Home » संगरगाळी येथे विजेचा धक्का लागून वृद्ध पती-पत्नीचा दुर्दैवी मृत्यू; गावावर शोककळा ಸಂಗರಗಲಿಯಲ್ಲಿ ವಿದ್ಯುತ್ ಆಘಾತದಿಂದ ವೃದ್ಧ ದಂಪತಿ ದುರ್ಮರಣ; ಗ್ರಾಮದಲ್ಲಿ ಶೋಕ ಮಡುಗಟ್ಟಿದೆ

संगरगाळी येथे विजेचा धक्का लागून वृद्ध पती-पत्नीचा दुर्दैवी मृत्यू; गावावर शोककळा ಸಂಗರಗಲಿಯಲ್ಲಿ ವಿದ್ಯುತ್ ಆಘಾತದಿಂದ ವೃದ್ಧ ದಂಪತಿ ದುರ್ಮರಣ; ಗ್ರಾಮದಲ್ಲಿ ಶೋಕ ಮಡುಗಟ್ಟಿದೆ

file_00000000f0bc8211a71a30c8e1f6753f

संगरगाळी येथे विजेचा धक्का लागून वृद्ध पती-पत्नीचा दुर्दैवी मृत्यू; गावावर शोककळा

नारळ काढताना लोखंडी पाईपचा ११ हजार केव्ही विद्युतवाहिनीला स्पर्श; पतीला वाचवण्याच्या प्रयत्नात पत्नीही विजेच्या विळख्यात

संगरगाळी : खानापूर तालुक्यातील संगरगाळी गावात नारळ काढताना ११ हजार केव्ही क्षमतेच्या विद्युतवाहिनीचा धक्का लागून वृद्ध पती-पत्नीचा दुर्दैवी मृत्यू झाल्याची हृदयद्रावक घटना शनिवारी दुपारी साडेबारा वाजण्याच्या सुमारास घडली. शालू शावेर मस्करेन (वय ७०) आणि त्यांच्या पत्नी मिलाग्रीन शालू मस्करेन (वय ६५) अशी मृतांची नावे आहेत. या घटनेमुळे संगरगाळी गावासह परिसरात हळहळ व्यक्त होत आहे.

मिळालेल्या माहितीनुसार, मस्करेन दाम्पत्य आपल्या घराच्या परसातील नारळ काढण्यासाठी गेले होते. यावेळी नारळ काढण्यासाठी त्यांनी लोखंडी पाईपचा आधार घेतला होता. त्यांच्या घराच्या परसातून गावाला वीजपुरवठा करणारी ११ हजार केव्ही क्षमतेची विद्युतवाहिनी गेली आहे. या विद्युतवाहिनीच्या जवळच नारळाची काही झाडे असल्याने नारळ काढत असताना अचानक लोखंडी पाईपचा विद्युतभारित तारेला स्पर्श झाला.

यामुळे शालू मस्करेन यांना जोरदार विजेचा धक्का बसला. पतीला विजेचा धक्का बसून ते तडफडत असल्याचे पाहून पत्नी मिलाग्रीन यांनी त्यांना वाचवण्याचा प्रयत्न केला. मात्र, दुर्दैवाने त्याही विद्युतप्रवाहाच्या संपर्कात आल्या. या भीषण घटनेत दोघेही जमिनीवर कोसळले. त्याचवेळी वॉटर मॅन दिनेश पाटील कामानिमित्त त्या ठिकाणी आलेल्या व्यक्तीला दोघेही जमिनीवर पडलेले दिसले. त्यांनी तातडीने गावात घटनेची माहिती दिली.

विद्युतप्रवाहाचा धक्का इतका तीव्र होता की, दोघांच्या पायांना गंभीर स्वरूपाच्या भाजलेल्या जखमा झाल्याची माहिती समोर आली आहे.

घटनेची माहिती मिळताच पोलीस निरीक्षक लालसाब गवंडी, पोलीस उपनिरीक्षक निरंजन स्वामी तसेच हेस्कॉमचे विभागीय अधिकारी नागेश देवलतकर यांनी कर्मचाऱ्यांसह घटनास्थळी भेट देऊन पाहणी केली. यावेळी पत्रकार विवेक गिरी, पिराजी कुऱ्हाडे, वासुदेव चौगुले, रावजी बिर्जे, गजानन बेळगावकर, रामा मादर उपस्थित होते. पोलिसांनी पंचनामा केला असून पुढील कार्यवाही सुरू आहे.

मृत दाम्पत्याच्या पश्चात मुलगा, सून आणि नातवंडे असा परिवार आहे. एकाच कुटुंबातील दोघांचा अशा प्रकारे दुर्दैवी अंत झाल्याने संगरगाळी गावावर शोककळा पसरली आहे.

ಸಂಗರಗಾಳಿ ಗ್ರಾಮದಲ್ಲಿ ವಿದ್ಯುತ್ ಅವಘಡ: ತೆಂಗಿನಕಾಯಿ ಕೀಳುವಾಗ ವಿದ್ಯುತ್ ಸ್ಪರ್ಶಿಸಿ ವೃದ್ಧ ದಂಪತಿ ದುರ್ಮರಣ!

