IMG-20250419-WA0021

खानापुर लाईव्ह न्युज प्रतिनिधी :

खानापूर तालुक्यातील लिंगनमठ येथील सार्वजनिक हिंदू स्मशानभूमीकडे जाणाऱ्या रस्त्याच्या समस्येबाबत गेल्या अनेक वर्षापासून वाद आहे. येथील स्मशानभूमीकडे जाणाऱ्या रस्त्यावर खाजगी मालकाने सर मारून स्मशानभूमीकडे जाणारी वाट अडवली आहे त्यामुळे येथील हिंदू समशान भूमी कडे जाणाऱ्या रस्त्याचा वाद चिरगळला आहे. परिणामी शनिवारी गावातील शेकडो नागरिकांनी खानापूर आळनावर राज्य मार्गावर या आंदोलन छेडून स्मशान भूमीचा रस्ता करून द्यावा अशी आग्रही मागणी केली. व दिवसभर रास्ता रोको केला ग्रामपंचायत अध्यक्ष काशीम हट्टीहोळी यांनी ग्रामस्थांचे नेतृत्व करत जोपर्यंत महसूल खाते स्मशानभूमीच्या रस्त्याच्या वादावर तोडगा काढत नाही तोपर्यंत आंदोलन घेणार नाही असा पवित्रा घेतला त्यामुळे आंदोलन तापले. अखेर सायंकाळी बिडी विभागाचे उप – तहसीलदार बडसीकर यांनी आंदोलन स्थळी भेट देऊन येत्या मंगळवारी यासंदर्भात त्या मालकांशी चर्चा करून तोडगा काढला मुख्य रस्त्यापासून सार्वजनिक स्मशानभूमीपर्यंत एक रस्ता आहे. पण गेल्या काही दिवसांपासून, आळनावर येथील रहिवासी सुभाष एलोजी राहुत नामक हे का खाजगी जमीन मालकाची शेती आहे. सदर मालक स्मशानभूमीकडे जाण्यासाठी आपल्या जमिनीतून रस्ता देण्यास नकार करत आहे. वारंवार उद्भवणाऱ्या या समस्ये संदर्भात प्रसंगी ग्रामस्थांनी रस्त्यावरच मृतदेह ठेवून यापूर्वी आंदोलन केले त्यावेळी ही रस्त्याची समस्या दूर करण्याची आश्वासन अधिकाऱ्यांनी दिले होते मात्र त्यावर भक्कमपणे तोडगाच निघाला नाही. जमीन मालक राऊत यांनी पुन्हा या स्मशान भूमी कडे जाणाऱ्या रस्त्यावर खड्डा मारून अडवल्याने ग्रामस्थांनी पुन्हा आंदोलनाचा पवित्रा घेऊन आज शनिवारी ठिय्या आंदोलन छेडले. या समस्येवर तोडगा काढण्यासाठी ग्रामपंचायत, लिंगनमठ आणि सर्व ग्रामस्थांनी एकत्र येऊन जिल्हाधिकारी आणि तहसीलदार कार्यालयात अनेक वेळा दाद मागितली पण तोडगा निघाला नाही.

