ಮುಸುಕುಧಾರಿ ವ್ಯಕ್ತಿಯಿಂದ ಪ್ರಯಾಣಿಕರ ಮೇಲೆ ಹಲ್ಲೆ: ಓರ್ವ ಸಾವು
- खानापुर: पुद्दुचेरी-दादर मार्गावर लोंडा दरम्यान आठवड्यातून तीन दिवस धावणाऱ्या कुर्ला एक्स्प्रेस (ट्रेन क्र. ११००६) मध्ये मुखवटाधारी व्यक्तीने प्रवासी आणि रेल्वे कर्मचाऱ्यांवर केलेल्या हल्ल्यात एक प्रवासी ठार तर तीन जण गंभीर जखमी झाले. -गुंजी रेल्वेस्थानक जवळ गुरुवारी सायंकाळी हुबली येथे रेल्वेच्या S.1 डब्यात चढलेला मुखवटा घातलेला माणूस अनाधिकृत तिकीटा शिवाय प्रवास करत होता. अलनावर-लोंडा मार्गावरून ट्रेन सुटत असताना एका प्रवाशाने ट्रेनच्या ऑन ड्युटी टीसी ला सांगितले की तो सहप्रवाशांना त्रास देत आहे. एस-१ डब्यात आलेल्या टीसी ने मुखवटा घातलेल्या व्यक्तीला तिकीट दाखवण्यास सांगितले असता त्याने टीसीला मारहाण केली आणि त्यानंतर टीसी कडे तक्रार करणाऱ्या प्रवाशांना धक्काबुक्की केली. यामध्ये एका प्रवाशाला मारा लागून जखमी झाल्याने जागीच मृत्यू झाला तर हल्ला थांबवण्याचा प्रयत्न करणारा दुसरा प्रवासीही जखमी झाला. नंतर हल्ला करणारी व्यक्ती शौचालयात पळून गेली. गाडी बेळगाव स्थानकात येताच रेल्वे सुरक्षा दलाचे अधिकारी व कर्मचाऱ्यांनी घटनास्थळी धाव घेत शौचालयाचा दरवाजा तोडून आरोपीला अटक केली. या घटनेत मृत्यू पावलेल्या प्रवाशाचे नाव श्री देवर्षी वर्मा वय 24 असे असल्याचे समजते.
- या अपघाती घटनेने रेल्वेतील प्रवासी हादरले असून, रेल्वे पोलिसांनी घटनेचा तपास सुरू केला आहे. याप्रकरणी बेळगाव रेल्वे स्थानकात गुन्हा दाखल करण्यात आला आहे. ही घटना घडली तेव्हा ट्रेनमध्ये पोलिस गस्त नसल्याची तक्रार प्रवाशांनी केली. मृत व जखमींची माहिती आणि हल्ला कोणी केला याबाबत तपास सुरू असल्याचे सूत्रांनी सांगितले
- धावते रेल्वेचा कॉल करणारा मातेफिरु कोण? तो कुठून आला आहे? कोठे जात होता? केवळ तिकिटाची विचारणा केल्यामुळे त्याने टीसीसह अन्य चवदार हल्ला केला का? या प्रश्नांची उत्तरे शोधण्यासाठी बेळगाव शहर जिल्हा रेल्वे पोलीस कामाला लागले आहेत. खानापूर रेल्वे स्टेशनवर रेल्वेचा वेग कमी झाल्यानंतर हल्लेखोर तेथून पसार झाला असावा असा संशय व्यक्त केला जात आहे. त्याचा पोलीस तपास करत आहेत.
ಖಾನಾಪುರ: ಪುದುಚ್ಚೆರಿ-ದಾದರ್ ಮಾರ್ಗದಲ್ಲಿ ವಾರಕ್ಕೆ ಮೂರು ದಿನ ಸಂಚರಿಸುವ ಕುರ್ಲಾ ಎಕ್ಸಪ್ರೆಸ್ (ರೈಲು ಸಂಖ್ಯೆ 11006) ರೈಲಿನಲ್ಲಿ ಮುಸುಕುಧಾರಿ ವ್ಯಕ್ತಿಯೊಬ್ಬ ಪ್ರಯಾಣಿಕರ ಮತ್ತು ರೈಲ್ವೆ ಸಿಬ್ಬಂದಿಯ ಮೇಲೆ ನಡೆಸಿದ ಹಲ್ಲೆಯಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಸಂಜೆ ಲೋಂಡಾ-ಗುಂಜಿ ರೈಲು ನಿಲ್ದಾಣಗಳ ನಡುವೆ ವರದಿಯಾಗಿದೆ.
