Home » चापगाव ग्रामपंचायतीत ‘भू-गॅरंटी अभियान’ जनजागृती; मिळकतींची ई-सत्तू नोंदणी करण्याचे आवाहन

चापगाव ग्रामपंचायतीत ‘भू-गॅरंटी अभियान’ जनजागृती; मिळकतींची ई-सत्तू नोंदणी करण्याचे आवाहन

file_000000004efc82119e13d37bc02bea13

ಚಾಪಗಾಂವ ಗ್ರಾಮ ಪಂಚಾಯಿತಿಯಲ್ಲಿ ‘ಭೂ ಗ್ಯಾರಂಟಿ ಅಭಿಯಾನ’ಕ್ಕೆ ಚಾಲನೆ; ಆಸ್ತಿ ನೋಂದಣಿಗೆ ಸಾರ್ವಜನಿಕರಿಗೆ ಕರೆ

चापगाव ग्रामपंचायतीत ‘भू-गॅरंटी अभियान’ जनजागृती; मिळकतींची ई-सत्तू नोंदणी करण्याचे आवाहन

ग्रामपंचायत हद्दीतील प्रत्येक घराचे मोजमाप करून अधिकृत मिळकतींची नोंदणी करण्यावर भर

चापगाव : ग्रामपंचायत हद्दीतील गावठाण क्षेत्रात येणाऱ्या प्रत्येक घराची अधिकृत नोंदणी करून नागरिकांना ई-सत्तू उतारा उपलब्ध करून देण्याच्या उद्देशाने चापगाव ग्रामपंचायतीत भू-गॅरंटी अभियानांतर्गत मार्गदर्शन व जनजागृती कार्यक्रमाचे आयोजन करण्यात आले.

यावेळी तालुका पंचायतचे सहाय्यक निर्देशक विजय कोटिन यांनी उपस्थितांना अभियानाची माहिती देत मार्गदर्शन केले. ग्रामपंचायत क्षेत्रातील प्रत्येक गावातील अधिकृत मिळकतींचे सर्वेक्षण व परिशीलन करून त्यांची नोंदणी भू-गॅरंटी अभियानांतर्गत करण्यात येणार आहे. यासाठी प्रत्येक घराचे मोजमाप घेणे आवश्यक असून संबंधित घराचे वीज बिल, चकबंदी संबंधित कागदपत्रे, मिळकत मालकाचे आधार कार्ड आणि मोबाईल क्रमांक ही कागदपत्रे आवश्यक असल्याचे त्यांनी सांगितले.

भू-नोंदणी प्रक्रियेदरम्यान आधार कार्डशी संलग्न मोबाईल क्रमांकावर येणाऱ्या ओटीपीच्या आधारे माहिती संकलित करून ई-सत्तू उतारा तयार करण्याची प्रक्रिया हाती घेण्यात येणार आहे. त्यामुळे ग्रामपंचायत हद्दीतील प्रत्येक कुटुंबाने आपल्या अधिकृत मिळकतींची नोंदणी करून घेण्यासाठी पुढाकार घ्यावा, असे आवाहन विजय कोटिन यांनी केले.

या अभियानाची माहिती गावागावांतील प्रत्येक कुटुंबापर्यंत पोहोचविण्यासाठी महिला बचत गट, स्वयं-सहाय्यता संघ, विविध महिला संघटनांच्या प्रतिनिधी तसेच ग्रामपंचायत कर्मचाऱ्यांनी विशेष प्रयत्न करावेत. भू-गॅरंटी अभियानाचा उद्देश आणि महत्त्व नागरिकांना समजावून सांगून जास्तीत जास्त मिळकतींची नोंदणी पूर्ण करण्यासाठी जनजागृती करावी, अशी सूचनाही त्यांनी केली.

या कार्यक्रमाला ग्रामपंचायत क्षेत्रातील स्वयं-सहाय्यता संघ व विविध महिला संघटनांच्या पदाधिकारी तसेच ग्रामपंचायत कर्मचारी उपस्थित होते. ग्रामपंचायतीचे क्लार्क नारायण पाटील, राजू पाटील, ग्रंथपाल पिराजी कुराडे आदींची उपस्थिती होती.

भू-गॅरंटी अभियानाचे संयोजक तुरमुरी यांनी उपस्थितांचे स्वागत केले.

