Oplus_16908288

Oplus_16908288

खानापूर लाईव्ह न्युज/ प्रतिनिधी :

केंद्र सरकारने सेंट्रल व्हिलेज पॉटरी इन्स्टिट्यूट (सीव्हीपीआय), खानापूरला मोठी आर्थिक मदत जाहीर केली आहे, ही कर्नाटकातील एकमेव आणि ऐतिहासिक संस्था आहे जी कुंभारकाम क्षेत्रात कौशल्य प्रशिक्षण देते. जवळजवळ पाच दशके जुनी असलेली या संस्थेची इमारत पूर्णपणे जीर्ण अवस्थेत पोहोचली आहे, ज्यामुळे प्रशिक्षणार्थी आणि कर्मचाऱ्यांच्या सुरक्षिततेला गंभीर धोका निर्माण झाला आहे आणि खादी आणि ग्रामोद्योग आयोगाने (केव्हीआयसी) त्याच ठिकाणी अत्याधुनिक नवीन प्रशिक्षण इमारत बांधण्यासाठी ₹11.83 कोटींचे अनुदान मंजूर केले आहे. अशी माहिती खानापुर भाजपाचे जिल्हा उपाध्यक्ष प्रमोद कोचेरी यांनी खानापूर लाईव्ह शी बोलताना दिले.

यासंदर्भात अधिक माहिती देताना प्रमोद कोचेरी म्हणाले, खासदार श्री. विश्वेश्वर हेगडे कागेरी यांनी संस्थेला नुकत्याच भेट दिल्यानंतर ही बाब केंद्रीय सूक्ष्म, लघु आणि मध्यम उद्योग मंत्री यांच्या निदर्शनास आणून दिली होती. पॉलिटेक्निक आणि सिव्हिल इंजिनिअरिंग पदवीधरांसह अनेक विद्यार्थ्यांना प्रशिक्षण देण्यात, निवास सुविधांसह, त्यांना रोजगारक्षम कौशल्ये प्रदान करण्यात आणि बेरोजगार तरुणांना आणि कुंभार समुदायाला सक्षम करण्यात सीव्हीपीआय महत्त्वाची भूमिका बजावत आहे. खासदारांनी त्यांच्या याचिकेत भर दिला होता की संस्थेचा धोक्यात आलेला वारसा जतन करण्यासाठी आणि प्रशिक्षण वातावरण सुधारण्यासाठी नवीन इमारतीचे बांधकाम आवश्यक आहे.

या महत्त्वाच्या प्रकल्पाच्या अंमलबजावणीसाठी केव्हीआयसीने राष्ट्रीय इमारत बांधकाम महामंडळ (एनबीसीसी) ला ₹11.83 कोटी मंजूर केले आहेत आणि काम सुरू करण्यासाठी सुरुवातीचे पाऊल म्हणून व्याजमुक्त आगाऊ रक्कम देखील जारी केली आहे.

संस्थेच्या आवश्यकतांचा आढावा घेण्यासाठी, केव्हीआयसी आणि एनबीसीसी अधिकाऱ्यांच्या संयुक्त पथकाने प्रस्तावित बांधकाम स्थळाला भेट दिली आणि भौतिक आणि तांत्रिक परिस्थितीची व्यापक तपासणी केली. संयुक्त तपासणीदरम्यान झालेल्या चर्चेच्या आधारे, एनबीसीसीला स्टील आणि रिइन्फोर्स्ड काँक्रीट (आरसीसी) स्ट्रक्चरल डिझाइनसाठी योग्य असलेला सुधारित तांत्रिक आराखडा आणि खर्च अंदाज केव्हीआयसीला सादर करण्याचे निर्देश देण्यात आले आहेत. या प्रकल्पाच्या अंमलबजावणीमुळे कुंभारकाम व्यवसाय करण्यास उत्सुक असलेल्या प्रशिक्षणार्थींसाठी एक सुरक्षित, प्रेरणादायी आणि आधुनिक प्रशिक्षण केंद्र उपलब्ध होईल. अशा प्रकल्पांमुळे भविष्यात स्किल इंडिया योजनेअंतर्गत प्रशिक्षण देण्यासाठी एक केंद्र म्हणून पद्धतशीरपणे विकसित होण्यास मदत होईल. हा प्रकल्प कुंभारकाम व्यवसायाला चालना देण्यास आणि कुशल मानवी संसाधने निर्माण करण्यास मदत करेल. असा आशावादही त्यांनी यावेळी व्यक्त केला. खासदार विश्वेश्वर हेगडे कागिरी यांनी खानापुरातील या सीव्हीपीआयच्या उन्नतीसाठी उचललेले हे पाऊल हे विकासात्मक दृष्टिकोन व कुंभारी कलेला वाव देणारा ठरेल यात शंका नाही