ರೈಲಿನ ಎಸ್.1 ಬೋಗಿಯಲ್ಲಿ ಹುಬ್ಬಳ್ಳಿಯಲ್ಲಿ ಹತ್ತಿದ್ದ ಮುಸುಕುಧಾರಿ ವ್ಯಕ್ತಿ ಅಧೀಕೃತ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ. ಈತ ಸಹಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದ ವಿಷಯವನ್ನು ರೈಲು ಅಳ್ನಾವರ-ಲೋಂಡಾ ಮಾರ್ಗದಲ್ಲಿ ಹೊರಟ ಸಂದರ್ಭದಲ್ಲಿ ರೈಲಿನ ಆನ್ ಡ್ಯುಟಿ ಟಿಟಿ ಅವರಿಗೆ ಪ್ರಯಾಣಿಕರೊಬ್ಬರು ತಿಳಿಸಿದ್ದರು. ಎಸ್-1 ಬೋಗಿಗೆ ಬಂದ ಟಿಟಿ ಮುಸುಕುಧಾರಿಗೆ ಟಿಕೆಟ್ ತೋರಿಸುವಂತೆ ಕೇಳಿದಾಗ ಆತ ಟಿಟಿ ಮೇಲೆ ಹಲ್ಲೆ ನಡೆಸಿ ಬಳಿಕ ಟಿಟಿಗೆ ತನ್ನ ವಿರುದ್ಧ ದೂರು ನೀಡಿದ ಪ್ರಯಾಣಿಕರಿಗೆ ಚೂರಿಯಿಂದ ಇರಿದಿದ್ದ. ಇರಿತಕ್ಕೊಳಗಾದ ಪ್ರಯಾಣಿಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲ್ಲೆ ತಡೆಯಲು ಯತ್ನಿಸಿದ ಮತ್ತೊಬ್ಬ ಪ್ರಯಾಣಿಕರೂ ಗಾಯಗೊಂಡರು. ಬಳಿಕ ಹಲ್ಲೆ ನಡೆಸಿದ ವ್ಯಕ್ತಿ ಶೌಚಾಲಯದಲ್ಲಿ ಅವಿತಿದ್ದ. ರೈಲು ಬೆಳಗಾವಿ ನಿಲ್ದಾಣಕ್ಕೆ ಬಂದ ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ರೈಲ್ವೆ ಸುರಕ್ಷಾ ಬಲದ ಅಧಿಕಾರಿಗಳು ಮತ್ತು ಸಿಬ್ಬಂದಿ ಶೌಚಾಲಯದ ಬಾಗಿಲು ಮುರಿದು ಆರೋಪಿಯನ್ನು ವಶಕ್ಕೆ ಪಡೆದರು.
ಆಕಸ್ಮಿಕವಾಗಿ ನಡೆದ ಈ ಘಟನೆಯಿಂದ ರೈಲಿನಲ್ಲಿದ್ದ ಪ್ರಯಾಣಿಕರು ಬೆಚ್ಚಿಬಿದ್ದಿದ್ದು, ಘಟನೆಯ ಕುರಿತು ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಬೆಳಗಾವಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ರೈಲಿನಲ್ಲಿ ಪೊಲೀಸ್ ಗಸ್ತು ಸಿಬ್ಬಂದಿ ಇರಲಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಮೃತರ ಮತ್ತು ಗಾಯಗೊಂಡವರ ವಿವರ ಮತ್ತು ಹಲ್ಲೆ ನಡೆಸಿದ ವ್ಯಕ್ತಿಯ ಕುರಿತು ತನಿಖೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