खानापूर लाईव्ह न्युज प्रतिनिधी
खानापूर तालुक्यात गेल्या आठवड्याभरात झालेल्या धुवाधार पावसामुळे आतापर्यंत 64 घरांची पडझड झाली असून त्यामध्ये दोन घरे पूर्णतः कोसळली आहेत. तर तालुक्यातील प्राथमिक शाळेची इमारत कोसळली असून यामध्ये तीन खोल्यांचे मोठे नुकसान झाले आहे.
खानापूर तालुक्यात यावर्षी गेल्या आठवड्याभरात झालेल्या मोठ्या पावसामुळे जवळपास 64 घरांची पडझड झाल्याची नोंद तहसीलदार कार्यालयात झाली आहे. यापैकी भरूनकी या ठिकाणी दोन घरांचे मोठे नुकसान झाले असून त्या दोन्ही घर मालकांना प्रत्येकी 1.20 हजार रुपये अर्थसहाय्य दोनच दिवसापूर्वी पालकमंत्री सतीश जारकिहोळी यांच्या हस्ते सदर पिढीताना धनादेश देण्यात आला. त्याचप्रमाणे खानापूर तालुक्यात उर्वरित पडझड झालेल्या घरांच्या साठी देखील खानापूर तहसीलदारांच्या कडून पाहणी सुरू आहे. ज्या जुन्या घराची पडझड झाली अशा जुन्या घरांना 5.50 हजार रुपये तर नवीन घराची पडझड झाल्यास त्याला 6.50 हजार रुपये अर्थसहाय देण्याचे निर्देश राज्यसरकारकडून आले असल्याची माहिती तहसीलदार प्रकाश गायकवाड यांनी दिली. सदर पडझड झालेल्या घर मालकांनी अर्ज केले असून त्याची तलाठी व महसूल निरीक्षकांच्या मार्फत पाहणी करून अहवाल मागवण्यात येत आहेत.
खानापूर तालुक्यातील बेडरहट्टी येथे कन्नड हायर प्राथमिक शाळेच्या खोलीला या अतिवृष्टीचा फटका बसला असून या ठिकाणी असलेल्या प्राथमिक शाळेच्या 3 शाळा खोलीचे नुकसान झाले असून शुक्रवारी तहसीलदार प्रकाश गायकवाड तसेच महसूल निरीक्षक व तलाठी यांनी पाहणी करून या शाळेचा पंचनामा करून वरिष्ठांच्याकडे अहवाल पाठवला आहे. या शाळेत पहिली ते सातवी पर्यंत एकूण 210 विद्यार्थी शिकत आहेत. शुक्रवारी पहाटे तीनच्यां सुमारास खोल्यांच्या भिंती कोसळल्या असल्याचे सांगितले . पावसामुळे खोल्या तुडुंब पाण्याने भरल्या. तहसीलदार प्रकाश गायकवाड, गट शिक्षणाधिकारी राजश्री कुडची, क्षेत्र समन्वयक अप्पाण्णा अंबगी, बीईओ कार्यालय
निरीक्षक शंकर कंमार, महसूल निरीक्षक एस.बी. ठक्केकर, पंचायत विभागीय अभियंता डी.एम.बन्नुरे, पीडीओ वीरेश सज्जन, ग्राम लिपिक
एम.ए.जकाती आदिनी पाहणी केली आहे.
ಖಾನಾಪುರ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಇದುವರೆಗೆ 64 ಮನೆಗಳು ಕುಸಿದಿದ್ದು, ಈ ಪೈಕಿ ಎರಡು ಮನೆಗಳು ಸಂಪೂರ್ಣ ಕುಸಿದಿವೆ. ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ಕಟ್ಟಡ ಕುಸಿದಿದ್ದು, ಮೂರು ಕೊಠಡಿಗಳಿಗೆ ಹೆಚ್ಚಿನ ಹಾನಿಯಾಗಿದೆ.
ಖಾನಾಪುರ ತಾಲೂಕಿನಲ್ಲಿ ಈ ವರ್ಷದ ಕೊನೆಯ ವಾರದಲ್ಲಿ ಸುರಿದ ಭಾರಿ ಮಳೆಗೆ 64 ಮನೆಗಳು ಕುಸಿದು ಬಿದ್ದಿರುವ ಬಗ್ಗೆ ತಹಸೀಲ್ದಾರ್ ಕಚೇರಿಯಲ್ಲಿ ವರದಿಯಾಗಿದೆ. ಈ ಪೈಕಿ ಎರಡು ಮನೆಗಳಿಗೆ ಹೆಚ್ಚಿನ ಹಾನಿಯಾಗಿದ್ದು, ಎರಡೂ ಮನೆ ಮಾಲೀಕರಿಗೆ ಎರಡು ದಿನಗಳ ಹಿಂದೆ ಸಚಿವ ಸತೀಶ ಜಾರಕಿಹೊಳಿ ಅವರು ತಲಾ 1.20 ಸಾವಿರ ರೂ. ಅದೇ ರೀತಿ ಖಾನಾಪುರ ತಾಲೂಕಿನಲ್ಲಿ ಕುಸಿದು ಬಿದ್ದ ಉಳಿದ ಮನೆಗಳ ಪರಿಶೀಲನೆಯನ್ನೂ ಖಾನಾಪುರ ತಹಸೀಲ್ದಾರರು ನಡೆಸುತ್ತಿದ್ದಾರೆ. ತಹಸೀಲ್ದಾರ್ ಪ್ರಕಾಶ ಗಾಯಕವಾಡ ಮಾತನಾಡಿ, ಕುಸಿದಿರುವ ಹಳೆ ಮನೆಗಳಿಗೆ ರೂ.5.50 ಸಾವಿರ ಹಾಗೂ ಕುಸಿದು ಬಿದ್ದಲ್ಲಿ ಹೊಸ ಮನೆಗಳಿಗೆ ರೂ.6.50 ಸಾವಿರ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಕುಸಿದು ಬಿದ್ದ ಮನೆಯ ಮಾಲೀಕರು ಅರ್ಜಿ ಸಲ್ಲಿಸಿದ್ದು, ತಲಾತಿ ಹಾಗೂ ಕಂದಾಯ ನಿರೀಕ್ಷಕರ ಮೂಲಕ ಪರಿಶೀಲನೆ ನಡೆಸಿ ವರದಿ ತರಿಸಿಕೊಳ್ಳಲಾಗುತ್ತಿದೆ.
