खानापुरात वाळू व्यवसाय सुरू करण्यासाठी उद्या तहसीलदारांना निवेदन; सात दिवसांचा अल्टिमेटम!ಖಾನಾಪುರದಲ್ಲಿ ಮರಳು ವ್ಯವಹಾರವನ್ನು ಪ್ರಾರಂಭಿಸುವ ಕುರಿತು ನಾಳೆ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಗುವುದು; ಏಳು ದಿನಗಳ ಗಡುವು ನೀಡಲಾಗಿದೆ!
खानापुरात वाळू व्यवसाय सुरू करण्यासाठी उद्या तहसीलदारांना निवेदन; सात दिवसांचा अल्टिमेटम!
सात दिवसांत वाळू व्यवसाय सुरू न झाल्यास महामार्गावर रास्ता रोको आंदोलनाचा इशारा; विविध संघटनांची पत्रकार परिषदेत घोषणा
खानापूर / प्रतिनिधी : खानापूर तालुक्यात गेल्या दोन ते तीन वर्षांपासून वाळू व्यवसाय पूर्णतः बंद असल्याने तालुक्यातील रोजगाराची आणि अर्थव्यवस्थेची घडी विस्कळीत झाली आहे. वाळू व्यवसाय ठप्प झाल्याचा परिणाम बांधकाम व्यवसाय, वीट उद्योग, वाहतूक व्यवसाय तसेच खानापूरच्या बाजारपेठेवर झाला असून अनेक छोटे-मोठे व्यावसायिक आर्थिक संकटात सापडले आहेत. त्यामुळे खानापूर तालुक्यात तातडीने वाळू व्यवसाय सुरू करण्यात यावा, या मागणीसाठी विविध संघटनांनी आंदोलनाचा पवित्रा घेतला आहे.
यासंदर्भात रविवारी खानापूर येथील विश्रामधाम येथे आयोजित पत्रकार परिषदेत आंदोलनाची घोषणा करण्यात आली. सोमवार, दि. 16 नोव्हेंबर रोजी सकाळी 10 वाजता शिवस्मारक चौकातून भव्य मोर्चा काढून तहसीलदार कार्यालयावर धडक देण्यात येणार आहे. यावेळी तहसीलदार आणि पोलीस खात्याला निवेदन देण्यात येणार असल्याचे सांगण्यात आले.
तसेच निवेदन दिल्यानंतर सात दिवसांच्या आत तालुक्यात वाळू व्यवसाय सुरू करण्याबाबत ठोस निर्णय न झाल्यास महामार्गावर रास्ता रोको आंदोलन छेडण्यात येईल, असा इशाराही विविध संघटनांच्या पदाधिकाऱ्यांनी दिला.
यावेळी बोलताना खानापूर तालुका बार असोसिएशनचे अध्यक्ष ईश्वर घाडी म्हणाले की, वाळू व्यवसाय हा तालुक्यातील अनेक कुटुंबांच्या उदरनिर्वाहाचे महत्त्वाचे साधन आहे. मात्र, खानापूर तालुक्यातच हा व्यवसाय बंद का ठेवण्यात आला आहे? तालुक्याबाहेर वाळू व्यवसाय सुरू असताना खानापुरातच निर्बंध का, असा सवाल त्यांनी उपस्थित केला.
तालुक्यात रोजगाराची साधने मर्यादित असून दुष्काळी परिस्थितीमुळे सर्वसामान्य नागरिक आर्थिक अडचणीत आहेत. वाळू व्यवसाय बंद असल्याने बांधकाम व्यवसाय, वीट उद्योग आणि त्यावर अवलंबून असलेले इतर व्यवसायही अडचणीत आले आहेत. वाळू उत्खननामुळे पर्यावरणाची हानी होत असल्याचे संबंधित विभागाचे म्हणणे असेल, तर जांबोटी परिसरात सुरू असलेल्या खनिज उत्खननाबाबतही पर्यावरणाच्या दृष्टीने समान निकष लावले जात आहेत का, असा प्रश्नही घाडी यांनी उपस्थित केला.
या पत्रकार परिषदेला खानापूर तालुका बार असोसिएशनचे अध्यक्ष ईश्वर घाडी, खानापूर ब्लॉक काँग्रेस अध्यक्ष महंतेश राऊत, खानापूर तालुका डॉक्टर असोसिएशनचे अध्यक्ष डॉ. नाडगौडा, समितीचे नेते गोपाळराव पाटील, माजी ता.पं. सदस्य महादेव घाडी, साई प्रतिष्ठानचे अध्यक्ष के. पी. पाटील, काँग्रेस नेते व माजी ग्रामपंचायत सदस्य प्रसाद पाटील, तालुका वाळू असोसिएशन उपाध्यक्ष रोहित पोळ, इसाक पठाण, तालुका वाळू असोसिएशनचे अध्यक्ष प्रमोद सुतार आदी उपस्थित होते.