आज शनिवारी पुन्हा त्या जमीन मालकाने स्मशानभूमीच्या वाटेवर घर बांधण्यासाठी जेसीबीने ढिगारा मोजण्याचे आणि काढण्याचे काम सुरू केले, तेव्हा ग्रामपंचायत अध्यक्ष, ग्रामपंचायत विकास अधिकारी आणि ग्राम लेखापाल घटनास्थळी धावले, काम थांबवले आणि वरिष्ठ तालुकास्तरीय अधिकाऱ्यांना फोनवरून माहिती दिली. तथापि, तालुकास्तरीय अधिकारी उपस्थित नसल्याने, ग्रामस्थांनी अचानक ताळगुप्पा-खानापूर राज्य महामार्ग सुमारे दोन तास रोखून धरला आणि निषेध केला. बीडीचे उप-तहसीलदार रोहित बडचीकर आणि नंदगड पोलिस स्टेशनचे पोलिस निरीक्षक एस.सी. पाटील साहेब यांना हे कळताच त्यांनी ग्रामस्थांना समजावून सांगितले. त्यांनी पुढील मंगळवारी खानापूर तहसीलदार साहेबांना लिंगामठ गावात नेले आणि स्मशानभूमीच्या रस्त्याची समस्या सोडवण्याचे आश्वासन दिले, त्यानंतर आंदोलन मागे घेण्यात आले. ग्रामपंचायत अध्यक्षा काशिम हत्तीहोळी, पीडीओ कावेरी हिमकर, ग्राम लेखापाल परशुराम केसरोला, ग्रामपंचायत उपाध्यक्षा सरोजा नायक, ग्रामपंचायत सदस्या शोभा माटोल्ली, राजू रपाटी, गावातील ज्येष्ठ पांडुरंग मिटागर, महांतेश सांगोळी, मावलु माटोल्ली, मावळे अँड. मातोल्ली. शिवपूजी, इराप्पा वाल्मिकी, बाबूलाल पटेल, मारुती बुडाप्पानवरा, शिवानंद बागेवाडी, अप्पय्या हिरेमठ, कंठू सांगोली, प्रकाश गौडा पाटील, परशुराम नायक यांच्यासह शेकडो महिला व ग्रामस्थ उपस्थित होते.

ಲಿಂಗನಮಠ ಗ್ರಾಮದ ಸ್ಮಶಾನ ದಾರಿಗಾಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಿದ ಗ್ರಾಮಸ್ಥರು:

ಖಾನಾಪುರ (ಗ್ರಾ): ಕಳೆದ ಸುಮಾರು ವರ್ಷಗಳಿಂದ ಗ್ರಾಮದ ಸಾರ್ವಜನಿಕ ಸ್ಮಶಾನಕ್ಕೆ ಹೋಗುವ ದಾರಿಯ ಸಮಸ್ಯೆ ಕುರಿತು ತಹಶೀಲ್ದಾರ ಕಚೇರಿಗೆ ಮನವಿ ನೀಡಿ, ಕಳೆದ ಕೆಲವು ದಿನಗಳ ಹಿಂದೆ ತಡರಾತ್ರಿ ವರೆಗೆ ಶವ ಇಟ್ಟು ಪ್ರತಿಭಟಿಸಿದರು ಸಹ ತಾಲೂಕಾ ಮಟ್ಟದ ಅಧಿಕಾರಿಗಳು ನಮ್ಮೂರಿಗಿರುವ ಸ್ಮಶಾನ ದಾರಿಯ ಸಮಸ್ಯೆ ಬಗೆಹರಿಸುತ್ತಿಲ್ಲ. ಹಾಗೂ ದಾರಿ ಬಂದ್ ಮಾಡುತ್ತಿರುವ ಸುಭಾಷ ಯಲ್ಲೋಜಿ ರಾಹುತ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮ ಪಂಚಾಯತ ಅಧ್ಯಕ್ಷರಾದ ಕಾಶೀಮ ಹಟ್ಟಿಹೋಳಿ ಹೇಳಿದರು.

ತಾಲೂಕಿನ ಲಿಂಗನಮಠ ಗ್ರಾಮದ ಸಾರ್ವಜನಿಕ ಸ್ಮಶಾನಕ್ಕೆ ಹೋಗುವ ದಾರಿಯ ಹತ್ತಿರ ಶನಿವಾರದಂದು ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡುತ್ತಿದ್ದ ಗ್ರಾಮಸ್ಥರ ಪರವಾಗಿ ಮಾತನಾಡಿದರು.