ಬೇಡರಹಟ್ಟಿ ಸರ್ಕಾರಿ ಶಾಲೆಯ ಮೂರು ಕೊಠಡಿಗಳ ಕುಸಿತ: ಅಧಿಕಾರಿಗಳ ಭೇಟಿ
ಖಾನಾಪುರ: ತಾಲ್ಲೂಕಿನ ಇಟಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೇಡರಹಟ್ಟಿ ಗ್ರಾಮದ
ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮೂರು ಕೊಠಡಿಗಳು ಶುಕ್ರವಾರ ಕುಸಿದಿವೆ. ಈ
ಶಾಲೆಯಲ್ಲಿ 1 ರಿಂದ 7 ತರಗತಿಯಲ್ಲಿ ಒಟ್ಟು 210 ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಶುಕ್ರವಾರ ಮುಂಜಾನೆ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುತ್ತಿದ್ದ ಸಂದರ್ಭದಲ್ಲಿ ಮೂರು
ಕೊಠಡಿಗಳ ಗೋಡೆ ಕುಸಿದು ಬಿದ್ದಿವೆ ಎನ್ನಲಾಗುತ್ತಿದ್ದು, ಗ್ರಾಮದಲ್ಲಿ ಇತ್ತೀಚೆಗೆ
ಸುರಿದ ಮಳೆಗೆ ಕೊಠಡಿಗಳು ನೆಲಕ್ಕಚ್ಚಿವೆ ಎಂದು ಮೂಲಗಳು ತಿಳಿಸಿವೆ.
ಸುದ್ದಿ ತಿಳಿದ ಬಳಿಕ ಶಾಲೆಗೆ ಭೇಟಿ ನೀಡಿದ ತಹಸೀಲ್ದಾರ ಪ್ರಕಾಶ ಗಾಯಕವಾಡ, ಬಿಇಒ
ರಾಜಶ್ರೀ ಕುಡಚಿ, ಕ್ಷೇತ್ರ ಸಮನ್ವಯಾಧಿಕಾರಿ ಅಪ್ಪಣ್ಣ ಅಂಬಗಿ, ಬಿಇಒ ಕಚೇರಿಯ
ನಿರೀಕ್ಷಕ ಶಂಕರ ಕಮ್ಮಾರ, ಕಂದಾಯ ನಿರೀಕ್ಷಕ ಎಸ್.ಬಿ ಟಕ್ಕೇಕರ, ಪಂಚಾಯತ್ ರಾಜ್
ಇಲಾಖೆಯ ಇಂಜಿನೀಯರ್ ಡಿ.ಎಂ.ಬನ್ನೂರೆ, ಪಿಡಿಒ ವೀರೇಶ ಸಜ್ಜನ್, ಗ್ರಾಮ ಲೆಕ್ಕಿಗ
ಎಂ.ಎ.ಜಕಾತಿ ಹಾಗೂ ಇತರರು ಶಾಲೆಯ ಕುಸಿದುಬಿದ್ದ ಕೊಠಡಿಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಅದೃಶ್ಯ ದೊಡವಾಡ, ಈ
ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಇತ್ತೀಚೆಗೆ ನಿರ್ಮಾಣಗೊಂಡ 3 ಆರ್.ಸಿ.ಸಿ
ಕೊಠಡಿಗಳು ಸೋರುತ್ತಿವೆ. ಶಾಲೆಯ ಅಡುಗೆ ಮನೆ ಕೊಠಡಿಯೂ ಕುಸಿದಿದೆ. ತಕ್ಷಣ ಎಲ್ಲ
ಕೊಠಡಿಗಳನ್ನು ಹೊಸದಾಗಿ ನಿರ್ಮಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು.
ತಹಸೀಲ್ದಾರ ಪ್ರಕಾಶ ಗಾಯಕವಾಡ ಮಾತನಾಡಿ, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ
ತಕ್ಷಣಕ್ಕೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಗಮನಹರಿಸಲಾಗುವುದು ಎಂದರು.
ಈರಪ್ಪ ದೊಡಮನಿ, ಗಂಗಪ್ಪ ಬಡ್ಲಿ, ವಿಠ್ಠಲ ಕೆಳೋಜಿ, ಬಸವರಾಜ ತುರಮರಿ ಸೇರಿದಂತೆ
ಶಿಕ್ಷಕರು, ಮಕ್ಕಳು, ಪಾಲಕರು ಉಪಸ್ಥಿತರಿದ್ದರು