वाळू व्यावसायिकांना एकत्र येण्याचे आवाहन
तालुक्यातील वाळू व्यावसायिक, विविध संघटनांचे पदाधिकारी आणि नागरिकांनी सोमवारच्या आंदोलनात मोठ्या संख्येने सहभागी व्हावे, असे आवाहन पत्रकार परिषदेत करण्यात आले. आता प्रशासन या मागणीवर काय भूमिका घेते आणि सात दिवसांच्या अल्टिमेटमनंतर आंदोलनाची पुढील दिशा काय असेल, याकडे खानापूर तालुक्याचे लक्ष लागले आहे.
ಖಾನಾಪುರದಲ್ಲಿ ಮರಳು ವ್ಯಾಪಾರ ಆರಂಭಕ್ಕೆ ನಾಳೆ ತಹಶೀಲ್ದಾರರಿಗೆ ಮನವಿ!
ಏಳು ದಿನಗಳಲ್ಲಿ ಮರಳು ವ್ಯಾಪಾರ ಆರಂಭಿಸದಿದ್ದರೆ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ; ವಿವಿಧ ಸಂಘಟನೆಗಳ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ
ಖಾನಾಪುರ / ಪ್ರತಿನಿಧಿ : ಕಳೆದ ಎರಡು-ಮೂರು ವರ್ಷಗಳಿಂದ ಖಾನಾಪುರ ತಾಲೂಕಿನಲ್ಲಿ ಮರಳು ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಸಾವಿರಾರು ಕಾರ್ಮಿಕರು ಹಾಗೂ ವ್ಯಾಪಾರಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮರಳು ವ್ಯಾಪಾರ ಸ್ಥಗಿತಗೊಂಡ ಪರಿಣಾಮ ಕಟ್ಟಡ ನಿರ್ಮಾಣ, ಇಟ್ಟಿಗೆ ಉದ್ಯಮ, ಸಾರಿಗೆ ಸೇರಿದಂತೆ ಹಲವು ಉಪವ್ಯವಹಾರಗಳ ಮೇಲೂ ಗಂಭೀರ ಪರಿಣಾಮ ಬೀರಿದೆ. ಖಾನಾಪುರ ಪಟ್ಟಣದ ಮಾರುಕಟ್ಟೆಯ ಆರ್ಥಿಕ ಚಟುವಟಿಕೆಗಳಿಗೂ ಹೊಡೆತ ಬಿದ್ದಿದೆ. ಆದ್ದರಿಂದ ತಾಲೂಕಿನಲ್ಲಿ ತಕ್ಷಣ ಮರಳು ವ್ಯಾಪಾರ ಆರಂಭಿಸಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ಈ ಕುರಿತು ಭಾನುವಾರ ಖಾನಾಪುರದ ವಿಶ್ರಾಂತಿಧಾಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಪ್ರತಿಭಟನೆಯ ರೂಪುರೇಷೆ ಪ್ರಕಟಿಸಿದರು.
ನಾಳೆ ಸೋಮವಾರ, ನವೆಂಬರ್ 16ರಂದು ಬೆಳಿಗ್ಗೆ 10 ಗಂಟೆಗೆ ಖಾನಾಪುರದ ಶಿವಸ್ಮಾರಕ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು. ಈ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ಮನವಿ ನೀಡಲಾಗುವುದು ಎಂದು ತಿಳಿಸಿದರು.
