खानापुरात राष्ट्रीय स्वयंसेवक संघाचे पथसंचलन उत्साहात; शहरात ठिकठिकाणी जल्लोषी स्वागत!
खानापुरात राष्ट्रीय स्वयंसेवक संघाचे पथसंचलन उत्साहात; शहरात ठिकठिकाणी जल्लोषी स्वागत!
सडा-रांगोळ्यांनी सजले रस्ते; शिस्तबद्ध गणवेशातील शेकडो स्वयंसेवकांच्या संचलनाने खानापूरकरांचे वेधले लक्ष
खानापूर / प्रतिनिधी : राष्ट्रीय स्वयंसेवक संघ, खानापूर यांच्या वतीने विजयादशमीनिमित्त आयोजित करण्यात आलेले भव्य पथसंचलन रविवारी (दि. १५ नोव्हेंबर) खानापूर शहरात मोठ्या उत्साहात आणि शिस्तबद्ध वातावरणात पार पडले. शहरातील विविध भागांतून मार्गक्रमण करणाऱ्या स्वयंसेवकांचे नागरिकांनी उत्स्फूर्त स्वागत केले. विशेषतः महिलांनी रस्त्यांवर सडा-रांगोळी काढून पथसंचलनाच्या स्वागताची जय्यत तयारी केली होती.
श्री स्वामी विवेकानंद इंग्लिश मीडियम स्कूलच्या मैदानावरून दुपारी पथसंचलनाला प्रारंभ झाला. राष्ट्रीय स्वयंसेवक संघाच्या पारंपरिक गणवेशात, हातात दंड घेऊन शिस्तबद्ध पद्धतीने पावले टाकत शेकडो स्वयंसेवक या संचलनात सहभागी झाले होते. शहरातील विविध मार्गांवरून संचलन पुढे जात असताना नागरिकांनी ठिकठिकाणी पुष्पवृष्टी व स्वागत करून स्वयंसेवकांचा उत्साह वाढविला.
या पथसंचलनात राजकीय, सामाजिक, शैक्षणिक तसेच सहकार क्षेत्रातील अनेक मान्यवरांसह तरुण आणि ज्येष्ठ स्वयंसेवकांनी सहभाग नोंदविला. दरवर्षी विजयादशमीनंतर आयोजित करण्यात येणाऱ्या या पथसंचलनाला खानापूर शहर व परिसरातून मोठा प्रतिसाद मिळत असल्याचे यंदाही दिसून आले.
पथसंचलनानंतर सायंकाळी श्री स्वामी विवेकानंद इंग्लिश मीडियम स्कूलच्या मैदानावर सार्वजनिक समारंभ व बौद्धिक कार्यक्रमाचे आयोजन करण्यात आले होते. या कार्यक्रमाच्या अध्यक्षस्थानी चापगाव येथील श्री. महादेव विष्णुपंत दळवी (उपाध्यक्ष, बेळगाव जिल्हा रेशन दुकानदार संघटना) होते.
यावेळी प्रमुख बौद्धिक मार्गदर्शक म्हणून राष्ट्रीय स्वयंसेवक संघाचे प्रांत सेवा प्रमुख श्री. नरसिंह कुलकर्णी उपस्थित होते. त्यांनी आपल्या मार्गदर्शनातून संघाचे विचार, सामाजिक बांधिलकी, राष्ट्रभक्ती, संघटनात्मक शिस्त आणि समाजाप्रती स्वयंसेवकांची जबाबदारी या विषयांवर विचार मांडले.
खानापूर तालुका कार्यवाह श्री. ज्योतिबा कुपट गिरकर यांनी कार्यक्रमासाठी उपस्थित राहण्याचे आवाहन केले होते. संपूर्ण कार्यक्रमात स्वयंसेवकांचा उत्साह, शिस्त आणि नागरिकांचा उत्स्फूर्त प्रतिसाद यामुळे खानापूर शहरात उत्सवी वातावरण निर्माण झाले होते.
ಖಾನಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನ ಸಂಭ್ರಮದಿಂದ ನೆರವೇರಿತು!
ನಗರದ ವಿವಿಧೆಡೆ ಭವ್ಯ ಸ್ವಾಗತ; ಮಹಿಳೆಯರಿಂದ ಸಡಗರದ ರಂಗೋಲಿ, ನೂರಾರು ಸ್ವಯಂಸೇವಕರಿಂದ ಶಿಸ್ತಿನ ಪಥಸಂಚಲನ
ಖಾನಾಪುರ : ರಾಷ್ಟ್ರೀಯ ಸ್ವಯಂಸೇವಕ ಸಂಘ, ಖಾನಾಪುರ ಘಟಕದ ವತಿಯಿಂದ ವಿಜಯದಶಮಿ ನಿಮಿತ್ತ ಆಯೋಜಿಸಲಾಗಿದ್ದ ಪಥಸಂಚಲನ ಭಾನುವಾರ (ನ. 15) ನಗರದಲ್ಲಿ ಅತ್ಯಂತ ಉತ್ಸಾಹದಿಂದ ಹಾಗೂ ಶಿಸ್ತಿನಿಂದ ಜರುಗಿತು. ನಗರದ ವಿವಿಧ ಭಾಗಗಳಲ್ಲಿ ಸ್ವಯಂಸೇವಕರಿಗೆ ಸಾರ್ವಜನಿಕರಿಂದ ಭವ್ಯ ಸ್ವಾಗತ ದೊರೆಯಿತು. ವಿಶೇಷವಾಗಿ ಮಹಿಳೆಯರು ರಸ್ತೆಗಳಲ್ಲಿ ಸಡಗರದಿಂದ ರಂಗೋಲಿ ಬಿಡಿಸಿ ಪಥಸಂಚಲನವನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದರು.
