Oplus_16777216
खानापूर लाईव्ह न्युज / प्रतिनिधी : तालुक्यातील बेकवाड गावातील शेतकरी गुंजप्पा विठ्ठल पाटील यांची बैलजोडी काही दिवसांपूर्वी तलावाच्या काठावर असलेल्या खड्ड्यात पडून मृत्युमुखी पडल्याची बातमी ऐकल्यानंतर, खानापूर तालुक्यातील अनेकांनी त्या शेतकऱ्याच्या घरी सोमवारी दुपारी भेट दिली व त्यांचे सांत्वन केले. या दुर्दैवी घटनेची दखल कर्नाटक राज्याच्या महिला आणि बालकल्याण खात्याच्या मंत्री लक्ष्मी हेब्बाळकर यांनी दखल घेतली व त्या कुटुंबांना अर्थसहाय्य करण्याचा निर्णय घेतला. यानुसार त्यांचे भाऊ आणि विधान परिषद सदस्य चन्नराज हट्टीहोळी, काँग्रेस युवा नेते मृणाल हेब्बलकर यांच्या मार्गदर्शनाखाली त्यांनी “आम्ही तुमच्यासोबत आहोत” असे म्हणत त्यां शेतकऱ्यांना आर्थिक आधार व सांत्वन केले. ते म्हणाले, “कोणत्याही कारणास्तव घाबरण्याची गरज नाही.” यावेळी मंत्री लक्ष्मी हेब्बाळकर यांच्या सूचनेवरून मृणाल हेब्बाळकर यांनी त्यांना ५० हजार रुपये रोख देऊन शेतकरी कुटुंबाला धीर देण्याचे काम केले.
यावेळी महादेव पाटील, शिवराम पाटील, चेन्नकाप्पा पाटील, ज्योतिबा केसरेकर, ज्योतिबा गुरवा, मोहन एलुरकर, गजानना पाटील, परशुराम मडिवळकर, राजेंद्र कब्बूर, मारुती पाटील, लक्ष्मण कासारलेकर, महादेव घाडी, सुभाष चलवादी आदी उपस्थित होते.
ಸಚಿವೆ ಲಕ್ಷ್ಮಿ ಅಕ್ಕಾ ಹೆಬ್ಬಾಳ್ಕರ ಅವರಿಂದ ಬೇಕವಾಡ ರೈತ ಗುಂಜಪ್ಪ ಕುಟುಂಬಕ್ಕೆ 50 ಸಾವಿರ ಸಹಾಯ ಹಸ್ತ:
ಖಾನಾಪುರ(ಗ್ರಾ): ತಾಲೂಕಿನ ಬೇಕವಾಡ ಗ್ರಾಮದ ರೈತ ಗುಂಜಪ್ಪ ವಿಠ್ಠಲ ಪಾಟೀಲ ಅವರ ಎತ್ತ್ಗಗಳು ಇತ್ತೀಚಿನ ಕೆಲವು ದಿನಗಳ ಹಿಂದೆ ನೀರು ಕುಡಿಯಲು ಕೆರೆಗೆ ಹೋದಾಗ ಕೆರೆಯ ದಡದಲ್ಲಿರುವ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ ಸುದ್ದಿ ತಿಳಿದು ರೈತನ ಕುಟುಂಬದ ಮನೆಗೆ ಭೇಟಿ ನೀಡಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಜೋಡೆತ್ತುಗಳು ಸಾವನ್ನಪ್ಪಿ ರೈತ ಕುಟುಂಬಕ್ಕೆ ತುಂಬಾ ನಷ್ಟವಾಗಿರುವುದನ್ನು ಗಮನಿಸಿದ ಖಾನಾಪುರ ತಾಲೂಕಿನ ಮನೆಮಗಳು ಹಾಗೂ ಕರ್ನಾಟಕ ಸರ್ಕಾರದ ಸಚಿವೆಯಾದ ಲಕ್ಷ್ಮಿ ಅಕ್ಕಾ ಹೆಬ್ಬಾಳ್ಕರ್ ಅವರ ಸೂಚನೆ ಮೇರೆಗೆ ಅವರ ಸಹೋದರ ವಿಧಾನಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹಳಿ ಅವರ ಮಾರ್ಗದರ್ಶನದಲ್ಲಿ, ಕಾಂಗ್ರೆಸ್ ಪಕ್ಷದ ಯುವ ನಾಯಕರು ಹಾಗೂ ಲಕ್ಷ್ಮಿ ಅಕ್ಕ ಹೆಬ್ಬಾಳ್ಕರ್ ಅವರ ಸುಪುತ್ರರಾದ ಮೃಣಾಲ್ ಹೆಬ್ಬಾಳಕರ ಅವರು ಧೈರ್ಯ ತುಂಬುವ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಯಾವುದೇ ಕಾರಣಕ್ಕೆ ರೈತ ವರ್ಗದವರು ಭಯಪಡುವ ಅವಶ್ಯಕತೆ ಇಲ್ಲ ಅಂದು ದೈರ್ಯ ತುಂಬುವ ಮೂಲಕ ಸಾಂತ್ವನ ಹೇಳಿದರು.
ಇದೇ ಸಂದರ್ಭದಲ್ಲಿ ಅವರಿಗೆ ಸಚಿವರಾದ ಲಕ್ಷ್ಮಿ ಅಕ್ಕಾ ಹೆಬ್ಬಾಳಕರ ಅವರ ಸೂಚನೆ ಮೇರೆಗೆ ಅವರ ಸುಪುತ್ರರಾದ ಮೃಣಾಲ್ ಹೆಬ್ಬಾಳಕರ ಅವರು 50,000 ನಗದು ಹಣವನ್ನು ನೀಡಿ ರೈತನ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದರು.
ಈ ಸಂದರ್ಭದಲ್ಲಿ ಮಹಾದೇವ ಪಾಟೀಲ, ಶಿವರಾಮ ಪಾಟೀಲ, ಚೆನ್ನಕಪ್ಪ ಪಾಟೀಲ, ಜ್ಯೋತಿಬಾ ಕೆಸರೆಕರ, ಜ್ಯೋತಿಭಾ ಗುರವ, ಮೋಹನ ಎಲ್ಲೂರಕರ, ಗಜಾನನ ಪಾಟೀಲ, ಪರಶುರಾಮ್ ಮಡಿವಾಳಕರ, ರಾಜೇಂದ್ರ ಕಬ್ಬೂರ, ಮಾರುತಿ ಪಾಟೀಲ, ಲಕ್ಷ್ಮಣ ಕಸರಲ್ಲೇಖರ, ಮಹಾದೇವ ಘಾಡಿ, ಸುಭಾಷ ಚಲವಾದಿ ಹಾಗೂ ಇತರರು ಹಾಜರಿದ್ದರು