IMG_20231230_124449
  • खानापुर लाईव्ह न्युज/ प्रतिनिधी : कणकुंबीच्या जंगलात ट्रेकसाठी गेलेल्या 9 विद्यार्थ्यांची वनविभागाच्या अधिकारी व कर्मचाऱ्यांनी 24 तासाच्या अथक परिश्रमानंतर त्या विद्यार्थ्यांची सुटका केली आहे.
  • याबाबत मिळालेली माहिती की गोवा-कर्नाटक सीमेवरील पारवाड गावाच्या हद्दीतील घनदाट जंगलातील जावनी धबधबा पाहण्यासाठी बेळगावमधील एका प्रतिष्ठित महाविद्यालयात बीएससीचे शिक्षण घेत असलेले 9 विद्यार्थी शुक्रवारी दुपारी चार दुचाकींवरून गेले होते.पारवाड गावापासून 3 किमी अंतरावर त्यानी आपली दुचाकी फूटपाथच्या बाजूने घेतली होती, एका झाडाखाली दुचाकी थांबवली आणि जंगलात गेला. जंगलाच्या पायवाटेने धबधब्यावर पार्टी करून गेलेले विद्यार्थी सायंकाळी दुचाकी पार्क केलेल्या ठिकाणी परतत असताना त्यांचा रस्ता चुकला.
  • घनदाट जंगलात ट्रेकसाठी जाताना आणि परत मुख्य रस्त्यावर येताना रस्ता चुकला असताना त्यांच्या मदतीला येण्याचा संदेश ट्रेकर्सनी शुक्रवारी रात्री आपल्या कॉलेजच्या मित्रांना पाठवला होता. ट्रेकर्सच्या मित्रांनी वनविभागाच्या अधिकाऱ्यांना माहिती दिल्यानंतर ए सी एफ. संतोष चव्हाण यांच्या नेतृत्वाखालील पथकाने रात्री दहा वाजता पारवाड जंगलातून कारवाईला सुरुवात केली. शिवाय, विद्यार्थी बेपत्ता झाल्याची बाब गोव्याच्या वनविभागाच्या निदर्शनास आणून दिली, त्यामुळे त्यांनी गोव्याच्या जंगलातून ऑपरेशनही केले. शनिवारी पहाटे हे विद्यार्थी जावा गोव्याच्या जंगलात खडकांमध्ये दमून बसलेले आढळले, त्यांना कणकुंबी विभागीय वन अधिकारी कार्यालयात आणण्यात आले आणि प्राथमिक उपचारानंतर गोवा वनविभागाच्या अधिकाऱ्यांच्या ताब्यात देण्यात आले.
  • गोवा वन विभागाने बेकायदेशीरपणे जंगलात प्रवेश केल्याच्या आरोपाखाली सर्व 9 विद्यार्थ्यांवर गुन्हा दाखल केला आहे. ही बाब विद्यार्थ्यांचे पालक आणि महाविद्यालयाचे प्राचार्य यांच्यापर्यंत पोहोचवून विद्यार्थ्यांना गराडा घातल्याचे सूत्रांनी सांगितले.
  • या कारवाईत कणकुंबीचे आरएफओ शिवकुमार, भीमागाड आरएफओ राकेश अर्जुनवाड, खानापूर आरएफओ नागराज बलेहोसूर, डीआरएफओ विनायक पाटील, गोवा डीएफओ आनंद यांच्यासह दोन्ही राज्यातील वनविभागाचे अधिकारी व कर्मचारी सहभागी झाले होते.
  • ಕಣಕುಂಬಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿದ್ದ ವಿದ್ಯಾರ್ಥಿಗಳ ರಕ್ಷಣೆ
