चापगावात दुर्गामाता दौड उत्साहात! छत्रपती शिवरायांच्या मूर्तीचे नूतनीकरण; २०० हून अधिक धारकऱ्यांचा सहभाग
चापगावात दुर्गामाता दौड उत्साहात!
छत्रपती शिवरायांच्या मूर्तीचे नूतनीकरण; २०० हून अधिक धारकऱ्यांचा सहभाग
खानापूर / प्रतिनिधी : खानापूर तालुक्यातील चापगाव येथे शिवप्रतिष्ठान हिंदुस्थानच्या वतीने प्रतिवर्षाप्रमाणे यंदाही दुर्गामाता दौडीचे आयोजन करण्यात आले आहे. या दौडीच्या पार्श्वभूमीवर छत्रपती शिवाजी महाराजांच्या मूर्तीचे नूतनीकरण व चौथऱ्याचे सुशोभीकरण करण्यात आले. यानिमित्त गावात शिवभक्तांमध्ये उत्साहाचे वातावरण निर्माण झाले आहे.
शनिवारी सायंकाळी छत्रपती शिवराजे प्रतिष्ठानच्या वतीने शिवरायांच्या मूर्तीला दुग्धाभिषेक घालून पुष्पांजली अर्पण करण्यात आली. तसेच मूर्तीच्या सुशोभीकरणासाठी आर्थिक मदत करणाऱ्या देणगीदारांचा सन्मान करण्यात आला. प्रतिष्ठानचे अध्यक्ष एम. आर. पाटील यांच्या अध्यक्षतेखाली हा कार्यक्रम पार पडला. उपस्थितांचे स्वागत पत्रकार पिराजी कुऱ्हाडे यांनी केले.
यावेळी ग्रामपंचायतीचे माजी सदस्य मारुती चोपडे, हाडाचे वैद्य रोशन पाटील, संतोष कदम, संजय बेळगावकर, मल्लाप्पा मारीहाळ, शिवाजी मादार, मष्णू सुतार यांच्यासह अनेक शिवभक्त व ग्रामस्थ उपस्थित होते.
पहिल्या दिवशी पहाटे दुर्गामाता दौडीला प्रारंभ
रविवारी पहाटे दुर्गामाता दौडीचे पहिले पुष्प उत्साहात पार पडले. छत्रपती शिवाजी महाराजांच्या मूर्तीस अभिवादन करून मूर्तिसमोर ध्येयमंत्र व प्रार्थना करण्यात आली. त्यानंतर दुर्गामाता मंदिरापासून दौडीला सुरुवात झाली. गावातील विविध मार्गांवरून मार्गक्रमण करत फोंडेश्वर गल्लीत श्रीकृष्ण मंदिराजवळ दौडीची सांगता झाली.
या दुर्गामाता दौडीत २०० हून अधिक अबालवृद्ध धारकऱ्यांनी उत्स्फूर्त सहभाग घेतला. शिवरायांचा जयघोष, ध्येयमंत्र आणि धार्मिक वातावरणामुळे परिसरात उत्साह संचारला होता. दुर्गामाता दौडीच्या माध्यमातून युवकांमध्ये राष्ट्रभक्ती, शिस्त, संघटनभावना आणि हिंदवी स्वराज्याच्या विचारांची प्रेरणा जागविण्याचा प्रयत्न करण्यात येत आहे.
ಚಾಪಗಾಂವದಲ್ಲಿ ದುರ್ಗಾಮಾತಾ ಓಟಕ್ಕೆ ಭರ್ಜರಿ ಚಾಲನೆ!
ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ನವೀಕರಣ; 200ಕ್ಕೂ ಹೆಚ್ಚು ಧಾರಕರಿ ಭಾಗಿ
ಖಾನಾಪುರ / ಪ್ರತಿನಿಧಿ : ಖಾನಾಪುರ ತಾಲೂಕಿನ ಚಾಪಗಾಂವ ಗ್ರಾಮದಲ್ಲಿ ಶಿವಪ್ರತಿಷ್ಠಾನ ಹಿಂದೂಸ್ಥಾನ ಸಂಘಟನೆಯ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ದುರ್ಗಾಮಾತಾ ಓಟವನ್ನು ಆಯೋಜಿಸಲಾಗಿದೆ. ಈ ಓಟದ ನಿಮಿತ್ತ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯನ್ನು ನವೀಕರಿಸಿ, ಕಟ್ಟೆಯ ಸೌಂದರ್ಯೀಕರಣ ಕಾರ್ಯವನ್ನು ಕೈಗೊಳ್ಳಲಾಗಿದೆ. ಇದರಿಂದ ಗ್ರಾಮದಲ್ಲಿ ಶಿವಭಕ್ತರಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
ಶನಿವಾರ ಸಂಜೆ ಛತ್ರಪತಿ ಶಿವರಾಜೆ ಪ್ರತಿಷ್ಠಾನದ ವತಿಯಿಂದ ಶಿವಾಜಿ ಮಹಾರಾಜರ ಮೂರ್ತಿಗೆ ಹಾಲಿನ ಅಭಿಷೇಕ ನೆರವೇರಿಸಿ, ಪುಷ್ಪಾರ್ಚನೆ ಸಲ್ಲಿಸಲಾಯಿತು. ಮೂರ್ತಿಯ ನವೀಕರಣ ಹಾಗೂ ಕಟ್ಟೆಯ ಸೌಂದರ್ಯೀಕರಣ ಕಾರ್ಯಕ್ಕೆ ಆರ್ಥಿಕ ನೆರವು ನೀಡಿದ ದಾನಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ಎಂ. ಆರ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಪತ್ರಕರ್ತ ಪಿರಾಜಿ ಕುರ್ಹಾಡೆ ಅವರು ಉಪಸ್ಥಿತರನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಮಾರುತಿ ಚೋಪಡೆ, ಮೂಳೆ ಚಿಕಿತ್ಸಕ ರೋಶನ್ ಪಾಟೀಲ, ಸಂತೋಷ ಕದಂ, ಸಂಜಯ ಬೆಳಗಾವಕರ, ಮಲ್ಲಪ್ಪ ಮಾರಿಹಾಳ, ಶಿವಾಜಿ ಮಾದಾರ, ಮಷ್ಣು ಸುತಾರ ಸೇರಿದಂತೆ ಅನೇಕ ಶಿವಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
200ಕ್ಕೂ ಹೆಚ್ಚು ಧಾರಕರಿಯಿಂದ ದುರ್ಗಾಮಾತಾ ಓಟದಲ್ಲಿ ಭಾಗಿ
ಭಾನುವಾರ ಮುಂಜಾನೆ ದುರ್ಗಾಮಾತಾ ಓಟದ ಮೊದಲ ದಿನದ ಕಾರ್ಯಕ್ರಮ ಉತ್ಸಾಹದಿಂದ ನಡೆಯಿತು. ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ಎದುರು ಧ್ಯೇಯಮಂತ್ರ ಹಾಗೂ ಪ್ರಾರ್ಥನೆ ಸಲ್ಲಿಸಿದ ಬಳಿಕ ದುರ್ಗಾಮಾತಾ ದೇವಸ್ಥಾನದಿಂದ ಓಟಕ್ಕೆ ಚಾಲನೆ ನೀಡಲಾಯಿತು.
ಗ್ರಾಮದ ವಿವಿಧ ರಸ್ತೆಗಳಲ್ಲಿ ಸಾಗಿದ ಓಟವು ಫೊಂಡೇಶ್ವರ ಗಲ್ಲಿಯಲ್ಲಿರುವ ಶ್ರೀಕೃಷ್ಣ ದೇವಸ್ಥಾನದ ಬಳಿ ಸಮಾಪ್ತಿಗೊಂಡಿತು. ಈ ಓಟದಲ್ಲಿ 200ಕ್ಕೂ ಹೆಚ್ಚು ಹಿರಿಯರು, ಯುವಕರು ಹಾಗೂ ಮಕ್ಕಳು ಸೇರಿದಂತೆ ಧಾರಕರಿಗಳು ಉತ್ಸಾಹದಿಂದ ಪಾಲ್ಗೊಂಡರು.
ಓಟದ ಸಂದರ್ಭದಲ್ಲಿ ಶಿವಾಜಿ ಮಹಾರಾಜರ ಜಯಘೋಷ ಮೊಳಗಿತು. ದೇಶಭಕ್ತಿ, ಶಿಸ್ತು, ಸಂಘಟನಾ ಮನೋಭಾವ ಹಾಗೂ ಸ್ವರಾಜ್ಯದ ಆದರ್ಶಗಳನ್ನು ಯುವಜನರಲ್ಲಿ ಬಿತ್ತುವ ಉದ್ದೇಶದಿಂದ ದುರ್ಗಾಮಾತಾ ಓಟವನ್ನು ಆಯೋಜಿಸಲಾಗಿದೆ. ಮಹಿಳೆಯರು ಸೇರಿದಂತೆ ಅನೇಕ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಓಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