ನಗರದ ಶ್ರೀ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ ಮೈದಾನದಿಂದ ಮಧ್ಯಾಹ್ನ 3 ಗಂಟೆಗೆ ಪಥಸಂಚಲನ ಆರಂಭವಾಯಿತು. ಸಂಘದ ಸಾಂಪ್ರದಾಯಿಕ ಸಮವಸ್ತ್ರ ಧರಿಸಿ, ಕೈಯಲ್ಲಿ ದಂಡ ಹಿಡಿದು ಶಿಸ್ತಿನ ಹೆಜ್ಜೆ ಹಾಕುತ್ತ ನೂರಾರು ಸ್ವಯಂಸೇವಕರು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ನಗರದ ಪ್ರಮುಖ ರಸ್ತೆ ಹಾಗೂ ವಿವಿಧ ಬಡಾವಣೆಗಳ ಮೂಲಕ ಸಾಗಿದ ಪಥಸಂಚಲನಕ್ಕೆ ನಾಗರಿಕರು ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು.
ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಹಕಾರ ಕ್ಷೇತ್ರದ ಅನೇಕ ಗಣ್ಯರು ಸೇರಿದಂತೆ ಯುವಕರು ಮತ್ತು ಹಿರಿಯ ಸ್ವಯಂಸೇವಕರು ಈ ಪಥಸಂಚಲನದಲ್ಲಿ ಭಾಗವಹಿಸಿದ್ದರು. ಪ್ರತಿ ವರ್ಷ ವಿಜಯದಶಮಿಯ ನಂತರ ನಡೆಯುವ ಈ ಪಥಸಂಚಲನಕ್ಕೆ ಈ ಬಾರಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಸಂಜೆ ಬೌದ್ಧಿಕ ಕಾರ್ಯಕ್ರಮ
ಪಥಸಂಚಲನದ ಬಳಿಕ ಸಂಜೆ 5.15ಕ್ಕೆ ಶ್ರೀ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯ ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ಹಾಗೂ ಬೌದ್ಧಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಪಗಾವ ಗ್ರಾಮದ ಶ್ರೀ ಮಹಾದೇವ ವಿಷ್ಣುಪಂತ ದಳವಿ ವಹಿಸಿದ್ದರು. ಇವರು ಬೆಳಗಾವಿ ಜಿಲ್ಲಾ ಪಡಿತರ ಅಂಗಡಿಕಾರರ ಸಂಘದ ಉಪಾಧ್ಯಕ್ಷರಾಗಿದ್ದಾರೆ.
ಮುಖ್ಯ ಬೌದ್ಧಿಕ ಮಾರ್ಗದರ್ಶಕರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸೇವಾ ಪ್ರಮುಖರಾದ ಶ್ರೀ ನರಸಿಂಹ ಕುಲಕರ್ಣಿ ಉಪಸ್ಥಿತರಿದ್ದು, ಸಂಘದ ವಿಚಾರಧಾರೆ, ರಾಷ್ಟ್ರಭಕ್ತಿ, ಸಾಮಾಜಿಕ ಬದ್ಧತೆ, ಸಂಘಟನೆಯ ಶಿಸ್ತು ಹಾಗೂ ಸಮಾಜದಲ್ಲಿ ಸ್ವಯಂಸೇವಕರ ಜವಾಬ್ದಾರಿಗಳ ಕುರಿತು ಮಾರ್ಗದರ್ಶನ ನೀಡಿದರು.
ಖಾನಾಪುರ ತಾಲೂಕು ಕಾರ್ಯವಾಹ ಶ್ರೀ ಜ್ಯೋತಿಬಾ ಕುರ್ಪಟಬಿರಿಕರ್ ಅವರು ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದರು.
ಒಟ್ಟಾರೆ ಶಿಸ್ತುಬದ್ಧ ಪಥಸಂಚಲನ, ಮಹಿಳೆಯರ ರಂಗೋಲಿ ಸ್ವಾಗತ ಹಾಗೂ ನಾಗರಿಕರ ಉತ್ಸಾಹಭರಿತ ಪಾಲ್ಗೊಳ್ಳುವಿಕೆಯಿಂದ ಖಾನಾಪುರ ನಗರದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.
ಖಾನಾಪುರ ಲೈವ್ | ನಿಮ್ಮೂರಿನ ಸುದ್ದಿ, ನಿಮ್ಮ ಭಾಷೆಯಲ್ಲಿ!