खानापुर लाईव्ह न्युज /प्रतिनिधी : अल्पवयीन मुलीशी लग्न केल्याच्या आरोपावरून पतीला अटक करून बालविकास प्रकल्प अधिकाऱ्यांनी सदर अल्पवयीन मुलीची घरातून सुटका करून तिला जिल्हा बाल संरक्षण अधिकाऱ्यांच्या ताब्यात दिल्याची माहिती खानापूर महिला आणि बाल कल्याण खात्याच्या अधिकारानी मंगळवारी मिळाली.
“तालुक्यातील हिरेमुनवळी गावातील 24 वर्षीय तरुण मंजुनाथ नामक विवाहित व्यक्तीचे नाव आहे. मंजुनाथचा विवाह जवळच्याच एका गावातील 15 वर्ष 8 महिन्यांच्या अल्पवयीन मुलीशी 26 मे रोजी झाला होता. सदर विवाहित मुलगी पतीच्या घरी राहत असल्याची तक्रार आल्याने सोमवारी संबंधित खात्याचे अधिकाऱ्यांनी घरी जाऊन मुलीला ताब्यात घेतले. विवाहित मुलगी अल्पवयीन असल्याने त्या संदर्भात खानापूर महिला आणि बालकल्याण खात्याकडे तक्रार दाखल करण्यात आली होती. त्यानुसार सदरचा तपास करून पोलिसांनी आरोपी पतीसह त्याच्या कुटुंबीयांना बेळगाव जिल्हा बाल संरक्षण कार्यालयात आणले आहे. व त्यांची चौकशी सुरू असल्याचे खानापूर महिला आणि बालकल्याण खात्याचे अधिकारी चंद्रशेखर सुखसारे यांनी माहिती दिली.
ಬಾಲ್ಯವಿವಾಹದ ಕುರಿತು ದೂರು: ಗಂಡನ ಮನೆಯಲ್ಲಿದ್ದ ಅಪ್ರಾಪ್ತ ಬಾಲಕಿಯ ರಕ್ಷಣೆ
ಖಾನಾಪುರ: ಅಪ್ರಾಪ್ತ ಬಾಲಕಿಯನ್ನು ಮದುವೆಯಾದ ಆರೋಪದಡಿ ಆಕೆಯ ಪತಿಯನ್ನು ವಶಕ್ಕೆ ಪಡೆದಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆತನ ಮನೆಯಲ್ಲಿದ್ದ ಬಾಲಕಿಯನ್ನು ರಕ್ಷಿಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ವಶಕ್ಕೆ ನೀಡಿದ ಘಟನೆ ಮಂಗಳವಾರ ವರದಿಯಾಗಿದೆ.
“ತಾಲ್ಲೂಕಿನ ಹಿರೇಮುನವಳ್ಳಿ ಗ್ರಾಮದ 24 ವರ್ಷದ ಯುವಕ ಮಂಜುನಾಥ ಡೂಗನವರ ವಶಕ್ಕೆ ಪಡೆದ ಪತಿ. ಮಂಜುನಾಥ ಅವರ ವಿವಾಹ ಹಿರೇಮುನವಳ್ಳಿಯ ಪಕ್ಕದ ಗ್ರಾಮವೊಂದರ 15 ವರ್ಷ 8 ತಿಂಗಳು ವಯಸ್ಸಿನ ಬಾಲಕಿಯ ಜೊತೆ ಕಳೆದ ಮೇ.26ರಂದು ನೆರವೇರಿತ್ತು. ಮದುವೆಯ ಬಳಿಕ ಬಾಲಕಿ ತನ್ನ ಪತಿಯ ಮನೆಯಲ್ಲಿ ವಾಸಿಸುತ್ತಿದ್ದರು. ಅಪ್ರಾಪ್ತ ವಯೋಮಾನದ ಬಾಲಕಿಯ ವಿವಾಹದ ಬಗ್ಗೆ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ದೂರು ದಾಖಲಾಗಿದ್ದರಿಂದ ಬಾಲಕಿ ಇದ್ದ ಹಿರೇಮುನವಳ್ಳಿಗೆ ಭೇಟಿ ನೀಡಿದ ಅಧಿಕಾರಿಗಳು ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಪತಿ ಮತ್ತು ಆತನ ಮನೆಯವರನ್ನು ಬೆಳಗಾವಿಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ವಿಚಾರಣೆಗೆ ಕರೆದುಕೊಂಡು ಬರಲಾಗಿದೆ. ಈ ಬಾಲ್ಯವಿವಾಹದ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ತನಿಖೆ ಪೂರ್ಣಗೊಂಡ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು” ಎಂದು ಖಾನಾಪುರ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಂದ್ರಶೇಖರ ಸುಖಸಾರೆ ತಿಳಿಸಿದ್ದಾರೆ.