ಮನವಿ ಸಲ್ಲಿಸಿದ ಏಳು ದಿನಗಳೊಳಗೆ ತಾಲೂಕಿನಲ್ಲಿ ಮರಳು ವ್ಯಾಪಾರ ಆರಂಭಿಸಲು ಆಡಳಿತ ಮಂಡಳಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮರಳು ವ್ಯಾಪಾರ ಸ್ಥಗಿತದಿಂದ ಜನಜೀವನಕ್ಕೆ ತೊಂದರೆ : ಈಶ್ವರ ಘಾಡಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖಾನಾಪುರ ತಾಲೂಕು ಬಾರ್ ಅಸೋಸಿಯೇಷನ್ ಅಧ್ಯಕ್ಷ ಈಶ್ವರ ಘಾಡಿ ಅವರು, ಮರಳು ವ್ಯಾಪಾರವು ತಾಲೂಕಿನ ಅನೇಕ ಕುಟುಂಬಗಳ ಜೀವನಾಧಾರವಾಗಿದೆ. ಆದರೆ ಖಾನಾಪುರ ತಾಲೂಕಿನಲ್ಲಿ ಮಾತ್ರ ಈ ವ್ಯಾಪಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದೇಕೆ? ತಾಲೂಕಿನ ಹೊರಭಾಗಗಳಲ್ಲಿ ಮರಳು ವ್ಯಾಪಾರ ನಡೆಯುತ್ತಿರುವಾಗ ಖಾನಾಪುರದಲ್ಲೇ ಏಕೆ ನಿರ್ಬಂಧ ವಿಧಿಸಲಾಗಿದೆ ಎಂದು ಪ್ರಶ್ನಿಸಿದರು.
ತಾಲೂಕಿನಲ್ಲಿ ಈಗಾಗಲೇ ಉದ್ಯೋಗಾವಕಾಶಗಳು ಕಡಿಮೆಯಾಗಿದ್ದು, ಬರ ಪರಿಸ್ಥಿತಿಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮರಳು ವ್ಯಾಪಾರ ಸ್ಥಗಿತಗೊಂಡಿರುವುದರಿಂದ ಕಟ್ಟಡ ನಿರ್ಮಾಣ, ಇಟ್ಟಿಗೆ ಉದ್ಯಮ ಸೇರಿದಂತೆ ಹಲವು ಉದ್ಯೋಗಗಳು ನಷ್ಟದ ಹಾದಿಯಲ್ಲಿವೆ.
ಮರಳು ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂಬುದು ಸಂಬಂಧಪಟ್ಟ ಇಲಾಖೆಯ ವಾದವಾಗಿದ್ದರೆ, ಜಾಂಬೋಟಿ ಭಾಗದಲ್ಲಿ ನಡೆಯುತ್ತಿರುವ ಖನಿಜ ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲವೇ? ಎಲ್ಲ ಉದ್ಯಮಗಳಿಗೂ ಒಂದೇ ರೀತಿಯ ನಿಯಮಗಳನ್ನು ಅನ್ವಯಿಸಬೇಕು ಎಂದು ಅವರು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮುಖಂಡರು
ಈ ಪತ್ರಿಕಾಗೋಷ್ಠಿಯಲ್ಲಿ ಖಾನಾಪುರ ತಾಲೂಕು ಬಾರ್ ಅಸೋಸಿಯೇಷನ್ ಅಧ್ಯಕ್ಷ ಈಶ್ವರ ಘಾಡಿ, ಖಾನಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಣತೇಶ ರಾವತ್, ತಾಲೂಕು ವೈದ್ಯರ ಸಂಘದ ಅಧ್ಯಕ್ಷ ಡಾ. ನಾಡಗೌಡ, ಸಮಿತಿ ಮುಖಂಡ ಗೋಪಾಳರಾವ್ ಪಾಟೀಲ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಮಹಾದೇವ ಘಾಡಿ, ಸಾಯಿ ಪ್ರತಿಷ್ಠಾನದ ಅಧ್ಯಕ್ಷ ಕೆ.ಪಿ. ಪಾಟೀಲ, ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಸಾದ ಪಾಟೀಲ, ರೋಹಿತ್ ಪೋಳ, ಇಸಾಕ್ ಪಠಾಣ್, ತಾಲೂಕು ಮರಳು ಅಸೋಸಿಯೇಷನ್ ಅಧ್ಯಕ್ಷ ಪ್ರಮೋದ್ ಸುತಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾಲೂಕಿನ ಎಲ್ಲ ಮರಳು ವ್ಯಾಪಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಸೋಮವಾರ ನಡೆಯಲಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಬೇಕೆಂದು ಮುಖಂಡರು ಮನವಿ ಮಾಡಿದರು.
ಏಳು ದಿನಗಳ ಗಡುವಿನೊಳಗೆ ಆಡಳಿತ ಮಂಡಳಿ ಯಾವ ನಿರ್ಧಾರ ಕೈಗೊಳ್ಳಲಿದೆ? ಖಾನಾಪುರದಲ್ಲಿ ಮರಳು ವ್ಯಾಪಾರ ಪುನರಾರಂಭವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.