ಖಾನಾಪುರ: ತಾಲ್ಲೂಕಿನ ಲಿಂಗನಮಠ ಗ್ರಾಮದ ಬಿಜೆಪಿ ಕಾರ್ಯಕರ್ತ, ಪಕ್ಷದ ರೈತ ಮೋರ್ಚಾ
ಕೋಶಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ ಅವರನ್ನು ಭಾರತ ಸರ್ಕಾರದ ನಾರು ಮಂಡಳಿಯ
(ಕ್ವಾಯರ್ ಬೋರ್ಡ್) ನಾಮ ನಿರ್ದೇಶಿತ ಸದಸ್ಯರಾಗಿ ನೇಮಕಗೊಳಿಸಲಾಗಿದೆ. ನಾರು ಮಂಡಳಿಯ
ವ್ಯವಹಾರ ಅಭಿವೃದ್ಧಿ ಸಲಹೆಗಾರರನ್ನಾಗಿ ಅಲ್ಲಯ್ಯನವರಮಠ ಅವರನ್ನು ನೇಮಕಗೊಳಿಸಿದ್ದು,
ಮುಂದಿನ ದಿನಗಳಲ್ಲಿ ಅವರು ನಾರು ಮಂಡಳಿಯ ವ್ಯವಹಾರ ಅಭಿವೃದ್ಧಿಗಾಗಿ
ಕಾರ್ಯನಿರ್ವಹಿಸಲಿದ್ದಾರೆ ಎಂದು ನಾರು ಮಂಡಳಿಯ ವ್ಯವಸ್ಥಾಪಕಿ ಕಾವೇರಿ ಪುಷ್ಪನಂದನ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.