Home » कारलगा श्री महालक्ष्मी महायात्रेचा मार्ग मोकळा; जिल्हा प्रशासनाची परवानगी!ಕಾರಲಗಾ ಶ್ರೀ ಮಹಾಲಕ್ಷ್ಮಿ ಮಹಾಯಾತ್ರೆಗೆ ಜಿಲ್ಲಾಡಳಿತದ ಅಧಿಕೃತ ಅನುಮತಿ!

कारलगा श्री महालक्ष्मी महायात्रेचा मार्ग मोकळा; जिल्हा प्रशासनाची परवानगी!ಕಾರಲಗಾ ಶ್ರೀ ಮಹಾಲಕ್ಷ್ಮಿ ಮಹಾಯಾತ್ರೆಗೆ ಜಿಲ್ಲಾಡಳಿತದ ಅಧಿಕೃತ ಅನುಮತಿ!

file_00000000fadc8211be263387b4da0912

कारलगा श्री महालक्ष्मी महायात्रेचा मार्ग मोकळा; जिल्हा प्रशासनाची परवानगी!

२४ फेब्रुवारी ते ४ मार्च २०२७ दरम्यान यात्रोत्सव; भाविकांसाठी पायाभूत सुविधा उपलब्ध करून देण्याचे जिल्हाधिकाऱ्यांचे आश्वासन

कारलगा : खानापूर तालुक्यातील कारलगा, शिवोली व कारलगा हट्टी या गावांची ग्रामदेवता असलेल्या श्री महालक्ष्मी देवीच्या बहुप्रतीक्षित महायात्रा उत्सव २०२७ च्या आयोजनाला आता महत्त्वपूर्ण प्रशासकीय पाठबळ मिळाले आहे. आज बेळगावचे जिल्हाधिकारी मोहम्मद रोशन यांना यात्रा कमिटीच्या वतीने एक निवेदन सादर करण्यात आले व येत्या फेब्रुवारी मध्ये होणाऱ्या यात्रेचा अहवाल त्यांच्यासमोर मांडला. या संदर्भात जिल्हाधिकारी यांच्यासमोर शिष्टमंडळाने सविस्तर चर्चा केली. बेळगाव जिल्हाधिकारी कार्यालयाकडून यात्रेसाठी आवश्यक परवानगी देण्यात आल्याने यात्रा आयोजनाचा मार्ग मोकळा झाला असून, परिसरातील ग्रामस्थ आणि भाविकांमध्ये उत्साहाचे वातावरण निर्माण झाले आहे.

यात्रेचे धार्मिक, सांस्कृतिक आणि सामाजिक महत्त्व लक्षात घेऊन जिल्हाधिकारी मोहम्मद रोशन यांनी यात्रा शांततेत, सुरक्षित आणि निर्विघ्नपणे पार पाडण्यासाठी प्रशासनाकडून आवश्यक सहकार्य करण्याचे आश्वासन दिले आहे. यात्रेच्या कालावधीत भाविकांना आवश्यक त्या मूलभूत सुविधा उपलब्ध करून देण्यासाठी संबंधित शासकीय विभागांच्या अधिकाऱ्यांना निर्देश देण्याची कार्यवाही करण्यात येणार आहे.

भाविकांच्या सुविधांना प्राधान्य

या महायात्रेला मोठ्या संख्येने भाविक उपस्थित राहण्याची शक्यता असल्याने पिण्याच्या पाण्याची पुरेशी व्यवस्था, अखंडित वीजपुरवठा, रस्त्यांवरील प्रकाश व्यवस्था, रस्त्यांची देखभाल, वाहतूक नियोजन, पोलीस बंदोबस्त, स्वच्छता, कचरा व्यवस्थापन, आरोग्य तपासणी केंद्रे आणि आपत्कालीन वैद्यकीय सेवा या सुविधांचे नियोजन महत्त्वाचे ठरणार आहे.

यात्रेच्या काळात भाविकांची गैरसोय होऊ नये, गर्दीचे योग्य व्यवस्थापन व्हावे आणि कोणताही अनुचित प्रकार घडू नये, यासाठी पोलीस, आरोग्य, सार्वजनिक बांधकाम, ग्रामपंचायत, वीज वितरण आणि पाणीपुरवठा विभागांमध्ये समन्वय आवश्यक राहणार आहे.

