खानापूर : घराच्या मागील बाजूस असलेल्या गटारातून पाणी सोडण्याच्या किरकोळ कारणावरून झालेल्या वादाचे पर्यवसान हत्येत झाल्याची धक्कादायक घटना मंगळवारी तालुक्यातील तोलगी गावात घडली.
या घटनेत अमीर हुसेन पाश्चापूर (वय ४८) यांचा मृत्यू झाला असून, हल्ला केल्याप्रकरणी त्याच गावातील अशोक रामा उगरखोड (वय २८) याला नंदगड पोलिसांनी ताब्यात घेऊन चौकशी सुरू केली आहे.
मिळालेल्या माहितीनुसार, घराच्या मागील बाजूस असलेल्या गटारातून पाणी वाहून नेण्याच्या कारणावरून गेल्या काही दिवसांपासून दोघांमध्ये वाद सुरू होता. मंगळवारी सकाळी याच कारणावरून दोघांमध्ये पुन्हा शाब्दिक चकमक झाली आणि त्याचे रूपांतर हाणामारीत झाले.
वाद सुरू असताना आरोपी अशोक याने हातात मिळालेल्या पिकॅक्सने अमीर हुसेन पाश्चापूर यांच्यावर हल्ला केल्याचे सांगण्यात येत आहे. या हल्ल्यात गंभीर जखमी झालेल्या अमीर हुसेन यांचा मृत्यू झाला.
घटनेची माहिती मिळताच नंदगड पोलिसांनी घटनास्थळी धाव घेत आरोपीला ताब्यात घेतले. याप्रकरणी नंदगड पोलीस ठाण्यात गुन्हा दाखल करण्यात आला असून, पुढील तपास सुरू आहे.
ಖಾನಾಪುರ: ಮನೆಯ ಹಿಂದಿನ ಚರಂಡಿ ಮೂಲಕ ನೀರು ಹರಿಸುವ ವಿಚಾರವಾಗಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ತಾಲೂಕಿನ ತೋಲಗಿ ಗ್ರಾಮದಲ್ಲಿ ಮಂಗಳವಾರ ವರದಿಯಾಗಿದೆ.
ಮೃತರನ್ನು ಅಮೀರ್ ಹುಸೇನ್ ಪಾಶ್ಚಾಪುರ (48) ಎಂದು ಗುರುತಿಸಲಾಗಿದ್ದು, ಇವ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಅದೇ ಗ್ರಾಮದ ಅಶೋಕ ರಾಮಾ ಉಗರಖೋಡ (28) ಎಂಬಾತನನ್ನು ನಂದಗಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮನೆಯ ಹಿಂಭಾಗದ ಚರಂಡಿ ಮೂಲಕ ನೀರು ಹರಿಸುವ ವಿಚಾರವಾಗಿ ಇಬ್ಬರ ನಡುವೆ ಕಳೆದ ಕೆಲವು ದಿನಗಳಿಂದ ಭಿನ್ನಾಭಿಪ್ರಾಯವಿತ್ತು. ಮಂಗಳವಾರ ಬೆಳಿಗ್ಗೆ ಇದೇ ವಿಷಯಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದ ಘಟನೆ ಕೊಲೆಯಲ್ಲಿ ಅಂತ್ಯಗೊಂಡಿದೆ.ಇಬ್ಬರ ನಡುವೆ ನಡೆಯುತ್ತಿದ್ದ ಜಗಳದ ವೇಳೆ ಆರೋಪಿ ಅಶೋಕ ಕೈಗೆ ಸಿಕ್ಕ ಪಿಕಾಸಿಯಿಂದ ಹಲ್ಲೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.