Home » खानापुरात काँग्रेसचे संघटन सृजन अभियान भाग-२ संपन्न; ब्लॉक अध्यक्षपदासाठी अनेक इच्छुकांचे अर्ज दाखलಖಾನಾಪುರದಲ್ಲಿ ಕಾಂಗ್ರೆಸ್‌ನ ಸಂಘಟನಾ ಸೃಜನ ಅಭಿಯಾನ-2 ಸಭೆ ಯಶಸ್ವಿ

खानापुरात काँग्रेसचे संघटन सृजन अभियान भाग-२ संपन्न; ब्लॉक अध्यक्षपदासाठी अनेक इच्छुकांचे अर्ज दाखलಖಾನಾಪುರದಲ್ಲಿ ಕಾಂಗ್ರೆಸ್‌ನ ಸಂಘಟನಾ ಸೃಜನ ಅಭಿಯಾನ-2 ಸಭೆ ಯಶಸ್ವಿ

file_00000000292882119e608dcd4b2cb019

खानापुरात काँग्रेसचे संघटन सृजन अभियान भाग-२ संपन्न; ब्लॉक अध्यक्षपदासाठी अनेक इच्छुकांचे अर्ज दाखल

जिल्हा पंचायत व तालुका पंचायत निवडणुकांच्या पार्श्वभूमीवर संघटनात्मक फेरबदलाबाबत खल; निरीक्षकांनी जाणून घेतली कार्यकर्त्यांची मते

खानापूर : काँग्रेस पक्षाच्या संघटनात्मक बांधणीला बळकटी देण्यासाठी राबविण्यात येत असलेल्या संघटन सृजन अभियान भाग-२ अंतर्गत आज खानापूर येथील शिवस्मारक येथे महत्त्वपूर्ण बैठक पार पडली.

या बैठकीस पक्ष निरीक्षक म्हणून शाकीर सनदी, बडीगर, रशीद चिकोडी तसेच बेळगाव जिल्हा काँग्रेस अध्यक्ष बसवराज शेगावी उपस्थित होते. यावेळी खानापूर तालुका ब्लॉक काँग्रेस अध्यक्ष महांतेश राऊत, ईश्वर घाडी यांच्यासह पक्षाचे विविध पदाधिकारी व ज्येष्ठ कार्यकर्ते मोठ्या संख्येने उपस्थित होते.

यावेळी केपीसीसी सदस्य महादेव कोळी यांची राज्य सरकारकडून श्री रेणुका यल्लम्मा देवी विकास प्राधिकरणावर नियुक्ती झाल्याबद्दल उपस्थित मान्यवरांच्या हस्ते त्यांचा सत्कार करण्यात आला.

बैठकीला ज्येष्ठ नेते रियाझ पटेल, बसाप्पा बसेटी, गौसलाल पटेल, रमेश गौडा पाटील, संगाप्पा वाली, आर. डी. हांजी, संतोष हाजी, काशिम हट्टीहोळी, दशरथ बनोशी, बेनी पिंटो आदींसह महिला काँग्रेस अध्यक्ष सावित्री मादार, दीपा पाटील, वैष्णवी पाटील, अनिता दडंगल, सखुबाई पाटील, भारती पाटील तसेच युवक काँग्रेसचे पदाधिकारी व कार्यकर्ते उपस्थित होते.

आगामी काळात काँग्रेस पक्षाची संघटनात्मक ताकद वाढविणे, नवीन पदाधिकाऱ्यांची नियुक्ती करणे आणि तालुका पातळीवर पक्षाची बांधणी मजबूत करणे हा या बैठकीचा प्रमुख उद्देश होता. ब्लॉक काँग्रेस अध्यक्षपदासह विविध पदांसाठी अनेक इच्छुकांनी पक्षश्रेष्ठींकडे विहित नमुन्यात आपले अर्ज सादर केले आहेत.

विद्यमान पदाधिकाऱ्यांमध्ये फेरबदल करावेत की सध्याचीच कार्यकारिणी कायम ठेवावी, याबाबतही बैठकीत विविध नेत्यांनी आणि कार्यकर्त्यांनी आपली मते मांडली. पक्ष निरीक्षकांनी इच्छुक उमेदवारांचे म्हणणे ऐकून घेण्याबरोबरच कार्यकर्त्यांच्या भावना व संघटनात्मक परिस्थितीचा आढावा घेतला.

आगामी जिल्हा पंचायत आणि तालुका पंचायत निवडणुका डोळ्यासमोर ठेवून काँग्रेसमधील हा संघटनात्मक बदल महत्त्वाचा मानला जात आहे. कार्यकर्त्यांनी मांडलेल्या सूचना, इच्छुकांचे अर्ज आणि स्थानिक राजकीय परिस्थिती विचारात घेऊन पक्षाचे वरिष्ठ नेते व संबंधित नेतृत्व योग्य तो निर्णय घेणार असल्याचे सांगण्यात आले.

आता खानापूर ब्लॉक काँग्रेसची धुरा कोणाकडे जाणार? विद्यमान नेतृत्व कायम राहणार की नव्या चेहऱ्यांना संधी मिळणार? याकडे तालुक्यातील काँग्रेस कार्यकर्त्यांसह राजकीय वर्तुळाचे लक्ष लागले आहे.

