खानापुरात ‘प्रजा सेवा’ आंदोलनात समस्यांचा महापूर!ಖಾನಾಪುರದಲ್ಲಿ ‘ಪ್ರಜಾ ಸೇವಾ’ ಆಂದೋಲನಕ್ಕೆ ಜನಸಾಗರ!
खानापुरात ‘प्रजा सेवा’ आंदोलनात समस्यांचा महापूर!
निवेदनांसाठी नागरिकांची तुफान गर्दी; लोकमान्य भवनात दोन तास प्रशासनाची धावपळ — पालकमंत्री सतीश जारकीहोळींसमोर तालुक्यातील प्रश्नांचा भडीमार!
खानापूर / प्रतिनिधी :
खानापूर तालुक्यातील नागरिकांच्या विविध समस्या थेट प्रशासनासमोर मांडण्यासाठी सोमवारी खानापूर शहरातील लोकमान्य भवन येथे प्रजा सेवा आंदोलनाचे आयोजन करण्यात आले. जिल्ह्याचे पालकमंत्री सतीश जारकीहोळी यांच्या उपस्थितीत सकाळी ११ वाजल्यापासून सुरू झालेल्या या आंदोलनाला नागरिकांचा उत्स्फूर्त प्रतिसाद मिळाला. तालुक्याच्या कानाकोपऱ्यातून आलेल्या नागरिकांमुळे लोकमान्य भवन अक्षरशः तुडुंब भरून गेले.
तालुक्यात प्रथमच मोठ्या प्रमाणावर आयोजित करण्यात आलेल्या या प्रजा सेवा आंदोलनात समस्यांचा अक्षरशः पाऊस पडला. रस्ते, पाणी, वीज, महसूल, वन विभाग, परिवहन, पोलीस, ग्रामविकास तसेच विविध शासकीय योजनांशी संबंधित प्रश्न घेऊन नागरिकांनी पालकमंत्र्यांसह प्रशासनाकडे निवेदने सादर केली.
एकाच वेळी विविध विभागांच्या अधिकाऱ्यांसमोर मोठ्या संख्येने नागरिकांनी आपल्या समस्या मांडल्याने ‘नेमकी समस्या कोणाची आणि जबाबदारी कोणत्या विभागाची?’ अशी परिस्थिती निर्माण झाली होती. प्रत्येक नागरिक आपला प्रश्न प्राधान्याने सोडविण्याची मागणी करत असल्याने लोकमान्य भवन परिसरात मोठी गर्दी आणि प्रशासनाची धावपळ पाहायला मिळाली.
पालकमंत्री सतीश जारकीहोळी यांच्या उपस्थितीत नागरिकांकडून निवेदने स्वीकारण्यात आली. संबंधित समस्या संबंधित विभागांकडे पाठवून त्यावर आवश्यक कार्यवाही करण्याचे निर्देश देण्यात आल्याचे सांगण्यात आले. मात्र, निवेदन स्वीकारले गेले; आता प्रत्यक्षात प्रश्न सुटणार कधी? असा सवाल नागरिकांमधून उपस्थित होत आहे.
तब्बल दोन तास लोकमान्य भवनात नागरिकांची मोठी गर्दी कायम होती. ग्रामीण भागातून आलेल्या नागरिकांनी आपल्या गावातील मूलभूत सुविधांपासून वैयक्तिक शासकीय कामांपर्यंत विविध प्रश्न प्रशासनासमोर मांडले.
यावेळी आमदार विठ्ठल हलगेकर, जिल्हाधिकारी मोहम्मद रोशन, विधान परिषद सदस्य चन्नराज हट्टीहोळी, वायव्य कर्नाटक रस्ते परिवहन मंडळाचे उपाध्यक्ष सुनील हनमणावर, पंचहमी योजना समितीचे जिल्हाध्यक्ष विनय नावलगट्टी, जिल्हा वन संरक्षण अधिकारी एन. ए. क्रांती, जिल्हा पोलीस प्रमुख के. रामराजन, विजयकुमार व्हनकेरी यांच्यासह विविध विभागांचे अधिकारी उपस्थित होते.
आता निवेदनांचे रूपांतर प्रत्यक्ष कामात कधी?
प्रजा सेवा आंदोलनामुळे नागरिकांना आपल्या समस्या थेट प्रशासनापर्यंत पोहोचविण्याची संधी मिळाली असली, तरी नागरिकांच्या हातातील निवेदनांचे रूपांतर प्रत्यक्ष विकासकामे आणि समस्यांच्या निराकरणात कधी होणार, याकडे संपूर्ण खानापूर तालुक्याचे लक्ष लागले आहे.
ಖಾನಾಪುರದಲ್ಲಿ ‘ಪ್ರಜಾ ಸೇವಾ’ ಆಂದೋಲನಕ್ಕೆ ಜನಸಾಗರ!