ಖಾನಾಪುರದ CVPI ಸಂಸ್ಥೆಗೆ ಬಹುದೊಡ್ಡ ರಿಲೀಫ್: ಹೊಸ ಕಟ್ಟಡ ನಿರ್ಮಾಣಕ್ಕೆ ₹11.83 ಕೋಟಿ ಮಂಜೂರು.

ಕುಂಬಾರಿಕೆ ಕ್ಷೇತ್ರದಲ್ಲಿ ಕೌಶಲ್ಯ ತರಬೇತಿಯನ್ನು ನೀಡುವ ಕರ್ನಾಟಕದ ಏಕೈಕ ಮತ್ತು ಐತಿಹಾಸಿಕ ಸಂಸ್ಥೆಯಾದ ಸೆಂಟ್ರಲ್ ವಿಲೇಜ್ ಪಾಟರಿ ಇನ್‌ಸ್ಟಿಟ್ಯೂಟ್ (CVPI), ಖಾನಾಪುರಕ್ಕೆ ಕೇಂದ್ರ ಸರ್ಕಾರದಿಂದ ಬಹುದೊಡ್ಡ ಆರ್ಥಿಕ ನೆರವು ಘೋಷಣೆಯಾಗಿದೆ. ಸುಮಾರು ಐದು ದಶಕಗಳಷ್ಟು ಹಳೆಯದಾದ ಈ ಸಂಸ್ಥೆಯ ಕಟ್ಟಡವು ಸಂಪೂರ್ಣ ದುಸ್ಥಿತಿಗೆ ತಲುಪಿದ್ದು, ತರಬೇತಿದಾರರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ, ಅದೇ ಸ್ಥಳದಲ್ಲಿ ಅತ್ಯಾಧುನಿಕ ಹೊಸ ತರಬೇತಿ ಕಟ್ಟಡವನ್ನು ನಿರ್ಮಿಸಲು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (KVIC)ವು ₹11.83 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಎಂದು ಮಾಹಿತಿ ಭಾಜಪ ಜಿಲ್ಲ ಉಪಾಧ್ಯಕ್ಷ ಪ್ರಮೋದ್ ಕೂಚೆರಿ ಇವರನ್ನು ಹೇಳಿದರು.

ಮಾನ್ಯ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಸ್ಥೆಗೆ ಇತ್ತೀಚೆಗೆ ಭೇಟಿ ನೀಡಿದ ನಂತರ ಈ ವಿಷಯವನ್ನು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರ ಗಮನಕ್ಕೆ ತಂದಿದ್ದರು. ಪಾಲಿಟೆಕ್ನಿಕ್ ಮತ್ತು ಸಿವಿಲ್ ಇಂಜಿನಿಯರಿಂಗ್ ಪದವೀಧರರಂತಹ ಹಲವು ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯಗಳೊಂದಿಗೆ ತರಬೇತಿ ನೀಡಿ, ಅವರಿಗೆ ಉದ್ಯೋಗ ಕೌಶಲ್ಯಗಳನ್ನು ಒದಗಿಸಿ, ನಿರುದ್ಯೋಗಿ ಯುವಕರು ಮತ್ತು ಕುಂಬಾರ ಸಮುದಾಯಕ್ಕೆ ಸಬಲೀಕರಣ ನೀಡುವಲ್ಲಿ CVPI ಪ್ರಮುಖ ಪಾತ್ರ ವಹಿಸುತ್ತಿದೆ. ಸಂಸ್ಥೆಯ ಅಳಿವಿನಂಚಿನಲ್ಲಿರುವ ಪರಂಪರೆಯನ್ನು ಕಾಪಾಡಲು ಹಾಗೂ ತರಬೇತಿ ಪರಿಸರವನ್ನು ಸುಧಾರಿಸಲು ಹೊಸ ಕಟ್ಟಡದ ನಿರ್ಮಾಣ ಅನಿವಾರ್ಯ ಎಂಬುದನ್ನು ಸಂಸದರು ಮನವಿಯಲ್ಲಿ ಒತ್ತಿ ಹೇಳಿದ್ದರು.

