IMG_20240729_214903

ಖಾನಾಪುರ: ತಾಲ್ಲೂಕಿನ ದೇವರಾಯಿ ಗ್ರಾಮದ ಬಳಿ ಸೋಮವಾರ ಸಂಜೆ ದನಗಳನ್ನು ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದ ವೃದ್ಧ ರೈತನ ಮೇಲೆ ಕರಡಿಯೊಂದು ದಾಳಿ ನಡೆಸಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ರಾಮದ ರೈತ ನಾರಾಯಣ ಚೌರಿ (65) ಅವರ ಮೇಲೆ ಹಿಂದಿನಿಂದ ದಾಳಿ ನಡೆಸಿದ ಕರಡಿ ಅವರ ಬೆನ್ನು ಮತ್ತು ಮೈಮೇಲೆ ಪರಚಿ ಗಾಯಗೊಳಿಸಿದೆ.

खानापुर : तालुक्यातील देवराई गावाजवळ सोमवारी सायंकाळी गुरे चारून घरी परतणाऱ्या एका वृद्ध शेतकऱ्यावर अस्वलाने हल्ला केल्याने तो गंभीर जखमी झाला. अस्वलाने गावातील शेतकरी नारायण चवरी (65) यांच्यावर मागून हल्ला करून त्यांच्या पाठीला व डोक्याला दुखापत केली.

ನಾಗರಗಾಳಿ ಅರಣ್ಯ ವ್ಯಾಪ್ತಿಯ ದೇವರಾಯಿ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು, ನಾರಾಯಣ ಅವರ ಚೀರಾಟ ಕೇಳಿದ ಗ್ರಾಮದ ಜನರು ಅವರ ಬಳಿ ಬರುತ್ತಿರುವುದನ್ನು ಗಮನಿಸಿದ ಕರಡಿ ಅವರನ್ನು ಬಿಟ್ಟು ಅರಣ್ಯದಲ್ಲಿ ಮರೆಯಾಗಿದೆ. ಗಾಯಗೊಂಡ ನಾರಾಯಣ ಅವರನ್ನು ಗ್ರಾಮಸ್ಥರು ಖಾಸಗಿ ವಾಹನದಲ್ಲಿ ನಂದಗಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ಮಾಹಿತಿ ಪಡೆದ ಎ.ಸಿ.ಎಫ್ ಸುನೀತಾ ನಿಂಬರಗಿ ಮತ್ತು ಆರ್.ಎಫ್.ಒ ನಾಗರಾಜ ಬಾಳೆಹೊಸೂರ ನಂದಗಡ ಆಸ್ಪತ್ರೆಗೆ ಭೇಟಿ ನೀಡಿ ಮುಂದಿನ ಚಿಕಿತ್ಸೆಗಾಗಿ ನಾರಾಯಣ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

ही घटना नागरगाळी वनपरिक्षेत्रातील देवराई गावाजवळ घडली, अस्वलाच्या हल्ल्यामुळे जखमी नारायणा यांनी जोरजोरात आरडाओरड केले. काही ग्रामस्थांनी आवाज ऐकून जंगलाच्या दिशेने धाव घेतली तर तेथे अस्वल दिसले. ग्रामस्थ तास जंगलात त्या अस्वलाने पलायन केले. जखमी नारायणला ग्रामस्थांनी खासगी वाहनातून नंदगड येथील सामुदायिक आरोग्य केंद्रात दाखल करून प्राथमिक उपचार केले. घटनेची माहिती मिळताच एसीएफ सुनीता निंबर्गी आणि आरएफओ नागराज बालेहोसूर यांनी नंदगड रुग्णालयात जाऊन नारायणला पुढील उपचारासाठी बेळगाव जिल्हा रुग्णालयात पाठवले.

Do Share

Leave a Reply

Your email address will not be published. Required fields are marked *

error: Content is protected !!
Call Us