ಅಹವಾಲುಗಳ ಮಹಾಪೂರ; ಪಾಲಕ ಸಚಿವ ಸತೀಶ್ ಜಾರಕಿಹೊಳಿ ಸಮ್ಮುಖದಲ್ಲಿ ಸಮಸ್ಯೆಗಳ ಸರಮಾಲೆ — ಲೋಕಮಾನ್ಯ ಭವನದಲ್ಲಿ ಜನದಟ್ಟಣೆ
ಖಾನಾಪುರ / ಪ್ರತಿನಿಧಿ : ಖಾನಾಪುರ ಪಟ್ಟಣದ ಲೋಕಮಾನ್ಯ ಭವನದಲ್ಲಿ ಸೋಮವಾರ ಬೆಳಿಗ್ಗೆ 11 ಗಂಟೆಯಿಂದ ನಡೆದ ‘ಪ್ರಜಾ ಸೇವಾ ಆಂದೋಲನ’ ಕಾರ್ಯಕ್ರಮಕ್ಕೆ ತಾಲೂಕಿನಾದ್ಯಂತದಿಂದ ಸಾವಿರಾರು ನಾಗರಿಕರು ಆಗಮಿಸಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮುಂದಿಟ್ಟರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಮ್ಮುಖದಲ್ಲಿ ಖಾನಾಪುರದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಸಮಸ್ಯೆ ಪರಿಹಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಜನಸ್ಪಂದನೆ ವ್ಯಕ್ತವಾಗಿದ್ದು, ಲೋಕಮಾನ್ಯ ಭವನ ಜನರಿಂದ ಕಿಕ್ಕಿರಿದು ತುಂಬಿತ್ತು.
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಜನರು ರಸ್ತೆ, ಕುಡಿಯುವ ನೀರು, ವಿದ್ಯುತ್, ಕಂದಾಯ, ಅರಣ್ಯ ಇಲಾಖೆ, ಸಾರಿಗೆ, ಪೊಲೀಸ್, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ಮನವಿ ಪತ್ರಗಳನ್ನು ಸಲ್ಲಿಸಿದರು.
ಒಂದೇ ಸ್ಥಳದಲ್ಲಿ ನೂರಾರು ಜನರು ವಿವಿಧ ಸಮಸ್ಯೆಗಳೊಂದಿಗೆ ಮನವಿ ಸಲ್ಲಿಸಲು ಮುಂದಾದ ಹಿನ್ನೆಲೆಯಲ್ಲಿ ಯಾವ ಸಮಸ್ಯೆ ಯಾವ ಇಲಾಖೆಗೆ ಸೇರಿದ್ದು ಎಂಬುದನ್ನು ಗುರುತಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳಿಗೂ ಸಾಕಷ್ಟು ಒತ್ತಡ ಉಂಟಾಯಿತು. ಸುಮಾರು ಎರಡು ಗಂಟೆಗಳ ಕಾಲ ಲೋಕಮಾನ್ಯ ಭವನದಲ್ಲಿ ಜನದಟ್ಟಣೆ ಮುಂದುವರಿದಿತ್ತು.
ನಾಗರಿಕರಿಂದ ಸ್ವೀಕರಿಸಲಾದ ಮನವಿ ಪತ್ರಗಳನ್ನು ಸಂಬಂಧಿಸಿದ ಇಲಾಖೆಗೆ ಕಳುಹಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು. ಆದರೆ, ಮನವಿ ಸ್ವೀಕರಿಸುವುದರಲ್ಲೇ ಕಾರ್ಯಕ್ರಮ ಸೀಮಿತವಾಗದೆ, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಯಾವಾಗ ದೊರೆಯಲಿದೆ ಎಂಬುದನ್ನು ಇದೀಗ ಜನರು ಎದುರು ನೋಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಹಲಗೇಕರ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ ಹನಮನಾವರ, ಪಂಚಹಮಿ ಯೋಜನಾ ಸಮಿತಿಯ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎ. ಕ್ರಾಂತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ವಿಜಯಕುಮಾರ ವನಕೆರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಮನವಿಗಳ ಮಹಾಪೂರಕ್ಕೆ ಪರಿಹಾರದ ಮಳೆ ಯಾವಾಗ?
ಪ್ರಜಾ ಸೇವಾ ಆಂದೋಲನದ ಮೂಲಕ ಜನರ ಸಮಸ್ಯೆಗಳು ಆಡಳಿತದ ಗಮನಕ್ಕೆ ಬಂದಿದ್ದು, ಇದೀಗ ಸಲ್ಲಿಕೆಯಾದ ಮನವಿಗಳು ನೈಜ ಅಭಿವೃದ್ಧಿ ಕಾಮಗಾರಿಗಳಾಗಿ ಮತ್ತು ಸಮಸ್ಯೆಗಳ ಪರಿಹಾರವಾಗಿ ಯಾವಾಗ ರೂಪುಗೊಳ್ಳುತ್ತವೆ ಎಂಬುದೇ ಖಾನಾಪುರ ತಾಲೂಕಿನ ಜನರ ನಿರೀಕ್ಷೆಯಾಗಿದೆ.