ಕಬ್ಬಿಣದ ಪೈಪ್ 11 ಸಾವಿರ ಕೆ.ವಿ. ವಿದ್ಯುತ್ ತಂತಿಗೆ ತಗುಲಿ ದುರಂತ; ಪತಿಯನ್ನು ರಕ್ಷಿಸಲು ಹೋದ ಪತ್ನಿಗೂ ವಿದ್ಯುತ್ ಆಘಾತ

ಖಾನಾಪುರ: ತಾಲೂಕಿನ ಸಂಗರಗಾಳಿ ಗ್ರಾಮದಲ್ಲಿ ತೆಂಗಿನಕಾಯಿ ಕೀಳುವ ಸಂದರ್ಭದಲ್ಲಿ 11 ಸಾವಿರ ಕೆ.ವಿ. ಸಾಮರ್ಥ್ಯದ ವಿದ್ಯುತ್ ತಂತಿ ತಗುಲಿ ವೃದ್ಧ ದಂಪತಿ ದುರಂತ ಸಾವಿಗೀಡಾದ ಘಟನೆ ಶನಿವಾರ ಮಧ್ಯಾಹ್ನ ಸುಮಾರು 12.30ರ ವೇಳೆಗೆ ನಡೆದಿದೆ.

ಸಂಗರಗಾಳಿ ಗ್ರಾಮದ ಶಾಲು ಶಾವೇರ್ ಮಸ್ಕರೇನ್ (70) ಹಾಗೂ ಅವರ ಪತ್ನಿ ಶ್ರೀಮತಿ ಮಿಲಾಗ್ರೀನ್ ಶಾಲು ಮಸ್ಕರೇನ್ (65) ಮೃತ ದಂಪತಿಯಾಗಿದ್ದಾರೆ.

ಮಾಹಿತಿಯ ಪ್ರಕಾರ, ದಂಪತಿಗಳು ತಮ್ಮ ಮನೆಯ ಹಿತ್ತಲಿನಲ್ಲಿದ್ದ ತೆಂಗಿನ ಮರದಿಂದ ಕಾಯಿ ಕೀಳಲು ಕಬ್ಬಿಣದ ಪೈಪ್ ಬಳಸುತ್ತಿದ್ದರು. ಈ ಸಂದರ್ಭದಲ್ಲಿ ಪೈಪ್ ಆಕಸ್ಮಿಕವಾಗಿ ಮನೆಯ ಹಿತ್ತಲಿನ ಮೂಲಕ ಹಾದುಹೋಗಿರುವ 11 ಸಾವಿರ ಕೆ.ವಿ. ಸಾಮರ್ಥ್ಯದ ವಿದ್ಯುತ್ ತಂತಿಗೆ ತಗುಲಿದೆ. ಪರಿಣಾಮ ಶಾಲು ಮಸ್ಕರೇನ್ ಅವರಿಗೆ ತೀವ್ರ ವಿದ್ಯುತ್ ಆಘಾತ ಉಂಟಾಗಿದೆ.

ಪತಿ ವಿದ್ಯುತ್ ಆಘಾತದಿಂದ ಒದ್ದಾಡುತ್ತಿರುವುದನ್ನು ಕಂಡ ಪತ್ನಿ ಮಿಲಾಗ್ರೀನ್ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ದುರದೃಷ್ಟವಶಾತ್ ಅವರಿಗೂ ವಿದ್ಯುತ್ ಪ್ರವಹಿಸಿ ಇಬ್ಬರೂ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ವಿದ್ಯುತ್ ಆಘಾತದ ತೀವ್ರತೆಗೆ ಇಬ್ಬರ ಕಾಲುಗಳಿಗೂ ಗಂಭೀರ ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಕೆಲಸದ ನಿಮಿತ್ತ ಆ ಸ್ಥಳಕ್ಕೆ ಬಂದ ವ್ಯಕ್ತಿಯೊಬ್ಬರು ದಂಪತಿಗಳು ನೆಲದ ಮೇಲೆ ಬಿದ್ದಿರುವುದನ್ನು ಕಂಡು ತಕ್ಷಣ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ನಿರೀಕ್ಷಕ ಲಾಲಸಾಬ್ ಗವಂಡಿ ಹಾಗೂ ಹೆಸ್ಕಾಂ ವಿಭಾಗೀಯ ಅಧಿಕಾರಿ ನಾಗೇಶ ದೇವಲತ್ಕರ್ ಅವರು ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.

ಮೃತ ದಂಪತಿಗೆ ಒಬ್ಬ ಮಗ, ಸೊಸೆ ಹಾಗೂ ಮೊಮ್ಮಕ್ಕಳು ಇದ್ದಾರೆ. ವೃದ್ಧ ದಂಪತಿಯ ದುರಂತ ಸಾವಿನಿಂದ ಸಂಗರಗಾಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಖಾನಾಪುರ Live

Do Share

You may have missed

error: Content is protected !!
Call Us