ಈ ಮಹತ್ವದ ಯೋಜನೆಯ ಅನುಷ್ಠಾನಕ್ಕಾಗಿ KVIC ಯು ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಗಮ (NBCC)ಕ್ಕೆ ₹11.83 ಕೋಟಿ ಮಂಜೂರಾತಿ ನೀಡಿದ್ದು, ಕಾಮಗಾರಿಗೆ ಚಾಲನೆ ನೀಡಲು ಆರಂಭಿಕ ಹಂತವಾಗಿ ಬಡ್ಡಿ-ರಹಿತ ಮುಂಗಡ ಹಣವನ್ನು ಸಹ ಬಿಡುಗಡೆ ಮಾಡಿದೆ.
ಸಂಸ್ಥೆಯ ಅಗತ್ಯತೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ, KVIC ಮತ್ತು NBCC ಅಧಿಕಾರಿಗಳನ್ನೊಳಗೊಂಡ ಜಂಟಿ ತಂಡವು ಪ್ರಸ್ತಾವಿತ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ, ಭೌತಿಕ ಮತ್ತು ತಾಂತ್ರಿಕ ಪರಿಸ್ಥಿತಿಗಳ ಸಮಗ್ರ ಪರಿಶೀಲನೆ ನಡೆಸಿದೆ. ಜಂಟಿ ಪರಿಶೀಲನೆಯಲ್ಲಿ ನಡೆದ ಚರ್ಚೆಗಳ ಆಧಾರದ ಮೇಲೆ, ಉಕ್ಕಿನ (Steel) ಮತ್ತು ಸಿಮೆಂಟ್ ಕಾಂಕ್ರೀಟ್ (RCC) ಎರಡೂ ರಚನಾತ್ಮಕ ವಿನ್ಯಾಸಗಳಿಗೆ ಸೂಕ್ತವಾದ ಪರಿಷ್ಕೃತ ತಾಂತ್ರಿಕ ಯೋಜನೆ ಮತ್ತು ವೆಚ್ಚದ ಅಂದಾಜುಗಳನ್ನು KVIC ಗೆ ಸಲ್ಲಿಸುವಂತೆ NBCC ಗೆ ಸೂಚಿಸಲಾಗಿದೆ. ಈ ಯೋಜನೆಯ ಅನುಷ್ಠಾನವು ಕುಂಬಾರಿಕೆ ವೃತ್ತಿಯನ್ನು ಮುಂದುವರಿಸಲು ಉತ್ಸುಕರಾಗಿರುವ ತರಬೇತಿದಾರರಿಗೆ ಸುರಕ್ಷಿತ, ಸ್ಪೂರ್ತಿದಾಯಕ ಮತ್ತು ಆಧುನಿಕ ತರಬೇತಿ ಕೇಂದ್ರವನ್ನು ಒದಗಿಸಲಿದೆ.
ಮುಂದಿನ ದಿನಗಳಲ್ಲಿ ಸ್ಕಿಲ್ ಇಂಡಿಯಾ ಯೋಜನೆ ಅಡಿಯಲ್ಲಿ ಬರುವಂತಹ ತರಬೇತಿಗಳನ್ನು ನೀಡುವ ಕೇಂದ್ರವಾಗಿ ವ್ಯವಸ್ಥಿತವಾಗಿ ರೂಪಿಸಲು ಇಂತಹ ಯೋಜನೆಗಳು ಪೂರಕವಾಗಲಿದೆ.
ಈ ಯೋಜನೆಯು ಕುಂಬಾರಿಕೆ ವೃತ್ತಿಗೆ ಉತ್ತೇಜನ ನೀಡಲು ಮತ್ತು ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಸೃಷ್ಟಿಸಲು ಸಹಕಾರಿಯಾಗಿದೆ.

Do Share

Leave a Reply

Your email address will not be published. Required fields are marked *

error: Content is protected !!
Call Us