दीपोत्सवाचा खरा अर्थ अंधारावर प्रकाशाचा आणि वाईटावर चांगल्याचा विजय : आमदार विठ्ठल हलगेकरದೀಪೋತ್ಸವದ ನಿಜವಾದ ಅರ್ಥವೆಂದರೆ ಕತ್ತಲೆಯ ಮೇಲೆ ಬೆಳಕಿನ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವಾಗಿದೆ: ಶಾಸಕ ವಿಠ್ಠಲ ಹಳಗೆಕರ್
दीपोत्सवाचा खरा अर्थ अंधारावर प्रकाशाचा आणि वाईटावर चांगल्याचा विजय : आमदार विठ्ठल हलगेकर
खानापूर / प्रतिनिधी : दीपावली हा भारतीय संस्कृतीतील मांगल्य, आनंद आणि उत्साहाचा महापर्व आहे. अंधारातून प्रकाशाकडे, अज्ञानातून ज्ञानाकडे आणि वाईटावर चांगल्याचा विजय मिळवून देणारा हा दीपोत्सव प्रत्येकाच्या जीवनात नवी उमेद आणि सकारात्मकता निर्माण करतो, असे प्रतिपादन आमदार विठ्ठल हलगेकर यांनी केले.
दीपावलीनिमित्त खानापूर तालुक्यातील सर्व नागरिकांना आमदार विठ्ठल हलगेकर यांनी कोटी कोटी शुभेच्छा दिल्या. यावेळी ‘खानापूर लाईव्ह’शी बोलताना ते म्हणाले की, दीपावली हा केवळ दिव्यांचा सण नसून आपल्या जीवनात उज्ज्वल भविष्याचा प्रकाश निर्माण करणारा उत्सव आहे. खानापूर तालुक्यात हा सण पारंपरिक पद्धतीने मोठ्या उत्साहात साजरा केला जातो. ग्रामीण भागात सुगीच्या आनंदातून या सणाची सुरुवात होत असल्याने शेतकरी बांधवांसाठी दीपावलीला विशेष महत्त्व आहे.
शेतकरी हा आपल्या समाजाचा कणा आहे. वर्षभर कष्ट करून पिकवलेल्या पिकातून त्याला समाधान आणि आनंद मिळावा, त्याच्या कुटुंबात सुख, शांती व समृद्धी नांदावी, हीच खरी दीपावलीची भावना आहे. सध्याच्या दुष्काळी परिस्थितीवर मात करून बळीराजा सुखी, समाधानी आणि आर्थिकदृष्ट्या सक्षम व्हावा, अशी सदिच्छाही त्यांनी व्यक्त केली.
दीपावलीच्या या मंगलमय पर्वात प्रत्येकाच्या घरात सुख-समृद्धी, आरोग्य, आनंद आणि समाधान नांदो. समाजात प्रेम, बंधुभाव आणि एकोपा वृद्धिंगत होवो, अशा शुभेच्छाही आमदार विठ्ठल हलगेकर यांनी दिल्या.
ಕತ್ತಲೆಯ ಮೇಲೆ ಬೆಳಕಿನ, ಕೆಟ್ಟದರ ಮೇಲೆ ಒಳ್ಳೆಯತನದ ವಿಜಯವೇ ದೀಪಾವಳಿಯ ನಿಜವಾದ ಅರ್ಥ : ಶಾಸಕ ವಿಠ್ಠಲ ಹಲಗೇಕರ
ಖಾನಾಪುರ / ಪ್ರತಿನಿಧಿ : ದೀಪಾವಳಿ ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯುವ ಹಾಗೂ ಕೆಟ್ಟದರ ಮೇಲೆ ಒಳ್ಳೆಯತನದ ವಿಜಯವನ್ನು ಸಾರುವ ಪವಿತ್ರ ಹಬ್ಬವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ಮಹತ್ವವಿದ್ದು, ಪ್ರತಿಯೊಬ್ಬರ ಜೀವನದಲ್ಲಿ ಹೊಸ ಆಶಾಭಾವನೆ, ಸಂತೋಷ ಮತ್ತು ಸಮೃದ್ಧಿಯನ್ನು ತರುವ ಬೆಳಕಿನ ಹಬ್ಬ ಇದಾಗಿದೆ ಎಂದು ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ದೀಪಾವಳಿ ಹಬ್ಬದ ಪ್ರಯುಕ್ತ ಖಾನಾಪುರ ತಾಲೂಕಿನ ಸಮಸ್ತ ಜನತೆಗೆ ಅವರು ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ‘ಖಾನಾಪುರ ಲೈವ್’ ಜೊತೆ ಮಾತನಾಡಿದ ಅವರು, ದೀಪಾವಳಿ ಕೇವಲ ದೀಪಗಳನ್ನು ಬೆಳಗಿಸುವ ಹಬ್ಬವಲ್ಲ. ಪ್ರತಿಯೊಬ್ಬರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿ ಉಜ್ವಲ ಭವಿಷ್ಯದತ್ತ ಮುನ್ನಡೆಯಲು ಪ್ರೇರಣೆ ನೀಡುವ ಹಬ್ಬವಾಗಿದೆ. ಖಾನಾಪುರ ತಾಲೂಕಿನಲ್ಲಿ ಈ ಹಬ್ಬವನ್ನು ಸಾಂಪ್ರದಾಯಿಕವಾಗಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಸುಗ್ಗಿಯ ಸಂಭ್ರಮದೊಂದಿಗೆ ದೀಪಾವಳಿ ಹಬ್ಬ ಆರಂಭವಾಗುವುದರಿಂದ ರೈತಾಪಿ ವರ್ಗಕ್ಕೆ ಈ ಹಬ್ಬ ವಿಶೇಷ ಮಹತ್ವವನ್ನು ಹೊಂದಿದೆ ಎಂದರು.
ವರ್ಷವಿಡೀ ಶ್ರಮಪಟ್ಟು ದುಡಿಯುವ ರೈತರಿಗೆ ತಮ್ಮ ಬೆಳೆಗಳಿಂದ ಉತ್ತಮ ಇಳುವರಿ ದೊರೆತು ಕುಟುಂಬದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಬೇಕು. ಪ್ರಸ್ತುತ ಇರುವ ಬರ ಪರಿಸ್ಥಿತಿಯನ್ನು ಮೆಟ್ಟಿ ನಿಂತು ಅನ್ನದಾತ ಬಲಿರಾಜನು ಸುಖಿಯಾಗಿ, ಸಂತೃಪ್ತಿಯಿಂದ ಬದುಕುವಂತಾಗಲಿ ಎಂಬುದೇ ನನ್ನ ಆಶಯವಾಗಿದೆ ಎಂದು ಅವರು ಹಾರೈಸಿದರು.
ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಪ್ರತಿಯೊಬ್ಬರ ಮನೆ-ಮನಗಳಲ್ಲಿ ಸಂತೋಷ, ಆರೋಗ್ಯ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸಲಿ. ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸಹೋದರತ್ವ ಹಾಗೂ ಸಾಮರಸ್ಯದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿ ಎಂದು ಶಾಸಕ ವಿಠ್ಠಲ ಹಲಗೇಕರ ಅವರು ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.