ಲಿಂಗನಮಠ ಗ್ರಾಮದಲ್ಲಿರುವ ಸಾರ್ವಜನಿಕ ಸ್ಮಶಾನಕ್ಕೆ ಹೋಗಲು ಮುಖ್ಯರಸ್ತೆಯಿಂದ ದಾರಿಯ ವ್ಯವಸ್ಥೆ ಇದೆ. ಆದರೆ ಕಳೆದ ಕೆಲವು ದಿನಗಳಿಂದ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಇರುವ ಆಸ್ತಿಯ ಮಾಲೀಕರಾದ ಅಳ್ಳಾವರ ಗ್ರಾಮದವರಾದ ಸುಭಾಷ್ ಎಲ್ಲೊಜಿ ರಾಹುತ ಅವರು ಜೆಸಿಬಿ ಮೂಲಕ ತೆಗ್ಗು ಗುಂಡಿಯನ್ನು ತೆಗೆದು ರಸ್ತೆಯನ್ನು ಬಂದ್ ಮಾಡಿದ್ದರು. ಇದರಿಂದ ಕಳೆದೆರಡು ವರ್ಷ ಸ್ಮಶಾನಕ್ಕೆ ಶವ ತೆಗೆದುಕೊಂಡು ಹೋಗಲು ಗ್ರಾಮಸ್ಥರಿಗೆ ಬಹಳ ಸಮಸ್ಯೆ ಉಂಟಾಗಿತ್ತು. ಈ ಸಮಸ್ಯೆಯ ಕುರಿತು ಗ್ರಾಮ ಪಂಚಾಯಿತಿ ಲಿಂಗನಮಠ ಹಾಗೂ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಕಚೇರಿಗೆ ಹಲವಾರು ಬಾರಿ ಸಮಸ್ಯೆಯ ಪರಿಹಾರಕ್ಕಾಗಿ ಮನವಿ ಸಲ್ಲಿಸಿದರು ಸಹ ಯಾರೊಬ್ಬರೂ ತಾಲೂಕ ಮಟ್ಟದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಹೀಗಾಗಿ ಕಳೆದ ತಿಂಗಳು ಅನಾಥ ಶವವೊಂದು ಗ್ರಾಮ ಪಂಚಾಯಿತಿ ವತಿಯಿಂದ ಸಾರ್ವಜನಿಕ ಸ್ಮಶಾನಕ್ಕೆ ಅಂತ್ಯಸಂಸ್ಕಾರ ಮಾಡಲು ತೆರಳುತ್ತಿದ್ದಾಗ ರಸ್ತೆ ಸಮಸ್ಯೆ ಉದ್ಭವಿಸಿದ್ದರಿಂದ ಇದರ ಬಗ್ಗೆ ಖಾನಾಪುರ ತಹಶೀಲ್ದಾರ ಇಲಾಖೆಯ ಗಮನಕ್ಕೆ ತಂದರು ಸಹ ಯಾರೊಬ್ಬರೂ ಅಧಿಕಾರಿಗಳು ಬರದೇ ಇದ್ದಿದ್ದರಿಂದ ಅವತ್ತು ತಡರಾತ್ರಿವರೆಗೆ ಗ್ರಾಮಸ್ಥರು ಅನಾಥ ಶವವನ್ನು ರಸ್ತೆಯಲ್ಲಿಟ್ಟು ಪ್ರತಿಭಟಿಸಿದ್ದರು.

