Home » पारिश्वाड येथे ग्रामदेवता श्री लक्ष्मी मंदिराचा चौकट पूजन सोहळा उत्साहात!ಪರಿಶ್ವಾಡದಲ್ಲಿ ಗ್ರಾಮ ದೇವತೆಯಾದ ಶ್ರೀ ಲಕ್ಷ್ಮಿ ದೇವಸ್ಥಾನದ ‘ಚೌಕಟ್ ಪೂಜನ್’ ಸಮಾರಂಭವು ಅತ್ಯಂತ ಉತ್ಸಾಹದಿಂದ ನೆರವೇರಿತು!

पारिश्वाड येथे ग्रामदेवता श्री लक्ष्मी मंदिराचा चौकट पूजन सोहळा उत्साहात!ಪರಿಶ್ವಾಡದಲ್ಲಿ ಗ್ರಾಮ ದೇವತೆಯಾದ ಶ್ರೀ ಲಕ್ಷ್ಮಿ ದೇವಸ್ಥಾನದ ‘ಚೌಕಟ್ ಪೂಜನ್’ ಸಮಾರಂಭವು ಅತ್ಯಂತ ಉತ್ಸಾಹದಿಂದ ನೆರವೇರಿತು!

IMG-20261011-WA0025

पारिश्वावाड येथे ग्रामदेवता लक्ष्मी मंदिराचा चौकट पूजन सोहळा उत्साहात!

आमदार विठ्ठल हलगेकर यांच्याकडून यापूर्वी १० लाखांचा निधी; आणखी ५ लाखांसाठी प्रयत्न करणार

खानापूर / प्रतिनिधी : खानापूर तालुक्यातील पारिशवाड येथे ग्रामदेवता श्री लक्ष्मी मंदिराच्या उभारणीच्या अनुषंगाने आयोजित करण्यात आलेला चौकट पूजन सोहळा आज रविवारी धार्मिक वातावरणात व मोठ्या उत्साहात पार पडला. खानापूरचे आमदार विठ्ठलराव हलगेकर यांच्या हस्ते हा पूजन विधी करण्यात आला. यावेळी ग्रामस्थ, देवस्थान कमिटीचे पदाधिकारी आणि विविध क्षेत्रांतील मान्यवर उपस्थित होते.

याप्रसंगी बोलताना आमदार विठ्ठलराव हलगेकर म्हणाले की, ग्रामदेवता श्री लक्ष्मी मंदिर हे गावाचे श्रद्धास्थान आणि ग्रामस्थांचे आराध्य दैवत ठरावे. आदिशक्तीचे स्वरूप मानल्या जाणाऱ्या ग्रामदेवतेच्या मंदिराच्या उभारणीमुळे गावाच्या धार्मिक आणि सांस्कृतिक वैभवात भर पडली पाहिजे. मंदिराचे काम दर्जेदार आणि भव्य स्वरूपात पूर्ण करण्यासाठी सर्वांनी सहकार्य करणे आवश्यक आहे.

मंदिराच्या उभारणीसाठी आमदार निधीतून यापूर्वी १० लाख रुपयांचा निधी मंजूर करण्यात आला आहे. तसेच मंदिराच्या उर्वरित कामांसाठी खासदार निधीतून आणखी ५ लाख रुपयांचा निधी उपलब्ध करून देण्यासाठी आपण प्रयत्न करू, असे आश्वासन आमदार हलगेकर यांनी यावेळी दिले.

मंदिराच्या उर्वरित कामासाठी तीन लाखांच्या अर्थसाह्याचा प्रयत्न

भाजपचे राज्य कार्यकारिणी सदस्य प्रमोद अण्णा कोचेरी यांनी यावेळी मार्गदर्शन करताना हिंदू मंदिरे ही धार्मिक श्रद्धा, परंपरा आणि संस्कारांची प्रतीके असल्याचे सांगितले. मंदिरांशी जोडलेल्या धार्मिक रितीरिवाजांचे आणि सांस्कृतिक परंपरांचे जतन करणे ही प्रत्येकाची जबाबदारी आहे, असे त्यांनी नमूद केले.