ग्रामस्थ आणि यात्रा समितीकडून प्रशासनाचे आभार

जिल्हा प्रशासनाने यात्रेच्या आयोजनाबाबत सकारात्मक भूमिका घेतल्याबद्दल माजी आमदार अरविंद चंद्रकांत पाटील, यात्रा समितीचे अध्यक्ष मनोहर नागाप्पा पाटील आणि समितीच्या अन्य सदस्यांनी जिल्हाधिकारी मोहम्मद रोशन तसेच संबंधित शासकीय अधिकाऱ्यांचे आभार व्यक्त केले आहेत.

कारलगा, शिवोली आणि कारलगा हट्टी या तीन गावांच्या सहभागातून होणारा हा महायात्रा उत्सव केवळ धार्मिक सोहळा नसून परिसरातील सांस्कृतिक परंपरा, ग्रामएकता आणि श्रद्धेचे प्रतीक मानला जातो. त्यामुळे यात्रेच्या यशस्वी आयोजनासाठी ग्रामस्थ, यात्रा समिती आणि प्रशासन यांच्यातील समन्वय महत्त्वाचा ठरणार आहे.

आता प्रत्यक्ष तयारीकडे लक्ष

दिनांक २४ फेब्रुवारी ते ४ मार्च २०२७ या कालावधीत श्री महालक्ष्मी महायात्रा उत्सव संपन्न होणार आहे. जिल्हा प्रशासनाकडून परवानगी मिळाल्यानंतर आता यात्रा समितीसमोर नियोजनबद्ध तयारी, आवश्यक सुविधा आणि भाविकांच्या सोयी-सुविधांची अंमलबजावणी हे प्रमुख आव्हान असणार आहे. श्रद्धा, परंपरा आणि ग्रामएकतेचा हा महोत्सव यशस्वी करण्यासाठी सर्व स्तरांतून तयारीला वेग येण्याची अपेक्षा आहे.

ಕಾರಲಗಾ ಶ್ರೀ ಮಹಾಲಕ್ಷ್ಮಿ ಮಹಾಯಾತ್ರೆಗೆ ಜಿಲ್ಲಾಡಳಿತದ ಅಧಿಕೃತ ಅನುಮತಿ!

ಫೆ. 24ರಿಂದ ಮಾ. 4ರವರೆಗೆ ಮಹಾಯಾತ್ರೋತ್ಸವ; ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

ಕಾರಲಗಾ : ಖಾನಾಪುರ ತಾಲೂಕಿನ ಕಾರಲಗಾ, ಶಿವೋಳಿ ಹಾಗೂ ಕಾರಲಗಾ ಹಟ್ಟಿ ಗ್ರಾಮಗಳ ಆರಾಧ್ಯ ದೇವತೆಯಾದ ಶ್ರೀ ಮಹಾಲಕ್ಷ್ಮಿ ದೇವಿಯ ಮಹಾಯಾತ್ರೆ 2027ರ ಆಯೋಜನೆಗೆ ಜಿಲ್ಲಾಡಳಿತದಿಂದ ಅಗತ್ಯ ಅನುಮತಿ ದೊರೆತಿದೆ. ಇದರಿಂದ ಬಹುನಿರೀಕ್ಷಿತ ಮಹಾಯಾತ್ರೋತ್ಸವದ ಸಿದ್ಧತೆಗಳಿಗೆ ಅಧಿಕೃತ ಚಾಲನೆ ದೊರೆತಂತಾಗಿದ್ದು, ಗ್ರಾಮಸ್ಥರು ಹಾಗೂ ಭಕ್ತರಲ್ಲಿ ಸಂತಸ ಮತ್ತು ಸಂಭ್ರಮ ಮನೆಮಾಡಿದೆ.

ಯಾತ್ರೆಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮಹತ್ವವನ್ನು ಪರಿಗಣಿಸಿರುವ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಯಾತ್ರೆಯು ಶಾಂತಿಯುತವಾಗಿ, ಯಾವುದೇ ಅಡಚಣೆಯಿಲ್ಲದೆ ಸುಗಮವಾಗಿ ನಡೆಯಲು ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡುವ ಭರವಸೆ ನೀಡಿದ್ದಾರೆ.