ಅವತ್ತಿನ ದಿವಸ ಉಪತಾಶಿಲ್ದಾರ್ ರೋಹಿತ ಬಡಚೇಕರ್ ಹಾಗೂ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಬಂದ್ ಮಾಡಿದ ರಸ್ತೆಯನ್ನು ತೆಗೆದು ಸಾರ್ವಜನಿಕ ಸ್ಮಶಾನಕ್ಕೆ ಹೋಗಲು ರಸ್ತೆಯ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇವತ್ತು ಶನಿವಾರದಂದು ಬೆಳಿಗ್ಗೆ ಏಕಾಏಕಿ ಆಸ್ತಿಯ ಮಾಲೀಕರಾದ ಸುಭಾಷ ರಾಹುತ ಅವರು ಸ್ಮಶಾನಕ್ಕೆ ಹೋಗುವ ದಾರಿಯಲ್ಲಿಯೇ ಮನೆ ಕಟ್ಟುವ ಸಲುವಾಗಿ ಅಳತೆ ಮಾಪನ ಹಾಕಿ ಜೆಸಿಬಿಯಿಂದ ತೆಗ್ಗುಂಡಿ ತೆಗೆಯಲು ಮುಂದಾದಾಗ, ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳಕ್ಕೆ ಹೋಗಿ ಕಾಮಗಾರಿಯನ್ನು ತಡೆದು ತಾಲೂಕ ಮಟ್ಟದ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ಆದರೆ ತಾಲೂಕ ಮಟ್ಟದ ಯಾವೊಬ್ಬ ಅಧಿಕಾರಿಗಳು ಬರದೇ ಇದ್ದುದರಿಂದ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಏಕಾಏಕಿ ತಾಳಗುಪ್ಪ-ಖಾನಾಪುರ ರಾಜ್ಯ ಹೆದ್ದಾರಿಯನ್ನು ಅಂದಾಜು ಎರಡು ಗಂಟೆಗಳ ಕಾಲ ತಡೆದು ಪ್ರತಿಭಟಿಸಿದಾಗ ಇದನ್ನರಿತ ಬೀಡಿ ಉಪತಾಶಿಲ್ದಾರ ರೋಹಿತ ಬಡಚಿಕರ ಹಾಗೂ ನಂದಗಡ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್ ಸಿ ಪಾಟೀಲ್ ಸಾಹೇಬರು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿ ಬರುವ ಮಂಗಳವಾರದಂದು ಖಾನಾಪುರ ತಹಶೀಲ್ದಾರ್ ಸಾಹೇಬರಿಗೆ ಲಿಂಗನಮಠ ಗ್ರಾಮಕ್ಕೆ ಕರೆದುಕೊಂಡು ಬಂದು ಸ್ಮಶಾನ ದಾರಿಯ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದಾಗ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಕಾಶೀಮ ಹಟ್ಟಿಹೋಳಿ, ಪಿಡಿಒ ಕಾವೇರಿ ಹಿಮಕರ, ಗ್ರಾಮ ಲೆಕ್ಕಾಧಿಕಾರಿ ಪರುಶುರಾಮ ಕೆಸರೊಳ, ಗ್ರಾಪಂ ಉಪಾಧ್ಯಕ್ಷರಾದ ಸರೋಜಾ ನಾಯಕ, ಗ್ರಾಪಂ ಸದಸ್ಯರಾದ ಶೋಭಾ ಮಾಟೊಳ್ಳಿ, ರಾಜು ರಪಾಟಿ, ಪಾಂಡುರಂಗ ಮೀಟಗಾರ, ಮಹಾಂತೇಶ ಸಂಗೊಳ್ಳಿ, ಮಾವಳಿ ಮಾಟೊಳ್ಳಿ, ಬಾಳು ಅಂಬಡಗಟ್ಟಿ, ರವಿ ಛಲವಾದಿ, ದೇಮಣ್ಣ ಶಿವಪುಜಿ, ಈರಪ್ಪ ವಾಲ್ಮೀಕಿ, ಬಾಬುಲಾಲ ಪಟೇಲ, ಮಾರುತಿ ಬುದಪ್ಪನವರ, ಶಿವಾನಂದ ಬಾಗೇವಾಡಿ, ಅಪ್ಪಯ್ಯ ಹಿರೇಮಠ, ಕಾಂತು ಸಂಗೊಳ್ಳಿ, ಪ್ರಕಾಶಗೌಡ ಪಾಟೀಲ, ಪರಶುರಾಮ ನಾಯಕ ಹಾಗೂ ನೂರಾರು ಸಂಖ್ಯೆಯ ಮಹಿಳೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

Do Share

Leave a Reply

Your email address will not be published. Required fields are marked *

error: Content is protected !!
Call Us