಣ್ಯ ವಿಭಾಗದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಇದೇ ವರ್ಷ ಜುಲೈ ತಿಂಗಳಿನಲ್ಲಿ ಬೆಳಗಾವಿ ವಿಭಾಗದ ಖಾನಾಪುರ ತಾಲೂಕಿನ ಖಾನಾಪುರ ಪ್ರಾದೇಶಿಕ ಅರಣ್ಯ ವಲಯದ ಜಳಗಾ ಎಂಬಲ್ಲಿ ಶ್ರೀಗಂಧ ಮರಗಳ ಕಳ್ಳತನವಾಗಿತ್ತು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಖಾನಾಪೂರ ಉಪ ವಿಭಾಗದ ಅರಣ್ಯಾಧಿಕಾರಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕೆಲ ದಿನಗಳ ಹಿಂದೆ ಆರೋಪಿಗಳು ಬೆಳಗಾವಿ ನಗರದ ಕಣಬರ್ಗಿ ಬಳಿಯ ಕಲಕಾಂಬ ಬಳಿ ಅಡಗಿದ್ದರೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಖಾನಾಪೂರ ವಲಯದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಟೆಂಟ್ ಒಂದರ ಮೇಲೆ ದಾಳಿ ನಡೆಸಿದಾಗ ಟೆಂಟಿನಲ್ಲಿ ಶ್ರೀಗಂಧ ತುಂಡುಗಳು ಹಾಗೂ ಹರಿತವಾದ ಆಯುಧಗಳನ್ನು ವಶಪಡಿಸಿಕೊಂಡಿತ್ತು ಹಾಗೂ ವ್ಯಕ್ತಿಯೋರ್ವನನ್ನು ಬಂಧಿಸಿದ್ದರು. ಬಂಧಿತನು ಮೂಲತಃ ಮಧ್ಯಪ್ರದೇಶದವನೆಂದು ತಿಳಿದು ಅನುಮಾನಗೊಂಡು ತೀವು ವಿಚಾರಣೆ ನಡೆಸಿದ ಖಾನಾಪೂರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ ಸಂತೋಷ್ ಚವ್ಹಾಣ್‌ ರವರ ನೇತೃತ್ವದ ತಂಡ ಬಂಧಿತನು ಮಧ್ಯಪ್ರದೇಶದ ದಾಮೋ ಜಿಲ್ಲೆಯ ಸಗೋನಿ ಗ್ರಾಮದ ಚಿಕಾ ಅಲಿಯಾಸ್‌ ಕೃಷ್ಮಾ ವಟ್ಟೆಸವಾ‌ ಎಂದೂ ಹಾಗೂ ಈತ ದೇಶದ ಕುಖ್ಯಾತ ಹುಲಿ ಬೇಟೆಗಾರ ಎಂಬುದು ಗೊತ್ತಾಗಿದೆ. ಆರೋಪಿತನ ಮೇಲೆ ಈಗಾಗಲೇ ಮಹಾರಾಷ್ಟ್ರ, ರಾಜ್ಯದ ಅಮರಾವತಿ, ಜಿಲ್ಲೆಯ ಮೇಲಘಾಟ್ ಅರಣ್ಯದಲ್ಲಿ ಹುಲಿ, ಕರಡಿಗಳನ್ನು ಬೇಟೆಯಾಡಿರುವ ಪ್ರಕರಣಗಳಿವ ಹಾಗೂ ಕೆಲ ವರ್ಷಗಳ ಹಿಂದೆ ಮೃತಪಟ್ಟ ಕುಖ್ಯಾತ ಹುಲಿ ಬೇಟೆಗಾರ ಸಂಸಾ‌ ಚಂದ್‌ ತಂಡದ ಸದಸ್ಯವೆಂದು ಗೊತ್ತಾಗಿದೆ.
  • ಈ ಕಾರ್ಯಾಚರಣೆಯನ್ನು ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ್ ಚವ್ಹಾಣ್ ರವರ ಮಾರ್ಗದರ್ಶನದಲ್ಲಿ ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಂಕರ್‌ ಕಲ್ಲೋಳಿಕರ್ ರವರ ನೇತೃತ್ವದಲ್ಲಿ, ಖಾನಾಪೂರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಂತೋಷ್ ಚವ್ಹಾಣ್, ಖಾನಾಪೂರ ಪ್ರಾದೇಶಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿ ನಾಗರಾಜ್‌ ಬಾಲೇಹೊಸೂರ್ ಹಾಗೂ ಸಿಬ್ಬಂದಿಗಳ ನೇತೃತ್ವದ ತಂಡ ನಡೆಸಿದ್ದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸಿಸಿರುತ್ತಾರೆ.
  • ಸದರಿ ಪ್ರಕರಣದ ಕುರಿತು ಮಹಾರಾಷ್ಟ್ರ ರಾಜ್ಯದ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಅಪರಾಧ ನಿಯಂತ್ರಣ ಬ್ಯೂರೋ ಜೊತೆಗೆ ಸಂವಹನ ಸಾಧಿಸಿ ವಿವರವಾದ ತನಿಖೆ ನಡೆಸುವಂತೆ ಹಾಗೂ ಶೀಘ್ರ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಉಪ ಅರಣ, ಮಹಾ ನಿರೀಕ್ಷಕ ರಾಜೇಂದ್ರ ಗಾರವಾಡ ರವರು ಸಹ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸೂಚಿಸಿದ್ದು ಹಿರಿಯ ಅಧಿಕಾರಿಗಳ ಸೂಚನೆ ಹಾಗೂ ಮಾರ್ಗದರ್ಶನದ ಮೇರೆಗೆ ವಿಚಾರಣೆ ಪ್ರಗತಿಯಲ್ಲಿರುತ್ತದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Do Share

Leave a Reply

Your email address will not be published. Required fields are marked *

error: Content is protected !!
Call Us