ಚಾಪಗಾಂವ ಗ್ರಾಮ ಪಂಚಾಯಿತಿಯಲ್ಲಿ ‘ಭೂ ಗ್ಯಾರಂಟಿ ಅಭಿಯಾನ’ಕ್ಕೆ ಚಾಲನೆ; ಆಸ್ತಿ ನೋಂದಣಿಗೆ ಸಾರ್ವಜನಿಕರಿಗೆ ಕರೆ

ಪ್ರತಿ ಮನೆಯ ಅಳತೆ, ಅಗತ್ಯ ದಾಖಲೆಗಳ ಸಂಗ್ರಹ ಹಾಗೂ ಇ-ಸ್ವತ್ತು ಉತಾರ ಪ್ರಕ್ರಿಯೆಗೆ ಒತ್ತು

ಚಾಪಗಾಂವ : ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಠಾಣ ಪ್ರದೇಶದಲ್ಲಿರುವ ಪ್ರತಿಯೊಂದು ಮನೆಯ ಅಧಿಕೃತ ಆಸ್ತಿ ನೋಂದಣಿ ಮಾಡಿ ಸಾರ್ವಜನಿಕರಿಗೆ ಇ-ಸ್ವತ್ತು ಉತಾರ ಒದಗಿಸುವ ಉದ್ದೇಶದಿಂದ ಚಾಪಗಾಂವ ಗ್ರಾಮ ಪಂಚಾಯಿತಿಯಲ್ಲಿ ಭೂ ಗ್ಯಾರಂಟಿ ಅಭಿಯಾನದ ಕುರಿತು ಜಾಗೃತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕರಾದ ವಿಜಯ್ ಕೋಟಿನ್ ಅವರು ಅಭಿಯಾನದ ಉದ್ದೇಶ ಮತ್ತು ಮಹತ್ವದ ಕುರಿತು ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮದ ಗ್ರಾಮಠಾಣ ಪ್ರದೇಶದಲ್ಲಿರುವ ಮನೆಗಳ ಅಳತೆ ಮಾಡುವುದು ಹಾಗೂ ಅಧಿಕೃತ ಆಸ್ತಿಗಳ ಸಮಗ್ರ ಪರಿಶೀಲನೆ ನಡೆಸಿ ಅವುಗಳನ್ನು ಭೂ ಗ್ಯಾರಂಟಿ ಅಭಿಯಾನದಡಿ ನೋಂದಣಿ ಮಾಡುವ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಆಸ್ತಿ ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದ ಮನೆಯ ವಿದ್ಯುತ್ ಬಿಲ್, ಚಕಬಂದಿ ದಾಖಲೆ, ಆಸ್ತಿ ಮಾಲೀಕರ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ. ನೋಂದಣಿ ಸಂದರ್ಭದಲ್ಲಿ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಆಧರಿಸಿ ಮಾಹಿತಿ ಸಂಗ್ರಹಿಸಿ ಇ-ಸ್ವತ್ತು ಉತಾರ ನೀಡುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ವಿಜಯ್ ಕೋಟಿನ್ ವಿವರಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿರುವ ಅಧಿಕೃತ ಆಸ್ತಿಗಳ ಮಾಲೀಕರು ಈ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬೇಕು. ಪ್ರತಿಯೊಂದು ಕುಟುಂಬವೂ ತಮ್ಮ ಆಸ್ತಿಯ ನೋಂದಣಿಗೆ ಮುಂದಾಗಬೇಕು. ಈ ಕುರಿತು ಮಹಿಳಾ ಸ್ವಸಹಾಯ ಸಂಘಗಳು, ವಿವಿಧ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಗ್ರಾಮಮಟ್ಟದಲ್ಲಿ ಜಾಗೃತಿ ಮೂಡಿಸಿ ಅಭಿಯಾನದ ಉದ್ದೇಶ ಮತ್ತು ಮಹತ್ವವನ್ನು ಪ್ರತಿಯೊಂದು ಕುಟುಂಬಕ್ಕೂ ತಲುಪಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿಗಳ ನೋಂದಣಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಸಹಾಯ ಸಂಘಗಳು ಹಾಗೂ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿಯ ಕ್ಲರ್ಕ್ ನಾರಾಯಣ ಪಾಟೀಲ, ರಾಜು ಪಾಟೀಲ, ಗ್ರಂಥಪಾಲಕ ಪಿರಾಜಿ ಕುರಾಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಭೂ ಗ್ಯಾರಂಟಿ ಅಭಿಯಾನದ ಸಂಯೋಜಕ ತುರ್ಮುರಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.

Do Share

You may have missed

error: Content is protected !!
Call Us