Screenshot_20230128-143725_Chrome

ಬೆಂಗಳೂರು : ವಿಧಾನಸಭೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದು , ಚುನಾವಣಾ ಆಯೋಗವೂ ಸಿದ್ಧತೆಗಳನ್ನು ಚುರುಕುಗೊಳಿಸಿದ್ದು , ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಲೆಕ್ಕಾಚಾರ ಇಟ್ಟುಕೊಂಡಿದೆ . ಹಾಲಿ ವಿಧಾನಸಭೆಯ ಅವಧಿ 2023 ಮೇ 24 ಕ್ಕೆ ಕೊನೆಗೊಳ್ಳಲಿದೆ . ಅದರೊಳಗೆ ಹೊಸ ವಿಧಾನಸಭೆ ರಚನೆ ಯಾಗಬೇಕು . ಕಳೆದ ಬಾರಿ , 2018 ರಲ್ಲಿ ಮೇ 12 ರಂದು ಮತದಾನ ನಡೆದಿತ್ತು ಹೆಚ್ಚುಕಡಿಮೆ ಈ ಬಾರಿಯೂ ಇದೇ ಅವಧಿಯಲ್ಲಿ ನಡೆಯಬಹುದು . ಆಧಾರದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಈಗ ಚುನಾವಣೆ ಸಿದ್ಧತೆಗಳಿಗೆ ಮತ್ತಷ್ಟು ವೇಗ . ಚುನಾವಣಾ ಪ್ರಕ್ರಿಯೆಗೆ 3 ಲಕ್ಷ ಸಿಬಂದಿ ಅಗತ್ಯವಿದ್ದು , ಬಹುತೇಕ ಶಿಕ್ಷಕರು , ಉಪನ್ಯಾಸಕರನ್ನು ನಿಯೋಜಿಸಲಾಗುತ್ತದೆ ಮಾ . 9 ರಿಂದ 29 ರ ವರೆಗೆ ದ್ವಿತೀಯ ಪಿಯುಸಿ ಮತ್ತು ಮಾ 31 ರಿಂದ ಎ .15 ರ ವರೆಗೆ ಎಸೆಸೆಲ್ಸಿ ಪರೀಕ್ಷೆ ನಡೆಯಲಿದೆ . ಇದರ ಬಳಿಕವಷ್ಟೇ ಚುನಾವಣೆ ನಡೆಯಬಹುದೆಂದು ಮಾಹಿತಿ ಸಿಕ್ಕಿದೆ . ಸರಿಪಡಿಸಿಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಆಯೋಗ ಸೂಚನೆ ನೀಡಿದೆ . ಚುನಾವಣೆಗೆ ಮತದಾರರ ಪಟ್ಟಿ ಮುಖ್ಯ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಆಯೋಗ ಸಿದ್ಧಪಡಿಸಿದೆ . ಆದರೂ ಅಂತಿಮ ಮತದಾರರ ಪಟ್ಟಿಯನ್ನು ಇನ್ನೊಮ್ಮೆ ಪರಿಶೀಲಿಸಿ ಲೋಪಗಳಿದ್ದರೆ ಇದಾದ ಬಳಿಕ ಇವಿಎಂಗಳ ಮೊದಲ ಹಂತದ ತಪಾಸಣೆ ( ಎಫ್‌ಎಲ್‌ಸಿಇದಾದ ಬಳಿಕ ಇವಿಎಂಗಳ ಮೊದಲ ಹಂತದ ತಪಾಸಣೆ ( ಎಫ್‌ಎಲ್‌ಸಿ ) ಕಾರ್ಯವನ್ನು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಆರಂಭಿಸಲಿದ್ದು , ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮುಂದೆ ಇವಿಎಂಗಳನ್ನು ಪರಿಶೀಲಿಸಲಾಗುತ್ತದೆ . ಗದಗ , ಧಾರವಾಡ ಉತ್ತರಕನ್ನಡ ಹಾವೇರಿ ಜಿಲ್ಲೆಗಳಲ್ಲಿ ಎಫ್‌ಎಲ್‌ಸಿ ಈಗಾಗಲೇ ಪೂರ್ಣಗೊಂಡಿದ್ದು ಬಳ್ಳಾರಿ , ವಿಜಯನಗರ , ಚಿತ್ರದುರ್ಗ , ದಾವಣಗೆರೆ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಡೆಯುತ್ತಿದೆ . ಫೆಬ್ರವರಿ ಅಂತ್ಯಕೆ ಈ ಕಾರ್ಯವನ್ನು ಮುಗಿಸುವ ಗುರಿಯನ್ನು ಆಯೋಗ ಹಾಕಿಕೊಂಡಿದೆ .

Do Share

Leave a Reply

Your email address will not be published. Required fields are marked *

error: Content is protected !!
Call Us