पारिशवाड येथील लक्ष्मी मंदिराच्या उर्वरित बांधकामासाठी धर्मस्थळ अभिवृद्धी संघाच्या माध्यमातून तीन लाख रुपयांपर्यंत आर्थिक साहाय्य मिळवून देण्यासाठी आपण प्रयत्न करू, असे आश्वासन कोचेरी यांनी दिले. यासाठी आवश्यक असलेली कागदपत्रे देवस्थान कमिटीने उपलब्ध करून द्यावीत, असे आवाहनही त्यांनी केले.

मान्यवरांची उपस्थिती

या चौकट पूजन सोहळ्यास भाजपचे नेते सुभाष गुलशेट्टी, भाजप प्रवक्ते शंकर पाटील, भाजप नेते संजय कांची, शंकरगौडा पाटील यांच्यासह गावातील इतर मान्यवर आणि ग्रामस्थ मोठ्या संख्येने उपस्थित होते.

कार्यक्रमाचे सूत्रसंचालन नागेंद्र चौगला यांनी केले. ग्रामदेवता श्री लक्ष्मी मंदिराच्या उभारणीसाठी निधी उपलब्ध करून देण्याबाबत लोकप्रतिनिधी आणि मान्यवरांनी दिलेल्या आश्वासनांमुळे मंदिराच्या उर्वरित कामाला चालना मिळण्याची अपेक्षा ग्रामस्थांकडून व्यक्त करण्यात आली.

ಪಾರಿಶ್ವಾಡದಲ್ಲಿ ಗ್ರಾಮ ದೇವತೆ ಲಕ್ಷ್ಮೀ ದೇವಸ್ಥಾನದ ಚೌಕಟ್ಟು ಪೂಜೆ ಸಂಭ್ರಮದಿಂದ ನೆರವೇರಿಕೆ!

ಶಾಸಕ ವಿಠ್ಠಲ ಹಲಗೇಕರ್ ಅವರಿಂದ ಈಗಾಗಲೇ ₹10 ಲಕ್ಷ ಅನುದಾನ; ಮತ್ತಷ್ಟು ₹5 ಲಕ್ಷ ಒದಗಿಸಲು ಪ್ರಯತ್ನದ ಭರವಸೆ

ಖಾನಾಪುರ / ವರದಿಗಾರರು : ಖಾನಾಪುರ ತಾಲೂಕಿನ ಪಾರಿಶವಾಡ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಲಕ್ಷ್ಮೀ ದೇವಸ್ಥಾನದ ನಿರ್ಮಾಣ ಕಾರ್ಯದ ಅಂಗವಾಗಿ ಆಯೋಜಿಸಲಾಗಿದ್ದ ಚೌಕಟ್ಟು ಪೂಜಾ ಕಾರ್ಯಕ್ರಮವು ಭಾನುವಾರ ಧಾರ್ಮಿಕ ಶ್ರದ್ಧೆ ಹಾಗೂ ಸಂಭ್ರಮದ ವಾತಾವರಣದಲ್ಲಿ ನೆರವೇರಿತು. ಖಾನಾಪುರ ಕ್ಷೇತ್ರದ ಶಾಸಕ ವಿಠ್ಠಲರಾವ್ ಹಲಗೇಕರ್ ಅವರ ಹಸ್ತದಿಂದ ಪೂಜಾ ವಿಧಿವಿಧಾನಗಳು ಜರುಗಿದವು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವಿಠ್ಠಲರಾವ್ ಹಲಗೇಕರ್, ಗ್ರಾಮ ದೇವತೆ ಶ್ರೀ ಲಕ್ಷ್ಮೀ ದೇವಸ್ಥಾನವು ಗ್ರಾಮದ ಜನರ ಪ್ರಮುಖ ಆರಾಧನಾ ಕೇಂದ್ರವಾಗಬೇಕು. ಆದಿಶಕ್ತಿಯ ಸ್ವರೂಪವೆಂದು ಪೂಜಿಸಲ್ಪಡುವ ಗ್ರಾಮ ದೇವತೆಯ ದೇವಸ್ಥಾನದ ನಿರ್ಮಾಣದಿಂದ ಗ್ರಾಮದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವ ಹೆಚ್ಚಬೇಕು. ದೇವಸ್ಥಾನದ ಕಾಮಗಾರಿಯನ್ನು ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಲು ಗ್ರಾಮಸ್ಥರೆಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.

