खानापूर तालुका दुष्काळग्रस्त जाहीर करा!ಖಾನಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹ
Oplus_16908288
खानापूर तालुका दुष्काळग्रस्त जाहीर करा
पिकांचे ५० टक्क्यांहून अधिक नुकसान; शेतकऱ्यांना एकरी ५० हजारांची मदत देण्याची मागणी
खानापूर : नेहमी हिरवाईने नटलेला आणि मोठ्या प्रमाणात जंगलव्याप्त असलेला खानापूर तालुका यंदा पावसाअभावी गंभीर कृषी संकटाला सामोरा जात आहे. तालुक्याच्या पूर्व भागातील बिडीपासून गर्लगुंजीपर्यंत तसेच लोंढ्यापासून जांबोटीपर्यंतच्या पट्ट्यातील भात व अन्य पिकांवर पावसाअभावी मोठा परिणाम झाला असून ५० टक्क्यांहून अधिक पिकांचे नुकसान झाल्याचा दावा करण्यात आला आहे. त्यामुळे खानापूर तालुक्याचा दुष्काळग्रस्त यादीत समावेश करावा, अशी मागणी समाजसेवक भरमाणी प्रकाश पाटील यांनी तहसीलदारांकडे निवेदनाद्वारे केली आहे.
खानापूर तालुका हा हिरवाईचा तालुका म्हणून ओळखला जातो. तालुक्याचा मोठा भूभाग जंगलाने व्यापलेला असून पश्चिम भागातील ६२ गावांचा कस्तुरीरंगन अहवालात समावेश आहे. भीमगड अभयारण्याचाही काही भाग तालुक्यात येतो. मात्र, केवळ तालुका हिरवाईने नटलेला आहे म्हणून शेतीला पुरेसा पाऊस मिळतोच असे नाही. यंदा तालुक्याच्या पूर्व भागातील शेतीपट्ट्यात पावसाची मोठी कमतरता जाणवत असल्याचे निवेदनात नमूद करण्यात आले आहे.
पिके कोमेजली; आठवडाभर पाऊस न झाल्यास १०० टक्के नुकसानीची भीती
खानापूर तालुक्यात प्रामुख्याने वर्षातून एकच पीक घेतले जाते. यंदा पावसाचे प्रमाण कमी राहिल्याने भातासह अन्य पिके संकटात आली आहेत. सध्या ५० टक्क्यांहून अधिक पिकांचे नुकसान झाले असून आणखी आठवडाभर पाऊस पूर्णपणे दडी मारल्यास शंभर टक्के नुकसान होण्याची शक्यता निवेदकांनी व्यक्त केली आहे.
त्यामुळे शासनाने परिस्थितीची गांभीर्याने दखल घेऊन खानापूर तालुका तातडीने दुष्काळग्रस्त जाहीर करावा, अशी मागणी करण्यात आली आहे.
शेतकऱ्यांसाठी तीन प्रमुख मागण्या
निवेदनातून शासनाकडे पुढील मागण्या करण्यात आल्या आहेत :
- शेतकऱ्यांचे पीक कर्ज माफ करावे.
- नुकसानग्रस्त शेतकऱ्यांना एकरी ५० हजार रुपये आर्थिक मदत द्यावी.
- शेतमजुरीवर परिणाम झालेल्या कामगारांना २५ हजार रुपये सहाय्यधन मंजूर करावे.
इतर काही तालुक्यांचा दुष्काळग्रस्त यादीत समावेश करण्यात आला असल्याचा उल्लेख करत, खानापूर तालुक्याचाही तातडीने दुष्काळग्रस्त तालुक्यांमध्ये समावेश करावा, अशी मागणी निवेदनातून करण्यात आली आहे.
अन्याय झाल्यास आमरण उपोषणाचा इशारा
१९ सप्टेंबर २०२६ रोजी तहसीलदारांना निवेदन देण्यात आले. या मागणीची गांभीर्याने दखल घेऊन राज्य सरकारने खानापूर तालुक्याच्या कृषी परिस्थितीचा विचार करावा. तालुक्यावर अन्याय झाल्यास आमरण उपोषण करण्याचा इशाराही निवेदकांनी दिला आहे.
यावेळी भरमाणी पाटील, हणमंत पाटील, मारुती पाटील, आनंद चोपडे, विजय चौगुले यांच्यासह अन्य नागरिक उपस्थित होते.
ಖಾನಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹ
ಬೆಳೆಗಳಿಗೆ ಶೇ.50ಕ್ಕೂ ಅಧಿಕ ಹಾನಿ; ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡುವಂತೆ ತಹಶೀಲ್ದಾರರಿಗೆ ಮನವಿ
ಖಾನಾಪುರ : ಸದಾ ಹಸಿರಿನಿಂದ ಕಂಗೊಳಿಸುವ ಖಾನಾಪುರ ತಾಲೂಕಿನಲ್ಲಿ ಈ ವರ್ಷ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಭತ್ತ ಸೇರಿದಂತೆ ವಿವಿಧ ಬೆಳೆಗಳು ಮಳೆಯಿಲ್ಲದೆ ಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ 2026ನೇ ಸಾಲಿಗೆ ಖಾನಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ಸಮಾಜ ಸೇವಕ ಭರಮಾಣಿ ಪ್ರಕಾಶ ಪಾಟೀಲ ಅವರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಖಾನಾಪುರ ತಾಲೂಕಿನಲ್ಲಿ ಸಾಮಾನ್ಯವಾಗಿ ವರ್ಷಕ್ಕೆ ಒಂದು ಪ್ರಮುಖ ಬೆಳೆ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಮಳೆಯ ಕೊರತೆಯಿಂದ ಭತ್ತ ಸೇರಿದಂತೆ ಇತರ ಬೆಳೆಗಳ ಮೇಲೂ ಪರಿಣಾಮ ಬೀರಿದೆ. ಈಗಾಗಲೇ ಶೇ.50ಕ್ಕೂ ಅಧಿಕ ಬೆಳೆ ಹಾನಿಯಾಗಿದ್ದು, ಇನ್ನೂ ಒಂದು ವಾರ ಸಂಪೂರ್ಣ ಮಳೆ ಬಾರದಿದ್ದರೆ ಶೇ.100ರಷ್ಟು ಬೆಳೆ ನಷ್ಟವಾಗುವ ಆತಂಕವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹಸಿರು ತಾಲೂಕಾದರೂ ಕೃಷಿಗೆ ಮಳೆಯ ಕೊರತೆ
ಖಾನಾಪುರ ತಾಲೂಕು ಸುಮಾರು ಶೇ.50ರಷ್ಟು ಅರಣ್ಯ ಪ್ರದೇಶವನ್ನು ಹೊಂದಿರುವ ಹಸಿರು ತಾಲೂಕಾಗಿದೆ. ಪಶ್ಚಿಮ ಭಾಗದ 62 ಗ್ರಾಮಗಳು ಕಸ್ತೂರಿರಂಗನ್ ವರದಿಯಲ್ಲಿ ಉಲ್ಲೇಖವಾಗಿದ್ದು, ಭೀಮಗಡ ಅಭಯಾರಣ್ಯದ ಪ್ರದೇಶವೂ ತಾಲೂಕಿನ ವ್ಯಾಪ್ತಿಯಲ್ಲಿದೆ. ಆದರೆ ತಾಲೂಕು ಹಸಿರು ಪ್ರದೇಶವಾಗಿದೆ ಎಂಬ ಕಾರಣಕ್ಕೆ ಎಲ್ಲ ಭಾಗಗಳಲ್ಲೂ ಕೃಷಿಗೆ ಅಗತ್ಯವಾದ ಮಳೆಯಾಗಿದೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮನವಿದಾರರು ತಿಳಿಸಿದ್ದಾರೆ.
ತಾಲೂಕಿನ ಪೂರ್ವ ಭಾಗದ ಬೀಡಿಯಿಂದ ಗರ್ಲಗುಂಜಿವರೆಗೆ ಹಾಗೂ ಲೋಂಡಾದಿಂದ ಜಾಂಬೋಟಿವರೆಗೆ ಇರುವ ಮಧ್ಯದ ಕೃಷಿ ಪ್ರದೇಶದಲ್ಲಿ ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಈ ಭಾಗದ ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ತಕ್ಷಣ ಪರಿಸ್ಥಿತಿಯ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.
ಮನವಿಯ ಪ್ರಮುಖ ಬೇಡಿಕೆಗಳು
ಖಾನಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಬೇಕು.
ರೈತರ ಬೆಳೆ ಸಾಲ ಮನ್ನಾ ಮಾಡಬೇಕು.
ಹಾನಿಗೊಳಗಾದ ರೈತರಿಗೆ ಎಕರೆಗೆ ₹50,000 ಪರಿಹಾರ ನೀಡಬೇಕು.
ಕೃಷಿ ಕೂಲಿ ಕಾರ್ಮಿಕರಿಗೆ ₹25,000 ಸಹಾಯಧನ ನೀಡಬೇಕು.
ಇತರ ಕೆಲವು ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಿಗೂ ಸೂಕ್ತ ಪರಿಹಾರ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅನ್ಯಾಯವಾದರೆ ಅಮರಣಾಂತ ಉಪವಾಸದ ಎಚ್ಚರಿಕೆ
ಸೆಪ್ಟೆಂಬರ್ 19, 2026ರಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದ್ದು, ಜಿಲ್ಲಾಧಿಕಾರಿ ಬೆಳಗಾವಿ ಹಾಗೂ ರಾಜ್ಯ ಸರ್ಕಾರಕ್ಕೂ ಮನವಿಯ ಪ್ರತಿಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಲಾಗಿದೆ. ಖಾನಾಪುರ ತಾಲೂಕಿನ ಕೃಷಿ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸದೆ ಅನ್ಯಾಯ ಮಾಡಿದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಮನವಿದಾರರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಭರಮಾಣಿ ಪಾಟೀಲ, ಹನುಮಂತ ಪಾಟೀಲ, ಮಾರುತಿ ಪಾಟೀಲ, ಆನಂದ ಚೋಪಡೆ, ವಿಜಯ ಚೌಗುಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.