Home » लोकोळी-जैनकोप क्रॉसदरम्यान भीषण अपघात; दोन जखमी! ಲೋಕೋಲಿ ಮತ್ತು ಜೈನ್‌ಕೋಪ್ ಕ್ರಾಸ್ ನಡುವೆ ಭೀಕರ ಅಪಘಾತ; ಇಬ್ಬರಿಗೆ ಗಾಯ!

लोकोळी-जैनकोप क्रॉसदरम्यान भीषण अपघात; दोन जखमी! ಲೋಕೋಲಿ ಮತ್ತು ಜೈನ್‌ಕೋಪ್ ಕ್ರಾಸ್ ನಡುವೆ ಭೀಕರ ಅಪಘಾತ; ಇಬ್ಬರಿಗೆ ಗಾಯ!

file_00000000f3b481f4b551a60d6bf4f536

लोकोळी-जैनकोप क्रॉसदरम्यान भीषण अपघात; दोन जखमी

भरधाव टेम्पो-कॅन्टरची समोरासमोर धडक; कॅन्टर पलटी, एकाची प्रकृती गंभीर

खानापूर : खानापूर–पारिश्वाड मार्गावरील लोकोळी क्रॉस ते जैनकोप क्रॉसदरम्यान गुरुवारी दुपारी सुमारे अडीचच्या सुमारास सेंट्रींग साहित्य वाहून नेणाऱ्या टेम्पोची आणि कॅन्टरची समोरासमोर जोरदार धडक झाली. या अपघातात दोन्ही वाहनांतील चालक व क्लीनर जखमी झाले.

या अपघातात नागेश मुनियानावर (वय २४, रा. हिरेमुनवळी) हा टेम्पोचा क्लीनर जखमी झाला असून त्याच्या हाताला व पायाला गंभीर दुखापत झाल्याची माहिती आहे. तसेच कॅन्टर चालक करीम मुल्ला फरास हेही किरकोळ जखमी झाले आहेत. दोघेही राजा सिरॅमिक फॅक्टरीमध्ये चालक म्हणून काम करत असल्याचे समजते.

मिळालेल्या माहितीनुसार, कॅन्टर धारवाडहून खानापूरच्या दिशेने येत असताना समोरून येणाऱ्या सेंट्रींग साहित्य वाहतूक करणाऱ्या टेम्पोची त्याच्याशी जोरदार धडक झाली. धडकेनंतर कॅन्टर रस्त्याच्या कडेला जाऊन पलटी झाला. सुदैवाने कॅन्टर चालक करीम मुल्ला फरास यांचा जीव वाचला.

दरम्यान, अपघातानंतर टेम्पो चालक घटनास्थळावरून निघून गेल्याची माहिती मिळाली आहे. टेम्पोमध्ये अडकलेल्या नागेश याला बाहेर काढण्यात आले. त्याला गंभीर दुखापत झाल्याने तातडीने १०८ आरोग्य कवच रुग्णवाहिकेने खानापूर येथील रुग्णालयात दाखल करण्यात आले. प्राथमिक उपचारानंतर पुढील उपचारांसाठी दोन्ही जखमींना बेळगाव येथे हलविण्यात आले.

अपघातामुळे रस्त्याच्या दोन्ही बाजूंना वाहनांच्या लांबच लांब रांगा लागल्या होत्या. घटनेची नोंद खानापूर पोलीस ठाण्यात झाली असून पुढील तपास सुरू आहे.

ಲೋಕೋಳಿ–ಜೈನಕೋಪ ಕ್ರಾಸ್ ನಡುವೆ ಭೀಕರ ಅಪಘಾತ; ಇಬ್ಬರಿಗೆ ಗಾಯ

ವೇಗವಾಗಿ ಬಂದ ಟೆಂಪೋ–ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಕ್ಯಾಂಟರ್ ಪಲ್ಟಿ

ಖಾನಾಪುರ : ಖಾನಾಪುರ–ಪಾರಿಶ್ವಾಡ ಮಾರ್ಗದ ಲೋಕೋಳಿ ಕ್ರಾಸ್ ಹಾಗೂ ಜೈನಕೋಪ ಕ್ರಾಸ್ ನಡುವಿನ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಸೆಂಟ್ರಿಂಗ್ ಸಾಮಗ್ರಿ ಸಾಗಿಸುತ್ತಿದ್ದ ಟೆಂಪೋ ಹಾಗೂ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.

ಅಪಘಾತದಲ್ಲಿ ಹಿರೇಮುನವಳ್ಳಿ ಗ್ರಾಮದ ನಾಗೇಶ ಮುನಿಯನಾವರ (ವಯಸ್ಸು 24) ಹಾಗೂ ಕ್ಯಾಂಟರ್ ಚಾಲಕ ಕರೀಂ ಮುಲ್ಲಾ ಫರಾಸ್ ಗಾಯಗೊಂಡಿದ್ದಾರೆ. ಇಬ್ಬರೂ ರಾಜಾ ಸೆರಾಮಿಕ್ ಫ್ಯಾಕ್ಟರಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಕರೀಂ ಮುಲ್ಲಾ ಅವರು ಧಾರವಾಡದಿಂದ ಖಾನಾಪುರದತ್ತ ಕ್ಯಾಂಟರ್‌ನಲ್ಲಿ ಬರುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಸೆಂಟ್ರಿಂಗ್ ಸಾಮಗ್ರಿ ಸಾಗಿಸುತ್ತಿದ್ದ ಟೆಂಪೋಗೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕ್ಯಾಂಟರ್ ರಸ್ತೆ ಬದಿಗೆ ತೆರಳಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಕ್ಯಾಂಟರ್ ಚಾಲಕ ಕರೀಂ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇತ್ತ ಟೆಂಪೋ ಚಾಲಕ ಅಪಘಾತ ಸಂಭವಿಸಿದ ತಕ್ಷಣ ಸ್ಥಳದಿಂದ ತೆರಳಿದ್ದಾನೆ ಎನ್ನಲಾಗಿದೆ. ಟೆಂಪೋದಲ್ಲಿ ಸಿಲುಕಿಕೊಂಡಿದ್ದ ನಾಗೇಶ ಅವರನ್ನು ಸ್ಥಳೀಯರು ಹೊರತೆಗೆದಿದ್ದು, ಅವರ ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ 108 ಆರೋಗ್ಯ ಕವಚ ಆಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಖಾನಾಪುರ ಆಸ್ಪತ್ರೆಗೆ ದಾಖಲಿಸಿತು. ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನೂ ಬೆಳಗಾವಿಗೆ ರವಾನಿಸಲಾಗಿದೆ.

ಅಪಘಾತದಿಂದ ಕೆಲಕಾಲ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ಸಾಲು ನಿರ್ಮಾಣವಾಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಘಟನೆ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Do Share

You may have missed

error: Content is protected !!
Call Us