ದೇವಸ್ಥಾನದ ನಿರ್ಮಾಣ ಕಾರ್ಯಕ್ಕಾಗಿ ತಮ್ಮ ಶಾಸಕರ ನಿಧಿಯಿಂದ ಈಗಾಗಲೇ ₹10 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ. ದೇವಸ್ಥಾನದ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಸದರ ನಿಧಿಯಿಂದ ಹೆಚ್ಚುವರಿಯಾಗಿ ₹5 ಲಕ್ಷ ಅನುದಾನ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.

ದೇವಸ್ಥಾನದ ಕಾಮಗಾರಿಗೆ ₹3 ಲಕ್ಷ ಆರ್ಥಿಕ ನೆರವು ಕೊಡಿಸಲು ಪ್ರಯತ್ನ

ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ್ ಅಣ್ಣಾ ಕೋಚೇರಿ ಮಾತನಾಡಿ, ಹಿಂದೂ ದೇವಸ್ಥಾನಗಳು ಧಾರ್ಮಿಕ ಶ್ರದ್ಧೆ, ಸಂಪ್ರದಾಯ ಹಾಗೂ ಸಂಸ್ಕಾರಗಳ ಪ್ರತೀಕಗಳಾಗಿವೆ. ದೇವಸ್ಥಾನಗಳಿಗೆ ಸಂಬಂಧಿಸಿದ ಧಾರ್ಮಿಕ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಪ್ರತಿಯೊಬ್ಬರೂ ಉಳಿಸಿ ಬೆಳೆಸಬೇಕು ಎಂದು ಹೇಳಿದರು.

ಪಾರಿಶವಾಡದ ಶ್ರೀ ಲಕ್ಷ್ಮೀ ದೇವಸ್ಥಾನದ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಧರ್ಮಸ್ಥಳ ಅಭಿವೃದ್ಧಿ ಸಂಘದ ಮೂಲಕ ₹3 ಲಕ್ಷದವರೆಗೆ ಆರ್ಥಿಕ ನೆರವು ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ತಿಳಿಸಿದರು. ಈ ನಿಟ್ಟಿನಲ್ಲಿ ಅಗತ್ಯವಿರುವ ದಾಖಲೆಗಳನ್ನು ದೇವಸ್ಥಾನ ಸಮಿತಿಯವರು ಒದಗಿಸಬೇಕು ಎಂದು ಮನವಿ ಮಾಡಿದರು.

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಪಂಥ ಬಾಳೆಕುಂದ್ರಿ ಪೂಜ್ಯಶ್ರೀ ಶಂಕರ್ ಮಹಾರಾಜ್, ಬಿಜೆಪಿ ಮುಖಂಡ ಸುಭಾಷ್ ಗುಳಶೆಟ್ಟಿ, ಬಿಜೆಪಿ ವಕ್ತಾರ ಶಂಕರ ಪಾಟೀಲ, ಬಿಜೆಪಿ ಮುಖಂಡ ಸಂಜಯ್ ಕಾಂಚಿ, ಶಂಕರಗೌಡ ಪಾಟೀಲ ಸೇರಿದಂತೆ ಗ್ರಾಮದ ಇತರ ಗಣ್ಯರು, ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ನಾಗೇಂದ್ರ ಚೌಗಳಾ ಕಾರ್ಯಕ್ರಮ ನಿರೂಪಿಸಿದರು.

Do Share

You may have missed

error: Content is protected !!
Call Us