ಭಕ್ತರ ಅನುಕೂಲಕ್ಕೆ ಮೂಲಸೌಕರ್ಯಗಳ ವ್ಯವಸ್ಥೆ

ಮಹಾಯಾತ್ರೆಯ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ಕುಡಿಯುವ ನೀರಿನ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ, ರಸ್ತೆ ದೀಪಗಳ ವ್ಯವಸ್ಥೆ, ರಸ್ತೆ ನಿರ್ವಹಣೆ, ಸಂಚಾರ ನಿಯಂತ್ರಣ, ಪೊಲೀಸ್ ಬಂದೋಬಸ್ತ್, ಸ್ವಚ್ಛತೆ, ಕಸ ವಿಲೇವಾರಿ, ಆರೋಗ್ಯ ಸೇವೆ ಹಾಗೂ ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವುದು ಅತ್ಯಗತ್ಯವಾಗಿದೆ.

ಯಾತ್ರೆಯ ಅವಧಿಯಲ್ಲಿ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಎಲ್ಲಾ ಸರ್ಕಾರಿ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಯಾತ್ರೆಯನ್ನು ಯಶಸ್ವಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

ಜಿಲ್ಲಾಡಳಿತಕ್ಕೆ ಯಾತ್ರಾ ಸಮಿತಿಯಿಂದ ಕೃತಜ್ಞತೆ

ಜಿಲ್ಲಾಡಳಿತದಿಂದ ದೊರೆತ ಸಕಾರಾತ್ಮಕ ಸ್ಪಂದನೆಗೆ ಮಾಜಿ ಶಾಸಕ ಅರವಿಂದ ಚಂದ್ರಕಾಂತ ಪಾಟೀಲ, ಯಾತ್ರಾ ಸಮಿತಿ ಅಧ್ಯಕ್ಷ ಮನೋಹರ ನಾಗಪ್ಪ ಪಾಟೀಲ ಹಾಗೂ ಸಮಿತಿಯ ಇತರ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮತ್ತು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಕಾರಲಗಾ, ಶಿವೋಳಿ ಹಾಗೂ ಕಾರಲಗಾ ಹಟ್ಟಿ ಈ ಮೂರು ಗ್ರಾಮಗಳ ಗ್ರಾಮಸ್ಥರ ಸಹಭಾಗಿತ್ವದಲ್ಲಿ ನಡೆಯುವ ಶ್ರೀ ಮಹಾಲಕ್ಷ್ಮಿ ಮಹಾಯಾತ್ರೆಯು ಧಾರ್ಮಿಕ ಭಕ್ತಿ, ಸಾಂಸ್ಕೃತಿಕ ಪರಂಪರೆ ಹಾಗೂ ಗ್ರಾಮಗಳ ಒಗ್ಗಟ್ಟಿನ ಪ್ರತೀಕವಾಗಿದೆ. ಹೀಗಾಗಿ ಯಾತ್ರೆಯನ್ನು ಯಶಸ್ವಿಗೊಳಿಸಲು ಗ್ರಾಮಸ್ಥರು, ಯಾತ್ರಾ ಸಮಿತಿ ಮತ್ತು ಜಿಲ್ಲಾಡಳಿತದ ಸಹಕಾರ ಮಹತ್ವದ್ದಾಗಿದೆ.

ಫೆಬ್ರವರಿ 24ರಿಂದ ಮಾರ್ಚ್ 4ರವರೆಗೆ ಮಹೋತ್ಸವ

2027ರ ಫೆಬ್ರವರಿ 24ರಿಂದ ಮಾರ್ಚ್ 4ರವರೆಗೆ ಒಟ್ಟು ಒಂಬತ್ತು ದಿನಗಳ ಕಾಲ ಶ್ರೀ ಮಹಾಲಕ್ಷ್ಮಿ ಮಹಾಯಾತ್ರಾ ಮಹೋತ್ಸವ ನಡೆಯಲಿದೆ. ಜಿಲ್ಲಾಡಳಿತದ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ ಯಾತ್ರೆಯ ಪೂರ್ವಸಿದ್ಧತೆಗಳಿಗೆ ಮತ್ತಷ್ಟು ವೇಗ ಸಿಗಲಿದ್ದು, ಭಕ್ತರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಯಾತ್ರಾ ಸಮಿತಿ ಹಾಗೂ ಗ್ರಾಮಸ್ಥರು ಕಾರ್ಯಪ್ರವೃತ್ತರಾಗುವ ನಿರೀಕ್ಷೆಯಿದೆ.

ಖಾನಾಪುರ ಲೈವ್ | ಕಾರಲಗಾ

Do Share

You may have missed

error: Content is protected !!
Call Us