  • ಖಾನಾಪುರ: ಕಣಕುಂಬಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿ ಹಾದಿ ತಪ್ಪಿಸಿಕೊಂಡ ಒಂಭತ್ತು ವಿದ್ಯಾರ್ಥಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸತತ ೮ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿ ಕರೆತಂದ ಘಟನೆ ಶನಿವಾರ ವರದಿಯಾಗಿದೆ.
  • ಬೆಳಗಾವಿಯ ಪ್ರತಿಷ್ಠಿತ ಕಾಲೇಜು ಒಂದರಲ್ಲಿ ಬಿಎಸ್ಸಿ ಓದುತ್ತಿದ್ದ 9 ವಿದ್ಯಾರ್ಥಿಗಳು ಶುಕ್ರವಾರ ಮಧ್ಯಾಹ್ನ ನಾಲ್ಕು ಬೈಕ್ ಗಳಲ್ಲಿ ಗೋವಾ-ಕರ್ನಾಟಕ ಗಡಿಯ ಪಾರವಾಡ ಗ್ರಾಮದ ಹೊರವಲಯದ ದಟ್ಟ ಅರಣ್ಯ ದಲ್ಲಿರುವ ಜಾವಾಣಿ ಜಲಪಾತ ವೀಕ್ಷಿಸಲು ತೆರಳಿದ್ದರು.
  • ಪಾರವಾಡ ಗ್ರಾಮದಿಂದ ೩ ಕಿಮೀ ದೂರದವರೆಗೆ ಕಾಲುದಾರಿಯಲ್ಲಿ ಬೈಕ್ ತೆಗೆದುಕೊಂಡು ಹೋಗಿದ್ದ ಅವರು ಒಂದು ಮರದ ಕೆಳಗೆ ಬೈಕ್ ನಿಲ್ಲಿಸಿ ಅರಣ್ಯದೊಳಗೆ ಹೋಗಿದ್ದರು. ಅರಣ್ಯದ ಕಾಲುದಾರಿಯ ಮೂಲಕ ಜಲಪಾತಕ್ಕೆ ತೆರಳಿ ಪಾರ್ಟಿ ಮಾಡಿದ್ದ ವಿದ್ಯಾರ್ಥಿಗಳು ಸಂಜೆ ಮರಳಿ ಬೈಕ್ ನಿಲ್ಲಿಸಿದ ಸ್ಥಳಕ್ಕೆ ಮರಳುವಾಗ ಹಾದಿ ತಪ್ಪಿದ್ದರು.
  • ದಟ್ಟ ಅರಣ್ಯದಲ್ಲಿ ಚಾರಣಕ್ಕೆ ತೆರಳಿ ಮರಳಿ ಮುಖ್ಯ ವಾಹಿನಿಗೆ ಬರುವ ಸಂದರ್ಭದಲ್ಲಿ ತಾವು ಹಾದಿ ತಪ್ಪಿಸಿಕೊಂಡಿದ್ದು, ತಮ್ಮ ನೆರವಿಗೆ ಧಾವಿಸುವಂತೆ ಶುಕ್ರವಾರ ರಾತ್ರಿ ತಮ್ಮ ಕಾಲೇಜಿನ ಸ್ನೇಹಿತರಿಗೆ ಚಾರಣಿಗರು ಸಂದೇಶ ಕಳಿಸಿದ್ದರು. ಚಾರಣಿಗರ ಸ್ನೇಹಿತರು ಈ ಸಂಗತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ ಬಳಿಕ ಎಸಿಎಫ್ ಸಂತೋಷ ಚವಾಣ ನೇತೃತ್ವದ ತಂಡ ರಾತ್ರಿ ೧೦ ಗಂಟೆಗೆ ಪಾರವಾಡ ಅರಣ್ಯದಿಂದ ಕಾರ್ಯಾಚರಣೆ ಆರಂಭಿಸಿತು. ಜೊತೆಗೆ ವಿದ್ಯಾರ್ಥಿಗಳ ನಾಪತ್ತೆ ಸಂಗತಿಯನ್ನು ಗೋವಾದ ಅರಣ್ಯ ಇಲಾಖೆಗೂ‌ ಮುಟ್ಟಿಸಿದ್ದರಿಂದ ಅವರೂ ಸಹ ಗೋವಾ ಅರಣ್ಯದಿಂದ ಕಾರ್ಯಾಚರಣೆ ನಡೆಸಿದರು. ಶನಿವಾರ ನಸುಕಿನ ಜಾವ ಗೋವಾ ಅರಣ್ಯದ ಹದ್ದಿಯಲ್ಲಿ ಬಂಡೆ ಕಲ್ಲುಗಳ ನಡುವೆ ಸುಸ್ತಾಗಿ ಕುಳಿತಿದ್ದ ವಿದ್ಯಾರ್ಥಿಗಳು ಪತ್ತೆ ಆಗಿದ್ದು, ಅವರನ್ನು ಕಣಕುಂಬಿ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಗೋವಾ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
  • ಅಕ್ರಮ ಅರಣ್ಯ ಪ್ರವೇಶ ಆರೋಪದಡಿ ಎಲ್ಲ ೯ ವಿದ್ಯಾರ್ಥಿಗಳ ವಿರುದ್ಧ ಗೋವಾ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ. ವಿದ್ಯಾರ್ಥಿಗಳ ಪಾಲಕರು ಮತ್ತು ಕಾಲೇಜಿನ ಮುಖ್ಯಸ್ಥರಿಗೆ ವಿಷಯ ಮುಟ್ಟಿಸಿದ್ದು, ಅವರಿಂದ ಮುಚ್ಚಳಿಕೆ ಬರೆಸಿಕೊಂಡು ವಿದ್ಯಾರ್ಥಿಗಳನ್ನು ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
  • ಕಾರ್ಯಾಚರಣೆಯಲ್ಲಿ ಕಣಕುಂಬಿ ಆರ್.ಎಫ್.ಒ ಶಿವಕುಮಾರ, ಭೀಮಗಡ ಆರ್.ಎಫ್.ಒ ರಾಕೇಶ ಅರ್ಜುನವಾಡ, ಖಾನಾಪುರ ಆರ್.ಎಫ್.ಒ ನಾಗರಾಜ ಬಾಳೆಹೊಸೂರ, ಡಿ.ಆರ್.ಎಫ್.ಒ ವಿನಾಯಕ ಪಾಟೀಲ, ಗೋವಾ ಡಿಎಫ್ಒ ಆನಂದ ಸೇರಿದಂತೆ ಉಭಯ ರಾಜ್ಯಗಳ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
Do Share

Leave a Reply

Your email address will not be published. Required fields are marked *

error: Content is protected !!
Call Us