ಖಾನಾಪುರದಲ್ಲಿ ಕಾಂಗ್ರೆಸ್‌ನ ಸಂಘಟನಾ ಸೃಜನ ಅಭಿಯಾನ-2 ಸಭೆ ಯಶಸ್ವಿ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ; ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಹಿನ್ನೆಲೆಯಲ್ಲಿ ಸಂಘಟನಾತ್ಮಕ ಬದಲಾವಣೆ ಕುರಿತು ಚರ್ಚೆ

ಖಾನಾಪುರ: ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಸಂಘಟನಾ ಸೃಜನ ಅಭಿಯಾನ-2ರ ಸಭೆ ಇಂದು ಖಾನಾಪುರದ ಶಿವಸ್ಮಾರಕ ಭವನದಲ್ಲಿ ನಡೆಯಿತು.

ಸಭೆಗೆ ಪಕ್ಷದ ವೀಕ್ಷಕರಾಗಿ ಶಾಕೀರ ಸನದಿ, ಬಡಿಗೇರ, ರಶೀದ್ ಚಿಕ್ಕೋಡಿ ಹಾಗೂ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಶೇಗಾವಿ ಆಗಮಿಸಿದ್ದರು. ಖಾನಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾವತ್, ಈಶ್ವರ ಘಾಡಿ ಸೇರಿದಂತೆ ಪಕ್ಷದ ವಿವಿಧ ಪದಾಧಿಕಾರಿಗಳು ಹಾಗೂ ಹಿರಿಯ ಮುಖಂಡರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಮಹಾದೇವ ಕೋಳಿ ಅವರನ್ನು ರಾಜ್ಯ ಸರ್ಕಾರವು ಶ್ರೀ ರೇಣುಕಾ ಯಲ್ಲಮ್ಮ ದೇವಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು.

ಸಭೆಯಲ್ಲಿ ಹಿರಿಯ ಮುಖಂಡರಾದ ರಿಯಾಜ್ ಪಟೇಲ್, ಬಸಪ್ಪ ಬಸೇಟಿ, ಗೌಸಲಾಲ ಪಟೇಲ್, ರಮೇಶ ಗೌಡ ಪಾಟೀಲ, ಸಂಗಪ್ಪ ವಾಳಿ, ಆರ್.ಡಿ. ಹಾಂಜಿ, ಸಂತೋಷ ಹಾಜಿ, ಕಾಶಿಮ್ ಹಟ್ಟಿಹೊಳಿ, ದಶರಥ ಬನೋಶಿ, ಬೆನಿ ಪಿಂಟೋ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸಾವಿತ್ರಿ ಮಾದಾರ, ದೀಪಾ ಪಾಟೀಲ, ವೈಷ್ಣವಿ ಪಾಟೀಲ, ಅನಿತಾ ದಡಂಗಲ, ಸಖುಬಾಯಿ ಪಾಟೀಲ, ಭಾರತಿ ಪಾಟೀಲ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪಕ್ಷದ ಸಂಘಟನೆಯನ್ನು ಬಲಪಡಿಸುವುದು, ಹೊಸ ಪದಾಧಿಕಾರಿಗಳ ನೇಮಕ ಹಾಗೂ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಎದುರಿಸಲು ಪಕ್ಷವನ್ನು ಸಜ್ಜುಗೊಳಿಸುವುದು ಸಭೆಯ ಪ್ರಮುಖ ಉದ್ದೇಶವಾಗಿತ್ತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳಿಗೆ ಹಲವು ಆಕಾಂಕ್ಷಿಗಳು ಪಕ್ಷದ ವರಿಷ್ಠರಿಗೆ ನಿಗದಿತ ನಮೂನೆಯಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಹಾಲಿ ಪದಾಧಿಕಾರಿಗಳನ್ನೇ ಮುಂದುವರಿಸಬೇಕೇ ಅಥವಾ ಸಂಘಟನೆಯ ಹಿತದೃಷ್ಟಿಯಿಂದ ಬದಲಾವಣೆ ಮಾಡಬೇಕೇ ಎಂಬ ವಿಷಯದ ಕುರಿತು ಸಭೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಪಕ್ಷದ ವೀಕ್ಷಕರು ಆಕಾಂಕ್ಷಿಗಳ ಅಭಿಪ್ರಾಯಗಳನ್ನು ಆಲಿಸುವುದರ ಜೊತೆಗೆ ಕಾರ್ಯಕರ್ತರ ಅಭಿಪ್ರಾಯಗಳನ್ನೂ ಸಂಗ್ರಹಿಸಿದರು. ಸಲ್ಲಿಕೆಯಾಗಿರುವ ಅರ್ಜಿಗಳು, ಕಾರ್ಯಕರ್ತರ ಅಭಿಪ್ರಾಯಗಳು ಹಾಗೂ ಸ್ಥಳೀಯ ರಾಜಕೀಯ ಪರಿಸ್ಥಿತಿಯನ್ನು ಪರಿಗಣಿಸಿ ಪಕ್ಷದ ಹಿರಿಯ ನಾಯಕರು ಮತ್ತು ಮುಖಂಡರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳ ಹಿನ್ನೆಲೆಯಲ್ಲಿ ಖಾನಾಪುರ ಬ್ಲಾಕ್ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ನಡೆಯಲಿದೆಯೇ? ಅಥವಾ ಹಾಲಿ ಪದಾಧಿಕಾರಿಗಳನ್ನೇ ಮುಂದುವರಿಸಲಾಗುತ್ತದೆಯೇ? ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.

Do Share

You may have missed

error: Content is protected !!
Call Us